Monday, 19th August 2019

Recent News

4 weeks ago

ಕೊಲೆ ಆರೋಪಿಗಳನ್ನು ಬಂಧಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು

ಭೋಪಾಲ್: 20 ವರ್ಷದ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಇಂದೋರ್ ಪೊಲೀಸರು ರಸ್ತೆಗಳಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಜುಲೈ 22ರ ರಾತ್ರಿ ಇಂದೋರ್‍ನ ನಿವಾಸಿ ಅರ್ಪಿತ್ ಕೊಲೆ ನಡೆದಿತ್ತು. ಈ ಕೊಲೆ ಆರೋಪಿಗಳಾದ ರಾಜ ಕಚೋರಿ ಮತ್ತು ಆಶಿಶ್ ಶರ್ಮಾರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ಆದರೆ ಈ ಆರೋಪಿಗಳನ್ನು ಸುಮ್ಮನೆ ಬಿಡದೇ ರಸ್ತೆಯಲ್ಲಿ ಪೊಲೀಸರು ಮೆರವಣಿಗೆ ಮಾಡಿಸಿದ್ದಾರೆ. ಇಂದೋರಿನ ನಂದಾ ನಗರದಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಅರ್ಪಿತ್‍ಗೆ ಆರೋಪಿಗಳು ಚಾಕು ಇರಿದಿದ್ದರು. […]

2 months ago

ಮಳೆಗಾಗಿ ಜನರ ಜೊತೆ ಮೆರವಣಿಗೆ ಹೋಗಿ ಮಂಗನ ಪ್ರಾರ್ಥನೆ

ರಾಯಚೂರು: ರಾಜ್ಯದಲ್ಲಿ ಬರಗಾಲ ಇರುವುದರಿಂದ ಜನರು ದೇವರ ಮೋರೆ ಹೋಗುತ್ತಿದ್ದಾರೆ. ಈಗ ರಾಯಚೂರಿನ ಜನರು ಮಳೆಗಾಗಿ ದೇವರ ಮೋರೆ ಹೋಗಿದ್ದು, ಇದರಲ್ಲಿ ಮಂಗವೊಂದು ಭಾಗವಹಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದೆ. ರಾಯಚೂರಿನ ಮಾನ್ವಿಯ ಆದಾಪುರದ ಜನರು ಮಳೆಗಾಗಿ ಮಣ್ಣೆತ್ತಿನ ಅಮವಾಸೆ ಪ್ರಯುಕ್ತ ಎತ್ತಿನ ಗಾಡಿಯ ಮೇಲೆ ಕಾಮಧೇನುವಿನ ಮೆರವಣಿಗೆ ಮಾಡುತ್ತಿದ್ದರು. ಈ ಮೆರವಣೆಗೆಯಲ್ಲಿ ಮಂಗವೊಂದು ಭಾಗವಹಿಸಿ ಮಳೆಗಾಗಿ...

ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

4 months ago

ಕೊಪ್ಪಳ: ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಬಹುವರ್ಷಗಳ ಬಳಿಕ ಗ್ರಾಮಕ್ಕೆ ಬಂದ ಯೋಧರೊಬ್ಬರಿಗೆ ಗ್ರಾಮಸ್ಥರು ಭರ್ಜರಿ ಮೆರೆವಣಿಗೆ ಮಾಡಿ ಸ್ವಾಗತಿಸಿದ್ದಾರೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿಯಲ್ಲಿ ನಿವೃತ್ತ ಯೋಧ ಗವಿಸಿದಪ್ಪ ದೊಡ್ಡಮನಿಗೆ ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ. ಭಾರತೀಯ ಸೇನೆಯಲ್ಲಿ ಸುಮಾರು...

ಕಲಬುರಗಿಯಲ್ಲಿ ಸಿಕ್ತು ಹನುಮಂತನಿಗೆ ಭರ್ಜರಿ ಸ್ವಾಗತ

5 months ago

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಇಂದು ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸರಿಗಮಪ ಸೀಸನ್ 15ರ ರನ್ನರಪ್ ಹನುಮಂತ ಹಾಗೂ ಸೀಸನ್ 13ರ ಚಾಂಪಿಯನ್ ಸುನಿಲ್ ಗುಜಗುಂಡ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು. ಈ...

ಊರಿಗೆ ಮರಳಿದ ಯೋಧ – ಗ್ರಾಮಸ್ಥರಿಂದ ಎತ್ತಿನಗಾಡಿನಲ್ಲಿ ಮೆರವಣಿಗೆ

6 months ago

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಯಲವಗಿ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ದೇಶಕಾಯೋ ಕೆಲಸ ಮಾಡಿ ನಿವೃತ್ತರಾಗಿ ಇಂದು ಗ್ರಾಮಕ್ಕೆ ಮರಳಿದ ಯೋಧರೊಬ್ಬರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿಕೊಂಡು ಮೆರವಣಿಗೆ ಮಾಡಿ ಸಂಭ್ರಮಸಿದ್ದಾರೆ. ಗ್ರಾಮದ ಯಶವಂತ್ ಪೂಜಾರ ಅವರು 2002ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು....

ವಚನ ವಿಜಯೋತ್ಸವ – ಬಸವಣ್ಣನವರ ವಚನ ಗ್ರಂಥವನ್ನು ತಲೆ ಮೇಲೆ ಹೊತ್ತು ಸಾಗಿದ ಶರಣಭಕ್ತರು

6 months ago

ಬೀದರ್: 16ನೇ ವಚನ ವಿಜಯೋತ್ಸವದಲ್ಲಿ ಸಾವಿರಾರು ಶರಣಭಕ್ತರು ಮೆರವಣಿಗೆಯಲ್ಲಿ ಬಸವಣ್ಣನವರ ವಚನ ಗ್ರಂಥವನ್ನು ತಲೆಯ ಮೇಲೆ ಹೊತ್ತು ಸಾಗಿದ್ದಾರೆ. ವಚನ ವಿಜಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಚಾಲನೆ ನೀಡಿದರು. ಹೂವಿನಿಂದ ಅಲಂಕರಿಸಿದ ರಥದಲ್ಲಿ ಬಸವಣ್ಣನವರ ವಚನ ಗ್ರಂಥವನ್ನು ಮೆರೆವಣಿಗೆ...

ಮದ್ವೆ ಮೆರವಣಿಗೆಯಲ್ಲಿ ಹೋಗ್ತಿದ್ದವರ ಮೇಲೆ ಹರಿದ ಟ್ರಕ್ – 13 ಮಂದಿ ದುರ್ಮರಣ, 18 ಜನ ಗಂಭೀರ

6 months ago

ಜೈಪುರ: ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಮದುವೆ ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ 13 ಮಂದಿ ಮೃತಪಟ್ಟಿದ್ದು, 18ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಪ್ರತಾಪ್‍ಗಢ ಜಿಲ್ಲೆಯಲ್ಲಿ ನಡೆದಿದೆ. ಈ ಅಪಘಾತ ರಾಮದೇವ ದೇವಸ್ಥಾನ ಬಳಿ ರಾಜ್ಯ ಹೆದ್ದಾರಿ...

ಮಹಿಳೆಯನ್ನು ವಿವಸ್ತ್ರಗೊಳಿಸಿ ಬೆತ್ತಲೆಯಾಗಿ ಮೆರವಣಿಗೆ!

7 months ago

ರಾಂಚಿ: ಮಾಟಗಾತಿ ಎಂದು ತಿಳಿದು ಗ್ರಾಮಸ್ಥರು ಮಹಿಳೆಯ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಮೆರವಣಿಗೆ ಮಾಡಿಸಿದ ಅಮಾನವೀಯ ಘಟನೆ ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ. 50 ವರ್ಷದ ಮಹಿಳೆ ಮಾಟಗಾತಿ ಎಂದು ಆರೋಪಿಸಿ ಮಹೇಶ್ ಲಿತಿ ಗ್ರಾಮದ ನಿವಾಸಿಗಳು ಆಕೆಯನ್ನು ವಿವಸ್ತ್ರಗೊಳಿಸಿ...