Wednesday, 17th July 2019

Recent News

2 hours ago

ಸುಪ್ರೀಂ ತೀರ್ಪು ಸ್ವಾಗತಿಸಿ ಶಾಸಕರಲ್ಲಿ ಡಿಕೆಶಿ ಮನವಿ

ಬೆಂಗಳೂರು: ಅತೃಪ್ತ ಶಾಸಕರ ಪರ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಈ ತೀರ್ಪನ್ನು ಸಚಿವ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ಅಲ್ಲದೆ ಇದೇ ವೇಳೆ ಅತೃಪ್ತ ಶಾಸಕರಲ್ಲಿ ಸಚಿವರು ಮನವಿ ಕೂಡ ಮಾಡಿಕೊಂಡಿದ್ದಾರೆ. ತೀರ್ಪು ಹೊರ ಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಅದನ್ನು ನಾನು ಸಚಿವ ಅಲ್ಲ ಓರ್ವ ಶಾಸಕನಾಗಿ ಗೌರವಿಸುತ್ತೇನೆ. ನ್ಯಾಯಾಲಯ ಸ್ಪೀಕರ್ ಅಧಿಕಾರ ಏನು ಅನ್ನೋದನ್ನ ಎತ್ತಿ ಹಿಡಿದಿದೆ ಎಂದರು. ಶಾಸಕರು ಕಲಾಪಕ್ಕೆ ಹೋಗಬಹುದು ಬಿಡಬಹುದು. […]

2 hours ago

ನಿಗದಿಯಂತೆ ಶಾಸಕರ ವಿಚಾರಣೆ ನಡೆಸುತ್ತೇನೆ: ಸ್ಪೀಕರ್

ಕೋಲಾರ: ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ. ಮುಂದೆ ಕಾಲಕಾಲಕ್ಕೆ ತಕ್ಕಂತೆ ಉಳಿದ ಕೆಲಸ ನಿರ್ವಹಿಸುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಸ್ಪೀಕರ್, ಸುಪ್ರೀಂಕೋರ್ಟ್ ನನ್ನ ಮೇಲೆ ವಿಧಿಸಿದ ಕರ್ತವ್ಯ ನಿರ್ವಹಿಸುತ್ತೇನೆ. ನ್ಯಾಯಧೀಶರು ನೀಡಿದ ಗೌರವವನ್ನು ಸಂವಿಧಾನದ ಪ್ರಕಾರ ವಿವೇಚನೆಯಿಂದ ಪಾಲಿಸುವೆ. ಇದನ್ನೇ ಲಾಬಿ ಮಾಡದೇ ಗೌರವವಾಗಿ ಸ್ವೀಕರಿಸಿ ವಿಳಂಬ ಮಾಡದೇ ಕೆಲಸ ಮುಗಿಸುತ್ತೇನೆ...

ಸಾಲಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

3 hours ago

ಕೋಲಾರ: ಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಗ್ರಾಮದಲ್ಲಿ ನಡೆದಿದೆ. ಅರಿಕೆರೆ ಗ್ರಾಮದ ನಿವಾಸಿ 26 ವರ್ಷದ ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಟೊಮೆಟೋ ಬೆಳೆ ಕೈಕೊಟ್ಟ ಕಾರಣ...

ರಾಯಲ್ ಎನ್‍ಫೀಲ್ಡ್ ಬೈಕ್ ಕದೀತಿದ್ದ ಅಂತರಾಜ್ಯ ಕಳ್ಳರ ಬಂಧನ

3 hours ago

ಕೋಲಾರ: ರಾಯಲ್ ಎನ್‍ಫೀಲ್ಡ್ ಬೈಕ್ ಕದಿಯುತ್ತಿದ್ದ ಕುಖ್ಯಾತ ಅಂತರಾಜ್ಯ ಐದು ಮಂದಿ ಕಳ್ಳರನ್ನು ಕೋಲಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಕಳ್ಳರನ್ನು ತಮಿಳುನಾಡು ಮತ್ತು ಹೊಸೂರು ಮೂಲದ ನದೀಮ್ 22, ಮುನೀರ್ 20, ಶ್ರೀಧರ್ 21, ದಾತ್ರ 18 ಮತ್ತು ಜಯಪ್ರಕಾಶ್...

ಅತೃಪ್ತರಿಗೆ ಬಿಗ್ ರಿಲೀಫ್ – ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ

3 hours ago

ನವದೆಹಲಿ: ವಿಶ್ವಾಸ ಮತಯಾಚನೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸುವ ಮೂಲಕ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ವೇಳೆ ರಾಜೀನಾಮೆ ಅಂಗೀಕಾರಕ್ಕೆ ದಿನ ನಿಗದಿ ಪಡಿಸದ ಕೋರ್ಟ್ ನಿರ್ದಿಷ್ಟ ಸಮಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆ...

ಗ್ರಹಣ ನಿವಾರಣೆಗೆ ದೊಡ್ಡಗೌಡ್ರ ಕುಟುಂಬ ಪೂಜೆ- ದೇಗುಲದಲ್ಲೇ ಮಾಧ್ಯಮಗಳ ವಿರುದ್ಧ ರೇವಣ್ಣ ಕಿಡಿ

4 hours ago

– ವೈಯಕ್ತಿಕ ಪೂಜೆಗೆ ಯಾಕೆ ಬಂದಿದ್ದೀರಾ? – ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ ಬೆಂಗಳೂರು: ಕೇತುಗ್ರಸ್ಥ ಚಂದ್ರ ಗ್ರಹಣ ಮುಗಿದಿದ್ದು ಎಲ್ಲೆಡೆ ಗ್ರಹಣ ನಿವಾರಣೆಗೆ ಪೂಜೆಗಳು ನಡೆಯುತ್ತಿದೆ. ಈ ಮಧ್ಯೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಕೂಡ...

ಸಿಎಂ ವಿಶ್ವಾಸ ಕಳೆದುಕೊಳ್ಳೋ ವಿಶ್ವಾಸ ನನಗಿದೆ: ಬಿಎಸ್‍ವೈ

5 hours ago

ಬೆಂಗಳೂರು: ಸಿಎಂ ಅವರು ಗುರುವಾರ ಸದಸನದಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಆದರೆ ಅವರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಅತೃಪ್ತ ಶಾಸಕರ ಸುಪ್ರೀಂ ತೀರ್ಪು ವಿಚಾರದ ಕುರಿತು...

ಅಡ್ಡಗಟ್ಟಿದ್ದಕ್ಕೆ ಹೋಂಗಾರ್ಡ್ ಮೇಲೆಯೇ ಬೈಕ್ ಹತ್ತಿಸಿದ

5 hours ago

– ಮರ್ಮಾಂಗ, ತಲೆಗೆ ಪೆಟ್ಟು ಮೈಸೂರು: ವಾಹನ ತಪಾಸಣೆಯ ವೇಳೆ ಹೆಲ್ಮೆಟ್ ಧರಿಸದೆ ಬರುತ್ತಿದ್ದ ಬೈಕ್ ಸವಾರನೊಬ್ಬನನ್ನು ತಡೆಯಲು ಯತ್ನಿಸಿದಕ್ಕೆ ಹೋಂಗಾರ್ಡ್ ಮೇಲೆಯೇ ವಾಹನ ಹರಿಸಿದ ಘಟನೆ ಜಿಲ್ಲೆಯ ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯ ಎಪಿಎಂಸಿ ಬಳಿ ನಡೆದಿದೆ. ಹೋಂಗಾರ್ಡ್ ಶಿವದಾಸ್ ಮೇಲೆ...