Wednesday, 18th September 2019

22 hours ago

ನಮೋ ಹುಟ್ಟುಹಬ್ಬಕ್ಕೆ ಹನುಮನಿಗೆ 1.25 ಕೆಜಿ ತೂಕದ ಚಿನ್ನದ ಕಿರೀಟ ನೀಡಿದ ಅಭಿಮಾನಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ವಾರಣಾಸಿಯ ಸಂಕಟ ಮೋಚನ ದೇಗುಲದ ಹನುಮನಿಗೆ ಬರೋಬ್ಬರಿ 1.25 ಕೆಜಿ ತೂಕದ ಚಿನ್ನದ ಕಿರೀಟ ಕೊಟ್ಟು ಮೋದಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ. ವಾರಣಾಸಿ ನಿವಾಸಿ ಅರವಿಂದ್ ಸಿಂಗ್ ಅವರು ಮೋದಿ ಅವರ ಕಟ್ಟಾ ಅಭಿಮಾನಿ. ಆದ್ದರಿಂದ ಮೋದಿ ಅವರು ವಾರಣಾಸಿಯಿಂದ ಲೋಕಸಭಾ ಚುನಾವಣೆಗೆ ನಿಂತಾಗ ಗೆಲ್ಲಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಅಲ್ಲದೆ ಮೋದಿ ಅವರ ಜೊತೆ ಬಿಜೆಪಿ ಕೂಡ ಗೆದ್ದು, ಎರಡನೇ […]

1 day ago

ಚಾಮುಂಡಿ ಬೆಟ್ಟದಲ್ಲಿ ಮೋದಿ, ಯಡಿಯೂರಪ್ಪ, ಬಿಜೆಪಿ ಹೆಸರಿನಲ್ಲಿ ಜಿಟಿಡಿ ಅರ್ಚನೆ

ಮೈಸೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಮೋದಿ ಅವರಿಗಾಗಿ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದರು. ಈ ವೇಳೆ ಜಿ.ಟಿ ದೇವೇಗೌಡ ಸೇರಿದಂತೆ ಸಂಸದ ಪ್ರತಾಪ್ ಸಿಂಹ,...

ಪಾಕ್ ಭಯೋತ್ಪಾದನೆ ಮುಂದುವರಿಸಿದಲ್ಲಿ ತುಂಡು ತುಂಡಾಗುವುದು ನಿಶ್ಚಿತ – ರಾಜನಾಥ್ ಸಿಂಗ್

3 days ago

ಗಾಂಧಿನಗರ: ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸದಿದ್ದರೆ, ತುಂಡು ತುಂಡಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ. ಸೂರತ್‍ನಲ್ಲಿ ನಡೆದ 122 ಹುತಾತ್ಮ ಸೈನಿಕರ ಕುಟುಂಬಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಿಗಳು ಗಡಿ ನಿಯಂತ್ರಣ...

ಮಹಾರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ರಾಜ್ಯದ ರಾಜಕೀಯ ಭವಿಷ್ಯ

3 days ago

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಫೆಬ್ರವರಿಯಲ್ಲಿ ನಡೆಯುವ ಚುನಾವಣೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಭವಿಷ್ಯವನ್ನು ನಿರ್ಧರಿಸುತ್ತೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ಯಾವ ಕ್ಷಣದಲ್ಲಿ ಬೇಕಾದರು ಚುನಾವಣೆ ನಡೆಯಬಹುದು ಅನ್ನೋ ವಿಪಕ್ಷಗಳ ಮಾತು ನಿಜವಾಗುತ್ತೆ ಎಂಬ ಅನುಮಾನಗಳು ಶುರುವಾಗಿದೆ. ನೆರೆಯ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ...

ಅತ್ಯಂತ ಕೆಳಮಟ್ಟದ ಮಾನಸಿಕತೆ ಇರುವ ವ್ಯಕ್ತಿ ಸಿಎಂ ಆಗಿದ್ದಕ್ಕೆ ಕನಿಕರ ಆಗ್ತಿದೆ – ಸುರೇಶ್‍ಕುಮಾರ್

5 days ago

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಬಂದಿದ್ದೇ ಇಸ್ರೋಗೆ ಅಪಶಕುನ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ. ಗಂಗಾವತಿಯಲ್ಲಿ ಮಾತನಾಡಿದ ಸುರೇಶ್ ಅವರು, ನನಗೆ ಬಹಳ ದುಃಖ ಆಗುತ್ತಿದೆ. ಏಕೆಂದರೆ ಇಂತಹ...

ಟ್ವಿಟ್ಟರ್‌ನಲ್ಲಿ 5 ಕೋಟಿ ಫಾಲೋವರ್ಸ್ – ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿಯಾದ ಮೋದಿ

6 days ago

– ಇನ್‍ಸ್ಟಾ, ಎಫ್‍ಬಿಯಲ್ಲೂ ಸಿಕ್ಕಾಪಟ್ಟೆ ಫೇಮಸ್ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಲ್ಲೆಡೆ ಸಿಕ್ಕಾಪಟ್ಟೆ ಫೇಮಸ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮೋದಿ ಅವರಿಗೆ ಬರೋಬ್ಬರಿ 50 ದಶಲಕ್ಷ(5 ಕೋಟಿ) ಮಂದಿ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದ...

ಗಣೇಶೋತ್ಸವದಲ್ಲಿ ಮೋದಿ ಮೂರ್ತಿಯನ್ನು ಇಟ್ಟು ಯುವಕರಿಂದ ಆರಾಧನೆ

7 days ago

ಬೆಳಗಾವಿ: ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯಕ್ಕೆ ಎಂದು ಕಂಡರಿಯದ ಪ್ರವಾಹ ಪರಿಸ್ಥಿತಿ ಬಂದ್ರೂ ಮೋದಿ ಸರ್ಕಾರ ರಾಜ್ಯಕ್ಕೆ ಒಂದು ರೂ. ಸಹಾಯ ಮಾಡಿಲ್ಲ ಎಂದು ಮೋದಿ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಆದರೆ ಮೋದಿ ಹವಾ ಮಾತ್ರ ಬೆಳಗಾವಿಯಲ್ಲಿ ಇನ್ನೂ...

ಮಗಳ ಮದ್ವೆಗೆ ಆಹ್ವಾನ – ಮೋದಿ ರಿಪ್ಲೈ ಕಂಡು ತಂದೆಗೆ ಅಚ್ಚರಿ

1 week ago

ಚೆನ್ನೈ: ತಮಿಳುನಾಡಿನ ವೆಲ್ಲೂರಿನಲ್ಲಿ ತಂದೆಯೊಬ್ಬರು ತಮ್ಮ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ಪತ್ರಕ್ಕೆ ಮೋದಿ ಅವರ ಪ್ರತಿಕ್ರಿಯೆ ನೀಡಿದ್ದು, ಇದನ್ನು ಕಂಡು ವಧು-ವರರು ಸೇರಿದಂತೆ ಇಡೀ ಕುಟುಂಬ ಅಚ್ಚರಿಗೊಂಡಿದೆ. ವೆಲ್ಲೂರಿನ ನಿವೃತ್ತ ಪ್ರಾದೇಶಿಕ ವೈದ್ಯಕೀಯ ಸಂಶೋಧಕ...