Saturday, 20th July 2019

Recent News

11 hours ago

ಶ್ರೀನಿವಾಸ್ ಗೌಡ ವಿರುದ್ಧ ಹಕ್ಕು ಚ್ಯುತಿ ಮಂಡನೆ: ಬಿಎಸ್‍ವೈ

ಬೆಂಗಳೂರು: ಶಾಸಕ ಶ್ರೀನಿವಾಸ್ ಗೌಡ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಯಡಿಯೂರಪ್ಪನವರು, ಯಾವ ವಿಚಾರವಾಗಿ ಮಾತನಾಡುತ್ತಿದ್ದೇನೆ ಅಂತ ಸ್ಪೀಕರ್ ಅವರಿಗೆ ತಿಳಿಸದೆ ಶ್ರೀನಿವಾಸ್ ಗೌಡ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಶಾಸಕರಾದ ಅಶ್ವಥ್ ನಾರಾಯಣ, ವಿಶ್ವನಾಥ್ ಅವರು ಅವರು 5 ಕೋಟಿ ರೂ. ಹಣವನ್ನು ತಂದು ನಮ್ಮ ಮನೆಯಲ್ಲಿ ಇಟ್ಟು ಹೋದರು ಎಂದು ಆರೋಪ ಮಾಡಿದ್ದಾರೆ. ಈ […]

18 hours ago

ಬಿಎಸ್‍ವೈ ಸಿಎಂ ಆಗಲಿ ಎಂದು ಶೋಭಾ ಕರಂದ್ಲಾಜೆಯಿಂದ ವಿಶೇಷ ಪೂಜೆ

ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶೋಭಾ ಅವರು ಇಂದು ಬೆಳಗ್ಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಮದ್ದೂರಮ್ಮ ಸನ್ನಿಧಿಗೆ ಆಗಮಿಸಿದ್ದಾರೆ. ಅಲ್ಲದೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿ ಎಂದು ಮದ್ದೂರಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ವಿಶ್ವಾತ ಮತ...

ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ: ಬಿಎಸ್‍ವೈ

1 day ago

ಬೆಂಗಳೂರು: ಇವತ್ತು ಸದನದಲ್ಲಿ ಅವರ ಶಾಸಕರೆಷ್ಟಿದ್ದರು? ನಮ್ಮ ಶಾಸಕರೆಷ್ಟಿದ್ದರು? ಸ್ಪೀಕರ್‌ಗೆ ಇದಕ್ಕಿಂತ ಪುರಾವೆ ಬೇಕಿತ್ತಾ? ಇವತ್ತಿನ ಕಾರ್ಯಕಲಾಪ ಮುಂದೂಡುವುದು ಮೈತ್ರಿ ನಾಯಕರ ಷಡ್ಯಂತ್ರವಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು. ನಾವು ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ. ದೇಶ, ರಾಜ್ಯದ...

ಅಧಿಕಾರ ಶಾಶ್ವತವಲ್ಲ, ಗೂಟಾ ಹೊಡ್ಕೊಂಡು ಕೂತಿರುವ ಭ್ರಮೆಯೂ ನನಗಿಲ್ಲ: ಸಿಎಂ

2 days ago

– ನನ್ನ ಮೇಲೆ ಬಿಎಸ್‍ವೈಗೆ ವಿಶೇಷ ಕಾಳಜಿ ಬಂದಿದೆ – ಮೈತ್ರಿ ಪಕ್ಷ ನನ್ನ ನಾಯಕತ್ವದಲ್ಲಿ ಇರುತ್ತೋ ಇಲ್ವೋ? ಬೆಂಗಳೂರು: ಅಧಿಕಾರ ಶಾಶ್ವತವಲ್ಲ. ನಾವು ಗೂಟಾ ಹೊಡೆದುಕೊಂಡು ಕೂತಿದ್ದೇವೆ ಎನ್ನುವ ಭ್ರಮೆಯೂ ನನಗಿಲ್ಲ ಸಿಎಂ ಹೇಳಿದ್ದಾರೆ. ವಿಶ್ವಾಸಮತಯಾಚನೆ ವೇಳೆ ಮಾತನಾಡಿದ ಸಿಎಂ,...

ಸಿಎಂ ವಿಶ್ವಾಸ ಕಳೆದುಕೊಳ್ಳೋ ವಿಶ್ವಾಸ ನನಗಿದೆ: ಬಿಎಸ್‍ವೈ

3 days ago

ಬೆಂಗಳೂರು: ಸಿಎಂ ಅವರು ಗುರುವಾರ ಸದಸನದಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಆದರೆ ಅವರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಅತೃಪ್ತ ಶಾಸಕರ ಸುಪ್ರೀಂ ತೀರ್ಪು ವಿಚಾರದ ಕುರಿತು...

ಅಧಿಕಾರಕ್ಕಾಗಿ ಬಿಎಸ್‍ವೈಯಿಂದ ಮಹಾ ರುದ್ರಯಾಗ

3 days ago

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಲಿ ಎಂದು ಇಂದು ಗವಿಗಂಗಾಧರ ದೇಗುಲದಲ್ಲಿ ಮಹಾ ರುದ್ರಯಾಗ ಮಾಡಲಿದ್ದಾರೆ. ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಯಡಿಯೂರಪ್ಪ ಅವರು ಮಹಾ...

ರೆಸಾರ್ಟಿನಲ್ಲಿ ಬಿಜೆಪಿ ಶಾಸಕರೊಂದಿಗೆ ಭಜನೆ ಮಾಡಿದ ಬಿಎಸ್‍ವೈ

3 days ago

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಶಾಸಕರ ಜೊತೆಗೆ ರಾತ್ರಿ ಭಜನೆ ಮಾಡಿದ್ದಾರೆ. ಬಿಜೆಪಿ ಶಾಸಕರು ಕಳೆದ ಕೆಲವು ದಿನಗಳಿಂದ ರಮಡ ರೆಸಾರ್ಟಿನಲ್ಲಿ ವಾಸ್ತವ್ಯ ಮಾಡಿದ್ದಾರೆ. ಸೋಮವಾರ ರಾತ್ರಿ ಆರ್ಕೆಸ್ಟ್ರಾ ಆಯೋಜಿಸಿದ್ದ ಶಾಸಕರು ರಾತ್ರಿ ವಿಶ್ರಾಂತಿ ಪಡೆದು ಅಲ್ಲಿಂದ ನೇರವಾಗಿ...

ರೆಸಾರ್ಟಿನಲ್ಲಿ ಕ್ರಿಕೆಟ್ ಆಡಿದ ಬಿಎಸ್‍ವೈ

3 days ago

ಬೆಂಗಳೂರು: ಕರ್ನಾಟಕದಲ್ಲಿ ಎರಡು ವಾರಗಳ ಹಿಂದೆ ಆರಂಭಗೊಂಡಿರುವ ‘ರಾಜಕೀಯ ಕ್ರಿಕೆಟ್’ ಟೂರ್ನಿಯ ಅಂತಿಮ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು ಯಡಿಯೂರಪ್ಪ “ಈ ಬಾರಿ ನಮಗೆ ಕಪ್” ಎಂದು ಹೇಳಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಭಾರೀ ರಾಜ್ಯ ರಾಜಕೀಯ ಬೆಳವಣಿಗೆಗಳ ನಡೆಯುತ್ತಿರುವ ಬೆನ್ನಲ್ಲೇ ಫುಲ್ ಖುಷಿ...