Tuesday, 23rd July 2019

2 days ago

ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ – ವೀಕೆಂಡ್ ಮೂಡಿನಲ್ಲಿದ್ದ ಪ್ರವಾಸಿಗರಿಗೆ ನಿರಾಸೆ

ಮಂಡ್ಯ: ಕೆಆರ್‍ಎಸ್ ಡ್ಯಾಮ್‍ನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದ್ದು, ವೀಕೆಂಡ್ ಎಂಜಾಯ್ ಮಾಡಲು ಪಕ್ಷಿಧಾಮಕ್ಕೆ ಬಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಕೆಆರ್‍ಎಸ್ ಡ್ಯಾಮ್‍ನಿಂದ ಶನಿವಾರದಿಂದ ಸುಮಾರು ಏಳುವರೆ ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ನದಿ ನೀರಿನ ಸೆಳೆತ ಹೆಚ್ಚಾಗಿದೆ. ಹೀಗಾಗಿ ಬೋಟಿಂಗ್ ಮಾಡುವಾಗ ನೀರಿನ ಸೆಳೆತದಿಂದ ಪ್ರವಾಸಿಗರಿಗೆ ಅಪಾಯವಾಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರದಿಂದಲೇ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ನದಿಯಲ್ಲಿ ನೀರಿನ […]

2 days ago

ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಕಾಫಿನಾಡಿನ ಹೊನ್ನಮ್ಮನಹಳ್ಳ ಫಾಲ್ಸ್

ಚಿಕ್ಕಮಗಳೂರು: ಕಾಫಿನಾಡಿನ ಅರಣ್ಯದೊಳಗೆ ವರ್ಷಪೂರ್ತಿ ಮೈದುಂಬಿ ಹರಿಯುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಫೆವರೆಟ್ ತಾಣವಾಗಿದ್ದು, ದಿನೇ ದಿನೇ ಈ ಜಲಪಾತದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕ್ಕಮಗಳೂರಿನಲ್ಲಿರುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿಗೆ ಆಗಮಿಸೋ ಪ್ರವಾಸಿಗರು ಇಲ್ಲಿಗೂ ತಪ್ಪದೇ ಭೇಟಿ ನೀಡುತ್ತಾರೆ. ಶೋಲಾ...

ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾದ ಚಿತ್ರದುರ್ಗ ಕೋಟೆ

2 months ago

ಚಿತ್ರದುರ್ಗ: ಐತಿಹಾಸಿಕ ಪ್ರವಾಸಿ ತಾಣವಾದ ಚಿತ್ರದುರ್ಗದ ಕೋಟೆಯಲ್ಲಿ ಬಿದ್ದರೆ ಸೀದಾ ಶಿವನ ಪಾದ ಗ್ಯಾರಂಟಿ ಎಂಬಂತಾಗಿದೆ. ಜಗತ್ ಪ್ರಸಿದ್ಧ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಪ್ರವಾಸಿ ತಾಣವೀಗ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಹೌದು. ಲಕ್ಷಾಂತರ ಜನ ಪ್ರವಾಸಿಗರು ಬರುವ ಪ್ರಸಿದ್ಧ ಪ್ರವಾಸಿ ತಾಣವಾದ...

ಬಂಡೀಪುರದಲ್ಲಿ ಪ್ರಕೃತಿ ಸೊಬಗು ಇಮ್ಮಡಿ – ಮೂಲೆ, ಮೂಲೆಯಿಂದ ಪ್ರವಾಸಿಗರ ದಂಡು

3 months ago

ಚಾಮರಾಜನಗರ: ಬೆಂಕಿ ಬಿದ್ದು ಬಂಡೀಪುರ ಹುಲಿರಕ್ಷಿತಾರಣ್ಯ ಸುಟ್ಟು ಭಸ್ಮವಾಗಿತ್ತು. ಆದರೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹಸಿರು ಕಾನನದ ನಡುವೆ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ ಮೊದಲಾದ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ....

ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ 4 ಜೀವ ಉಳಿಸಿದ ಲೈಫ್‍ಗಾರ್ಡ್ ಸಿಬ್ಬಂದಿ

3 months ago

ಕಾರವಾರ: ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಪ್ರವಾಸಿಗರನ್ನ ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‍ನಲ್ಲಿ ಈ ಘಟನೆ ನಡೆದಿದ್ದು, ಹುಸೇನ್(14), ಸಹಝಾದ್(26), ಅಬ್ದುಲ್ಲಾ(20), ಬೇಪರಿ(42)...

ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ಪ್ರಕರಣ – 20ಕ್ಕೂ ಹೆಚ್ಚು ಕನ್ನಡಿಗರು ವಾಪಸ್

3 months ago

ಚಿಕ್ಕಬಳ್ಳಾಪುರ: ಶ್ರೀಲಂಕಾದಲ್ಲಿ ಉಗ್ರರು ನಡೆಸಿರುವ ಬಾಂಬ್ ಸ್ಫೋಟದಿಂದ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 6 ಮಂದಿ ಮೃತಪಟ್ಟಿದ್ದು, ಮತ್ತೆ ಕೆಲವರು ನಾಪತ್ತೆಯಾಗಿದ್ದಾರೆ. ಇದೇ ವೇಳೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಬೆಂಗಳೂರಿನ 20ಕ್ಕೂ ಹೆಚ್ಚು ಮಂದಿ ಇಂದು ಸಂಜೆ ಕೊಲಂಬೋದಿಂದ ವಾಪಸ್ ಕೆಂಪೇಗೌಡ ವಿಮಾನ...

ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!

3 months ago

ಚಿಕ್ಕಮಗಳೂರು: ರಣಬಿಸಿಲ ಮಧ್ಯೆಯೂ ದೇಶಾದ್ಯಂತ ಚುನಾವಣ ಕಾವು ಜೋರಾಗಿಯೇ ಇದೆ. ಆದ್ರೆ, ಚುನಾವಣೆ ಅನ್ನೋದು ಗೊತ್ತಿಲ್ಲದೆ ರಜೆ ಸಿಕ್ಕಿದೆ ಎಂದು ಪ್ರವಾಸಕ್ಕೆ ಬಂದವರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವ್ಯಂಗ್ಯ ಸನ್ಮಾನ ಮಾಡಿ ಮತದಾನದ ಅರಿವು ಮೂಡಿಸಿದ್ದಾರೆ. ಇಂದು ರಾಜ್ಯದ 14...

ಹೊತ್ತಿ ಉರಿದ ಪ್ರವಾಸಿ ಬಸ್- ತಪ್ಪಿದ ಭಾರೀ ದುರಂತ

3 months ago

ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿಯ ಗಣಂಗೂರು ಬಳಿ ಖಾಸಗಿ ಬಸ್ ಹೊತ್ತಿ ಉರಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರುನಲ್ಲಿ ಬಸ್ ಬೆಂಕಿಗಾಹುತಿಯಾಗಿದೆ. ಕೇರಳ ಮೂಲದ ಪ್ರವಾಸಿ ಬಸ್ ಇದಾಗಿದ್ದು, ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಪ್ರವಾಸಿಗರು ಬಸ್ ನಿಂದ ಹೊರ ಬಂದಿದ್ದಾರೆ. ಪ್ರವಾಸಿಗರು ಬಸ್...