Tag: ನೊಯ್ಡಾ

  • ಕಿಡ್ನಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆಯಿಟ್ರು- ಸಿನಿಮೀಯ ರೀತಿಯಲ್ಲಿ ಟೆಕ್ಕಿಯನ್ನು ರಕ್ಷಿಸಿದ ಪೊಲೀಸರು!

    ಕಿಡ್ನಾಪ್ ಮಾಡಿ 15 ಲಕ್ಷಕ್ಕೆ ಬೇಡಿಕೆಯಿಟ್ರು- ಸಿನಿಮೀಯ ರೀತಿಯಲ್ಲಿ ಟೆಕ್ಕಿಯನ್ನು ರಕ್ಷಿಸಿದ ಪೊಲೀಸರು!

    ಗಾಜಿಯಾಬಾದ್: ವಾರಗಳ ಹಿಂದೆ ಅಪಹರಣವಾಗಿ ಬಂಧಿಯಾಗಿದ್ದ ಟೆಕ್ಕಿಯನ್ನು ಕೊನೆಗೂ ರಕ್ಷಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಾಜೀವ್ ಕುಮಾರ್ ಅಪಹರಣವಾಗಿರುವ ಟೆಕ್ಕಿಯಾಗಿದ್ದು, ಇವರು ನೊಯ್ಡಾದ ಎಚ್‍ಸಿಇಎಲ್ ಟೆಕ್ನಾಲಜಿಸ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.

    ಘಟನೆ ವಿವರ:
    ಕಳೆದ ಶುಕ್ರವಾರ ರಾಜೀವ್ ಅವರ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಅವರು ತನ್ನ ಹುಟ್ಟುಹಬ್ಬ ಆಚರಿಸಲೆಂದು ಗುರುವಾರ ಹರಿದ್ವಾರಕ್ಕೆ ತೆರಳುತ್ತಿದ್ದರು. ಆದ್ರೆ ಅವರು ದೆಹಲಿ ಸಮೀಪದ ಗಾಜಿಯಾಬಾದ್ ನ ರಾಜ್ ನಗರದಿಂದ ಕಾಣೆಯಾಗಿದ್ದರು.

    ಜನಸಂದಣಿ ಇರುವ ಪ್ರದೇಶದಲ್ಲಿ ಹರಿದ್ವಾರದ ಕಡೆ ತೆರಳುವ ಬಸ್ ಹತ್ತಲೆಂದು ರಾಜೀವ್ ಅವರು ಕ್ಯಾಬ್ ನಿಂದ ಇಳಿದ ವೇಳೆ ಅವರನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಟೆಕ್ಕಿ ಪತ್ನಿಗೆ ಪತಿ ಮೊಬೈಲ್ ನಿಂದಲೇ ಮೆಸೇಜೊಂದು ಬಂದಿದೆ. ಅದರಲ್ಲಿ ರಾಜೀವ್ ನನ್ನು ಕಿಡ್ನಾಪ್ ಮಾಡಲಾಗಿದೆ. 15 ಲಕ್ಷ ರೂ. ಹಣ ನೀಡಿದ್ರೆ ಬಿಡುಗಡೆಗೊಳಿಸುವುದಾಗಿ ತಿಳಿಸಲಾಗಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

    ನಂತರ ಸುಮಾರು ಒಂದು ವಾರಗಳ ಕಾಲ ಪೊಲೀಸರು ರಾಜೀವ್ ಗಾಗಿ ಹುಡುಕಾಟ ನಡೆಸಿದ್ದರು. ಒಂದು ವಾರದ ಬಳಿಕ ರಾಜೀವ್ ಅವರು ಗಾಜಿಯಾಬಾದ್ ನ ಇಂದಿರಾಪುರಂ ಎಂಬ ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಹಾಗೂ ನೊಯ್ಡಾ ಪೊಲೀಸರ ವಿಶೇಷ ತನಿಖಾ ತಂಡವೊಂದು ಧಾವಿಸಿ ರಾಜೀವ್ ಅವರನ್ನು ಅಪಹರಣಕಾರರಿಂದ ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಿದ್ದಾರೆ.

    ರಾಜೀವ್ ಅವರನ್ನು ರಕ್ಷಿಸುವ ಮೊದಲು ಅಪಹರಣಕಾರರು ಮತ್ತು ಪೊಲೀಸರ ಮಧ್ಯೆ ಎನ್ ಕೌಂಟರ್ ನಡೆದಿದೆ. ಘಟನೆಯಿಂದ ಇಬ್ಬರು ಕಿಡ್ನಾಪರ್ಸ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಈ ಅಪಹರಣಕಾರರ ಗುಂಪು ವ್ಯಕ್ತಿಯನ್ನು ಕಿಡ್ನಾಪ್ ಮಾಡುವುದು ಇದು ಮೊದಲೇನಲ್ಲ. ಈ ಹಿಂದೆಯೂ ಈ ಗುಂಪು ಹಲವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    rajeev hcl

  • 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – `I Am failure’ ಎಂದು ಡೆತ್‍ನೋಟ್ ಬರೆದಿರುವ ಬಾಲಕಿ

    9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – `I Am failure’ ಎಂದು ಡೆತ್‍ನೋಟ್ ಬರೆದಿರುವ ಬಾಲಕಿ

    ನವದೆಹಲಿ: ಶಾಲೆಯಲ್ಲಿ ಶಿಕ್ಷಕನ ಲೈಂಗಿಕ ಕಿರುಕಳಕ್ಕೆ ಬೇಸತ್ತು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಬರೆದಿರುವ ಡೆತ್‍ನೋಟ್ ಸಿಕ್ಕಿದೆ.

    ಮಯೂರ್ ವಿಹಾರ್ ನಲ್ಲಿರೋ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 15 ವರ್ಷದ ಬಾಲಕಿ ಮಂಗಳವಾರದಂದು ಆತ್ಮಹತ್ಯೆಗೆ ಶರಣಾಗಿದ್ದಳು. ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್ ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    SCHOOL GIRL

    ಪೋಷಕರು ಮಾಡಿರುವ ಆರೋಪದ ಬಗ್ಗೆ ನೊಯ್ಡಾ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿಯ ನೋಟ್ ಪುಸ್ತಕ ದೊರೆತಿದೆ. ಬಾಲಕಿ ತನ್ನ ಪುಸ್ತಕದ ಪೇಜ್ ನಲ್ಲಿ `I Am failure’ ಎಂದು ಎರಡು ಬಾರಿ ಬರೆದಿದ್ದಾಳೆ. ಅದು ಬಾಲಕಿಯ ಕೈಬರಹವೇ ಎಂದು ಪೊಲೀಸರು ಮತ್ತು ಬಾಲಕಿಯ ಕುಟುಂಬದವರು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲದೇ “ನಾನು ಪೆದ್ದಿ” ಎಂದು ಒಮ್ಮೆ ಬರೆದಿದ್ದಾಳೆ. ಆ ಪೇಜ್ ನಲ್ಲಿ ಬಾಲಕಿ ಅನೇಕ ಬಾರಿ ಸಹಿಯನ್ನು ಕೂಡ ಮಾಡಿದ್ದಾಳೆ.

    ಏನಿದು ಪ್ರಕರಣ?: ಬಾಲಕಿ ನೊಯ್ಡಾದ ಸೆಕ್ಟರ್ 52ರ ನಿವಾಸಿಯಾಗಿದ್ದು, ಉತ್ತಮ ನೃತ್ಯಗಾರ್ತಿಯೂ ಕೂಡ ಆಗಿದ್ದಳು ಎಂದು ವರದಿಯಾಗಿದೆ. ಶಾಲೆಯ ಶಿಕ್ಷಕನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

    suicide girl

    ಸಮಾಜ ವಿಜ್ಞಾನ ಶಿಕ್ಷಕರು ತನ್ನನ್ನು ಅಶ್ಲೀಲವಾಗಿ ಮುಟ್ಟುತ್ತಾರೆ ಎಂದು ನನ್ನ ಮಗಳು ಹೇಳಿದ್ದಳು. ಆದ್ರೆ ನಾನೂ ಕೂಡ ಶಿಕ್ಷಕನಾಗಿರೋದ್ರಿಂದ ಅವರು ಆ ರೀತಿ ಮಾಡಲು ಸಾಧ್ಯವಿಲ್ಲ, ಏನೋ ತಪ್ಪಾಗಿರಬಹುದು ಎಂದಿದ್ದೆ. ಆದ್ರೆ ಅವರನ್ನ ಕಂಡರೆ ನನಗೆ ಭಯ. ನಾನು ಎಷ್ಟೇ ಚೆನ್ನಾಗಿ ಬರೆದರೂ ಫೇಲ್ ಮಾಡುತ್ತಾರೆ ಎಂದು ಹೇಳಿದ್ದಳು. ಕೊನೆಗೂ ಸಮಾಜ ವಿಜ್ಞಾನ ವಿಷಯದಲ್ಲಿ ಫೇಲ್ ಮಾಡಿದ್ದಾರೆ. ಶಾಲೆಯೇ ಅವಳನ್ನ ಕೊಂದಿದೆ ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ.

    ಮಾರ್ಚ್ 16ರಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಾಲಕಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ಇದರಿಂದ ಮನನೊಂದು ಪೋಷಕರು ಹೊರಗಡೆ ಹೋದಾಗ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಪೋಷಕರು ಮನೆಗೆ ಬಂದು ಬಾಲಕಿಯ ರೂಮಿನ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.

    ಪೊಲೀಸರು ಐಪಿಸಿ ಸೆಕ್ಷನ್ 306, 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

    SCHOOL GIRL 1

  • 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ- ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ

    9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ- ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ

     

    ನವದೆಹಲಿ: 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನೊಯ್ಡಾದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್ ಹಾಗು ಇಬ್ಬರು ಶಿಕ್ಷಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಇಲ್ಲಿನ ಮಯೂರ್ ವಿಹಾರ್‍ನಲ್ಲಿರೋ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 15 ವರ್ಷದ ಬಾಲಕಿ ಮಂಗಳವಾರದಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

    ಬಾಲಕಿ ನೊಯ್ಡಾದ ಸೆಕ್ಟರ್ 52ರ ನಿವಾಸಿಯಾಗಿದ್ದು, ಉತ್ತಮ ನೃತ್ಯಗಾರ್ತಿಯೂ ಕೂಡ ಆಗಿದ್ದಳು ಎಂದು ವರದಿಯಾಗಿದೆ. ಶಾಲೆಯ ಶಿಕ್ಷಕನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪ ಕೇಳಿಬಂದಿದೆ

    noida girl suicide

    ಸಮಾಜ ವಿಜ್ಞಾನ ಶಿಕ್ಷಕರು ತನ್ನನ್ನು ಅಶ್ಲೀಲವಾಗಿ ಮುಟ್ಟುತ್ತಾರೆ ಎಂದು ನನ್ನ ಮಗಳು ಹೇಳಿದ್ದಳು. ಆದ್ರೆ ನಾನೂ ಕೂಡ ಶಿಕ್ಷಕನಾಗಿರೋದ್ರಿಂದ ಅವರು ಆ ರೀತಿ ಮಾಡಲು ಸಾಧ್ಯವಿಲ್ಲ, ಏನೋ ತಪ್ಪಾಗಿರಬಹುದು ಎಂದಿದ್ದೆ. ಆದ್ರೆ ಅವರನ್ನ ಕಂಡ್ರೆ ನನಗೆ ಭಯ. ನಾನು ಎಷ್ಟೇ ಚೆನ್ನಾಗಿ ಬರೆದರೂ ಫೇಲ್ ಮಾಡುತ್ತಾರೆ ಎಂದು ಹೇಳಿದ್ದಳು. ಕೊನೆಗೂ ಸಮಾಜ ವಿಜ್ಞಾನ ವಿಷಯದಲ್ಲಿ ಫೇಲ್ ಮಾಡಿದ್ದಾರೆ. ಶಾಲೆಯೇ ಅವಳನ್ನ ಕೊಂದಿದೆ ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ.

    ಮಾರ್ಚ್ 16ರಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಾಲಕಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವರದಿಯಾಗಿದೆ.

    ಪೋಷಕರು ಮಾಡಿರುವ ಆರೋಪದ ಬಗ್ಗೆ ನೊಯ್ಡಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಐಪಿಸಿ ಸೆಕ್ಷನ್ 306, 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ನೊಯ್ಡಾ ನಗರ ಎಸ್‍ಪಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

    noida suicide

  • ವಿಡಿಯೋ: ಇಬ್ಬರು ಪುರುಷರ ಜೊತೆ ಕಾಣಿಸಿಕೊಂಡ ಯುವತಿ – ದೊಣ್ಣೆಯಿಂದ ಹಲ್ಲೆ

    ವಿಡಿಯೋ: ಇಬ್ಬರು ಪುರುಷರ ಜೊತೆ ಕಾಣಿಸಿಕೊಂಡ ಯುವತಿ – ದೊಣ್ಣೆಯಿಂದ ಹಲ್ಲೆ

    ನೊಯ್ಡಾ: ನೈತಿಕ ಪೊಲೀಸ್‍ಗಿರಿ ಹೆಸರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದ್ದು, ಇದರ ವಿಡಿಯೋ ಜನವರಿ 30ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಆರೋಪಿಗಳು ಸ್ಥಳೀಯರಾಗಿದ್ದು, ಅಸಭ್ಯ ವರ್ತನೆ ತೋರಿದ್ದಕ್ಕೆ ಥಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆರೋಪಿಗಳು ಯುವತಿ ಹಾಗೂ ಇನ್ನಿಬ್ಬರು ವ್ಯಕ್ತಿಗಳನ್ನ ನಿಂದಿಸಿ ಬೆದರಿಕೆ ಹಾಕುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು.

    girl beaten greater noida2

    ಒಂದು ಹಂತದಲ್ಲಿ ಆರೋಪಿಗಳು, ಈ ವಿಡಿಯೋವನ್ನ ಹಂಚಿಕೊಂಡು ನಿಮ್ಮ ದುರ್ವತನೆಯನ್ನ ಬಯಲು ಮಾಡ್ತೀವಿ, ಯುವತಿಯ ಮುಖವನ್ನೂ ತೋರಿಸ್ತೀವಿ ಎಂದು ಹೇಳಿದ್ದಾರೆ. ಮೊದಲಿಗೆ ಹಲ್ಲೆಗೊಳಗಾದವರು ಆರೋಪಿಗಳ ವರ್ತನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಆದ್ರೆ ನಂತರ ಪ್ರತಿರೋಧ ತೋರಿದ್ದಕ್ಕೆ ನಿರ್ಜನ ಪ್ರದೇಶದಲ್ಲಿ ದೊಣ್ಣೆಗಳಿಂದ ಹೊಡೆದಿದ್ದಾರೆ.

    girl beaten greater noida3

    ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿದಿದ್ದು, ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಒಬ್ಬ ತಾನು ಅಪ್ರಾಪ್ತ ಎಂದು ಹೇಳಿ ತನ್ನ ವರ್ತನೆಗೆ ಕ್ಷಮೆ ಕೇಳಿದ್ದಾನೆ.

    girl beaten greater noida4

    ವರದಿಯ ಪ್ರಕಾರ ಈ ಘಟನೆ ಜನವರಿ 1ರಂದು ನಡೆದಿದೆ. ಮೂವರು ಸಂತ್ರಸ್ತರು ಹೊಸ ವರ್ಷ ಆಚರಣೆಗಾಗಿ ಗ್ರೇಟರ್ ನೊಯ್ಡಾದ ಬಿಸ್ರಖ್‍ನಲ್ಲಿ ಜಮೀನೊಂದರ ಬಳಿ ಹೋಗುವಾಗ ಆರೋಪಿಗಳು ದಾಳಿ ಮಾಡಿದ್ದಾರೆ. ನೈತಿಕ ಪೊಲೀಸ್‍ಗಿರಿ ಹೆಸರಲ್ಲಿ ಆರೋಪಿಗಳು ಮೂವರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

    girl beaten greater noida6

    girl beaten greater noida5

  • ಮನೆ ಹೊರಗಡೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಯರ ಶವ ಪತ್ತೆ

    ಮನೆ ಹೊರಗಡೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಯರ ಶವ ಪತ್ತೆ

    ನೊಯ್ಡಾ: ಮನೆ ಹೊರಗಡೆ ಇದ್ದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆಯಾದ ಘಟನೆ ಇಂದು ಬೆಳಗ್ಗೆ ದೆಹಲಿ ಬಳಿಯ ನೋಯ್ಡಾದಲ್ಲಿ ನಡೆದಿದೆ.

    ಇಲ್ಲಿನ ಬರೋಲಾ ಗ್ರಾಮದಲ್ಲಿ ಸೆಕ್ಟರ್ 49 ರಲ್ಲಿ ವಾಸವಿದ್ದ 18 ಹಾಗೂ 13 ವರ್ಷದ ಸಹೋದರಿಯರು ಸಾವನ್ನಪ್ಪಿದ್ದಾರೆ. ಮುಂಜಾನೆ 4 ಗಂಟೆ ವೇಳೆಯಲ್ಲಿ ಪೋಷಕರಿಗೆ ಶವ ಪತ್ತೆಯಾಗಿದೆ. ದೂರದ ಸಂಬಂಧಿ ರವಿ ಹಾಗೂ ಆತನ ಕುಟುಂಬಸ್ಥರು ಹುಡುಗಿಯರನ್ನ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

    sisters death 3

    ರವಿಗೆ ಈಗಾಗಲೇ ಮದುವೆಯಾಗಿದ್ದು, ಹಿರಿಯ ಸಹೋದರಿಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಹುಡುಗಿಯರ ಪೋಷಕರು ಹೇಳಿದ್ದಾರೆ. ಕಳೆದ ಸಂಜೆಯೂ ಜಗಳವಾಗಿದ್ದು, ರವಿ ಕುಟುಂಬಸ್ಥರು ಹುಡುಗಿಯರಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ.

    sisters death 2

    ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಹಿರಿಯ ಅಧಿಕಾರಿ ಲವ್ ಕುಮಾರ್, ನಾವು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದೇವೆ. ಇದು ಕೊಲೆಯೋ ಆತ್ಮಹತ್ಯೆಯೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಹುಡುಗಿಯರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಹುಡುಗಿಯರ ಸಾವಿನಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

    sisters death 1

  • ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಬಲಿ

    ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಬಲಿ

    ನವದೆಹಲಿ: ಬಿಜೆಪಿ ಮುಖಂಡ ಹಾಗೂ ಅವರ ಭದ್ರತಾ ಸಿಬ್ಬಂದಿಯೊಬ್ಬರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ ಗ್ರೇಟರ್ ನೊಯ್ಡಾದ ಬಿಸ್ರಖ್ ಎಂಬಲ್ಲಿ ಗುರುವಾರ ನಡೆದಿದೆ.

    ಶಿವಕುಮಾರ್ ಯಾದವ್ ಹತ್ಯೆಯಾದ ಬಿಜೆಪಿ ಮುಖಂಡ. ಇವರು ಗ್ರೇಟರ್ ನೊಯ್ಡಾದ ಬೆಹ್ಲೋಲ್ಪುರ್ ಗ್ರಾಮದವರು.

    ಶಿವಕುಮಾರ್ ತನ್ನ ಸೆಕ್ಯೂರಿಟಿ ಗಾರ್ಡ್ ಫಾರ್ಚೂನರ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಟಿಗ್ರಿ ಬಳಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕಾರಿನ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಗೆ ಗುದ್ದಿದೆ. ದುಷ್ಕರ್ಮಿಗಳ ಗುಂಡಿನ ದಾಳಿಗೆ ಇಬ್ಬರೂ ಬಲಿಯಾಗಿದ್ದಾರೆ.

    Shiv Kumar one Ani

    ಕಾರಿನಲ್ಲಿದ್ದ ಹ್ಯಾನ್ಸ್ಪಲ್ ಎಂಬರಿಗೆ ಗುಂಡು ತಗುಲಿದ್ದು, ಗಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ ಅಂತ ಜಿಟಿಬಿ ಆಸ್ಪತ್ರೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

    ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಇನ್ನು ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ನರೆದಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ವರದಿಗಳ ಪ್ರಕಾರ ಆರೋಪಿಗಳು ಕಾರನ್ನು ಅರ್ಧ ಕಿ.ಮೀ ದೂರದವರೆಗೆ ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದಾರೆ ಅಂತ ತಿಳಿದುಬಂದಿದೆ.

    ಈ ಹಿಂದೆ ಅಂದರೆ ನವೆಂಬರ್ 2ರಂದು ಜಮ್ಮು-ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಿಜೆಪಿ ಯುವ ಘಟಕದ ಅಧ್ಯಕ್ಷ ಬಲಿಯಾಗಿದ್ದರು. ಅಧ್ಯಕ್ಷ ಗೌರ್ ಅಹಮದ್ ಭಟ್ ಎಂಬವರನ್ನು ಉಗ್ರರು ಕತ್ತು ಸೀಳಿ ಕೊಲೆಗೈದಿದ್ದರು.

    BJP 1

    BJP

    BJP leader shot dead

    noida murder

    noida murder04 1510840116

  • ಅತೀ ವೇಗದ ಕಾರ್ ಚಾಲನೆಯಿಂದ 8 ತಿಂಗಳ ಗರ್ಭಿಣಿ ದಾರುಣ ಸಾವು!

    ಅತೀ ವೇಗದ ಕಾರ್ ಚಾಲನೆಯಿಂದ 8 ತಿಂಗಳ ಗರ್ಭಿಣಿ ದಾರುಣ ಸಾವು!

    ನೊಯ್ಡಾ: ವ್ಯಕ್ತಿಯೊಬ್ಬ ತನ್ನ ಕಾರನ್ನು ವೇಗವಾಗಿ ಚಲಾಯಿಸಿದ್ದರಿಂದ 8 ತಿಂಗಳ ಗರ್ಭಿಣಿ ಹಾಗೂ ಆಕೆಯ ಪತಿಗೆ ಗುದ್ದಿದ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ನೊಯ್ಡಾದಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಿಂದ ಗರ್ಭಿಣಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಪತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ACCIDENT 1 1

    ಘಟನೆಯಲ್ಲಿ ತಾಯಿಗೆ ಗಂಭೀರ ಗಾಯಗಳಾಗಿದ್ದರಿಂದ 8 ತಿಂಗಳ ಭ್ರೂಣವನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ತಾನು ಪಾರ್ಕ್ ಮಾಡಿದ್ದ ಸ್ಥಳದಿಂದ ಕಾರನ್ನು ವೇಗವಾಗಿ ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಪರಿಣಾಮ ಕಾರಿನ ನಿಯಂತ್ರಣ ತಪ್ಪಿ ದಂಪತಿಗೆ ಡಿಕ್ಕಿ ಹೊಡೆದಿದೆ.

    ಭಾನುವಾರ ರಜಾ ದಿನವಾದ್ದರಿಂದ ದಂಪತಿ ಸಂಜೆ ಶಾಪಿಂಗ್ ಗೆಂದು ಸೆಕ್ಟರ್ 18ರ ಮಾರುಕಟ್ಟೆಗೆ ಬಂದಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕಾರು ಸಮೇತ ಚಾಲಕನನ್ನು ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರೆದಿದೆ ಅಂತ ನೊಯ್ಡಾ ಪೊಲೀಸ್ ಅಧಿಕಾರಿ ಶ್ವೇತಂಬರ್ ಪಾಂಡೇ ಮಾಧ್ಯಮಕ್ಕೆ ತಿಳಿಸಿದ್ರು.

  • 2017ರ ಮಿಸ್ ಟೀನ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡ ನೊಯ್ಡಾದ ಸೃಷ್ಟಿ

    2017ರ ಮಿಸ್ ಟೀನ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡ ನೊಯ್ಡಾದ ಸೃಷ್ಟಿ

    – ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್

    ನವದೆಹಲಿ: ಮಂಗಳವಾರದಂದು ನೋಯ್ಡಾದ ನಿವಾಸಿ ಸೃಷ್ಟಿ ಕೌರ್ 2017ನೇ ಸಾಲಿನ ಮಿಸ್ ಟೀನ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

    srishti1

    ಮಧ್ಯ ಅಮೆರಿಕ ದೇಶವಾದ ನಿಕಾರಾಗುವಾದ ಮನಾಗುವಾದಲ್ಲಿ ಈ ಸೌಂದರ್ಯ ಸ್ಪರ್ಧೆ ನಡೆದಿದ್ದು, ಸೃಷ್ಟಿ ವಿಶ್ವದಾದ್ಯಂತ ವಿವಿಧ ದೇಶಗಳಿಂದ ಬಂದಿದ್ದ 25 ಸ್ಪರ್ಧಿಗಳನ್ನ ಹಿಂದಿಕ್ಕಿ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಮೆಕ್ಸಿಕೋದ ಆ್ಯರಿ ಟ್ರಾವಾ ಹಾಗೂ ಕೆನಡಾದ ಸಮಂತಾ ಪೆರ್ರಿ ಇದ್ರು.

    srishti kaur5

    ಇದರ ಜೊತೆಗೆ ಸೃಷ್ಟಿ ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್ ಪಡೆದಿದ್ದಾರೆ. ಭಾರತದ ರಾಷ್ಟ್ರಪಕ್ಷಿ ನವಿಲನ್ನು ಸೃಷ್ಟಿ ತಮ್ಮ ಉಡುಗೆಯಲ್ಲಿ ಪ್ರದರ್ಶಿಸಿದ್ದರು. ಸೃಷ್ಟಿ ನೋಯ್ಡಾದ ಲೋಟಸ್ ವ್ಯಾಲಿ ಇಂಟರ್ ನ್ಯಾಷನಲ್‍ನಲ್ಲಿ ಓದಿದ್ದು, ಸದ್ಯಕ್ಕೆ ಲಂಡನ್ ಸ್ಕೂನ್ ಆಫ್ ಫ್ಯಾಷನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    miss teen teen universe india 1

    ಇದೇ ವರ್ಷದ ಆರಂಭದಲ್ಲಿ ಸೃಷ್ಟಿ 29 ಸ್ಪರ್ಧಿಗಳನ್ನ ಹಿಂದಿಕ್ಕಿ ಮಿಸ್ ಟೀನ್ ಟಿಯಾರಾ ಇಂಟರ್‍ನ್ಯಾಷನಲ್ ಪಟ್ಟವನ್ನ ತನ್ನದಾಗಿಸಿಕೊಂಡಿದ್ದರು. ಈ ಸೌಂದರ್ಯ ಸ್ಪರ್ಧೆಯನ್ನ 6 ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು 15 ರಿಂದ 19 ವರ್ಷ ವಯಸ್ಸಿನವರಿಗಾಗಿ ಮಿಸ್ ಯೂನಿವರ್ಸ್ ಸಂಸ್ಥೆ ಈ ಸ್ಪರ್ಧೆಯನ್ನ ಆಯೋಜಿಸುತ್ತದೆ.

    miss teen teen universe india

    srishti srishti kaur

    srishti kaur4

  • ವೈದ್ಯರ ಮಾತು ಕೇಳಿ ಮಹಿಳೆಯನ್ನು ಚಿತೆಯ ಮೇಲೆಯೇ ಸಜೀವವಾಗಿ ದಹಿಸಿದ್ರು!

    ವೈದ್ಯರ ಮಾತು ಕೇಳಿ ಮಹಿಳೆಯನ್ನು ಚಿತೆಯ ಮೇಲೆಯೇ ಸಜೀವವಾಗಿ ದಹಿಸಿದ್ರು!

    ನೊಯ್ಡಾ: ವೈದ್ಯರ ಎಡವಟ್ಟಿನಿಂದ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಸಜೀವವಾಗಿ ದಹನವಾಗಿದ್ದು, ಚಿತೆಯ ಮೇಲೆ ಮಲಗಿಸಿದಾಗ ಮಹಿಳೆ ಉಸಿರಾಡುತ್ತಿದ್ದರು ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 21 ವರ್ಷದ ಮಹಿಳೆಯನ್ನು ಉತ್ತರಪ್ರದೇಶದ ನೊಯ್ಡಾದಲ್ಲಿರುವ ಶಾರದಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಭಾನುವಾರ ರಾತ್ರಿ 11.45ರ ಸುಮಾರಿಗೆ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದ್ದರು. ಅಂತೆಯೇ ಮಹಿಳೆ ಶವವನ್ನು ಸೋಮವಾರ ಬೆಳಗ್ಗೆ ಪತಿಗೆ ಹಸ್ತಾಂತರಿಸಿದ್ದು, ಕುಟುಂಬದವರು ಶವಸಂಸ್ಕಾರ ಮಾಡಿದ್ದರು.

    ಆದ್ರೆ ಇತ್ತ ಮಹಿಳೆಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸಹೋದರ ಆಲಿಗಢ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅಂತ್ಯಸಂಸ್ಕಾರವನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಆದ್ರೆ ಅದಾಗಲೇ ಮಹಿಳೆಯ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ಈ ಅರ್ಧ ಸುಟ್ಟ ದೇಹವನ್ನೇ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದರು. ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ಮಹಿಳೆ ಉಸಿರಾಟದ ತೊಂದರೆಯಿಂದ ಸತ್ತಿಲ್ಲ. ಸಜೀವ ದಹನದಿಂದಾದ ಆಘಾತದಿಂದ ಮೃತಪಟ್ಟಿರುವುದಾಗಿ ದೃಢಪಟ್ಟಿದೆ.

    ಇದೀಗ ಘಟನೆ ಸಂಬಂಧ ಮೃತ ಮಹಿಳೆಯ ಪತಿ ಮತ್ತು ಆತನ ಕುಟುಂಬದ 10 ಮಂದಿಯ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆದ್ರೆ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ.

    ಇತ್ತ ಮಹಿಳೆ ಮೃತಪಟ್ಟಿದ್ದಾರೆ ಅಂತಾ ಘೋಷಣೆ ಮಾಡಿದ್ದ ಶಾರದಾ ಆಸ್ಪತ್ರೆ ಮಾತ್ರ ಮಹಿಳೆಗೆ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬಂದಿರುವುದರಿಂದ ಆಕೆಯನ್ನು ಉಳಿಸಿಕೊಳ್ಳಲು ಇಲ್ಲಿಯ ವೈದ್ಯರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದ್ರೆ ಕಡೆಗೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಆಕೆ ಅದೇ ತೊಂದರೆಯಿಂದ ಸಾವನ್ನಪ್ಪಿದ್ದಾಳೆ ಅಂತಾ ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ.