Tuesday, 28th January 2020

1 day ago

ಬಿಎಸ್‍ವೈಗೆ ಮಳೆ ನಿಭಾಯಿಸೋ ಶಕ್ತಿ ಇದೆ: ಶೋಭಾ ಕರಂದ್ಲಾಜೆ

ಮೈಸೂರು: ಸಿಎಂ ಯಡಿಯೂರಪ್ಪಗೆ ಮಳೆಯನ್ನ ನಿಭಾಯಿಸೋ ಶಕ್ತಿ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಮೈಸೂರಿನ ಸುತ್ತೂರಿನಲ್ಲಿ ಸುತ್ತೂರು ಜಾತ್ರೆ ಸಮಾರೋಪದಲ್ಲಿ ಅವರು ಮಾತನಾಡಿದರು. 2008ರಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ರು. ಬರದ ಆ ವೇಳೆ ಮಳೆ ಧಾರಕಾರವಾಗಿ ಬಂದಿತ್ತು. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮಳೆ ಬಂದು ಬರ ದೂರವಾಯ್ತು. ಆದರೆ ನೆರೆಯಿಂದ ಜನರ ಮನೆಗಳಿಗೆ ಹಾನಿ ಉಂಟಾಯಿತು ಎಂದು ಹೇಳಿದರು. ಪ್ರವಾಹ ಪರಿಹಾರವಾಗಿ ಎನ್.ಡಿ.ಆರ್.ಎಫ್ ತಂಡ 94 ಸಾವಿರ ಕೊಡುತ್ತೆ. ಅದಕ್ಕೆ 4 ಲಕ್ಷದ […]

3 days ago

ಮಳೆ ಆಶ್ರಿತ ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿ-35 ಲಕ್ಷ ರೂ. ವೆಚ್ಚದಲ್ಲಿ 2 ಕೆರೆಗಳ ನಿರ್ಮಾಣ

-ಕಲಬುರಗಿಯ ಲಿಂಗರಾಜಪ್ಪ ನಮ್ಮ ಪಬ್ಲಿಕ್ ಹೀರೋ ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಅಂದ್ರೆ ಸಾಕು ಈ ಭಾಗದ ಜನ ಅತ್ಯಂತ ಪೂಜನೀಯ ಭಾವನೆಯಿಂದ ನೋಡುತ್ತಾರೆ. ಇದಕ್ಕೆ ತಕ್ಕಂತೆ ಈ ವಂಶಸ್ಥರಾದ ಲಿಂಗರಾಜಪ್ಪನವರು ತಮ್ಮ ಜಮೀನಿಂದಲೇ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ. ಅವರೇ ಇಂದಿನ ನಮ್ಮ ಪಬ್ಲಿಕ್ ಹೀರೋ. ಲಿಂಗರಾಜಪ್ಪನವರು ಶರಣ ಸಿರಸಗಿ ಗ್ರಾಮದ ತಮ್ಮ ಸ್ವಂತ ಜಮೀನಿನಲ್ಲಿ ಒಟ್ಟು...

ಪ್ರವಾಹ ಪೀಡಿತ ಪ್ರದೇಶದಿಂದ ನಾಲ್ಕು ತಾಲೂಕುಗಳಿಗೆ ಸರ್ಕಾರದಿಂದ ಕೊಕ್

3 weeks ago

ಬೆಳಗಾವಿ: ಕಳೆದ ಐದು ತಿಂಗಳಿನ ಹಿಂದೆ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸಾವಿರಾರು ಕೋಟಿ ರೂ. ಹಾನಿ ಅನುಭವಿಸಿರುವ ಬೆಳಗಾವಿ ಜಿಲ್ಲೆಯಲ್ಲಿನ ಕೆಲ ತಾಲೂಕುಗಳನ್ನು ಕೈ ಬಿಟ್ಟಿರುವುದರಿಂದ ಸಂತ್ರಸ್ತರಿಗೆ ಜಿಲ್ಲಾಡಳಿತ ಪರಿಹಾರ ವಿತರಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆಗಸ್ಟ್ ನಲ್ಲಿ ಸುರಿದ...

ಅಕಾಲಿಕ ಮಳೆಗೆ ರಾಯಚೂರಿನಲ್ಲಿ ಲಕ್ಷಾಂತರ ರೂ. ಭತ್ತ ಹಾನಿ

3 weeks ago

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಗೆ ಲಕ್ಷಾಂತರ ರೂ. ಭತ್ತ ಹಾಗೂ ಕಡಲೆ ಬೆಳೆ ಹಾಳಾಗಿದೆ. ಜವಳಗೇರಾ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಬೆಳೆದಿದ್ದ ಭತ್ತ ಮಳೆಗೆ ಆಹುತಿಯಾಗಿದೆ. ಕಟಾವ್ ಮಾಡಿ ಒಣಗಲು ಬಿಟ್ಟಿದ್ದ ಭತ್ತ ಇನ್ನೇನು ಮಾರುಕಟ್ಟೆಗೆ...

ಹೊಸ ವರ್ಷದ ಆರಂಭದಲ್ಲೇ ಪ್ರವಾಹದ ಹೊಡೆತಕ್ಕೆ ನಲುಗಿದ ಇಂಡೋನೇಷ್ಯಾ – 16 ಮಂದಿ ಸಾವು

4 weeks ago

– ಹಾವು ಮೊಸಳೆಗಳು ರಸ್ತೆಯಲ್ಲಿ – 20 ಸಾವಿರ ಮಂದಿಗೆ ನೆರೆಯಿಂದ ಸಂಕಷ್ಟ ಜಕಾರ್ತ: ಇಡೀ ಜಗತ್ತು ಬುಧವಾರ ಹೊಸ ವರ್ಷದ ಸಂಭ್ರಮದಲ್ಲಿ ತೇಲಾಡಿದರೆ ದ್ವೀಪ ರಾಷ್ಟ್ರ ಇಂಡೋನೇಷ್ಯಾ ಮಾತ್ರ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿಹೋಗಿದೆ. ಇಂಡೋನೇಷ್ಯಾದಲ್ಲಿ ನೆರೆ ಆರ್ಭಟ ಮೈ...

ಆಗುಂಬೆಯಲ್ಲಿ ಅಕಾಲಿಕ ಮಳೆ

1 month ago

ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಅಕಾಲಿಕ ಮಳೆ ಮುಂದುವರಿದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆಗುಂಬೆಯಲ್ಲಿ ಶನಿವಾರ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಶನಿವಾರ ಸುರಿದ ಮಳೆ ರೈತರನ್ನು ಕಂಗೆಡಿಸಿದೆ. ಆಗುಂಬೆ ಭಾಗದಲ್ಲಿ ಈಗಾಗಲೇ ಭತ್ತದ ಕೊಯ್ಲು ಆರಂಭಗೊಂಡಿದ್ದು, ಮಳೆಯಿಂದಾಗಿ ಭತ್ತದ...

ಗ್ರಹಣದ ಬಳಿಕ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆಯ ಸಿಂಚನ

1 month ago

ಮಡಿಕೇರಿ: ಸೂರ್ಯಗ್ರಹಣವಾದ ಬಳಿಕ ಮಂಜಿನ ನಗರಿ ಮಡಿಕೇರಿಗೆ ಇಂದು ಸಂಜೆ ಮಳೆಯ ಸಿಂಚನವಾಗಿದೆ. ಇಂದು ಬೆಳಿಗ್ಗೆಯಿಂದಲೂ ಕೊಡಗಿನ ಬಹುತೇಕ ಕಡೆಗಳಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿತ್ತು. ಹೆಚ್ಚಾಗಿ ಸೂರ್ಯಗ್ರಹಣ ಗೋಚರ ಕೊಡಗಿನ ಕುಟ್ಟ ಭಾಗದಲ್ಲಿ ಕಂಡು ಬರುತ್ತದೆ ಎಂದು ಖಗೋಳಶಾಸ್ತ್ರ...

5 ತಿಂಗಳ ನಂತರ ಮಿನಿ ಬಸ್ಸುಗಳ ಸಂಚಾರಕ್ಕೆ ಮುಕ್ತವಾಯ್ತು ಚಾರ್ಮಾಡಿ ಘಾಟ್

1 month ago

ಚಿಕ್ಕಮಗಳೂರು: ಐದು ತಿಂಗಳ ಬಳಿಕ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಭಾರೀ ಮಳೆಯಿಂದಾಗ ಚಿಕ್ಕಮಗಳೂರಿನ ಕೊಟ್ಟಿಗೆಹಾರದಿಂದ ಮಂಗಳೂರಿನ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ 20 ಕಿ.ಮೀ. ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು...