Recent News

10 hours ago

ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆ ಕೆಲಸ ಮಾಡುತ್ತಿರುವುದು ಸತ್ಯ: ಶೋಭಾ ಕರಂದ್ಲಾಜೆ

ಬೆಳಗಾವಿ: ಕರಾವಳಿಯ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆಗಳು ಕೆಲಸ ಮಾಡುತ್ತಿರುವುದು ಸತ್ಯ. ಕೇರಳ ಹಾಗೂ ಬೇರೆ ಬೇರೆ ಭಾಗಗಳಿಂದ ಬಂದವರು ಸಮಾಜ ದ್ರೋಹ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಬಾಂಬ್ ಪತ್ತೆಯಾದ ಪ್ರಕರಣ ಸಂಪೂರ್ಣ ತನಿಖೆಯಾದ ಬಳಿಕ ಘಟನೆಯ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಬಗ್ಗೆ ಯಾರು? ಏಕೆ? ಇಟ್ಟಿದ್ದಾರೆ. ಹೇಗೆ ಅಲ್ಲಿಗೆ ಬಂತು ಎಂಬ ಕುರಿತಾಗಿ ತನಿಖೆ ನಡೆಯಬೇಕಿದೆ. ಈಗಲೇ […]

2 days ago

ರಾತ್ರೋರಾತ್ರಿ ಮೂವರ ಭೀಕರ ಕೊಲೆ-11 ದಿನದಲ್ಲಿ ಹಸೆಮಣೆ ಏರಬೇಕಿದ್ದಾತ ಸಾವು

– ಮಲಗಿದ್ದಾಗಲೇ ತಂದೆ-ತಾಯಿ, ಮಗನ ಕೊಚ್ಚಿ ಕೊಂದ್ರು ಬೆಳಗಾವಿ: ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ನಡೆದಿದೆ. ಬೈಲಹೊಂಗಲದ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ಶಿವಾನಂದ ಅಂದಾನ ಶೆಟ್ಟಿ, ಪತ್ನಿ ಶಾಂತವ್ವ ಮತ್ತು ಪುತ್ರ ವಿನೋದ್ ಅಂದಾನ ಶೆಟ್ಟಿ ಮೃತ ದುರ್ದೈವಿಗಳು. ಶನಿವಾರ ರಾತ್ರಿ...

ಬಬಲಾದಿ ಮಠದ ಶ್ರೀಗಳ ನುಡಿ ಎಂದಿಗೂ ಸುಳ್ಳಾಗಲ್ಲ: ಬಾಲಚಂದ್ರ ಜಾರಕಿಹೊಳಿ

4 days ago

ಬೆಳಗಾವಿ: ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಪೀಠಾಧಿಪತಿಯಾಗಿರುವ ಶಿವಯ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದಾರೆಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಸಮೀಪದ ಅರಭಾವಿ ಮತ್ತು ಶಿಂಧಿಕುರಬೇಟ...

ಕಾಡು ಪ್ರಾಣಿಗಳ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

4 days ago

ಬೆಳಗಾವಿ: ಕಳೆದ ಹಲವಾರು ದಿನಗಳಿಂದ ಖಾನಾಪೂರ ಕಾಡಿನಲ್ಲಿ ಅಕ್ರಮವಾಗಿ ಬೇಟೆಯಾಡುತ್ತಿದ್ದ ಕಳ್ಳರ ಜಾಲವೊಂದನ್ನು ಗೋಲಿಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ತಂಡವೊಂದು ಕಾಡುಪ್ರಾಣಿಗಳನ್ನು ತಡರಾತ್ರಿ ಬೇಟೆಯಾಡುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಸಿನೀಮಿಯ ರೀತಿಯಲ್ಲಿ ರೇಡ್ ಮಾಡಿ ಬಂಧನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ...

ಮೂವರು ನಾನ್ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿದ ಸರ್ಕಾರ

6 days ago

ಬೆಳಗಾವಿ: ಸಾರ್ವಜನಿಕ ಸ್ನೇಹಿ ಆಡಳಿತದ ದೃಷ್ಟಿಯಿಂದ ಪೊಲೀಸ್ ಇಲಾಖೆಯಲ್ಲಿನ ಮೂವರು ನಾನ್ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನಾಗಿ ಅಮರನಾಥ್ ರೆಡ್ಡಿ ಅವರನ್ನ ನೇಮಕ ಮಾಡಿದೆ. ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ...

ಪ್ರವಾಹ ಕಳೆದು 4 ತಿಂಗಳಾದ್ರೂ ನಿಂತಿಲ್ಲ ಸಂತ್ರಸ್ತರ ಕಣ್ಣೀರು

6 days ago

ಬೆಳಗಾವಿ(ಚಿಕ್ಕೋಡಿ): ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನ ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರವಾಹ ಸಂತ್ರಸ್ತರು ಕಣ್ಣೀರಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಪರಿಹಾರ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ ಇತ್ತ ಸಂತ್ರಸ್ತರು ಪರಿಹಾರಕ್ಕಾಗಿ ಅಲೆದಾಡಿ ಕಣ್ಣೀರು ಹಾಕುತ್ತಿದ್ದಾರೆ....

ಧರ್ಮದ ಹೆಸರಲ್ಲಿ ಯಾರನ್ನೂ ಹೊರ ಹಾಕುವ ಕಾನೂನಿಲ್ಲ: ಜೀರಲಿ

6 days ago

ಬೆಳಗಾವಿ: ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪ್ರಪಂಚದ ಅಗ್ರಸ್ಥಾನದ ದೇಶ ಭಾರತವಾಗಿದ್ದು, ಎಲ್ಲ ಜನಾಂಗಕ್ಕೆ ಶಾಂತಿಯದೋಟವಾಗಿದೆ. ಈ ದೇಶದ ಯಾವ ಪ್ರಜೆಯನ್ನೂ ಧರ್ಮದ ಆಧಾರದ ಮೇಲೆ ಹೊರ ಹಾಕುವ ಯಾವುದೇ ಕಾನೂನುಗಳು ಇಲ್ಲ ಎಂದು ಖ್ಯಾತ ನ್ಯಾಯವಾದಿ ಎಮ್.ಬಿ.ಜೀರಲಿ ಹೇಳಿದರು. ಪಟ್ಟಣದ ಗಣಾಚಾರಿ...

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಹೆಚ್ಚುವರಿ ಆಧಾರ್ ಕೇಂದ್ರ ಸ್ಥಾಪಿಸಲು ಕ್ರಮ

7 days ago

ಚಿಕ್ಕೋಡಿ(ಬೆಳಗಾವಿ): ರಾತ್ರಿಯಿಡಿ ಸರತಿಯಲ್ಲಿ ಕಾದು ನಿಂತು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನರು ಪರದಾಡುತ್ತಿರುವ ಕುರಿತ ಪಬ್ಲಿಕ್ ಟಿವಿಯ ವರದಿಗೆ ಹುಕ್ಕೇರಿ ತಾಲೂಕು ಆಡಳಿತ ಸ್ಪಂದಿಸಿದೆ. ಜನರ ಸಂಕಷ್ಟದ ಕುರಿತ ಸುದ್ದಿ ಪ್ರಕಟವಾದ ಬೆನ್ನಲ್ಲೇ ಹುಕ್ಕೇರಿ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ಹುಕ್ಕೇರಿ ತಾಲೂಕಿನ...