Sunday, 25th August 2019

22 hours ago

ಪತ್ನಿ ಜೊತೆ ಜಗಳ – ವಾಟ್ಸಪ್ ವಿಡಿಯೋ ಕಾಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತಿ

ಭೋಪಾಲ್: ಜಗಳವಾಡಿ ಕೋಪಗೊಂಡ ಪತಿಯೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಪತ್ನಿಯ ಮುಂದೆಯೇ ನೇಣಿಗೆ ಶರಣಾದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು 35 ವರ್ಷದ ಜೆಹಂಗೀರಾಬಾದ್ ನಿವಾಸಿ ಉಮೇಶ್ ಎಂದು ತಿಳಿದು ಬಂದಿದ್ದು, ತನ್ನ ಪತ್ನಿ ಆರತಿ ಕೃಷ್ಣಾ ಜನ್ಮಾಷ್ಟಮಿಯನ್ನು ನಮ್ಮ ತವರು ಮನೆಯಲ್ಲಿ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಉಮೇಶ್ ಒಪ್ಪಿರಲಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಪತ್ನಿ ಆರತಿ ನಾನು ರಾಖಿ ಹಬ್ಬಕ್ಕೆ ನಮ್ಮ ತವರು […]

23 hours ago

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತಿಯಿಂದ ತಲಾಖ್

ಲಕ್ನೋ: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಶುಕ್ರವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಜಾಫ್ರಿನ್ ಅಂಜುಮ್ ಅಯೋಧ್ಯೆಯ ಹೈದರ್ ಗಂಜ್ ತೆಹಸಿಲ್‍ನಲ್ಲಿ ಜನ ಬಜಾರ್ ನಿವಾಸಿ. ಜಾಫ್ರಿನ್ ಆಗಸ್ಟ್ 18ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಜನಿಸಿದ ಕಾರಣ ಜಾಫ್ರಿನ್ ಪತಿ ಆಸ್ತಿಕರ್...

ಶೀಲ ಶಂಕಿಸಿ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ ಪತಿ ಅಂದರ್

3 days ago

ರಾಮನಗರ: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ನಾಗರಾಜ್ ಬಂಧಿತ ಆರೋಪಿ. ಪೂರ್ಣಿಮಾ ಕೊಲೆಯಾದ ಪತ್ನಿ. ಆರೋಪಿ ನಾಗರಾಜ್ ಬುಧವಾರ ಸಂಜೆ ಪತ್ನಿ ಪೂರ್ಣಿಮಾಳನ್ನು ಕೊಲೆಗೈದು ಪರಾರಿಯಾಗಿದ್ದ. ಪೂರ್ಣಿಮಾ...

11 ಬಾರಿ ಇರಿದು, ಪತಿಯ ಕತ್ತು ಸೀಳಿದ ಪತ್ನಿ

3 days ago

ಮುಂಬೈ: ಪರ ಸ್ತ್ರೀಯೊಂದಿಗೆ ಸಂಬಂಧ ಬೆಳೆಸಿದ್ದ ಪತಿಯನ್ನು ಪತ್ನಿ 11 ಬಾರಿ ಚಾಕುವಿನಿಂದ ಇರಿದು ಅಮಾನುಷವಾಗಿ ಕೊಂದಿದ್ದಾಳೆ. ಮೊದಲು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಪತ್ನಿ ನಂತರ ತಪ್ಪೊಪ್ಪಿಕೊಂಡಿದ್ದಾಳೆ. ಮುಂಬೈನ ನಲಸೋಪರದ ಗಾಲಾ ನಗರದಲ್ಲಿ ಈ ಘಟನೆ ನಡೆದಿದೆ. ಸುನೀಲ್ ಕದಮ್(36)...

ಚುಯಿಂಗ್ ಗಮ್ ನಿರಾಕರಿಸಿದ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ ಪತಿ

3 days ago

ಲಕ್ನೋ: ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ಜಾರಿಗೊಳಿಸಿದೆ. ಆದರೆ ತ್ರಿವಳಿ ತಲಾಖ್ ನೀಡುವುದು ಮಾತ್ರ ತಪ್ಪುತ್ತಿಲ್ಲ. ಚುಯಿಂಗ್ ಗಮ್ ತಿನ್ನಲು ಪತ್ನಿ ನಿರಾಕರಿಸಿದಕ್ಕೆ ನ್ಯಾಯಾಲಯದ ಆವರಣದಲ್ಲೇ, ವಕೀಲರ ಸಮ್ಮುಖದಲ್ಲಿ ಪತಿ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ...

ಮಚ್ಚಿನಿಂದ ಕೊಚ್ಚಿ ನವವಿವಾಹಿತೆ ಕೊಲೆ- ಪತಿ ನಾಪತ್ತೆ

3 days ago

ರಾಮನಗರ: ನವವಿವಾಹಿತೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಪೂರ್ಣಿಮಾ (23) ಕೊಲೆಯಾದ ದುರ್ದೈವಿ. ಕಳೆದ ಆರು ತಿಂಗಳ ಹಿಂದೆಯಷ್ಟೇ ಪೂರ್ಣಿಮಾರ ವಿವಾಹ ನಾಗರಾಜ್‍ರೊಂದಿಗೆ ನಡೆದಿತ್ತು....

ಲಾಡ್ಜಿನಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡ್ತಿದ್ದ ಪತಿಗೆ ಗೂಸಾ ಕೊಟ್ಟ ಪತ್ನಿ

4 days ago

ಲಕ್ನೋ: ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಪ್ರೇಯಸಿ ಜೊತೆ ಮಜಾ ಮಾಡುತ್ತಿದ್ದ ಪತಿಯನ್ನು ರೆಡ್ ಹ್ಯಾಡ್ ಹಿಡಿದ ಪತ್ನಿ ಸಖತ್ ಗೂಸಾ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಬಿಲಾಸ್ಪುರದಲ್ಲಿ ನಡೆದಿದೆ. ಮದುವೆಯಾಗಿದ್ದರು ಪ್ರೇಯಸಿ ಜೊತೆ ಲಾಡ್ಜ್ ಮಾಡಿಕೊಂದು ಮಜಾ ಪಡೆಯುತ್ತಿದ್ದ ಪತಿಯ ರಂಗಿನಾಟಕ್ಕೆ...

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

4 days ago

ರಾಯಚೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿಯೊಬ್ಬರು ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಸೀಮಾ(28), ಮಹ್ಮದ್ ಹನೀಫ್(5), ಐಯಾನ್(3) ಹಾಗೂ ರಿಗಾನ್(1) ಮೃತಪಟ್ಟ ತಾಯಿ-ಮಕ್ಕಳು. ದೇವದುರ್ಗ ತಾಲೂಕಿನ ಕೊದ್ದೊಡ್ಡಿ ಬಳಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯಲ್ಲಿ...