Wednesday, 21st August 2019

Recent News

6 days ago

ಅಖಂಡ ಭಾರತ ಸಂಕಲ್ಪ ದಿವಸ- ಮಧ್ಯರಾತ್ರಿ ಧ್ವಜಾರೋಹಣ

ಬೆಂಗಳೂರು: ಅಖಂಡ ಭಾರತ ಸಂಕಲ್ಪ ದಿವಸ ಆಚರಣೆಯ ಭಾಗವಾಗಿ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ದೇವರಾಜ ಮೊದಲಿಯರ್ ವೃತ್ತದಲ್ಲಿ ರಾತ್ರಿ 12 ಗಂಟೆಗೆ ಧ್ವಜಾರೋಹಣ ಮಾಡಲಾಯಿತು. ಹಿಂದೂ ಜಾಗರಾಣ ವೇದಿಕೆಯಿಂದ ಈ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ರಾತ್ರಿ 12 ಗಂಟೆಗೆ ವನಕಲ್ಲು ಮಠದ ಬದವರಮಾನಂದ ಸ್ವಾಮೀಜಿ ಧ್ವಜಾರೋಹಣ ಮಾಡಿದರು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಖಂಡ ಭಾರತ ಸಂಕಲ್ಪ ದಿವಸ ಆಚರಣೆ ಮಾಡಿದ ಸಂಘಟಕರಲ್ಲಿ ದೇಶ ಭಕ್ತಿ ಮುಗಿಲು ಮುಟ್ಟಿತ್ತು. ಈ ವೇಳೆ ನೂರಾರು ಹಿಂದೂ ಪರ […]

2 weeks ago

ಪ್ರವಾಹ ಸಂತ್ರಸ್ತರ ನೆರವಿಗೆ ಬಂದ ಪೊಲೀಸರು

ಬೆಂಗಳೂರು: ಉತ್ತರ ಕರ್ನಾಟಕದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಶಾಂತಿ ಕಾಪಾಡುವ ಪೊಲೀಸರು ಸಹ ಸಾರ್ವಜನಿಕರೊಂದಿಗೆ ತಮ್ಮ ಕೈಲಾದಷ್ಟು ಸಹಾಯಕ್ಕೆ ಸ್ಪಂದಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಠಾಣೆ ಪೊಲೀಸರು ಅಗತ್ಯ ವಸ್ತುಗಳ ಸಹಾಯಕ್ಕೆ ಮುಂದಾಗಿದ್ದಾರೆ. ಇನ್ನೂ ನೆಲಮಂಗಲ ಪಟ್ಟಣದ ಬೀದಿ ಬೀದಿಗಳಲ್ಲಿ ಸಂಚರಿಸಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಪೊಲೀಸರು ಸ್ವಯಂ ಪ್ರೇರಣೆಯಿಂದ ಸಹಾಯ ಮಾಡಿ,...

ಮಕ್ಕಳಾಗಲು ಮಾತ್ರೆ ತೆಗೆದುಕೊಂಡ ಜೋಡಿ- ಪತಿ ದುರ್ಮರಣ

4 weeks ago

ಬೆಂಗಳೂರು: ಮದುವೆಯಾಗಿ 11 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ದಂಪತಿ ಮಾತ್ರೆಗೆ ತೆಗೆದುಕೊಂಡಿದ್ದು, ಪರಿಣಾಮ ಪತಿ ಸಾವನ್ನಪ್ಪಿ, ಪತ್ನಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಯೊಂದು ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ಅರಿಶಿನಕುಂಟೆ ಗ್ರಾಮದ ನಿವಾಸಿಗಳಾದ ಶಶಿಧರ್ ಹಾಗೂ ಪತ್ನಿ ಗಂಗಾಬಿಂಕಾ ಭಾನುವಾರ ರಾತ್ರಿ ಭೇದಿಯಿಂದ...

ಡಿವೈಡರ್‌ನಿಂದ ಹಾರಿ ವಿಭಜಕಕ್ಕೆ ಗುದ್ದಿ ಪಕ್ಕದ ರಸ್ತೆಗೆ ಹಾರಿದ ಕಾರ್

1 month ago

ಬೆಂಗಳೂರು: ಕಾರೊಂದು ಡಿವೈಡರ್‌ನಿಂದ ಹಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಗೆ ಹಾರಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗೇಟ್ ಬಳಿ ನಡೆದಿದೆ. ಕೆರೆಕತ್ತಿಗನೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ಸಂಭವಿಸಿದೆ....

ಮೈಕ್‍ನಲ್ಲಿ ಮಾತನಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ – ಯುವಕ ಬಲಿ

2 months ago

ನೆಲಮಂಗಲ: ಕ್ರಿಕೆಟ್ ಟೂರ್ನಿಯ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಯುವಕನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ನೆಲಮಂಗಲದ ಕೊಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಕಿರಣ್ ವಿದ್ಯುತ್ ಶಾಕ್‍ಗೆ ಬಲಿಯಾದ ಯುವಕನಾಗಿದ್ದು, ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ಇಂದು ಮಂಚೇನಹಳ್ಳಿ ಕ್ರಾಸ್...

ಗಾಯಗೊಂಡಿದ್ದ ನವಿಲನ್ನು ರಕ್ಷಿಸಿದ ಗ್ರಾಮಸ್ಥರು

2 months ago

ಬೆಂಗಳೂರು: ಗಾಯಗೊಂಡಿದ್ದ ನವಿಲಿಗೆ ಆರೈಕೆ ಮಾಡುವ ಮೂಲಕ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆಯ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಕಾಡಿನಿಂದ ನಾಡಿಗೆ ಬಂದಿದ್ದ ಗಂಡು ನವಿಲಿನ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಹಾರಲು ಸಾಧ್ಯವಾಗದೇ ಬಿಲ್ಲಿನಕೋಟೆಯ ಅಂಗಡಿಯೊಂದರ ಮುಂದೆ ಬಿದ್ದಿತ್ತು. ಅದನ್ನು ನೋಡಿದ ಸ್ಥಳೀಯರು ಎತ್ತಿಕೊಂಡು...

ಕಲ್ಲಿನ ಕ್ವಾರಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಮಹಿಳೆ ಸಾವು

3 months ago

ಬೆಂಗಳೂರು: ಗ್ರಾಮದಲ್ಲಿ ನೀರಿನ ಅಭಾವ ಉಂಟಾದ ಕಾರಣಕ್ಕೆ ಬಟ್ಟೆ ತೊಳೆಯಲು ಕಲ್ಲಿನ ಕ್ವಾರಿಗೆ ಹೋಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನೆಲಮಂಗಲ ಸಮೀಪದ ಕಂಬದಕಲ್ ಗ್ರಾಮದಲ್ಲಿ ನಡೆದಿದೆ. ಕಂಬದಕಲ್ ಗ್ರಾಮದ ನಿವಾಸಿ ಮಂಜುಳ (42) ಮೃತ ದುರ್ದೈವಿ. ಗ್ರಾಮದಲ್ಲಿ ನೀರಿನ ಬವಣೆ ಇದ್ದ...

ಅನಧಿಕೃತ ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಬೀಗ ಜಡಿದ ಡಿಎಚ್‍ಓ

3 months ago

ಬೆಂಗಳೂರು: ನಗರ ಹೊರವಲಯದ ನೆಲಮಂಗಲದಲ್ಲಿ ಸೂಕ್ತ ದಾಖಲೆಗಳಿಲ್ಲದ ಅನೇಕ ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಸೆಂಟರ್ ಗಳು ತಲೆ ಎತ್ತಿವೆ. ಈ ಕುರಿತು ಸೂಕ್ತ ಮಾಹಿತಿ ಪಡೆದಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಯೋಗೀಶ್ ಗೌಡ ಅವರ ನೇತೃತ್ವದ ಅಧಿಕಾರಿಗಳ ತಂಡ ಭರ್ಜರಿ ದಾಳಿ ಮಾಡಿದೆ....