Friday, 19th July 2019

Recent News

3 months ago

ಪತ್ನಿ ಇದ್ದಾಗಿಯೂ ಯುವತಿ ಜೊತೆ ಸಂಬಂಧ – ಯುವ ಜೋಡಿ ಆತ್ಮಹತ್ಯೆ

ಮಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುದೆಮುಗೇರು ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಸಮೀಪದ ರೆಂಕೆದಗುತ್ತು ನಿವಾಸಿ ಚಿದಾನಂದ ಶೆಟ್ಟಿ ಹಾಗೂ ಸಂಗೀತಾ ನೇಣಿಗೆ ಶರಣಾದವರು. ಎರಡು ಮದುವೆಯಾಗಿದ್ದ ಚಿದಾನಂದ, ಸಂಗೀತಾಳ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದನು ಎನ್ನಲಾಗಿದೆ. ಮೊದಲ ಪತ್ನಿಗೆ ವಿಚ್ಚೇದನ ನೀಡಿ ಎರಡನೇ ಮದುವೆಯಾಗಿದ್ದ ಚಿದಾನಂದ, ಪತ್ನಿ ಇದ್ದರೂ ಬೇರೊಬ್ಬ ಯುವತಿ ಜೊತೆ ಸಂಬಂಧ ಹೊಂದಿದ್ದನು. ಈ ಅನೈತಿಕ ಸಂಬಂಧ ತಿಳಿದು ಮನೆಯಲ್ಲಿ 2ನೇ ಪತ್ನಿ […]

9 months ago

ಬೆಳ್ತಂಗಡಿಯಲ್ಲಿ ಅಪರೂಪದ ಹಾವು ಪತ್ತೆ

ಮಂಗಳೂರು: ಝೀಬ್ರಾದ ರೀತಿಯ ಬಣ್ಣವನ್ನು ಹೋಲುವ ಅಪರೂಪದ ಹಾವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಎಂಬಲ್ಲಿನ ಓಡಿಯಪ್ಪ ಎಂಬವರ ಮನೆ ಹಿತ್ತಿಲಿಗೆ ಆಗಮಿಸಿದ ಈ ಹಾವನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಮೈ ಪೂರ್ತಿ ಝೀಬ್ರಾದಂತೆ ಕಪ್ಪು ಮತ್ತು ಬಿಳಿಯ ಗೆರೆಗಳನ್ನು ಹೊಂದಿರುವ ಈ ಹಾವು, ಎರಡು ಅಡಿ ಉದ್ದ ಇತ್ತು....

ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದ ಶಿರೂರು ಶ್ರೀ ಆಪ್ತೆ ರಮ್ಯಾ ಶೆಟ್ಟಿ ಬಂಧನ

12 months ago

ಮಂಗಳೂರು: ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣ ಕುರಿತಂತೆ ಪೊಲೀಸ್ ವಿಚಾರಣೆ ಬಳಿಕ ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನಿಸಿದ್ದಾರೆ. ಬುರ್ಖಾ ಹಾಕಿ ರಮ್ಯಾ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ...

ತಂತಿ ಬೇಲಿಯಲ್ಲಿ ಸಿಲುಕಿ ಬುಸುಗುಡುತ್ತಿದ್ದ ಕಾಳಿಂಗನ ರಕ್ಷಣೆ- ಭಯ, ಆತಂಕದಲ್ಲೇ ನೆರೆದ ಸ್ಥಳೀಯರು

1 year ago

ಮಂಗಳೂರು: ತಂತಿ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಾಳಿಂಗ ಸರ್ಪವನ್ನು ಸ್ಥಳೀಯರು ಸೇರಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಸವಣಾಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯ ತೋಟದ ಆವರಣಕ್ಕೆ ಹಾಕಿದ್ದ...

ಕೆಲಸ ಮಾಡದಿದ್ರೆ ಜಿಲ್ಲೆಯವನಾದ್ರೂ ಸುಮ್ಮನೆ ಬಿಡೋದಿಲ್ಲ- ಅಧಿಕಾರಿಗೆ ಮಾಜಿ ಶಾಸಕ ಧಮ್ಕಿ

1 year ago

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರ ಅಧಿಕಾರಿಗಳನ್ನು ಹೀನಾಯವಾಗಿ ನಡೆಸಿಕೊಳ್ಳೋದರ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಗುರುವಾರ ಚಾರ್ಮಾಡಿ ಘಾಟ್ ವೀಕ್ಷಣೆಗೆ ತೆರಳಿದ್ದ ವಸಂತ ಬಂಗೇರ ಅವರು ತನ್ನ ಬೆಂಬಲಿಗರ ಎದುರಲ್ಲಿಯೇ ಹೆದ್ದಾರಿ ಪ್ರಾಧಿಕಾರದ...

ಕಡಲ ನಗರಿಯಲ್ಲಿ ಚುನಾವಣೆಯ ನಗಾರಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲೆಕ್ಷನ್ ಅಖಾಡ ಹೇಗಿದೆ?

1 year ago

ಚುನಾವಣಾ ದಂಗಲ್ ನಲ್ಲಿ ಈಗ ಎಲ್ಲರ ಚಿತ್ತ ಕರಾವಳಿ ಕರ್ನಾಟಕದತ್ತ. ದಕ್ಷಿಣ ಕೆನರಾದಲ್ಲಿ ರಾಜಕಾರಣಕ್ಕೆ ಧರ್ಮದ ಹೊದಿಕೆ ಮುಚ್ಚಿ ಅದೆಷ್ಟೋ ಕಾಲವೇ ಆಯ್ತು. ಬುದ್ಧಿವಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಹಾಗೂ ಇತರೆ ವಿಷಯಗಳು ರಾಜಕೀಯದ ವಿಷಯದಲ್ಲಂತೂ ನಗಣ್ಯ. ಚುನಾವಣೆಯ ಹೊಸ್ತಿಲಲ್ಲಿ ತಲೆ ಎತ್ತಿದ...

KSRP ಬಸ್ಸಿಗೆ ಸವರಿ ಬೈಕಿಗೆ ಗುದ್ದಿ ಲಾರಿ ಪಲ್ಟಿ- ತಂದೆ ಬಲಿ, ಪುತ್ರಿಯರಿಗೆ ಗಂಭೀರ ಗಾಯ!

1 year ago

ಮಂಗಳೂರು: ಕೋಳಿ ಸಾಗಾಟದ ಲಾರಿ ಗುದ್ದಿ ಬೈಕ್ ಸವಾರರೊಬ್ಬರು ದಾರುಣವಾಗಿ ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಮೃತ ದುರ್ದೈವಿ ಬೈಕ್ ಸವಾರನನ್ನು ಕರಿಮಣೇಲು ನಿವಾಸಿ ಉದಯ್ ಜೈನ್(40) ಎಂದು ಗುರುತಿಸಲಾಗಿದೆ. ಈ ಘಟನೆ ಬೆಳಗ್ಗಿನ ಜಾವ 7.30 ಕ್ಕೆ...

ಚಾರ್ಮಾಡಿಯಲ್ಲಿ ಹೆಚ್ಚಿದ  ಟ್ರಾಫಿಕ್ ಜಾಮ್- ಅಪಘಾತ ತಪ್ಪಿಸಲು ಪೊಲೀಸರನ್ನು ನೇಮಿಸುವಂತೆ ಸ್ಥಳೀಯರ ಆಗ್ರಹ

1 year ago

ಚಿಕ್ಕಮಗಳೂರು: ಶಿರಾಡಿಘಾಟ್ ರಸ್ತೆ ಬಂದ್ ಆದ ಮೇಲೆ ಬೆಂಗಳೂರು-ಮಂಗಳೂರು ಹೆದ್ದಾರಿಯ ವಾಹನಗಳು ಚಾರ್ಮಾಡಿ ಘಾಟ್‍ನಲ್ಲಿ ಸಂಚರಿಸುತ್ತಿರೋದ್ರಿಂದ ಚಾರ್ಮಾಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ದಿನಕ್ಕೆ ಎರಡ್ಮೂರು ಗಂಟೆ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ,...