Friday, 21st February 2020

3 days ago

ಕೇರಳದ ಬೀದಿ ನಾಯಿಯನ್ನು ಸ್ವಿಟ್ಜರ್ಲ್ಯಾಂಡ್‌ಗೆ ಕರ್ಕೊಂಡು ಹೋಗ್ತಿದ್ದಾರೆ ವಿದೇಶಿಗರು

ತಿರುವನಂತಪುರಂ: ಕೇರಳದ ಮುನ್ನಾರಿನಲ್ಲಿ ನೋಡಿದ ಬೀದಿ ನಾಯಿಯನ್ನು ವಿದೇಶಿಗರು ತಮ್ಮ ಜೊತೆ ಸ್ವಿಟ್ಜರ್ಲ್ಯಾಂಡ್‌ಗೆ ಕರೆದುಕೊಂಡು ಹೋಗಲಿದ್ದಾರೆ. ಜಾನ್ ಹಾಗೂ ಎಲನ್ ಸ್ವಿಟ್ಜರ್ಲ್ಯಾಂಡ್‌ ದೇಶದಲ್ಲಿ ವಾಸಿಸುತ್ತಾರೆ. ಜಾನ್ ಹಾಗೂ ಎಲನ್ ಈ ನಾಯಿಯನ್ನು ನೋಡಿದ್ದು, ಇಬ್ಬರಿಗೂ ಅದು ಇಷ್ಟವಾಗಿದೆ. ಅಲ್ಲದೆ ಎಷ್ಟು ದಿನ ಮುನ್ನಾರಿನಲ್ಲಿ ಇರುತ್ತೇವೋ ಅಷ್ಟು ದಿನ ಈ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ ಎಂದು ನಿರ್ಧರಿಸಿದ್ದಾರೆ. ಮೂರು ದಿನಗಳ ಕಾಲ ನಾಯಿಯನ್ನು ನೋಡಿಕೊಂಡ ಬಳಿಕ ಇಬ್ಬರಿಗೂ ಅದರ ಮೇಲೆ ಪ್ರೀತಿ ಆಗಿದೆ. ಹಾಗಾಗಿ ಇಬ್ಬರು ಆ ನಾಯಿಯನ್ನು […]

2 weeks ago

ನಾಯಿ ತಂದ ಎಡವಟ್ಟು- ಎರಡು ಗುಂಪುಗಳ ನಡುವೆ ಮಾರಾಮಾರಿ

ಬೆಂಗಳೂರು: ನಾಯಿಯಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಬೆಂಗಳೂರಿನ ರಾಜಾರಾಜೇಶ್ವರಿನಗರ ಸಾಯಿ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ. ಖಾಸಗಿ ಕ್ಲಬ್‍ವೊಂದರಲ್ಲಿ ಟೆನ್ನಿಸ್ ಕೋಚ್ ಆಗಿ ಕೆಲಸ ಮಾಡುವ ದೀಪಕ್ ಮತ್ತು ಸ್ನೇಹಿತ ಗಗನ್ ರಾತ್ರಿ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್‍ನಲ್ಲಿ ಹೋಗಿದ್ದರು. ಈ ವೇಳೆ ಪೆಟ್ರೋಲ್ ಬಂಕ್‍ಗೆ ಹೋಗುವ ದಾರಿಯಲ್ಲಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡಲಾಗಿ...

2 ಗಂಟೆಯಿಂದ ನೀರಿನಲ್ಲಿ ಒದ್ದಾಡುತ್ತಿದ್ದ ನಾಯಿಯನ್ನು ಬಾವಿಗಿಳಿದು ರಕ್ಷಿಸಿದ ಮಹಿಳೆ

3 weeks ago

ಮಂಗಳೂರು: ಬಾವಿಗೆ ಬಿದ್ದ ನಾಯಿಯನ್ನು ಮಹಿಳೆಯೊಬ್ಬರು ತಾವೇ ಬಾವಿಯಲ್ಲಿ ಇಳಿದು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಎಂ.ಜಿ ರಸ್ತೆ ಬಳಿಯಲ್ಲಿರುವ ಬಲ್ಲಾಳ್ ಬಾಗ್‍ನ ಬಿರುವೆರ್ ಕುಡ್ಲ ಮೈದಾನದ ಪಕ್ಕದ ಈ ಬಾವಿಗೆ ಒಂದು ಕಪ್ಪು ಬಣ್ಣದ ನಾಯಿ...

ಎಣ್ಣೆ ಮತ್ತಲ್ಲಿ ನಾಯಿ ಮರಿಗೆ ಪೆಗ್ ಹಾಕಿಸಿ ಯುವಕನಿಂದ ವಿಕೃತಿ

3 weeks ago

ಕಾರವಾರ: ಯುವಕನೊಬ್ಬ ನಾಯಿಮರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಮಟಾ ಪಟ್ಟಣದ ಕಡ್ಲೆ ಗಾಂಧಿವನ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಗಾಳಿ ಮರದ ಕೆಳಗೆ ಹಾಡಹಗಲೇ...

ಮಲಗಿದ್ದ ನಾಯಿ ಮೇಲೆ ಕಲ್ಲು ಎತ್ತಿ ಹಾಕಿ ವಿಕೃತಿ ಮೆರೆದ ಭೂಪ

1 month ago

ಬೆಂಗಳೂರು: ನಾಯಿಯೊಂದು ಅಪಾರ್ಟ್‍ಮೆಂಟ್ ಗೇಟ್ ಮುಂದೆ ಮಲಗಿದೆ ಅನ್ನೋ ಒಂದೇ ಕಾರಣಕ್ಕೆ ಅಪಾರ್ಟ್‍ಮೆಂಟ್ ವಾಸಿಯೊಬ್ಬ ಏಕಾಏಕಿ ಕಲ್ಲು ತಂದು ಮಲಗಿದ್ದ ನಾಯಿ ಮೇಲೆ ಎತ್ತಿ ಹಾಕಿರುವ ವಿಲಕ್ಷಣ ಘಟನೆ ನಡೆದಿದೆ. ಬೆಂಗಳೂರಿನ ಜಾಲಹಳ್ಳಿಯ ಪ್ರಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್‍ಮೆಂಟ್ ಬಳಿ ಈ ಘಟನೆ...

ಸಾಕು ನಾಯಿಗೂ ಹೆಲ್ಮೆಟ್ ಹಾಕಿಸಿಕೊಂಡು ಬೈಕ್ ರೈಡ್- ವೀಡಿಯೋ ವೈರಲ್

1 month ago

ಚೆನೈ: ದ್ವಿಚಕ್ರ ವಾಹನ ಸವಾರರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರೋದು ಎಲ್ಲಾರಿಗೂ ಗೊತ್ತಿರೋ ವಿಚಾರ. ಅದರಲ್ಲೂ ಬೈಕ್ ಸವಾರ ಮಾತ್ರ ಅಲ್ಲ ಹಿಂಬದಿ ಸೀಟಿನಲ್ಲಿ ಕೂರುವವರೂ ಹೆಲ್ಮೆಟ್ ಹಾಕಿಕೊಳ್ಳಬೇಕು ಅನ್ನೋ ಕಾನೂನಿದೆ. ಹೀಗೆ ಬೈಕ್ ಸವಾರರೊಬ್ಬರು ತನ್ನ ಹಿಂಬದಿಯಲ್ಲಿ ಕುಳಿತ ನಾಯಿಗೆ ಹೆಲ್ಮೆಟ್...

ಕಾಡಂಚಿನ ಪ್ರದೇಶದ ನಾಯಿಗಳ ಹೊಣೆ ಅರಣ್ಯ ಇಲಾಖೆಗೆ

1 month ago

ಚಾಮರಾಜನಗರ: ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಹೊಣೆಯನ್ನು ಅರಣ್ಯ ಇಲಾಖೆಯೇ ಹೊರಲಾರಂಭಿಸಿದೆ. ವನ್ಯಜೀವಿಗಳಿಗೆ ಬೀದಿನಾಯಿಗಳಿಂದ ರೋಗ ಹರಡಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಬೀದಿನಾಯಿಗಳ ಆರೋಗ್ಯದ ಮೇಲೂ ಕಾಳಜಿ ವಹಿಸುತ್ತಿದ್ದು, ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ....

ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ – ಸಾಕು ನಾಯಿ ಕಚ್ಚಿದ್ರೆ ಜೈಲು ಗ್ಯಾರಂಟಿ

2 months ago

ಗಾಂಧಿನಗರ: ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಒಂದಕ್ಕಿಂತ ಹೆಚ್ಚು ಬಾರಿ ಸಾಕು ನಾಯಿ ಸಾರ್ವಜನಿಕರನ್ನು ಕಚ್ಚಿದ್ದರೆ ನಾಯಿಯ ಯಜಮಾನ ಜೈಲು ವಾಸ ಅನುಭವಿಸಬೇಕಾಗುತ್ತದೆ. ಗುಜರಾತ್‍ನ ಘೋದಸಾರ್ ನಿವಾಸಿ ಭಾರೇಶ್ ಪಾಂಡ್ಯಾ ಸಾಕಿದ ನಾಯಿ ನೆರೆಹೊರೆಯ ನಾಲ್ವರು ಮಂದಿಗೆ ಕಚ್ಚಿತ್ತು. ಇದೀಗ ಪಾಂಡ್ಯಾನಿಗೆ...