Wednesday, 21st August 2019

Recent News

8 months ago

ಪರಮೇಶ್ವರ್‌ ಗೃಹ ಖಾತೆ ಬದಲಾಯಿಸಿದ್ದು ನಾನಲ್ಲ- ಸಿದ್ದರಾಮಯ್ಯ

ಹುಬ್ಬಳ್ಳಿ: ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಅಂತ ಒತ್ತಾಯ ಮಾಡಿದ್ದೇ ನಾನು. ಅವರ ಗೃಹ ಖಾತೆ ಬದಲಾಯಿಸಿದ್ದು ಮಾತ್ರ ನಾನಲ್ಲ. ಅದು ಹೈಕಮಾಂಡ್ ನಿರ್ಧಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು ಸಮನ್ವಯ ಸಮಿತಿಯಲ್ಲಿ ತೀರ್ಮಾನ ಮಾಡಿದಂತೆ ನಡೆದುಕೊಂಡಿದ್ದೇವೆ. ಬಸವರಾಜ್ ಹೊರಟ್ಟಿ ಅವರು ಕಾಂಗ್ರೆಸ್ ಮೇಲೆ ಯಾಕೆ ಅಸಮಾಧಾನ ಹೊರಹಾಕಿದ್ದರೋ ನನಗೆ ಗೊತ್ತಿಲ್ಲ. ಅವರು ನನ್ನನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ಸಿಎಂ ಕುಮಾರಸ್ವಾಮಿ ಅವರಿಗೆ ನೇರವಾಗಿ ಕೇಳಲಿ. ನಾವು ಸಮನ್ವಯ ಸಮಿತಿಯಲ್ಲಿ […]

8 months ago

ಟಿಪ್ಪು ಜಯಂತಿ ಆಚರಣೆ ಕುರಿತ ಚರ್ಚೆಗೆ ಆಗ್ರಹ – ಬಿಜೆಪಿ ಬೆಂಬಲಕ್ಕೆ ನಿಂತ ಬಸವರಾಜ ಹೊರಟ್ಟಿ

ಬೆಳಗಾವಿ: ವಿಧಾನ ಪರಿಷತ್ ಕಲಾಪದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದ ಚರ್ಚೆಗೆ ಪಟ್ಟು ಹಿಡಿದ ವೇಳೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸದಸ್ಯರ ಬೆಂಬಲಕ್ಕೆ ನಿಂತಿದ್ದಾರೆ. ಪರಿಷತ್‍ನಲ್ಲಿ ಟಿಪ್ಪು ಜಯಂತಿ ಕುರಿತ ಚರ್ಚೆಗೆ ಸಿಎಂ ಕುಮಾರಸ್ವಾಮಿ ಅವರು ಕಾಲಾವಕಾಶ ಕೇಳಿದ್ರು, ಹೀಗಾಗಿ ಸಭಾಪತಿಗಳು ಚರ್ಚೆಗೆ ಅವಕಾಶ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು,...

ಮೈತ್ರಿಗೆ ತಲೆನೋವಾದ ವಿಧಾನ ಪರಿಷತ್ ಸಭಾಪತಿ ಸ್ಥಾನ

9 months ago

-ಬಸವರಾಜ್ ಹೊರಟ್ಟಿ ಮೇಲೆ ಸಿಎಂ ಕೃಪಾಕಟಾಕ್ಷ ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನದ ವಿಚಾರವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ತಲೆನೋವಾಗಿದೆ. ಆದರೆ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಬಲವಿದ್ದು ಅವರೇ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ...

ಸಿಎಂ ಮಾತು ಅಧಿಕಾರಿಗಳೂ ಕೇಳ್ತಿಲ್ಲ: ಬಸವರಾಜ್ ಹೊರಟ್ಟಿ

11 months ago

ಬಳ್ಳಾರಿ: ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ವಿರೋಧ ಪಕ್ಷದ ಆರೋಪದ ನಡುವೆಯೇ ಜೆಡಿಎಸ್ ಮುಖಂಡರು ಹಾಗೂ ಪರಿಷತ್ ಸಭಾಪತಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶವನ್ನು ರಾಜ್ಯದ ಅಧಿಕಾರಿಗಳೂ ಕೇಳುತ್ತಿಲ್ಲವೆಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ...

ದೋಸ್ತಿ ಸರ್ಕಾರದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಸರೆಂಡರ್!

1 year ago

ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಅತಿ ದೊಡ್ಡ ಹೊಂದಾಣಿಕೆ ನಡೆದಿದ್ದು, ಮೈತ್ರಿ ಸೂತ್ರ ಪಾಲಿಸಲು ಕಾಂಗ್ರೆಸ್ ಒಂದು ವಿಚಾರದಲ್ಲಿ ಇದೀಗ ಜೆಡಿಎಸ್‍ಗೆ ಸರೆಂಡರ್ ಆಗಿದೆ. ಈ ಮೂಲಕ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ಅನಿವಾರ್ಯವಾಗಿ ಸೈಲೆಂಟಾಯ್ತಾ ಅನ್ನೋ ಪ್ರಶ್ನೆ ಇದೀಗ...

ಹಂಗಾಮಿ ಸಭಾಪತಿಗೆ ಅಧಿಕಾರವಿಲ್ಲಂದ್ರೆ ನಾನು ಈಗಲೇ ರಾಜೀನಾಮೆ ನೀಡ್ತೀನಿ: ಹೊರಟ್ಟಿ

1 year ago

ಬೆಂಗಳೂರು: ಹಂಗಾಮಿ ಸಭಾಪತಿಗೆ ಅಧಿಕಾರವಿಲ್ಲ ಎನ್ನುವುದಾದರೆ ನಾನು ಈಗಲೇ ರಾಜೀನಾಮೆ ನೀಡುತ್ತೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದ ಪ್ರಸಂಗ ಇಂದು ಪರಿಷತ್‍ನಲ್ಲಿ ನಡೆಯಿತು. ಸಭಾಪತಿ ನೇಮಕಾತಿ ವಿಚಾರವಾಗಿ ನಡೆದ ಚರ್ಚೆ ವೇಳೆ ಬಿಜೆಪಿ ಶಾಸಕ ಶಾಣಪ್ಪ ಅವರು, ಹಂಗಾಮಿ ಸ್ಪೀಕರ್‍ಗೆ ಸದನ...

ಸಾಲ ಮಾಡಿದವರು ವೋಟ್ ಹಾಕ್ತಿದ್ರೆ ನಮ್ದೇ ಸರ್ಕಾರ ಬರ್ತಿತ್ತು: ಬಸವರಾಜ್ ಹೊರಟ್ಟಿ

1 year ago

ಹಾವೇರಿ: ಸಾಲ ಮಾಡಿಕೊಂಡಿದ್ದವರು ಜೆಡಿಎಸ್ ಗೆ ವೋಟ್ ಹಾಕಿದ್ದರೇ ನಮ್ಮದೇ ಸರ್ಕಾರ ಬರುತ್ತಿತ್ತು. ಆದರೆ ಏನ್ ಮಾಡೋದು ವೋಟ್ ಹಾಕಲಿಲ್ಲ. ಹಾಗಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,...

ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ, ಡಿಕೆಶಿ ಜೊತೆ ಚೆನ್ನಾಗಿದ್ದೀನಿ: ಎಚ್.ಡಿ ರೇವಣ್ಣ

1 year ago

ಹುಬ್ಬಳ್ಳಿ: ನಾನು ಮತ್ತು ಜನಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ ಶಿವಕುಮಾರ್ ಚೆನ್ನಾಗಿದ್ದೀವಿ. ಸುಮ್ಮನೆ ನಮ್ಮ ನಡುವೆ ಜಗಳ ತಂದಿಡುವ ಕೆಲಸ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಲೋಕೋಪಯೋಗಿ...