Tuesday, 18th June 2019

Recent News

2 days ago

ಚಾಲಕನ ಮೇಲೆ ಲಾಠಿ ಚಾರ್ಜ್- ಮೂವರು ಪೊಲೀಸರ ಅಮಾನತು

ನವದೆಹಲಿ: ಟೆಂಪೋ ಚಾಲಕನ ಮೇಲೆ ಲಾಠಿ ಚಾರ್ಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ದೆಹಲಿಯ ಮುಖರ್ಜಿನಗರದಲ್ಲಿ ನಡೆದ ಅಪಘಾತದ ನಂತರ ಟೆಂಪೋ ಚಾಲಕ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಜಗಳ ತಾರಕ್ಕೇರಿದ ಪರಿಣಾಮ ಓರ್ವ ಅಧಿಕಾರಿ ಗಾಯಗೊಂಡಿದ್ದಾರೆ. ಈಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಹರಿತವಾದ ಆಯುಧವನ್ನು ಹಿಡಿದಿದ್ದ ವ್ಯಕ್ತಿಯನ್ನು ಪೊಲೀಸರು ಲಾಠಿಯಿಂದ ಥಳಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ತಂದೆಯನ್ನು ಸಂಭಾಳಿಸಲು ಪ್ರಯತ್ನಿಸುತ್ತಿದ್ದ ಚಾಲಕನ […]

2 days ago

13ರ ಪೋರನ ಮೇಲೆ ನಾಲ್ವರಿಂದ ಗ್ಯಾಂಗ್ ರೇಪ್

ಲಕ್ನೋ: ಅಪ್ರಾಪ್ತ ಬಾಲಕನ ಮೇಲೆ ನಾಲ್ಕು ಜನ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದ ಪುವಾಯಾ ಎಂಬಲ್ಲಿ ನಡೆದಿದೆ. ಶನಿವಾರ ಸಂಜೆ 13 ವರ್ಷದ ಬಾಲಕನನ್ನು ನಾಲ್ವರು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಘಟನೆ ಕುರಿತು ಬಾಲಕ ಮನೆಯವರ ಬಳಿ ವಿವರಿಸಿದ್ದು, ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ....

ಐಎಂಎ ವಂಚನೆ- ತಂಗಿ ಮದುವೆಗೆ ಕೂಡಿಟ್ಟ 2.5 ಲಕ್ಷ ರೂ. ಕಳೆದುಕೊಂಡ ಅಂಗವಿಕಲ

5 days ago

-ಸಣ್ಣ ಪುಟ್ಟ ಕಳ್ಳರನ್ನ ಹಿಡೀತೀರಿ, ಈಗ ಮನ್ಸೂರ್‍ನನ್ನು ಬಂಧಿಸಿ ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕೂಡಿಕೆ ಮಾಡಿದ್ದ ಅಂಗವಿಕರೊಬ್ಬರು ತಂಗಿ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಐಎಂಎಯಿಂದ ಮೋಸಹೋದ ಸಲೀಂ ಅವರು ಪೊಲೀಸರಿಗೆ ದೂರಿ ನೀಡಿ ತಮ್ಮ...

ಮರಾಠ ಯುವತಿಯನ್ನು ಪ್ರೀತಿಸಿದ ದಲಿತ ಯುವಕ- ಅವಾಚ್ಯ ಶಬ್ದದಿಂದ ನಿಂದಿಸಿ ಧಮ್ಕಿ ಹಾಕಿದ ಎಂಎಲ್‍ಸಿ

1 week ago

ಕಾರವಾರ: ದಲಿತ ಯುವಕ ಹಾಗೂ ಮರಾಠ ಯುವತಿ ಪ್ರೀತಿಗೆ ಬೆಂಬಲಿಸಿದ ದಲಿತರಿಗೆ ಹಾಗೂ ಪೊಲೀಸರಿಗೆ ಸಚಿವ ಆರ್.ವಿ ದೇಶಪಾಂಡೆ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಘೋಟ್ನೇಕರ್ ಅವಾಚ್ಯ ಶಬ್ದದಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿ...

ಚಲಿಸುತ್ತಿದ್ದ ಕಾರಿನಲ್ಲಿ ಮೂವರು ಯುವಕರ ಸ್ಟಂಟ್: ವಿಡಿಯೋ ನೋಡಿ

1 week ago

ಮುಂಬೈ: ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ ಮಾಡಿದ್ದಕ್ಕೆ ಮುಂಬೈ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಶೇಖ್(10), ಸಮೀರ್ ಸಹಿಬೋಲೆ(20) ಹಾಗೂ ಅನಸ್ ಶೇಖ್(19) ಸ್ಟಂಟ್ ಮಾಡಿದ ಯುವಕರು. ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೂವರಿಗೆ ಕೋರ್ಟ್ ಎಚ್ಚರಿಕೆ...

ಕಳ್ಳತನಕ್ಕೆ ಬಂದವರು ಯುವಕನ ಕೊಲೆ ಮಾಡಿದ್ರು

1 week ago

ಬಳ್ಳಾರಿ: ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ತಾಲೂಕಿನ ಹಂದ್ಯಾಳ ಗ್ರಾಮದಲ್ಲಿ ನಡೆದಿದೆ. ಹಂದ್ಯಾಳ ಗ್ರಾಮದ ನಿವಾಸಿ ಹುಲುಗಪ್ಪ(21) ಮೃತ ದುರ್ದೈವಿ. ಶನಿವಾರದಂದು ಹುಲುಗಪ್ಪ ಮನೆಗೆ ಕಳ್ಳನಕ್ಕೆ ಬಂದ ಖದೀಮರು ಈ ಕೃತ್ಯವೆಸಗಿದ್ದಾರೆ....

ಅಕ್ರಮವಾಗಿ ಪಿಸ್ತೂಲ್, ಜೀವಂತ ಗುಂಡು ಇಟ್ಕೊಂಡು ತಿರುಗ್ತಿದ್ದ ಇಬ್ಬರ ಬಂಧನ

2 weeks ago

ಕಲಬುರಗಿ: ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಇಟ್ಟುಕೊಂಡು ತಿರುಗಾಡುತ್ತಿದ್ದ ಇಬ್ಬರನ್ನು ಡಿಸಿಆರ್ ಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಕೋಗನೂರಿನ ಹಸನ್‍ಸಾಬ್ ಬಾವಾಸಾಬ್ ಹತ್ತರಕಿ ಹಾಗೂ ಲಕ್ಷ್ಮಿಕಾಂತ ಶೇಖಜಿ ಬಂಧಿತರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೋಗನೂರು ಗ್ರಾಮದ ಕಣ್ಣಿ ಮಾರ್ಕೆಟ್‍ನ...

ಲಾಕಪ್ ಡೆತ್: ಕೇಸ್ ಯಶಸ್ವಿಯಾಗಿ ಮುಚ್ಚಿಹಾಕಿದ್ರಾ ಶಿವಮೊಗ್ಗ ಪೊಲೀಸರು?

2 weeks ago

ಶಿವಮೊಗ್ಗ: ಪೊಲೀಸ್ ವಶದಲ್ಲಿ ವ್ಯಕ್ತಿಯ ಸಾವಿನ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಕರಣದಲ್ಲಿ ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ಅವರೇ ಮುಖ್ಯಪಾತ್ರವಹಿಸಿರುವುದು ಆತಂಕಕಾರಿಯಾಗಿದೆ. ಓಸಿ-ಮಟ್ಕಾ ದಂಧೆ ಮಾಡುತ್ತಿದ್ದಾರೆ ಎಂದು ಹೊಳೆಹೊನ್ನೂರು ಠಾಣೆ ಪೊಲೀಸರು...