Monday, 26th August 2019

Recent News

20 hours ago

ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಭೀಕರತೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅರ್ಧ ಕರ್ನಾಟಕದ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿದೆ. ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಆದರೆ ನೂತನ ಸಚಿವರಿಗೆ ಮಾತ್ರ ಕಾಸ್ಟ್ಲಿ ಕಾರಿನ ವ್ಯಾಮೋಹ ಶುರುವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಕೂಡ ಪ್ರವಾಹ ಪರಿಹಾರ ಧನವನ್ನು ಬಿಜೆಪಿ ನಾಯಕರಿಗೆ ಕೊಡಿಸಲು ವಿಳಂಬವಾಗುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಹೊಸ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕಂತೆ. […]

2 days ago

ನೆರೆ ಹಾನಿ ಅಧ್ಯಯನಕ್ಕೆ ಇಂದು ಕೇಂದ್ರದ ತಂಡ ಆಗಮನ

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಅಧ್ಯಯನ ತಂಡ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ನೆರೆ ಹಾನಿ ಬಗ್ಗೆ ಪರಿಶೀಲನೆ ನಡೆಸಲಿದೆ. ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ ನೇತೃತ್ವದಲ್ಲಿ ಅಧ್ಯಯನ ನಡೆಯಲಿದ್ದು, ತಂಡದಲ್ಲಿ ಕೃಷಿ, ಹಣಕಾಸು, ಜಲಶಕ್ತಿ...

ರಾಮನಗರ, ಬೆಳಗಾವಿಯಲ್ಲಿ ವರುಣನ ಆರ್ಭಟ

2 days ago

ರಾಮನಗರ/ಬೆಳಗಾವಿ: ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಇಂದು ವರುಣ ಆರ್ಭಟಿಸಿದ್ದು, ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದೆ. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ತಾಲೂಕಿನಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ. ಒಮ್ಮೊಮ್ಮೆ ಜೋರು ಮಳೆಯಾದ್ರೆ, ಮತ್ತೊಮ್ಮೆ ತುಂತುರು ಮಳೆ ನಿರಂತರವಾಗಿ ಬೀಳುತ್ತಲೇ...

ಪಾಕಿನಿಂದ ಸಟ್ಲೇಜ್ ನದಿಗೆ ಹರಿದು ಬಂದ ಕ್ಯಾನ್ಸರ್‌ಕಾರಕ ನೀರು

3 days ago

– 17ಕ್ಕೂ ಹೆಚ್ಚು ಗಡಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಚಂಡೀಗಢ: ಪಾಕಿಸ್ತಾನ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವುದು ತಿಳಿದ ಸಂಗತಿ. ಯಾವಾಗಲೂ ಭಾರತದ ವಿರುದ್ಧ ಸಂಚು ಮಾಡುತ್ತಲೇ ಇರುವ ಪಾಕ್, ಈಗ ನೀರಿನ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆಯಾ ಎನ್ನುವ ಅನುಮಾನಗಳು...

ಬಾಡೂಟ ತ್ಯಜಿಸಿ ನೆರೆ ಸಂತ್ರಸ್ತರಿಗೆ 10 ಲಕ್ಷ ರೂ. ನೀಡಲು ಕೈದಿಗಳ ನಿರ್ಧಾರ

3 days ago

ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದಾಗಿ ಅನೇಕ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ನೆರೆ ಸಂತ್ರಸ್ತರಿಗೆ ರಾಜ್ಯದ ಮೂಲೆ ಮೂಲೆಯಿಂದ ಜನರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ಬೆನ್ನಲ್ಲೇ ಕೈದಿಗಳು ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿ...

ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ – ವೈದ್ಯರಲ್ಲಿ ಮಾಜಿ ಸಿಎಂ ಮನವಿ

4 days ago

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ಕೊಡುವ ಮೂಲಕ ವೈದ್ಯಕೀಯ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಈ ಬಗ್ಗೆ “ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ....

ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜಕೀಯ ಮಾಡಬೇಡಿ: ಅಧಿಕಾರಿಗಳಿಗೆ ಸಚಿವೆ ಖಡಕ್ ವಾರ್ನಿಂಗ್

4 days ago

ಬೆಳಗಾವಿ: ಜನರ ನಡುವೆಯೇ ನೂತನ ಸಚಿವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮ ಮಾಂಜರಿ ಭೇಟಿ ನೀಡಿದ್ದರು. ಗ್ರಾಮದ ಪ್ರವಾಹ ಪರಿಸ್ಥಿತಿ ಅವಲೋಕನದ ವೇಳೆ ಶಶಿಕಲಾ...

ಕರ್ನಾಟಕದಲ್ಲಿ ಪ್ರವಾಹ – ಗಗನಕ್ಕೇರಿತು ತರಕಾರಿ ಬೆಲೆ

4 days ago

ಬೆಂಗಳೂರು: ರಾಜ್ಯ ಎದುರಿಸಿದ ಭೀಕರ ಪ್ರವಾಹದಿಂದ ಒಂದೆಡೆ ಬೆಳೆಗಳು ಹಾನಿಯಾಗಿ, ಇನ್ನೊಂದೆಡೆ ತರಕಾರಿ ಸಾಗಿಸಲು ಹಲವೆಡೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರವಾಹದಿಂದ ತರಕಾರಿ ಬೆಲೆ ಹೆಚ್ಚಾಗಿದೆ. ಭೀಕರ ಪ್ರವಾಹಕ್ಕೆ ತರಕಾರಿ...