Tuesday, 10th December 2019

9 months ago

ರಾಹುಲ್ ಗಾಂಧಿ ಮುಂದೆ ಗುರು ಶಿಷ್ಯರ ಸೂತ್ರ – ಸಿದ್ದರಾಮಯ್ಯ ಸೂತ್ರವನ್ನ ಒಪ್ಪಿಕೊಂಡಿದ್ಯಾಕೆ ಹೆಚ್‍ಡಿಡಿ?

ಬೆಂಗಳೂರು: ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ 20:8ರಂತೆ ಲೋಕಸಭಾ ಕ್ಷೇತ್ರಗಳನ್ನು ಹಂಚಿಕೊಂಡಿವೆ. ಮೈಸೂರು ಕ್ಷೇತ್ರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಪಾಲಾಗುತ್ತಿದ್ದ ಮೈಸೂರನ್ನು ಸಿದ್ದರಾಮಯ್ಯ ಉಳುಸಿಕೊಂಡಿದ್ದರ ಹಿಂದಿನ ಕಹಾನಿ ಇಲ್ಲಿದೆ. ಮೊಮ್ಮಗನಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಆದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಬೇಕೆಂದು ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ತವರು ಕ್ಷೇತ್ರ ಎಲ್ಲಿ ತಪ್ಪಲಿದೆ ಎಂಬುದನ್ನ […]