Sunday, 22nd July 2018

Recent News

1 day ago

ಲಂಚ ಪಡೆದ ಅರಣ್ಯಾಧಿಕಾರಿಗೆ ಸರ್ಕಾರದಿಂದ್ಲೇ ಬಂಪರ್ ಗಿಫ್ಟ್!

ಬೆಂಗಳೂರು: ಭ್ರಷ್ಟಾಚಾರ ಆರೋಪವಿದ್ರೂ ಉಪವಲಯ ಅರಣ್ಯಾಧಿಕಾರಿಯಾಗಿದ್ದ ವಿಜಯ್ ಕುಮಾರ್‍ಗೆ ಅರಣ್ಯಾಧಿಕಾರಿಯಾಗಿ ಸರ್ಕಾರದಿಂದ ಬಡ್ತಿ ನೀಡಲಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಲಂಚ ಹೊಡೆಯೋ ಆ ಅಧಿಕಾರಿಗೆ ಸರ್ಕಾರವೇ ಕೊಡುತ್ತಾ ಪ್ರಮೋಷನ್? ದೂರು ಕೊಟ್ಟರೂ ಆ ಅಧಿಕಾರಿಗೆ ಸರ್ಕಾರವೇ ಕೊಡುತ್ತಾ ರಕ್ಷಣೆ ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಏನಿದು ಆರೋಪ?: ಮನೆಯ ಕಾಂಪೌಂಡ್‍ನಲ್ಲಿದ್ದ ಹಳೆ ಮರ ತೆರವಿಗೆ ಅನಮತಿ ಕೋರಿ ಬೆಂಗಳೂರಿನ ಶಾಂತಿನಗರದ ನಿವಾಸಿಯೊಬ್ಬರು, ಶ್ರೀನಿವಾಸ್ ಮೂಲಕ ಅರ್ಜಿ ಸಲ್ಲಿಸಿದ್ರು. ಆದ್ರೆ ಅರಣ್ಯಾಧಿಕಾರಿ ವಿಜಯ್ ಕುಮಾರ್ ಎಂಬವರು ಸುಮಾರು 50 […]

2 weeks ago

ಭ್ರಷ್ಟಾಚಾರ ತಡೆಯಲು ಇರೋದು ಒಂದೇ ಮಾರ್ಗ: ಉಪೇಂದ್ರ ಹೇಳ್ತಾರೆ ಓದಿ

ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ತಮ್ಮದೇ ಸ್ವಂತ ಪಕ್ಷ ಕಟ್ಟಿಕೊಂಡಿರುವ ಉಪೇಂದ್ರ ಉತ್ತಮ ಆಡಳಿತ ನಡೆಸುವುದು ಹೇಗೆ ಎಂಬುದನ್ನು ಟ್ವಿಟ್ಟರ್‍ನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಭಾನುವಾರ ಭ್ರಷ್ಟಾಚಾರ ಎಲ್ಲೆಡೆ ಹಬ್ಬಿಕೊಂಡಿದ್ದು, ಅದನ್ನು ನಿವಾರಿಸಬೇಕು ಎಂಬುದರ ಬಗ್ಗೆ ಕೆಲವು ಸಾಲುಗಳುಳ್ಳ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ...

ಸಿಎಂ ಎಚ್‍ಡಿಕೆ ಸಂಬಂಧಿ, ಮೈಸೂರು ವಿವಿ ಕುಲಪತಿಗೆ ಸಂಕಷ್ಟ!

4 weeks ago

ಮೈಸೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಂಬಂಧಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರನಾಗಲು ಸಿದ್ಧರಾಗಿರುವ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಂಗಪ್ಪ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ವೇಳೆ 2016 ರಲ್ಲಿ ನಡೆದ 124...

ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಆಪ್ತರೇ ಟಾರ್ಗೆಟ್?

1 month ago

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೇ ಟಾರ್ಗೆಟ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ ಈಗ ಎದ್ದಿದೆ. ಹೌದು. ಸರ್ಕಾರ ರಚನೆಯಾದ ಬಳಿಕ ಆರಂಭದಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಈಗ ಸಿಎಂ...

ಎಫ್ಐಆರ್‌ ದಾಖಲಿಸಲು ಠಾಣೆಯ ಜನರಲ್ ಡೈರಿ ನೋಂದಣಿ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

2 months ago

ನವದೆಹಲಿ: ಕ್ರಿಮಿನಲ್ ಪ್ರಕರಣಗಳ ತನಿಖೆ ಆರಂಭಿಸುವ ಮೊದಲು ಆಯಾ ಪೊಲೀಸ್ ಠಾಣೆಯ ಜನರಲ್ ಡೈರಿಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಪೊಲೀಸ್ ಠಾಣೆಯ ಜನರಲ್ ಡೈರಿಯಲ್ಲಿ ದೂರನ್ನು ನೋಂದಾಯಿಸಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ಹೈ...

ರಸ್ತೆ ಗುತ್ತಿಗೆದಾರರಲ್ಲಿ ಭ್ರಷ್ಟತೆ ಕಂಡುಬಂದಲ್ಲಿ ಅವರ ಮೇಲೆಯೇ ಬುಲ್‍ಡೋಜರ್ ಓಡಿಸಲಾಗುವುದು:ನಿತಿನ್ ಗಡ್ಕರಿ

2 months ago

ಭೋಪಾಲ್: ಹೆದ್ದಾರಿಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ಗುತ್ತಿಗೆದಾರರ ಮೇಲೆ ಬುಲ್ ಡೋಜರ್ ಓಡಿಸಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಹಾಗೂ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ಬೆಟುಲ್ ನಲ್ಲಿ ಅಸಂಘಟಿತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ...

ಯಡಿಯೂರಪ್ಪ ಸರ್ಕಾರ ನಂ 1 ಭ್ರಷ್ಟಾಚಾರ ಸರ್ಕಾರ: ಅಮಿತ್ ಶಾ 

4 months ago

ದಾವಣಗೆರೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಸರ್ಕಾರ ನಂಬರ್ ಒನ್ ಭ್ರಷ್ಟಾಚಾರ ಸರ್ಕಾರ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ  ಸಂದರ್ಭದಲ್ಲಿ ವಾಗ್ದಾಳಿ ನಡೆಸುವ ವೇಳೆ ಬಿಎಸ್‍ವೈ ಹೆಸರನ್ನು ಹೇಳಿದರು. ಎಡವಟ್ಟು ಗೊತ್ತಾದ ಬಳಿಕ ಅಲ್ಲೇ...

ನೋಟ್ ಬ್ಯಾನ್ ಮೂಲಕ ಕಪ್ಪು ಹಣವನ್ನು ವೈಟ್ ಮನಿ ಮಾಡಲು ಮೋದಿ ಅವಕಾಶ ನೀಡಿದ್ರು: ರಾಗಾ ಆರೋಪ

5 months ago

ಬಾಗಲಕೋಟೆ: ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಯ ಎರಡನೇಯ ದಿನವು ಮುಂದುವರೆದಿದ್ದು ಇಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು. ಜಿಲ್ಲೆಯ ಮುಳವಾಡದಲ್ಲಿ ಬೃಹತ್ ಜನಾಶೀರ್ವಾದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮತ್ತೊಮ್ಮೆ ವಚನ ಹೇಳುವ...