Wednesday, 19th February 2020

Recent News

5 months ago

ರಸಗೊಬ್ಬರಕ್ಕಾಗಿ ಹಗಲು ರಾತ್ರಿ ಕ್ಯೂನಲ್ಲಿ ನಿಲ್ಲುತ್ತಿರುವ ರೈತರು

-ಗೊಬ್ಬರದ ಅಭಾವದಿಂದ ರೈತರ ಸುಲಿಗೆಗೆ ನಿಂತ ವಿತರಕರು ಚಿಕ್ಕಬಳ್ಳಾಪುರ: ಇತ್ತೀಚೆಗೆ ಮಳೆಯಾದ ಪರಿಣಾಮ ಬಯಲು ಸೀಮೆ ಭಾಗದ ಕೆಲವು ಜಿಲ್ಲೆಗಳಲ್ಲಿ ಒಣಗಿ ಹೋಗುತ್ತಿದ್ದ ಬೆಳೆಗಳು ನಳನಳಿಸುತ್ತಿವೆ. ಇರೋ ಬೆಳೆಯ ಉತ್ತಮ ಫಸಲು ಪಡೆಯಲು ಮುಂದಾಗಿರುವ ರೈತರು, ಮಳೆ ನಿಂತ ಮೇಲೆ ಗೊಬ್ಬರ ಹಾಕಲು ಯೂರಿಯಾ ಮೊರೆ ಹೋಗಿದ್ದು, ಯೂರಿಯಾಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್ ಹೆಚ್ಚಾಗಿದೆ. ಇದರಿಂದ ಚಿಕ್ಕಬಳ್ಳಾಪುರದಲ್ಲಿ ರೈತರು ದಿನವಿಡೀ ಸರದಿ ಸಾಲಿನಲ್ಲಿ ನಿಂತು ಮೂಟೆ ಗೊಬ್ಬರ ಪಡೆಯೋಕೆ ಕಷ್ಟಪಡುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ನನಗೂ ಒಂದು […]

5 months ago

ಭಾರೀ ಮಳೆಗೆ ಒಂದೇ ದಿನಕ್ಕೆ ತುಂಬಿ ಕೋಡಿ ಬಿದ್ದ ಕೆರೆ – ಬೆಳೆ ನಾಶ

ಹಾಸನ: ತಡರಾತ್ರಿ ಸುರಿದ ಭಾರೀ ಮಳೆಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕರೆಕೋಡಿಹಳ್ಳಿ ಗ್ರಾಮದ ಕೆರೆ ಒಂದೇ ರಾತ್ರಿಗೆ ತುಂಬಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಳೆದ ಕೆಲ ವರ್ಷದಿಂದ ಕೆರೆ ತುಂಬದೆ ಕೆರೆಕೋಡಿಹಳ್ಳಿ ಗ್ರಾಮಸ್ಥರು ಬಹಳ ತೊಂದರೆ ಅನುಭವಿಸುತ್ತಿದ್ದರು. ಆದರೆ ತಡರಾತ್ರಿ ಬಂದ ಭಾರೀ ಮಳೆಗೆ ಒಂದೇ ದಿನದಲ್ಲಿ ಕೆರೆ ಸಂಪೂರ್ಣ ತುಂಬಿದ್ದು,...

ಕೊಡಗಿನಲ್ಲಿ ಕೊಂಚ ಕಡಿಮೆಯಾದ ವರುಣನ ಅರ್ಭಟ- ನಿಲ್ಲದ ಭೂಕುಸಿತ

6 months ago

– ನೆರವಿನ ನಿರೀಕ್ಷೆಯಲ್ಲಿ ಜನ ಕೊಡಗು: ಜಿಲ್ಲೆಯನಲ್ಲಿ ಮಳೆ ಕೊಂಚ ತಗ್ಗಿದ್ದರೂ ಮಳೆಯ ಅವಾಂತರ ಮಾತ್ರ ನಿಂತಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿದೆ. ಪರಿಣಾಮ ಜಿಲ್ಲೆಯ ಜನತೆ ಮಾತ್ರ ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ. ನಿನ್ನೆಯವರೆಗೆ ಸುರಿದ ಮಳೆಯಿಂದಾಗಿ...

ಹಾವೇರಿಯಲ್ಲಿ ವರುಣನ ಆರ್ಭಟ – ಹಲವು ಕಡೆ ರಸ್ತೆ ಸಂಚಾರ ಸ್ಥಗಿತ

6 months ago

ಹಾವೇರಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಲ್ಲಿನ ವರದಾ, ಧರ್ಮಾ ಮತ್ತು ಕುಮುದ್ವತಿ ನದಿಗಳು ತುಂಬಿ ಹರಿಯುತ್ತಿವೆ. ನದಿಗಳು ತುಂಬಿ ಹರಿಯುತ್ತಿದ್ದರಿಂದ ಕರ್ಜಗಿ-ಕಲಕೋಟಿ, ದೇವಗಿರಿ-ಕಳಸೂರು, ನಾಗನೂರು-ಕೂಡಲ, ಮಾಸೂರು-ಶಿಕಾರಿಪುರ, ಹಾನಗಲ್-ಬಂಕಾಪುರ ಸೇರಿದಂತೆ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಶಿಗ್ಗಾಂವಿ ತಾಲೂಕಿನ ನಾಗನೂರು ಕೆರೆ...

ಜಮೀನಿಗೆ ನುಗ್ಗಿದ ಡ್ಯಾಂ ಹಿನ್ನೀರು- ರೈತರ ಬೆಳೆ ನೀರು ಪಾಲು

7 months ago

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ವಿಜಯಪುರದ ಆಲಮಟ್ಟಿ ಲಾಲಬಾಹ್ದೂರ ಶಾಸ್ತ್ರಿ ಜಲಾಶಯಕ್ಕೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಧಿಕ ನೀರು ಹರಿದು ಬಂದ ಕಾರಣ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 2 ಲಕ್ಷ ಕ್ಯೂಸೆಕ್ ನೀರನ್ನು ನಾರಾಯಣಪುರ...

ಸಾಲ ಮಾಡಿ ಬಿತ್ತನೆ ಮಾಡಿದ ಫಸಲಿಗೆ ಕಳೆ ನಾಶಕ ಸಿಂಪಡಿಸಿದ ದುಷ್ಕರ್ಮಿಗಳು

7 months ago

ದಾವಣಗೆರೆ: ಅಲ್ಪಸ್ವಲ್ಪ ಮಳೆಗೆ ಕಷ್ಟಪಟ್ಟು ಸಾಲ ಮಾಡಿ ಬಿತ್ತನೆ ಮಾಡಿ ಬೆಳೆದ ಮೆಕ್ಕೆಜೋಳದ ಫಸಲಿಗೆ ದುಷ್ಕರ್ಮಿ ಕಳೆ ನಾಶಕ ಸಿಂಪಡಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಟಿ. ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಟಿ. ಗೊಲ್ಲರಹಟ್ಟಿ ಗ್ರಾಮದ ರೈತ ಯರ್ರಪ್ಪ ಅವರಿಗೆ...

ಸಾಲಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

7 months ago

ಕೋಲಾರ: ಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗ್ರಾಮದಲ್ಲಿ ನಡೆದಿದೆ. ಅರಿಕೆರೆ ಗ್ರಾಮದ ನಿವಾಸಿ 26 ವರ್ಷದ ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಟೊಮೆಟೋ ಬೆಳೆ ಕೈಕೊಟ್ಟ ಕಾರಣ...

ಕೊನೆಗೂ ಮಂಡ್ಯ ರೈತರ ಬೆಳೆಗಳಿಗೆ ನೀರು ಬಿಡಲು ತೀರ್ಮಾನ

7 months ago

ಮಂಡ್ಯ: ಕೆಆರ್‍ಎಸ್ ಅಣೆಕಟ್ಟೆ ಮೂಲಕ ರೈತರ ಬೆಳೆಗಳಿಗೆ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಈ ಮೂಲಕ ನೀರು ಹರಿಸುವಂತೆ ನಿರಂತರವಾಗಿ ಪ್ರತಿಭಟನೆ ನಡೆಸಿದ್ದ ರೈತರಿಗೆ ಜಯಸಿಕ್ಕಿದೆ. ಇಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ...