Tuesday, 15th January 2019

Recent News

3 days ago

ಸಚಿವರಾದ್ರೂ ರಸ್ತೆಗಿಳಿದು ಟ್ರಾಫಿಕ್ ನಿರ್ವಹಣೆ ಕೆಲ್ಸ ಮಾಡಿದ್ರು

ಮಂಗಳೂರು: ಉನ್ನತ ಸ್ಥಾನದಲ್ಲಿದ್ದರು ಯಾವುದೇ ಬೇಸರವಿಲ್ಲದೆ ರಸ್ತೆ ಮಧ್ಯೆ ಟ್ರಾಫಿಕ್ ಪೋಲಿಸ್ ಜೊತೆ ಟ್ರಾಫಿಕ್ ಸೇವಕನಾಗಿ ನಿಂತ್ಕೊಂಡು ಸುಗಮವಾಗಿ ವಾಹನಗಳು ಸಂಚರಿಸುವಂತೆ ಸಚಿವರೊಬ್ಬರು ಕೆಲಸ ಮಾಡಿದ್ದಾರೆ. ಸಚಿವರಾದ ಮೇಲೆ ಝೀರೋ ಟ್ರಾಫಿಕ್‍ನಲ್ಲಿ ಓಡಾಡೋರನ್ನ ನೋಡಿದ್ದೀರಾ. ಆದ್ರೆ ಉನ್ನತ ಸ್ಥಾನದಲ್ಲಿದ್ದು, ಸಚಿವರಾಗಿದ್ದರೂ ಯಾವುದೇ ಮುಲಾಜಿಲ್ಲದೆ ಟ್ರಾಫಿಕ್ ಕೆಲಸ ಮಾಡೋದನ್ನ ನೀವು ನೋಡಿರಲ್ಲ. ಆದ್ರೆ ವಸತಿ ಹಾಗೂ ನಗರ ಪಾಲಿಕೆಗಳ ಸಚಿವರಾದ ಯುಟಿ ಖಾದರ್ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಸೇವಕನಾಗಿ ಸಲೀಸಾಗಿ ವಾಹನ ಸಂಚರಿಸುವಂತೆ ಕೆಲಸ ಮಾಡಿ ಟ್ರಾಫಿಕ್ […]

3 days ago

ಶಬರಿಮಲೆಗೆ ತೆರಳಲು ಯತ್ನಿಸ್ತಿದ್ದ ಇಬ್ಬರು ಯುವತಿಯರ ಬಂಧನ

ಮಂಗಳೂರು: ಭಾರೀ ವಿರೋಧದ ನಡುವೆಯೂ ಕೆಲ ಮಹಿಳೆಯರು ಶಬರಿಮಲೆ ಅಯ್ಯಪ್ಪನ ದರ್ಶನವನ್ನು ಮಾಡಿದ್ದರು. ಈಗ ಶಬರಿಮಲೆಗೆ ತೆರಳಲು ಯತ್ನಿಸುತ್ತಿದ್ದ ಇಬ್ಬರು ಯುವತಿಯರನ್ನು ಕೇರಳದ ಚೆಂಗನ್ನೂರು ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಂಗಳೂರಿನ ಅಯ್ಯಪ್ಪ ಭಕ್ತರು ಯುವತಿಯರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಆಂಧ್ರ ಪ್ರದೇಶದ ಮೂಲದ ಯುವತಿಯರು ಅಯ್ಯಪ್ಪ ಭಕ್ತರ ಸೋಗಿನಲ್ಲಿ ತೆರಳುತ್ತಿದ್ದರು. ಇದನ್ನು ಮಂಗಳೂರು ಅಪ್ಪಯ್ಯ ಭಕ್ತರು...

ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ – ವೀರೇಂದ್ರ ಹೆಗ್ಗಡೆ ಅಸಮಾಧಾನ

2 weeks ago

ಮಂಗಳೂರು: ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ...

ಮುಖಕ್ಕೆ ಮೆತ್ತಿದ್ದ ಕೇಕ್ ತೊಳೆಯಲು ಹೋಗಿ ನೇತ್ರಾವತಿ ನದಿಯಲ್ಲಿ ಯುವಕ ಸಾವು

2 weeks ago

-ರಕ್ಷಿಸಲು ಹೋದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ ಮಂಗಳೂರು: ನೇತ್ರಾವತಿ ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಮಹಮ್ಮದ್ ಸುಹೈದ್, ಸಹೀರ್ ಹಾಗೂ ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳು. ಮೂವರು ವಿದ್ಯಾರ್ಥಿಗಳು ಉಪ್ಪಿನಂಗಡಿ...

ಪಂಚಭೂತಗಳಲ್ಲಿ ಕರುನಾಡ ಸಿಂಗಂ ಮಧುಕರ್ ಶೆಟ್ಟಿ ಲೀನ

2 weeks ago

ಉಡುಪಿ: ಅನಾರೋಗ್ಯದಿಂದ ನಿಧನರಾದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇಂದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿಯ ಮನೆಯ ಅಡಿಕೆ ತೋಟದಲ್ಲೇ ಮಧುಕರ್ ಅಂತ್ಯಕ್ರಿಯೆಗೆ ನಡೆದಿದ್ದು, ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಚಿತೆ ಸಿದ್ಧಪಡಿಸಲಾಗಿತ್ತು. ತುಳುನಾಡಿನ ಬಂಟ ಸಂಪ್ರದಾಯದಂತೆ...

ಮಧುಕರ್ ಅಂತ್ಯಕ್ರಿಯೆಗೆ ಸಿದ್ಧತೆ- ಪಾರ್ಥಿವ ಶರೀರ ದರ್ಶನ ಪಡೆಯದ ಬಿಜೆಪಿಗರು..!

2 weeks ago

ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಲಹಂಕ ಟ್ರೈನಿಂಗ್ ಸೆಂಟರ್‍ಗೆ ಮಧುಕರ್ ಶೆಟ್ಟಿ ಹೆಸರು ಇಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 13 ಶಾಸಕರು ಮತ್ತು ಇಬ್ಬರು ಸಂಸದರಿದ್ರೂ ಮಧುಕರ್ ಶೆಟ್ಟಿ ಪಾರ್ಥಿವ ಶರೀರ...

ಯುವಕನಿಂದ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ

2 weeks ago

ಮಂಗಳೂರು: ಕರ್ತವ್ಯ ನಿರತ ವೈದ್ಯೆ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರೆಹಮಾನ್ ಬಂಧಿತ ಆರೋಪಿ. ರೆಹಮಾನ್ ಚಿಕಿತ್ಸೆಯ ವಿಚಾರವಾಗಿ ವೈದ್ಯೆ ರಾಹಿಳಾ ಅವರಿಗೆ ಅವಾಚ್ಯವಾಗಿ ನಿಂದಿಸಿ,...

ದೆಹಲಿ ಬಳಿಕ ಮಂಗ್ಳೂರಲ್ಲಿ ಭೀತಿ- ಗಾಳಿಯಲ್ಲಿ ಹೆಚ್ಚಾಗಿ ಬೆರೆತಿದ್ಯಂತೆ ಸೀಸದ ಅಂಶ..!

3 weeks ago

ಮಂಗಳೂರು: ಬೆಂಗಳೂರಿನ ನಂತರ ಅತಿ ಹೆಚ್ಚು ಮಾಲಿನ್ಯಕ್ಕೆ ತುತ್ತಾಗುತ್ತಿರೋ ನಗರವೆಂಬ ಕುಖ್ಯಾತಿ ಮಂಗಳೂರಿಗೆ ದಕ್ಕಿದೆ. ಆಂಟಿ ಪೊಲ್ಯುಶನ್ ಡ್ರೈವ್(ಎಪಿಡಿ) ಎಂಬ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಕಂಡುಬಂದಿದ್ದು ವಿಷಕಾರಿ ಸೀಸದ ಅಂಶ ಗಾಳಿಯಲ್ಲಿ ಸೇರಿಕೊಂಡಿದ್ದಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ....