Wednesday, 18th September 2019

Recent News

1 day ago

ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಆನೆಮರಿ: ವಿಡಿಯೋ

ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಆನೆಮರಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಟನ್ಸ್ ಗ್ರೌಂಡೆಡ್ ಎಂಬವರು ಈ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನನ್ನ ಹೃದಯ. ಆ ವ್ಯಕ್ತಿ ನದಿಯಲ್ಲಿ ಮುಳುಗುತ್ತಿದ್ದಾನೆ ಎಂದು ತಿಳಿದ ಆನೆಮರಿ ಆತನ ರಕ್ಷಣೆಗೆ ಧಾವಿಸಿದೆ. ನಾವು ನಿಜವಾಗಿಯೂ ಅವರಿಗೆ ಅರ್ಹರಲ್ಲ” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಆನೆಗಳ ಹಿಂಡು ನದಿಯಲ್ಲಿ ಅಡ್ಡಾಡುತ್ತಿರುವುದು ಕಂಡು ಬಂದಿದೆ. ಹೀಗಿರುವಾಗ ನದಿಯಲ್ಲಿ ವ್ಯಕ್ತಿಯೊಬ್ಬ ಈಜಿಕೊಂಡು ಎಂಜಾಯ್ ಮಾಡುತ್ತಿದ್ದನು. ಇದನ್ನು ನೋಡಿ ಆನೆಮರಿಯೊಂದು […]

1 week ago

ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

ಬೆಳಗಾವಿ: ಮಕ್ಕಳು ಮತ್ತು ಸೊಸೆಯರ ಕಿರುಕುಳ ಸಹಿಸಲಾರದೆ ನದಿಗೆ ಹಾರಿದ 80 ವರ್ಷದ ಅಜ್ಜಿಯನ್ನು ಕಿಲ್ಲಾ ತೊರಗಲ್ಲ ಗ್ರಾಮಸ್ಥರು ರಕ್ಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ನಿವಾಸಿ ಯಲ್ಲವ್ವ ಕೌಜಲಗಿ ನದಿಗೆ ಹಾರಿದ 80 ವರ್ಷದ ಅಜ್ಜಿ. ಮಕ್ಕಳ ಮತ್ತು ಸೊಸೆಯಂದಿರ ಕಾಟ ತಾಳಲಾರದೆ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ ಬಳಿಯ ನದಿಗೆ...

ನದಿ ನೀರುಪಾಲಾಗಿದ್ದ ರೈತನ ಮೃತದೇಹ 17 ದಿನಗಳ ಬಳಿಕ ಪತ್ತೆ

4 weeks ago

ಹಾವೇರಿ: ಧರ್ಮಾ ನದಿಯ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದ ರೈತನ ಮೃತದೇಹವು 17 ದಿನದ ಬಳಿಕ ಪತ್ತೆಯಾದ ಘಟನೆ ಹಾನಗಲ್ ತಾಲೂಕು ಶೃಂಗೇರಿ ಗ್ರಾಮದಲ್ಲಿ ನಡೆದಿದೆ. ಶೃಂಗೇರಿ ಗ್ರಾಮದ ಶಿವಪ್ಪ ಸೊಟ್ಟಕ್ಕನವರ (50) ನೀರುಪಾಲಾಗಿದ್ದ ರೈತ. ಧರ್ಮಾ ನದಿ ಪ್ರವಾಹಕ್ಕೆ ಸಿಲುಕಿದ್ದ...

ರಾಯಚೂರಿನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿ ಆಂಧ್ರದಲ್ಲಿ ಶವವಾಗಿ ಪತ್ತೆ -ಆಟೋ ಚಾಲಕ ಬಂಧನ

4 weeks ago

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ್ ಸಾವಿನ ಪ್ರಕರಣ ಮಾಸುವ ಮುನ್ನವೇ, ನಗರದ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದ ಅಪ್ರಾಪ್ತೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. 17 ವರ್ಷದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಐದು ದಿನಗಳ ನಂತರ...

ಪಾಕಿಗೆ ಹರಿಯತ್ತಿರುವ ನೀರನ್ನು ನಿಲ್ಲಿಸುವ ಕೆಲಸ ಆರಂಭಗೊಂಡಿದೆ – ಕೇಂದ್ರ ಸರ್ಕಾರ

4 weeks ago

ಮುಂಬೈ: ಉಗ್ರರನ್ನು ಉತ್ಪಾದಿಸಿ ಭಾರತಕ್ಕೆ ಕಳುಹಿಸುತ್ತಿರುವ ಪಾಕಿಸ್ತಾನ ತಿರುಗೇಟು ನೀಡಲು ಭಾರತ ಈಗ ಜಲಾಸ್ತ್ರವನ್ನು ಪ್ರಯೋಗಿಸಿದ್ದು, ಕೆಲಸ ಈಗಾಗಲೇ ಆರಂಭಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇಂಡಸ್ ಒಪ್ಪಂದವನ್ನು...

ಕೃಷ್ಣೆಯ ಅಬ್ಬರಕ್ಕೆ ಕೊಚ್ಚಿಹೋದ ಚಿಕ್ಕಪಡಸಗಿ ಸೇತುವೆ – ರಸ್ತೆಗೆ ಕುಸಿದ ಬೃಹತ್ ಗುಡ್ಡ

1 month ago

ಬೆಂಗಳೂರು: ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ ಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸಮೀಪದ ರಸ್ತೆ ಸೇತುವೆ ಕೊಚ್ಚಿ ಹೋಗಿದೆ. ಹುಬ್ಬಳ್ಳಿ-ವಿಜಯಪುರ ರಾಜ್ಯ ಹೆದ್ದಾರಿ-34ರಲ್ಲಿರುವ ಸೇತುವೆ ಸಂಪೂರ್ಣ ಹಾಳಾಗಿದೆ. ಪ್ರವಾಹದಲ್ಲಿ ಈ ಸೇತುವೆ ಮುಳುಗಿದ್ದ ಕಾರಣ ಕಳೆದ 15ದಿನದಿಂದ ವಾಹನ...

ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

1 month ago

ಉಡುಪಿ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮನೆ, ಶಾಲೆ ಸೇರಿದಂತೆ ಕಟ್ಟಡಗಳು ನೆಲಸಮವಾಗುತ್ತಿದ್ದು, ಸಾರ್ವಜನಿರಿಕರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ನಂದನವನ ಶಾಲೆ ಕುಸಿದುಬಿದ್ದಿದೆ. ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾದ ಪರಿಣಾಮ...

ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ – ಪ್ರವಾಹದ ಸಂಪೂರ್ಣ ಮಾಹಿತಿ

1 month ago

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್‍ವೈ, ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಮತ್ತು ನಮ್ಮ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ...