Monday, 26th August 2019

Recent News

3 days ago

ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

ಬೆಂಗಳೂರು: ಹೊಸಾ ಅಲೆಯ, ಹೊಸಾ ಪ್ರಯೋಗದ ಚಿತ್ರವಾಗಿ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲಿ ನಿರೀಕ್ಷೆ ಬಿತ್ತಿದ್ದ ಚಿತ್ರ ನನ್ನಪ್ರಕಾರ. ಕಥೆಯ ಸುಳಿವು, ತಾರಾಗಣದ ಮೆರುಗು ಮತ್ತು ಪೋಸ್ಟರ್, ಟ್ರೇಲರ್ ಗಳಿಂದಲೇ ಏರಿಕೊಂಡಿದ್ದ ಕ್ಯೂರಿಯಾಸಿಟಿ… ಇಂಥಾ ಸಕಾರಾತ್ಮಕ ವಶಾತಾವರಣದಲ್ಲಿಯೇ ಈ ಸಿನಿಮಾವೀಗ ತೆರೆಗೆ ಬಂದಿದೆ. ಅಷ್ಟಕ್ಕೂ ಇಂಥಾ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಕಥೆಗಳ ಮೇಲೆ ಪ್ರೇಕ್ಷಕರಲ್ಲೊಂದು ಮೋಹ ಇದ್ದೇ ಇರುತ್ತದೆ. ಅಂಥಾದ್ದೇ ಪ್ರೀತಿಯಿಂದ ಬಂದು ನನ್ನಪ್ರಕಾರವನ್ನು ನೋಡಿದವರೆಲ್ಲ ಬೆರಗಾಗಿ ಮೆಚ್ಚಿಕೊಳ್ಳುವಂತೆ ಈ ಚಿತ್ರ ಮೂಡಿ ಬಂದಿದೆ. ಈ ಚಿತ್ರವನ್ನು ವಿನಯ್ ಬಾಲಾಜಿ […]

2 months ago

ವಿಚ್ಛೇದನಕ್ಕೆ ಮುಂದಾದ ರಘು ದೀಕ್ಷಿತ್- ಮಯೂರಿ

ಬೆಂಗಳೂರು: ಖ್ಯಾತ ಗಾಯಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯುವುದಕ್ಕೆ ನಿರ್ಧರಿಸಿದ್ದಾರೆ. ಕಳೆದ ಒಂದು ವರ್ಷದಿಂದ ರಘು ಮತ್ತು ಮಯೂರಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಇದೀಗ ಕೌಟುಂಬಿಕ ಕಲಹ ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ರಘು ದೀಕ್ಷಿತ್ ಮೇಲೆ ಮೀಟೂ ಆರೋಪ...

ಮಯೂರಿಯ ‘ಮೌನಂ’ ಮೂಡ್!

3 months ago

ಕಿರುತೆರೆಯಲ್ಲಿ ನಾಯಕಿ ಪಾತ್ರ ಮಾಡಿ ಪ್ರಸಿದ್ಧಿ ಪಡೆಯುತ್ತಲೇ ಹಿರಿತೆರೆಗೂ ನಾಯಕಿಯರಾಗಿ ಎಂಟ್ರಿ ಕೊಟ್ಟವರ ಪಟ್ಟಿ ದೊಡ್ಡದಿದೆ. ಅದರಲ್ಲಿ ಯಶಸ್ವಿಯಾದವರ ಪಟ್ಟಿಯೂ ಮತ್ತೊಂದಿದೆ. ಅದರಲ್ಲಿ ತಮ್ಮ ಹೆಸರನ್ನೂ ಛಾಪಿಸಿಕೊಂಡಿರೋ ನಟಿ ಮಯೂರಿ. ಜಯ ಕಾರ್ತಿಕ್ ಅವರಿಗೆ ಜೋಡಿಯಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ...

ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಜಗ್ಗೇಶ್ ಅಭಿನಯದ 8 ಎಂಎಂ

5 months ago

ಬೆಂಗಳೂರು: ಕಾದವನು ಮೇಧಾವಿ ನುಗ್ಗಿದವನು ಮೂರ್ಖ…! ಕಾಯೋಣ ಅಂತಾ ಖಡಕ್ ಡೈಲಾಗ್ ಹೊಡೆದು ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ನವರಸ ನಾಯಕ ಜಗ್ಗೇಶ್ ಅವರ ಸಿನಿಮಾ 8ಎಂಎಂ. ಹೆಚ್ಚಾಗಿ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುವ ಜಗ್ಗೇಶ್ ಹಿಂದೆಂದೂ ಕಾಣದಂತಹ ವಿಭಿನ್ನ ಅವತಾರದಲ್ಲಿ ಈ...

ಸ್ಯಾಂಡಲ್‍ವುಡ್‍ನಲ್ಲೂ ಮೀಟೂ ಬಿರುಗಾಳಿ – ರಘು ದೀಕ್ಷಿತ್ ವಿರುದ್ಧ ಆರೋಪ

11 months ago

– ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿ ಕ್ಷಮೆಯಾಚನೆ ನವದೆಹಲಿ: ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ ಲೈಂಗಿಕ ಕಿರುಕುಳ ವಿರುದ್ಧದ ‘ಮೀಟೂ’ ಅಭಿಯಾನ ಹೊಸ ಆರೋಪಗಳ ಸೇರ್ಪಡೆಯೊಂದಿಗೆ ಮತ್ತಷ್ಟು ತೀವ್ರಗೊಂಡಿದೆ. ತಮಿಳಿನ ಖ್ಯಾತ ಗೀತ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ...

ಹರಿಕೃಷ್ಣ ನಾರಾಯಣಿ ಮಯೂರಿ!

1 year ago

ಬೆಂಗಳೂರು: ಕೃಷ್ಣಲೀಲಾ ಚಿತ್ರದ ನಟನೆಯ ಮೂಲಕವೇ ಪ್ರೇಕ್ಷಕರ ಮನಗೆದ್ದಿರುವ ಮಯೂರಿಯ ಮುಂದೀಗ ಅವಕಾಶಗಳ ಒಡ್ಡೋಲಗ. ಮೂರ್ನಾಲ್ಕು ಚಿತ್ರಗಳ ಕೈಲಿರುವಾಗಲೇ ಮಯೂರಿಯೀಗ ಮತ್ತೊಂದು ಚಿತ್ರಕ್ಕೂ ಸಹಿ ಹಾಕಿದ್ದಾರೆ! ಇದೀಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಮಯೂರಿ ನಟಿಸಲಿರೋ ಹೊಸಾ ಚಿತ್ರ `ಹರಿಕೃಷ್ಣ...

ಚಿತ್ರ ತಂಡದ ಪ್ರಕಾರ ಮಯೂರಿ ಯುರೋಪಿನಲ್ಲಿದ್ದಾಳೆ!

1 year ago

ಬೆಂಗಳೂರು: ಜೆಕೆಗೆ ಜೋಡಿಯಾಗಿ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟಿದ್ದ ಮಯೂರಿ ವ್ಯಾಪಕವಾಗಿ ಮೆಚ್ಚುಗೆ ಗಳಿಸಿಕೊಂಡಿದ್ದು, ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದು ಅದರಿಂದಲೇ. ಆ ನಂತರ ಚಿತ್ರರಂಗಕ್ಕೂ ಅಡಿಯಿರಿಸಿದ್ದ ಮಯೂರಿ ಇದೀಗ ‘ನನ್ನ ಪ್ರಕಾರ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಟೈಟಲ್ ನಲ್ಲಿಯೇ ಏನೋ ವೈಶಿಷ್ಟ್ಯದ...

ಕನ್ನಡದ ಬಿಗ್ ಸ್ಟಾರ್ ಗಳ ಸಿನಿಮಾದಲ್ಲಿ ಅವಕಾಶ ಪಡೆದ ಮಯೂರಿ

1 year ago

ಬೆಂಗಳೂರು: ‘ಕೃಷ್ಣಲೀಲಾ’ ಖ್ಯಾತಿಯ ಮಯೂರಿ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಬ್ಯುಸಿಯಾಗುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ‘ಕರಿಯ-2’ ಚಿತ್ರದ ನಂತರ ‘ಗರ್ಲ್ ನಾಟ್ ಸಿನ್’ ಎಂಬ ಇಂಗ್ಲಿಷ್ ಮ್ಯೂಸಿಕ್ ಆಲ್ಬಂನಲ್ಲಿ ಮಯೂರಿ ಹೆಜ್ಜೆ ಹಾಕಿದ್ದರು. ಈ ಮಧ್ಯೆ...