Tag: ನೇಹಾ ಗೌಡ

  • ನೇಹಾ ಗೌಡ ಮಗಳ ಅದ್ಧೂರಿ ನಾಮಕರಣ- ಪುತ್ರಿಗೆ ಮುದ್ದಾದ ಹೆಸರಿಟ್ಟ ನಟಿ

    ನೇಹಾ ಗೌಡ ಮಗಳ ಅದ್ಧೂರಿ ನಾಮಕರಣ- ಪುತ್ರಿಗೆ ಮುದ್ದಾದ ಹೆಸರಿಟ್ಟ ನಟಿ

    ‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್ ಕನ್ನಡ 9’ರ ಶೋ (BBK 9) ಮೂಲಕ ಮನೆ ಮಾತಾದ ನಟಿ ನೇಹಾ ಗೌಡ (Neha Gowda) ಅವರ ಮಗಳ ನಾಮಕರಣ (Naming Ceremony) ಅದ್ಧೂರಿಯಾಗಿ ಜರುಗಿದೆ. ಮನೆಯ ಪುಟ್ಟಲಕ್ಷ್ಮಿಗೆ ಮುದ್ದಾದ ಹೆಸರನ್ನೇ ನೇಹಾ ದಂಪತಿ ನಾಮಕರಣ ಮಾಡಿದ್ದಾರೆ. ಮಗಳಿಗೆ ‘ಶಾರದ’ ಎಂದು ಹೆಸರಿಟ್ಟಿದ್ದಾರೆ.

    neha gowda 1

    ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೇಹಾ ಮಗಳ ನಾಮಕರಣ ಸಮಾರಂಭ ಜರುಗಿದೆ. ಈ ಕಾರ್ಯಕ್ರಮಕ್ಕೆ ಕಿರುತೆರೆ ನಟ- ನಟಿಯರು ಭಾಗಿಯಾಗಿ ನೇಹಾ ಮಗಳಿಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ

    neha gowda 2

    ಇನ್ನೂ ಈಗೀನ ಟ್ರೆಂಡ್‌ನೆಲ್ಲಾ ಪಕ್ಕಕ್ಕಿಟ್ಟು ಮಗಳಿಗೆ ಶಾರದ ಮಾತೆಯ ಹೆಸರನ್ನಿಟ್ಟಿದ್ದಾರೆ. ಪುತ್ರಿಗೆ ‘ಶಾರದ’ (Sharada) ಎಂದು ನೇಹಾ ದಂಪತಿ ನಾಮಕರಣ ಮಾಡಿದ್ದಾರೆ. ಮಗಳಿಗೆ ಅರ್ಥಪೂರ್ಣವಾಗಿ ಹೆಸರನ್ನು ಇಟ್ಟಿದಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    NEHA GOWDA

    ಅಂದಹಾಗೆ, ನೇಹಾ ಮತ್ತು ಚಂದನ್ (Chandan Gowda) ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆ ಸ್ನೇಹವೇ ಪ್ರೀತಿಗೆ ತಿರುಗಿ ಮದುವೆಗೆ ಮುನ್ನುಡಿ ಬರೆದರು. ಗುರುಹಿರಿಯರ ಒಪ್ಪಿಗೆಯ ಮೇರೆಗೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    neha gowda

    ಇನ್ನೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಪ್ರಸ್ತುತ ಮಗಳ ಆರೈಕೆಯಲ್ಲಿ ನೇಹಾ ತೊಡಗಿಸಿಕೊಂಡಿದ್ದಾರೆ. ನಟನೆಯಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ.

  • ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ

    ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ

    ‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್ ಸೀಸನ್ 9’ರ (Bigg Boss Kannada 9) ಮೂಲಕ ಮನೆ ಮಾತಾದ ನಟಿ ನೇಹಾ ಗೌಡ (Neha Gowda) ಮೊದಲ ಬಾರಿಗೆ ಮಗಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ನ.14 ಮಕ್ಕಳ ದಿನಾಚರಣೆ ಪ್ರಯುಕ್ತ ಮಗಳ ಸುಂದರ ಫೋಟೋ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಡಬ್ಬಿಂಗ್‌ನಲ್ಲಿ ಶ್ರೀವಲ್ಲಿ- ಬಿಗ್ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

    Neha Gowda 3ಮಕ್ಕಳ ದಿನಾಚರಣೆಯಂದು ನಮ್ಮ ಪುಟ್ಟ ಮಗುವಿನ ಫೋಟೋ ಹಂಚಿಕೊಳ್ಳುತ್ತಿರೋದಕ್ಕೆ ಖುಷಿಯಿದೆ. ನಮ್ಮ ಜೀವನದಲ್ಲಿ ಮಗಳ ಆಗಮನವಾಗಿರೋದು ಖುಷಿಯಿದೆ ಎಂದು ಮುದ್ದು ಮಗಳ ಫೋಟೋ ಶೇರ್ ಮಾಡಿ ನೇಹಾ ಸಂಭ್ರಮಿಸಿದ್ದಾರೆ. ಅಂದಹಾಗೆ, ಅ.29ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹಾಗಾಗಿ ನಟನೆಯಿಂದ ನೇಹಾ ವಿರಾಮ ತೆಗೆದುಕೊಂಡಿದ್ದಾರೆ.

    ಅಂದಹಾಗೆ, ನೇಹಾ ಮತ್ತು ಚಂದನ್ (Chandan) ಹಲವು ವರ್ಷಗಳ ಪ್ರೀತಿಸುತ್ತಿದ್ದರು. 2018ರಂದು ಫೆಬ್ರವರಿಯಲ್ಲಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು.

  • ರೆಟ್ರೋ ಸ್ಟೈಲಿನಲ್ಲಿ ನೇಹಾ ಗೌಡ ಬೇಬಿ ಬಂಪ್ ಫೋಟೋಶೂಟ್‌

    ರೆಟ್ರೋ ಸ್ಟೈಲಿನಲ್ಲಿ ನೇಹಾ ಗೌಡ ಬೇಬಿ ಬಂಪ್ ಫೋಟೋಶೂಟ್‌

    ‘ಬಿಗ್ ಬಾಸ್’ (Bigg Boss Kannada 9) ಖ್ಯಾತಿಯ ನೇಹಾ ಗೌಡ (Neha Gowda) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನೇಹಾ ಇದೀಗ ರೆಟ್ರೋ ಸ್ಟೈಲಿನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿದ್ದಾರೆ. ಪತಿ ಚಂದನ್ ಜೊತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿರುವ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    neha gowda 3

    ರೆಟ್ರೋ ಶೈಲಿಯಲ್ಲಿ ಪ್ರೆಗ್ನೆಂಟ್ ನೇಹಾ ಸೀರೆಯುಟ್ಟು ಮಿಂಚಿದ್ದಾರೆ. ನಟಿ ಕಪ್ಪು ಬಣ್ಣದ ಸೀರೆಯುಟ್ಟು ಅದರ ಜೊತೆ ಕಪ್ಪು ಬಣ್ಣದ ಸ್ಟೈಲೀಶ್‌ ಆಗಿರೋ ಗ್ಲ್ಯಾಸ್ ಧರಿಸಿ ಮಿಂಚಿದ್ದಾರೆ. ವಿವಿಧ ಭಂಗಿಯಲ್ಲಿ ಪತಿ ಚಂದನ್ ಜೊತೆ ನೇಹಾ ನಿಂತು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:‘ದೃಷ್ಟಿ ಬೊಟ್ಟು’ ಧಾರಾವಾಹಿಯಲ್ಲಿ ಮಹಾ ತಿರುವು

    neha gowda 2

    ನಟ ಚಂದನ್ ಇಲ್ಲಿ ಕಪ್ಪು ಶರ್ಟ್ ಧರಿಸಿದ್ದಾರೆ. ಗ್ರೇ ಕಲರ್ ಪ್ಯಾಂಟ್ ಧರಿಸಿದ್ದಾರೆ. ಆ ದಿನಗಳ ದೇವಾನಂದ್ ಕ್ಯಾಪ್ ಅನ್ನೂ ಚಂದನ್ ಇಲ್ಲಿ ಧರಿಸಿಕೊಂಡಿರೋದು ಹೈಲೆಟ್ ಆಗಿದೆ. ಈ ಜೋಡಿಯ ಫೋಟೋಶೂಟ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಟ್ರೈಲರ್ ಮೂಲಕ ಬೆರಗು ಮೂಡಿಸೋ ನಿಶಾ ನಟನೆಯ ಅಂಶು

     

    ಅಂದಹಾಗೆ, ಬಾಲ್ಯದಿಂದ ನೇಹಾ ಮತ್ತು ಚಂದನ್ (Chandan Gowda) ಸ್ನೇಹಿತರು. ನಂತರದ ವರ್ಷಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಪ್ರೀತಿಗೆ 2018ರಲ್ಲಿ ಮದುವೆಯ ಮುದ್ರೆ ಒತ್ತಿದ್ದರು. ಅದಷ್ಟೇ ಅಲ್ಲ, 2021ರಲ್ಲಿ ‘ರಾಜ ರಾಣಿ’ ಶೋನಲ್ಲಿ ಬೆಸ್ಟ್ ಜೋಡಿಯಾಗಿ ಗುರುತಿಸಿಕೊಂಡಿದ್ದ ನೇಹಾ ಮತ್ತು ಚಂದನ್ ಈ ಸೀಸನ್‌ನ ವಿನ್ನರ್ ಕೂಡ ಆಗಿದ್ದರು.

  • ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ

    ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ

    ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ (Neha Ramakrishna) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೆಗ್ನೆನ್ಸಿಯ ಕೊನೆಯ ತಿಂಗಳಿನ ಹಿನ್ನೆಲೆ ಬೇಬಿ ಬಂಪ್ ಫೋಟೋಶೂಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಬೆನ್ನು ನೋವು

    ‘ಲಕ್ಷ್ಮಿ ಬಾರಮ್ಮ’ ನಟಿ ನೇಹಾ ಚೊಚ್ಚಲ ಮಗುವಿನ ಆಗಮನಕ್ಕೆ ಎದುರು ನೋಡುತ್ತಿದ್ದಾರೆ. ಇಡೀ ಕುಟುಂಬ ಈ ಸಂಭ್ರಮಕ್ಕಾಗಿ ಕಾಯುತ್ತಿದೆ. ಇದರ ನಡುವೆ ತುಂಬು ಗರ್ಭಿಣಿ ನೇಹಾ ಪತಿ ಜೊತೆ ಪೋಸ್ ಕೊಟ್ಟು ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡಿದ್ದಾರೆ.

    ನಟಿ ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ಚಂದನ್ ಗೌಡ ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೇಬಿ ಬಂಪ್ ತೋರಿಸಿ ನಟಿ ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    ಅಂದಹಾಗೆ, ಬಿಗ್ ಬಾಸ್, ಲಕ್ಷ್ಮಿ ಬಾರಮ್ಮ, ನಮ್ಮ ಲಚ್ಚಿ ಸೀರಿಯಲ್ ಜೊತೆ ತೆಲುಗಿನ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೇಹಾ ಪತಿ ಚಂದನ್ (Chandan Gowda) ಅವರು ‘ಅಂತರಪಟ’  (Antarapata) ಸೀರಿಯಲ್ ಹೀರೋ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು.

  • ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ‘ಬಿಗ್‌ ಬಾಸ್‌’ ಖ್ಯಾತಿಯ ನೇಹಾ ಗೌಡ

    ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ ‘ಬಿಗ್‌ ಬಾಸ್‌’ ಖ್ಯಾತಿಯ ನೇಹಾ ಗೌಡ

    ‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ನೇಹಾ ಗೌಡ (Neha Gowda) ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಶಾಕುಂತಲೆಯಂತೆ ನಟಿ ಮಿಂಚಿದ್ದಾರೆ. ನಟಿಯ ಸುಂದರ ಬೇಬಿ ಬಂಪ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    neha 1 1

    ಕೊಳದ ಬಳಿ ಬಿಳಿ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಕೈಯಲ್ಲಿ ಕಮಲದ ಹೂ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸೀರೆಯುಟ್ಟು ವಿವಿಧ ಭಂಗಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.

    ಇತ್ತೀಚೆಗೆ ನೇಹಾ ಅವರಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅದಷ್ಟೇ ಅಲ್ಲ, ವೆಸ್ಟರ್ನ್ ಸ್ಟೈಲಿನಲ್ಲಿ ಬೇಬಿ ಶವರ್ ಕಾರ್ಯಕ್ರಮ ಕೂಡ ಮಾಡಲಾಯಿತು. ಇದನ್ನೂ ಓದಿ:ಫೆ.10ರಂದು ‘ಗರುಡ’ ಚಿತ್ರದ ನಟ ಸಿದ್ಧಾರ್ಥ್ ಮಹೇಶ್ ಮದುವೆ

    ಇನ್ನೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೇಹಾ ಮತ್ತು ಚಂದನ್ (Chandan) ಜೋಡಿ 2018ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು.

  • ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು

    ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು

    ಕಿರುತೆರೆಯ ಜನಪ್ರಿಯ ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿಯರಾದ ನೇಹಾ ಗೌಡ (Neha Gowda) ಮತ್ತು ಕವಿತಾ (Kavitha Gowda) ಇಬ್ಬರೂ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ತೋರಿಸಿ ಪರಸ್ಪರ ಶುಭಾಶಯಗಳನ್ನು ಹೇಳಿದ್ದಾರೆ. ಪ್ರೆಗ್ನೆನ್ಸಿ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    neha gowda

    ಒಂದೇ ಧಾರಾವಾಹಿಯಲ್ಲಿ ನಟಿಸಿದ ಇಬ್ಬರೂ ನಟಿಯರು ಪ್ರೆಗ್ನೆಂಟ್ ಆಗಿದ್ದಾರೆ. ನೇಹಾ, ಕವಿತಾ ಗೌಡ ಮನೆಗೆ ಹೊಸ ಅತಿಥಿ ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ. ಹ್ಯಾಪಿ ಡೆಲಿವರಿ ಎಂದು ಈ ನಟಿಯರು ಪರಸ್ಪರ ಶುಭಹಾರೈಸಿದ್ದಾರೆ. ಸೀರಿಯಲ್‌ನಲ್ಲಿ ಸಹೋದರಿಯರಾಗಿ ನಟಿಸಿದ್ದ ಚಿನ್ನು ಮತ್ತು ಗೊಂಬೆ ರಿಯಲ್ ಲೈಫ್‌ನಲ್ಲಿಯೂ ಉತ್ತಮ ಒಡನಾಟ ಹೊಂದಿದ್ದಾರೆ. ಒಟ್ಟಿಗೆ ತಾಯಿಯಾಗುತ್ತಿರುವ ಸಂಭ್ರಮವನ್ನು ನಟಿಯರು ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ನೇಹಾ ಗೌಡ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ಮಾಡಲಾಗಿತ್ತು. ಅದಷ್ಟೇ ಅಲ್ಲ, ವೆಸ್ಟ್‌ರ್ನ್‌ ಸ್ಟೈಲಿನಲ್ಲಿ ಬೇಬಿ ಶವರ್ ಕೂಡ ಆಚರಿಸಿದ್ದರು. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ: ಜೀವನ ಕ್ಷಣಿಕ ಎಂದ ‘ಪುಷ್ಪ’ ನಟಿ

    ಹಾಗೆಯೇ ಪತಿ ಚಂದನ್ ಜೊತೆ ಕವಿತಾ ಗೌಡ ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡು ಸಂಭ್ರಮಿಸಿದ್ದರು. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಟಿಮಣಿಯರು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಕೊಡುತ್ತಾ ಸದ್ದು ಮಾಡ್ತಿದ್ದಾರೆ.

  • ಅದ್ಧೂರಿಯಾಗಿ ಬೇಬಿ ಶವರ್‌ ಪಾರ್ಟಿ ಮಾಡಿದ ‘ಬಿಗ್‌ ಬಾಸ್‌’ ಖ್ಯಾತಿಯ ನೇಹಾ ಗೌಡ

    ಅದ್ಧೂರಿಯಾಗಿ ಬೇಬಿ ಶವರ್‌ ಪಾರ್ಟಿ ಮಾಡಿದ ‘ಬಿಗ್‌ ಬಾಸ್‌’ ಖ್ಯಾತಿಯ ನೇಹಾ ಗೌಡ

    ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ (Neha Gowda) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ವೆಸ್ಟರ್ನ್ ಸ್ಟೈಲಿನಲ್ಲಿ ಬೇಬಿ ಶವರ್ (Baby Shower) ಫಂಕ್ಷನ್ ಜರುಗಿದೆ. ಇದರ ಸುಂದರ ವಿಡಿಯೋವೊಂದನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡಕ್ಕೆ ಬಂದ ‘ಕಲ್ಕಿ’ ಚಿತ್ರದ ಮ್ಯೂಸಿಕ್ ಡೈರೆಕ್ಟರ್

    neha

    ನಟಿ ನೇಹಾ ಹುಟ್ಟುಹಬ್ಬದ ಜೊತೆ ಬೇಬಿ ಶವರ್ ಫಂಕ್ಷನ್ ಗ್ರ್ಯಾಂಡ್‌ ಆಗಿ ನಡೆದಿದೆ. ಪತಿ ಚಂದನ್ ಜೊತೆ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಲೈಟ್ ಬಣ್ಣದ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಈ ವೇಳೆ, ಸಹೋದರಿ ಸೋನು ಗೌಡ, ಸ್ನೇಹಿತೆ ಅನುಪಮಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

    ಅದಷ್ಟೇ ಅಲ್ಲ, ಇತ್ತೀಚೆಗೆ ಟ್ರೆಡಿನಲ್ ಆಗಿ ನೇಹಾ ಸೀಮಂತ ಶಾಸ್ತ್ರ ಕೂಡ ಜರುಗಿದೆ. ಸೀರೆಯುಟ್ಟು ಬೇಬಿ ಬಂಪ್ ತೋರಿಸುತ್ತಾ ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ, ಅನುಪಮಾ, ಚೈತ್ರಾ ವಾಸುದೇವನ್, ನಮ್ರತಾ ಗೌಡ, ಕವಿತಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ರು.

    ಇನ್ನೂ 2018ರಲ್ಲಿ ಬಾಲ್ಯದ ಸ್ನೇಹಿತ ಚಂದನ್ ಜೊತೆ ನೇಹಾ ಹಸೆಮಣೆ ಏರಿದರು. ಈಗ ಮೊದಲ ಮಗುವಿನ ಆಗಮನಕ್ಕಾಗಿ ಈ ಜೋಡಿ ಎದುರು ನೋಡ್ತಿದೆ.

  • `ಗೊಂಬೆ’ಗೆ ಅದ್ದೂರಿ ಬೇಬಿಶಾವರ್

    `ಗೊಂಬೆ’ಗೆ ಅದ್ದೂರಿ ಬೇಬಿಶಾವರ್

    ಕ್ಷ್ಮಿ ಬಾರಮ್ಮ ಧಾರಾವಾಹಿ’ ಗೊಂಬೆ ಈಗ ತುಂಬು ಗರ್ಭಿಣಿ, ಸಪ್ಟೆಂಬರ್ ತಿಂಗಳಲ್ಲಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನೇಹಾ ಗೌಡಾ (Neha Gowda) ಅವರ ಸೀಮಂತ ಕಾರ್ಯಕ್ರಮ (, baby shower) ಅದ್ದೂರಿಯಾಗಿ ನಡೆದಿದೆ. ಕಿರುತೆರೆ ಕಲಾವಿದರ ದಂಡೇ ಹರಿದು ಬಂದಿದೆ. ಸೀಮಂತದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

    Neha Gowda 2

    ಚೈತ್ರಾ ವಾಸುದೇವನ್ ಹಂಚಿಕೊಂಡ ಫೋಟೋದಲ್ಲಿ ಗರ್ಭಿಣಿ ನೇಹಾ ಗೌಡ ಸಹೋದರಿ ಸೋನು ನಿಂತಿದ್ದಾರೆ. ಜೊತೆಗೆ ನೇಹಾ ಪತಿ ಚಂದನ್ ಕೂಡ ನಗುನಗುತ್ತಾ ಪೋಸ್ ಕೊಟ್ಟಿದ್ದಾರೆ. ಇನ್ನು ಕಿರುತೆರೆ ಕಲಾವಿದರ ದಂಡೇ ಹರಿದುಬಂದಿದ್ದು ಗೊಂಬೆಯ ಲಕ್ಷ್ಮಿ ಬಾರಮ್ಮ ಸೀರಿಯಲ್ ತಂಗಿ ಚಿನ್ನು ಅಲಿಯಾಸ್ ಕವಿತಾ ಗೌಡ  ಕೂಡ ಆಗಮಿಸಿದ್ದಾರೆ.

    Neha Gowda 1

    ಕವಿತಾ ಗೌಡ ಕೂಡ ಚೊಚ್ಚಲ ಮಗು ನಿರೀಕ್ಷೆಯಲ್ಲಿದ್ದಾರೆ. ಇನ್ನು ನೇಹಾ ಆಪ್ತ ಗೆಳತಿಯರಾದ ಅನುಪಮ ಗೌಡ-ಇಶಿತಾ ವರ್ಷ ಕೂಡ ಗೆಳತಿಯ ಸುಂದರ ಕ್ಷಣಗಳಿಗೆ ಜೊತೆಯಾಗಿದ್ರು. ಹಿರಿಯ ನಟಿ ತಾರಾ ಅನೂರಾಧ ಕೂಡ ಧಾರಾವಾಹಿ ಬೆಡಗಿಯರಿಗೆ ಸಾಥ್ ಕೊಟ್ಟಿದ್ದಾರೆ.

     

    ಇತ್ತೀಚೆಗೆ ನಟಿ ಮಿಲನಾ ನಾಗರಾಜ್ ಸೀಮಂತ ನಡೆದಿತ್ತು. ಮಿಲನಾ ಸೀಮಂತಕ್ಕೆ ಸಿಂಗಾರ ಮಾಡಲಾಗಿತ್ತು. ಇದೀಗ ನೇಹಾ ಸೀಮಂತಕ್ಕೂ ಚೈತ್ರಾ ವಾಸುದೇವನ್ ಮೇಲ್ವಿಚಾರಣೆಯಲ್ಲೇ ಡೆಕೋರೇಶನ್ ಮಾಡಲಾಗಿರುವ ಅನುಮಾನವಿದೆ. ಇನ್ನು ನೇಹಾ ಸಾಂಪ್ರದಾಯಿಕ ಹಸಿರು ಬಣ್ಣದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದಾರೆ. ಒಟ್ಟಿನಲ್ಲಿ ಬರುವ ಸಪ್ಟೆಂಬರ್ ತಿಂಗಳು ಸ್ಯಾಂಡಲ್‌ವುಡ್ ಹಲವು ನಟಿಯರು ಚೊಚ್ಚಲ ಮಗುವನ್ನ ಬರಮಾಡಿಕೊಳ್ಳುವ ಸಂತಸದಲ್ಲಿದ್ದಾರೆ.

  • ಉಜ್ಜಯಿನಿಯಲ್ಲಿ ಸ್ಟಾರ್ ಸಿಸ್ಟರ್ಸ್: ದೇವರ ಮಹಿಮೆ ಅಪಾರ ಎಂದ ನಟಿಯರು

    ಉಜ್ಜಯಿನಿಯಲ್ಲಿ ಸ್ಟಾರ್ ಸಿಸ್ಟರ್ಸ್: ದೇವರ ಮಹಿಮೆ ಅಪಾರ ಎಂದ ನಟಿಯರು

    ಸ್ಟಾರ್ ಸಹೋದರಿಯರು ಎಂದೇ ಹೆಸರುವಾಸಿಯಾಗಿರುವ ಸೋನು ಗೌಡ (Sonu Gowda) ಮತ್ತು ಅವರ ಸಹೋದರಿ ನೇಹಾ ಗೌಡ (Neha Gowda) ಶೂಟಿಂಗ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಟೆಂಪ್ ರನ್ ಮಾಡುತ್ತಿದ್ದಾರೆ. ಸದ್ಯ ಅವರು ಉಜ್ಜಯಿನಿ (Ujjain) ಮತ್ತು ಓಂಕಾರೇಶ್ವರ ಯಾತ್ರೆಯಲ್ಲಿದ್ದು, ದೇವರ ದರ್ಶನ ಪಡೆದಿದ್ದಾರೆ.

    Sonu Gowda 2

    ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಸಹೋದರಿಯರು, ಆ ಧಾರ್ಮಿಕ ಕ್ಷೇತ್ರಗಳ ಮಹಿಮೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ಫೋಟೋಗಳನ್ನೂ ಅವರು ಶೇರ್ ಮಾಡಿದ್ದಾರೆ. ಓಂಕಾರೇಶ್ವರ ಮತ್ತು ಮಹಾಕಾಳನ ಮಹಿಮೆಯನ್ನು ಕೊಂಡಾಡಿದ್ದಾರೆ.

     

    ದೇವರ ಸನ್ನಿಧಾನದಲ್ಲಿ ವಿಶ್ವಾಸ, ಶಾಂತಿ, ನಂಬಿಕೆಗಳು ಇಮ್ಮಡಿಯಾಗುತ್ತವೆ ಎಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ನಂಬಿಕೆಗಳ ಬಗ್ಗೆ ಮಾತನಾಡಿದ್ದಾರೆ. ಭಕ್ತಿ, ಪರ್ವತ, ನದಿಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದು, ಅದೊಂದು ಪುಣ್ಯ ಸ್ಥಳ ಎಂದಿದ್ದಾರೆ.

  • ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಚಿನ್ನು-ಗೊಂಬೆ

    ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಚಿನ್ನು-ಗೊಂಬೆ

    ಸ್ಯಾಂಡಲ್‌ವುಡ್ ಬ್ಯೂಟಿಸ್ ನೇಹಾ ಗೌಡ- ಕವಿತಾ ಗೌಡ (Kavitha Gowda) ಮತ್ತೆ ಸುದ್ದಿಯಲ್ಲಿದ್ದಾರೆ. ಕಿರುತೆರೆ ಪ್ರೇಕ್ಷಕರ ಫೇವರೇಟ್ ಚಿನ್ನು ಮತ್ತು ಗೊಂಬೆ ಮತ್ತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ‘ಪುಣ್ಯವತಿ’ (Punyavathi Serial) ಸೀರಿಯಲ್‌ನಲ್ಲಿ ಅತಿಥಿ ಪಾತ್ರ ಮಾಡುವ ಮೂಲಕ ಹೀರೋ ನಂದನ್‌ಗೆ ಸಾಥ್ ನೀಡ್ತಿದ್ದಾರೆ.

    punyavathii serial

    ಲಕ್ಷ್ಮಿ ಬಾರಮ್ಮ (Lakshmi Baramma) ಸೀರಿಯಲ್ ಮೂಲಕ ಚಿನ್ನು- ಗೊಂಬೆಯಾಗಿ ಕವಿತಾ ಮತ್ತು ನೇಹಾ (Neha Gowda) ಮೋಡಿ ಮಾಡಿದ್ದರು. ಚಂದನ್ ಮಡದಿಯರಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಈಗ ಅಂತಹದ್ದೇ ಟ್ರೈಯಾಂಗಲ್ ಲವ್ ಸ್ಟೋರಿ ಪುಣ್ಯವತಿ ಟ್ರ್ಯಾಕ್ ನಡೆಯುತ್ತಿದೆ. ನಂದನ್-ಪದ್ಮಿನಿ ಮತ್ತು ಪೂರ್ವಿ ಕಥೆ ನೋಡುಗರಿಗೆ ಥ್ರಿಲ್ ಕೊಡ್ತಿದೆ. ಇದನ್ನೂ ಓದಿ:ಗುರು ರಾಯರ ಸನ್ನಿಧಿಯಲ್ಲಿ ‘ಚಿನ್ನದ ಮಲ್ಲಿಗೆ ಹೂವೇ’ ಟೀಮ್

    neha gowda

    ಪುಣ್ಯವತಿ ಕಥೆ ಕೂಡ ಅಕ್ಕ-ತಂಗಿಯಾಗಿದ್ದಾಗಿದ್ದು, ಅಕ್ಕ ಪದ್ಮಿನಿ ಮದುವೆ ಆಗಬೇಕಾದ ಹುಡಗನನ್ನ ಪರಿಸ್ಥಿತಿಗೆ ಕಟ್ಟು ಬಿದ್ದು ತಂಗಿ ಪೂರ್ವಿ ಮದುವೆ ಆಗಿದ್ದಾಳೆ. ಮೂವರ ಜೀವನ ಅತಂತ್ರ ಸ್ಥಿತಿಗೆ ತಲುಪುತ್ತೆ. ಎಲ್ಲ ಸರಿ ಮಾಡುವ ಪ್ರಯತ್ನದಲ್ಲಿದ್ದ ನಾಯಕ ನಂದನ್‌ನ ಮೇಲೆ ಅಕ್ಕ-ತಂಗಿ ಇಬ್ಬರಿಗೂ ಲವ್ ಆಗಿದೆ. ಈ ಕಥೆ ಟ್ರೈಯಾಂಗಲ್ ಲವ್ ಸ್ಟೋರಿ ಸಾಗುತ್ತಿದೆ. ನಂದನ್ ಬದುಕು ಯಾರ ಜೊತೆ ಎಂಬ ನಿರ್ಧಾರಕ್ಕೆ ಚಿನ್ನು ಮತ್ತು ಗೊಂಬೆ ಸಾಥ್ ನೀಡುತ್ತಿದ್ದಾರೆ.

    ಸದ್ಯ ಪದ್ಮಿನಿ-ಪೂರ್ವಿ ಇರುವ ಪರಿಸ್ಥಿತಿಯಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು-ಗೊಂಬೆ ಇದ್ದರು. ಹೀಗಾಗಿ ಪರಿಸ್ಥಿತಿಯನ್ನ ಅರಿತು ಇಬ್ಬರಿಗೂ ದಾರಿ ತೋರಿಸಲಿದ್ದಾರಂತೆ. ಈ ಮೂಲಕ ಚಿನ್ನು ಕವಿತಾ ಗೌಡ ಹಾಗೂ ಗೊಂಬೆ ನೇಹಾ ಗೌಡ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದು, ತೆರೆಮೇಲೆ ಪುಣ್ಯವತಿ ಜೊತೆ ಲಕ್ಷ್ಮಿ ಬಾರಮ್ಮದ ಲಕ್ಷ್ಮಿಯರು ಮಿಂಚಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]