Sunday, 19th May 2019

3 months ago

ನಡುಬೀದಿಯಲ್ಲೇ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಶಾಸಕ ನಾಗೇಂದ್ರ!

ಮೈಸೂರು: ಸಿಎಂ ಜಿಲ್ಲೆಗೆ ಬರುತ್ತಿರುವ ವಿಷಯ ತಿಳಿಸಿಲ್ಲ ಅಂತ ಸಿಟ್ಟಿಗೆದ್ದ ಶಾಸಕರೊಬ್ಬರು ನಡುಬೀದಿಯಲ್ಲೇ ಅಧಿಕಾರಿಯನ್ನು ಎಲ್ಲರ ಮುಂದೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಜಿಲ್ಲೆಯ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅಧಿಕಾರಿಯನ್ನು ನಿಂದಿಸಿ ಅವಾಜ್ ಹಾಕಿದ್ದಾರೆ. ಸಿಎಂ ಅವರು ಜಿಲ್ಲೆಗೆ ಬರುತ್ತಿರುವ ವಿಷಯವನ್ನು ಅಧಿಕಾರಿಗಳು ತಮಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ನಾಗೇಂದ್ರ ಅವರು ನಡುಬೀದಿಯಲ್ಲೇ ಅಧಿಕಾರಿಗೆ ಬೈದಿದ್ದಾರೆ. ಇಲ್ಲಿಗೆ ಯಾಕೆ ಬಂದಿದ್ಯಾ ರಜೆ ಹಾಕಿ ನೀನು? ಸಿಎಂ ಬರಬೇಕಾದ್ರೆ ಹೇಳಬೇಕು ಅನ್ನೋ ಯೋಗ್ಯತೆ ಇಲ್ಲ ನಿಂಗೆ ಲೋಫರ್ […]

5 months ago

ಕಳಪೆ ಕಾಮಗಾರಿ ಪ್ರಶ್ನಿಸಿದ ಜನರಿಗೆ ಶಾಸಕ ಲಮಾಣಿ ಪುತ್ರ ಅವಾಜ್!

ಗದಗ: ರಸ್ತೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ, ಸರಿಪಡಿಸಿ ಎಂದು ಕಾಮಗಾರಿ ತಡೆದ ಸಾರ್ವಜನಿಕರಿಗೆ ಶಾಸಕ ಲಮಾಣಿ ಪುತ್ರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅವಾಜ್ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಿಂದ ಗದಗ ನಾಕಾವರೆಗೆ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಒಳ್ಳೆ ಕಾಮಗಾರಿ ಮಾಡಿ ಎಂದು ಸ್ಥಳಿಯರು ಪ್ರತಿಭಟಿಸಿ ಸ್ಥಗಿತಗೊಳಿಸಿದ್ದರು....

ಖ್ಯಾತ ಗಾಯಕಿ ವಸುಂದರಾ ದಾಸ್‍ಗೆ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಂದ ಅವಾಜ್

7 months ago

ಬೆಂಗಳೂರು: ಖ್ಯಾತ ನಟಿ, ಗಾಯಕಿ ವಸುಂದರಾ ದಾಸ್ ಅವರಿಗೆ ಕ್ಯಾಬ್ ಚಾಲಕನೊಬ್ಬ ಅಡ್ಡಗಟ್ಟಿ ನಿಂದನೆ ಮಾಡಿರುವ ಘಟನೆ ನಗರದ ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಲ್ಲಿ ನಡೆದಿದೆ. ವಸುಂದರಾ ದಾಸ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕ್ಯಾಬ್ ಚಾಲಕ ತನ್ನ ಕಾರಿಗೆ ದಾರಿ ನೀಡಲಿಲ್ಲ...

ಸಾರ್ವಜನಿಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಡಿವೈಎಸ್‍ಪಿ!

10 months ago

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಾ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಚಾಮರಾಜನಗರ ಡಿವೈಎಸ್ ಪಿ ಜೈಕುಮಾರ್ ಸಾರ್ವಜನಿಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಲ್ಲದೇ ಸಾರ್ವಜನಿಕರ ಮೇಲೆ ಕೈ ಮಾಡಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂದು...

ಬಜಾರಿ, ಗಂಡುಬೀರಿ ಅಂತ ಮಹಿಳೆಯರನ್ನು ನಿಂದಿಸಿದ ಪೊಲೀಸ್!

12 months ago

ಬೆಳಗಾವಿ: ಸಮಸ್ಯೆ ಹೊತ್ತು ಪೊಲೀಸರ ಬಳಿ ಹೋದರೆ ಪೊಲೀಸ್ ಅಧಿಕಾರಿಯೊರ್ವ, ಸೌಜನ್ಯವನ್ನೂ ತೋರದೆ ಸಾರ್ವಜನಿಕವಾಗಿ ಮಹಿಳೆಯರನ್ನು ನಿಂದಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾರೋಗೇರಿ ಪಿಎಸ್‍ಐ ಮೊಹ್ಮದ್ ರಫೀಕ್...

ಅವಾಚ್ಯ ಪದಗಳಿಂದ ಯುವತಿಯನ್ನು ನಿಂದಿಸಿದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ

1 year ago

ಬೆಂಗಳೂರು: ಅವಾಚ್ಯ ಪದಗಳಿಂದ ಯುವತಿಯನ್ನು ನಿಂದಿಸಿದ್ದಾರೆ ಎನ್ನುವ ಆರೋಪ ತುಮಕೂರಿನ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಮೇಲೆ ಕೇಳಿ ಬಂದಿದೆ. ಸುರೇಶ್ ಗೌಡರ ಮಗಳು ಅಂತಾ ಹೇಳಿಕೊಂಡು ಗೌರಿ ಗೌಡ ಎಂಬಾಕೆ ಜನರಿಗೆ ವಂಚಿಸುತ್ತಿದ್ದಾರೆ ಅಂತಾ ಶಾಸಕರ ಮಗ ಹೃತಿಕ್...

ಅನಂತ್‍ಕುಮಾರ್ ಹೆಗ್ಡೆ ನಿಂದಿಸುವ ಭರದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್- ಪಿಎಚ್‍ಡಿ ವಿದ್ಯಾರ್ಥಿ ವಿರುದ್ಧ ದೂರು

1 year ago

-ಕೃಷ್ಣ, ರಾಮ, ಸೀತೆ, ಲಕ್ಷ್ಮಣನ ಬಗ್ಗೆ ಅವಹೇಳನ ಮೈಸೂರು: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರನ್ನ ನಿಂದಿಸುವ ಭರದಲ್ಲಿ ಹಿಂದೂ ದೇವರುಗಳ ಬಗ್ಗೆ ಬಾಯಿಗೆ ಬಂದಂತೆ ಒದರಿದ ಫೇಸ್‍ಬುಕ್ ಪುಡಾರಿ ವಿರುದ್ಧ ದೂರು ನೀಡಲಾಗಿದೆ. ಮೈಸೂರಿನ ಹಾರೋಹಳ್ಳಿ ರವೀಂದ್ರ ಹಿಂದೂ ದೇವರು...