Thursday, 22nd August 2019

7 months ago

ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿದ ಯದುವೀರ್ ಒಡೆಯರ್

ದಾವಣಗೆರೆ: ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಅವರು ಗುರುವಾರ ದಾವಣಗೆರೆ ಬೆಣ್ಣೆ ರುಚಿ ಸವಿದಿದ್ದಾರೆ. ದಾವಣಗೆರೆ ಎಂದಾಕ್ಷಣ ಮೊದಲು ನೆನಪಿಗೆ ಬರೋದು ಬೆಣ್ಣೆದೋಸೆ. ಹೀಗಾಗಿ ನಗರಕ್ಕೆ ಭೇಟಿ ನೀಡಿದ ಮಹಾರಾಜರು ವಿದ್ಯಾನಗರ ರಸ್ತೆಯ ಡೆಂಟಲ್ ಕಾಲೇಜ್ ಮುಂಭಾಗದ ಗುರುಕೊಟ್ಟುರೇಶ್ವರ ಹೋಟೆಲ್‍ನಲ್ಲಿ ಆಪ್ತರೊಂದಿಗೆ ಬೆಣ್ಣೆ ದೋಸೆ ಸೇವಿಸಿದರು. ಬಳಿಕ ಮಹಾರಾಜರ ಜೊತೆ ಸಾರ್ವಜನಿಕರು, ಪೊಲೀಸರು ಫೋಟೋ ಕ್ಲಿಕ್ಕಿಸಿಕೊಂಡರು. ಯದುವೀರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಕಮಲಾಪುರ ಹಾಗೂ ತಳವಾರಘಟ್ಟ […]