Tuesday, 19th March 2019

Recent News

6 days ago

ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿಗೆ ಮತ್ತೊಂದು ಆಘಾತ

ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಆಘಾತಗಳ ಮೇಲೆ ಆಘಾತ ಎದುರಿಸುತ್ತಿದೆ. ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‍ನ ಕಾಳಿದಾಸ್ ಕೊಲಂಬ್ಕರ್ ಅವರು ಬಿಜೆಪಿಯನ್ನು ಹಾಡಿ ಹೊಗಳಿದ್ದಾರೆ. ಕಾಂಗ್ರೆಸ್‍ನಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ವಡಾರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಆದರೆ ಕೆಲವು ಕೆಲಸಗಳನ್ನು ಸಿಎಂ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದ ಬಿಜೆಪಿ ಸರ್ಕಾರದ ಗಮನಕ್ಕೆ ತಂದಿದ್ದೆ. ತಕ್ಷಣವೇ ಕ್ರಮಕೈಗೊಂಡ ಸಿಎಂ ವಡಾರಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಕಾಳಿದಾಸ್ ಕೊಲಂಬ್ಕರ್ ತಿಳಿಸಿದ್ದಾರೆ. ಇದನ್ನು ಓದಿ: […]

6 days ago

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ಗೆ ಡಬಲ್ ಶಾಕ್

– ಮಗ ಬಿಜೆಪಿ ಸೇರಿದ, ತಂದೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ? ಮುಂಬೈ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಪಕ್ಷಗಳು ಭಾರೀ ಸಿದ್ಧತೆ ನಡೆಸಿಕೊಂಡು ಪ್ರಚಾರಕ್ಕೆ ಮುಂದಾಗುತ್ತಿವೆ. ಆದರೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಾಕ್ ಮೇಲೆ ಶಾಕ್ ಎದುರಿಸುತ್ತಿದ್ದು, ಭಾರೀ ಚರ್ಚೆಯಾಗುತ್ತಿದೆ. ಸುಜಯ್ ವಿಖೆ ಪಾಟೀಲ್ ನಿನ್ನೆಯಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬೆನ್ನಲ್ಲೇ ಸುಜಯ್ ಅವರ...

ಎರಡು ಕೈಗಳಲ್ಲೂ ಬೌಲಿಂಗ್ ಮಾಡಿ ಅಂಪೈರ್‌ಗೆ ಶಾಕ್ ನೀಡಿದ ಬೌಲರ್!

1 month ago

ಮುಂಬೈ: ಒಬ್ಬ ಆಟಗಾರ ಬಲಗೈಯಲ್ಲಿ ಬೌಲಿಂಗ್ ಮಾಡಿ ಎಡಗೈ ಬ್ಯಾಟಿಂಗ್ ನಡೆಸಿರುವುದನ್ನು ಈ ಹಿಂದೆ ಕಂಡಿದ್ದೇವೆ. ಆದರೆ ಇದೇ ಮೊದಲ ಬಾರಿ ಎಂಬಂತೆ ಇರಾನಿ ಕಪ್ ಟೂರ್ನಿಯಲ್ಲಿ ವಿದರ್ಭ ಬೌಲರ್ ಅಕ್ಷಯ್ ಕರ್ನೇವರ್ ಎರಡು ಕೈಗಳಲ್ಲೂ ಒಂದೇ ರೀತಿ ಬೌಲಿಂಗ್ ಮಾಡಿ...

ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

1 month ago

ಕಾರವಾರ: ಮಹಾರಾಷ್ಟ್ರ ರಾಜ್ಯದ ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು ಪತ್ತೆಯಾಗಿದೆ. ಕಡಲ ತೀರದಲ್ಲಿ ಮುಳುಗಿದ್ದ ದೋಣಿಯ ಬಿಡಿ ಭಾಗವು ಮಹಾರಾಷ್ಟ್ರದ ರತ್ನಗಿರಿ ಬಳಿ ಪತ್ತೆಯಾಗಿದ್ದು, ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆ ವ್ಯಕ್ತವಾಗಿದೆ. ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದ...

ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಪತನ

1 month ago

ಮುಂಬೈ: ತರಬೇತಿ ವಿಮಾನವೊಂದು ಪುಣೆಯ ಇಂದಪುರದಲ್ಲಿ ಪತನಗೊಂಡಿದೆ. ಕಾರ್ವರ್ ಏವಿಯೇಷನ್ (ಪೈಲಟ್ ತರಬೇತಿ ಕೇಂದ್ರ) ಸಂಸ್ಥೆಗೆ ಒಳಪಟ್ಟ ವಿಮಾನ ಇದಾಗಿದ್ದು, ತರಬೇತುದಾರ ಪೈಲಟ್ ಹಾರಾಟ ನಡೆಸುತ್ತಿದ್ದರು. ವಿಮಾನ ಪತನವಾಗುತ್ತಿದ್ದಂತೆ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಪೈಲಟ್ ನನ್ನು ರಕ್ಷಿಸಿದ್ದಾರೆ. ಗಾಯಾಳು...

ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಅಣ್ಣಾ ಹಜಾರೆ

2 months ago

– ಲೋಕಪಾಲ್ ಜಾರಿಗೆ ಒತ್ತಾಯಿಸಿ ಮತ್ತೆ ಹೋರಾಟ ಆರಂಭ ಮುಂಬೈ: ಲೋಕಪಾಲ್ ಜಾರಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಮಹಾತ್ಮಗಾಂಧಿ ಹುತ್ಮಾತಗೊಂಡ ದಿನವಾದ...

ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ, ರಾಜ್ಯಕ್ಕೆ 900 ಕೋಟಿ ರೂ. ಬರ ಪರಿಹಾರ- ಕೇಂದ್ರದ ನಿರ್ಧಾರಕ್ಕೆ ಸಿಎಂ ಕಿಡಿ

2 months ago

ಬೆಂಗಳೂರು: ಬರ ಪರಿಹಾರ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2,500 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ರಾಜ್ಯಕ್ಕೆ 900 ಕೋಟಿ ರೂ....

ಮಹಾರಾಷ್ಟ್ರ ಡಾನ್ಸ್ ಬಾರ್ ಗಳಿಗೆ ‘ಸುಪ್ರೀಂ’ನಿಂದ ರಿಲೀಫ್ – ಕೋರ್ಟ್ ಹೇಳಿದ್ದೇನು?

2 months ago

ನವದೆಹಲಿ: ಮಹಾರಾಷ್ಟ್ರದಲ್ಲಿ ಡಾನ್ಸ್ ಬಾರ್ ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡುವುದಕ್ಕೆ ನಿರ್ಬಂಧ ಹೇರಿ 2016 ರಲ್ಲಿ ಜಾರಿಗೆ ತಂದಿದ್ದ ನಿಯಮಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಕೆಲ ಬದಲಾವಣೆಗಳನ್ನು ಮಾಡಿ ಆದೇಶ ನೀಡಿದೆ. ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯ ಮಾಡುವವರಿಗೆ ಗ್ರಾಹಕರು ಟಿಪ್ಸ್...