Saturday, 17th August 2019

16 hours ago

ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

-ಮಕ್ಕಳಿಗೆ ಗ್ರಾಮಸ್ಥರು, ಶಿಕ್ಷಕರು ಸಾಥ್ ಬಾಗಲಕೋಟೆ: ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ್ದ ಪ್ರವಾಹ ಸದ್ಯ ತಗ್ಗಿದ್ದು, ತಮ್ಮ ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಕೊಂಚ ಮಟ್ಟದಲ್ಲಿ ಪ್ರವಾಹದ ನೀರು ತಗ್ಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಗೆ ನೀರು ತುಂಬಿ […]

2 days ago

ಪ್ರವಾಹದಲ್ಲಿ ವಿದ್ಯುತ್ ಕಂಬ ಏರಿದ ವ್ಯಕ್ತಿಯ ರಕ್ಷಣೆ

ಬಾಗಲಕೋಟೆ: ಜಿಲ್ಲೆಯ ಜಿಲ್ಲೆ ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಪ್ರವಾಹದಿಂದಾಗಿ ಕಂಬ ಏರಿ ಕುಳಿತ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ರಮೇಶ್ ಪೂಜೇರಿ ವಿದ್ಯುತ್ ಕಂಬ ಏರಿ ರಕ್ಷಣೆಗಾಗಿ ಕಾದಿದ್ದ ವ್ಯಕ್ತಿ. ಇವರು ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಗ್ರಾಮದ ಕಡೆಗೆ ಹೊರಟಿದ್ದರು. ಈ ಸಂದರ್ಭ ಮಧ್ಯದಲ್ಲಿ ನೀರಿನ ಸೆಳೆತ ಹೆಚ್ಚಿದ್ದರಿಂದ ರಮೇಶ್ ತನ್ನ ಜೀವ ಉಳಿಸಿಕೊಳ್ಳಲು ವಿದ್ಯುತ್...

ಬಿಎಸ್‍ವೈ ಕಾಲ್ಗುಣ ಸರಿಯಿಲ್ಲ, ಸಿಎಂ ಆದಾಗೆಲ್ಲಾ ರಾಜ್ಯಕ್ಕೆ ಕಂಟಕ ಬಂದಿದೆ: ವಿಜಯಾನಂದ ಕಾಶಪ್ಪನವರ್

3 days ago

ಬಾಗಲಕೋಟೆ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅದೃಷ್ಠ, ಕಾಲ್ಗುಣ ಸರಿಯಿಲ್ಲ. ಅವರು ಸಿಎಂ ಆದಾಗೆಲ್ಲಾ ರಾಜ್ಯಕ್ಕೆ ಕಂಟಕ ಎದುರಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಲೇವಡಿ ಮಾಡಿದ್ದಾರೆ. ಹುನಗುಂದ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳ ಭೇಟಿ ನೀಡಿದ ಬಳಿಕ ಮಾತನಾಡಿದ...

ಸನ್ಮಾನ ಮಾಡಿ ಯೋಧರಿಗೆ ಯುವಕರಿಂದ ಬೀಳ್ಕೊಡುಗೆ

4 days ago

ಬಾಗಲಕೋಟೆ: ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಇಂದು ಭಾರತೀಯ ಸೇನೆಯ ಯೋಧರು ತಮ್ಮ ತಮ್ಮ ಸ್ಥಳಕ್ಕೆ ಹಿಂತಿರುಗುತ್ತಿದ್ದಾರೆ. ಈ ವೇಳೆ ತೆರಳುತ್ತಿದ್ದ ಯೋಧರಿಗೆ ಜಮಖಂಡಿ ಯೋಧರು ಸನ್ಮಾನ ಮಾಡುವ ಮೂಲಕ ಬೀಳ್ಕೊಟ್ಟಿದ್ದಾರೆ. ಜಮಖಂಡಿ ಕನಕದಾಸ ಭವನದಲ್ಲಿ ಯುವಕರು ಮೇಜರ್ ವಿವೇಕ್ ಸೇರಿದಂತೆ ಎಲ್ಲ...

ಸಂತ್ರಸ್ತರ ಗೋಳು ಕೇಳದ ಬಾಗಲಕೋಟೆ ಜಿಲ್ಲಾಡಳಿತ

4 days ago

ಬಾಗಲಕೋಟೆ: ಕೃಷ್ಣಾ, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರದಿಂದ ಜನರ ಪಾಡು ನರಕವಾಗಿಬಿಟ್ಟಿದೆ. ಜಿಲ್ಲೆಯ ಒಳಕಲ್ ದಿನ್ನಿ ಗ್ರಾಮದ ಸಂತ್ರಸ್ತರ ಗೋಳು ಕೇಳುವವರೇ ಇಲ್ಲವಾಗಿದ್ದು, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಗ್ರಾಮಸ್ಥರು ಆಕ್ರೋಶ...

ಜಮೀನು ನೀರುಪಾಲಾಯ್ತು, ನಾನ್ ಬದ್ಕಿರಲ್ಲ- ಅಳುತ್ತಾ ನೀರಿಗೆ ಧುಮುಕಲು ಹೋದ ಅಜ್ಜಿ

5 days ago

ಬಾಗಲಕೋಟೆ: ಜೀವನೋಪಾಯಕ್ಕಿದ್ದ ಏಕೈಕ ಜಮೀನು ಜಲಾವೃತವಾಗಿದ್ದರಿಂದ ಅಜ್ಜಿಯೊಬ್ಬರು ಜೋರಾಗಿ ಅಳುವ ದೃಶ್ಯ ಎಂಥವರನ್ನೂ ಮನಕಲಕುವಂತೆ ಮಾಡಿದೆ. ಈ ಘಟನೆ ಬಾಗಲಕೋಟೆ ತಾಲೂಕಿನ ಹಿರೇಸಂಶಿ ಗ್ರಾಮದಲ್ಲಿ ನಡೆದಿದೆ. ಹಿರೇಸಂಶಿ ಗ್ರಾಮದ ಪದ್ದವ್ವ ಜೋಗಿನ್ ಎಂಬ ವೃದ್ಧೆಯೇ ಹಾಡಿಕೊಂಡು ಅಳುತ್ತಿರುವ ಅಜ್ಜಿ. ಇವರು ಜೀವನೋಪಾಯಕ್ಕಿದ್ದ...

ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು, ಅದಕ್ಕೆ ಕಾಮನ್ ಸೆನ್ಸ್ ಅಂತಾರೆ: ಶೋಭಾ ಕರಂದ್ಲಾಜೆ

5 days ago

ಬಾಗಲಕೋಟೆ: ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು. ಅದಕ್ಕೆ ಕಾಮನ್ ಸೆನ್ಸ್ ಅಂತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ...

ಪ್ರವಾಹದ ನಡುವೆ ಜಾತ್ರೆ ನೆರವೇರಿಸಿದ ಗ್ರಾಮಸ್ಥರು

5 days ago

ಬಾಗಲಕೋಟೆ: ಪ್ರವಾಹದ ಮಧ್ಯೆಯೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ರಾಮಲಿಂಗೇಶ್ವರ ಜಾತ್ರೆ ನಡೆಯಿತು. ಈ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಜಾತ್ರೆ ನಡೆಯಲ್ಲ ಎಂದು ಎಲ್ಲರೂ ಎಂದುಕೊಂಡಿದ್ದರು. ಆದರೆ ಆ ಜನರಿಗೆ ದೇವರ...