Friday, 22nd March 2019

1 hour ago

ಸಾವು ಗೆದ್ದ ದಂಪತಿ – ಕಟ್ಟಡದ ಅವಶೇಷಗಳಡಿಯಿಂದ ಹೊರಬರುತ್ತಿದ್ದಂತೆ ಕೈಮುಗಿದ ಪತಿ!

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಇದೀಗ ಅವಶೇಷಗಳಡಿ ಸಿಲುಕಿದ್ದ ದಂಪತಿಯನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. ಸಾವು ಗೆದ್ದು ಹೊರಬರುತ್ತಿದ್ದಂತೆಯೇ ಪತಿ ದಿಲೀಪ್ ಎಲ್ಲರಿಗೂ ಕೈಮುಗಿಯುತ್ತಾ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ನೆರೆದಿದ್ದವರು ಚಪ್ಪಾಳೆ ತಟ್ಟಿದ್ದಾರೆ. ಪತಿ ದಿಲೀಪ್ ಜೊತೆ ಪತ್ನಿ ಸಂಗೀತಾ ಕೂಡ ಬದುಕುಳಿದಿದ್ದಾರೆ. ಅವಶೇಷಗಳಡಿ ಸಿಲುಕಿದ್ದಾಗ ಸ್ವತಃ ತಾನೇ ಒಳಗೆ ರಾಡ್ ಕಟ್ ಮಾಡಿ ಹೊರ ಬರಲು ಪ್ರಯತ್ನಿಸಿರುವುದಾಗಿ ದಿಲೀಪ್ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ದುರಂತ ನಡೆದ ದಿನದಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. […]

3 hours ago

ಧಾರವಾಡ ದುರಂತ: 4 ದಿನಗಳ ಬಳಿಕ ಬದುಕಿಬಂದ ಯುವಕ – ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಧಾರವಾಡ: ಕಾಂಪ್ಲೆಕ್ಸ್ ಕುಸಿತ ದುರಂತದಲ್ಲಿ ಇಂದು ಬೆಳಗ್ಗೆ ಎನ್‍ಡಿಆರ್ ಎಫ್ ಸಿಬ್ಬಂದಿ ಯುವಕರೊಬ್ಬರನ್ನು ಮೂರು ದಿನಗಳ ಬಳಿಕ ಜೀವಂತವಾಗಿ ರಕ್ಷಣೆ ಮಾಡಿದ್ದಾರೆ. ಸಂಗನಗೌಡ ರಾಮನಗೌಡ (24) ಅವರನ್ನು ರಕ್ಷಿಸಿದ್ದು, ಅವರು ಜೆಡಿಎಸ್ ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ರಾಮನಗೌಡ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಉಳಿಗೇರಿ ನಿವಾಸಿಯಾಗಿದ್ದಾರೆ....

ಧಾರವಾಡ ದುರಂತ – ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಅರೆಸ್ಟ್

1 day ago

ಧಾರವಾಡ: ನಗರದಲ್ಲಿ ನಡೆದ ಕಟ್ಟಡ ಕುಸಿತ ಪ್ರಕರಣ ಹಿನ್ನೆಲೆ 5 ಮಂದಿ ಮಾಲೀಕರು ಹಾಗೂ ಓರ್ವ ಗುತ್ತಿಗೆಗಾರನ ಮೇಲೆ ಕೇಸ್ ದಾಖಲಾಗಿತ್ತು. ಈ ಸಂಬಂಧ ಇಂದು ಕಟ್ಟಡದ ಮಾಲೀಕರಲ್ಲಿ ಒಬ್ಬರಾದ ಮಾಜಿ ಸಚಿವ ವಿನಯ್ ಕುಲಕಣಿ ಮಾವ ಗಂಗಣ್ಣ ಸಿಂತ್ರೆಯನ್ನು ಪೊಲೀಸರು...

ಧಾರವಾಡ ದುರಂತ – ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೊಷಣೆ

2 days ago

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ನಗರದಲ್ಲಿ ನಡೆದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡುವುದಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ತುಷಾರ ಗಿರಿನಾಥ ಘೋಷಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು,...

ಕಟ್ಟಡ ಕುಸಿತ ಪ್ರಕರಣ- ಪತಿಗಾಗಿ ಕಾದಿದ್ದ ಗರ್ಭಿಣಿಗೆ ಶಾಕ್

2 days ago

ಧಾರವಾಡ: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗಾಗಿ ಕಾದು ಕುಳಿತಿದ್ದ ಗರ್ಭಿಣಿಗೆ ಶಾಕ್ ಆಗಿದೆ. ಮಂಗಳವಾರ ನಿರ್ಮಾಣ ಹಂತದ ಕಟ್ಟಡವೊಂದು ಧರೆಗುಳಿದಿದ್ದು, ಕಟ್ಟಡದ ಅವಶೇಷಗಳಡಿ ಅಶೀತ್ ಹಿರೇಮಠ ಸಿಲುಕಿದ್ದರು. ಹೀಗಾಗಿ ಪತಿ ಕಾಣದೆ ಗರ್ಭಿಣಿ ಪತ್ನಿ ಕಂಗಾಲಾಗಿದ್ದರು....

ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಬದುಕಿ ಬಂದ ಶ್ವಾನ

2 days ago

ಧಾರವಾಡ: ಬದುಕಿದೆಯಾ ಬಡ ಜೀವ ಎಂಬಂತೆ, ಧಾರವಾಡದ ಕಟ್ಟಡ ದುರಂತದಲ್ಲಿ ಅವಶೇಷಗಳಡಿ ಸಿಲುಕಿದ್ದ ಸಾಕಿದ ಶ್ವಾನವೊಂದು ಬದುಕಿ ಬಂದಿದೆ. ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ. ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್ ಮಾಲೀಕರೊಬ್ಬರು ಸಾಕಿದ ನಾಯಿ ರೋಬಿ ಕೊನೆಗೂ...

ಧಾರವಾಡದಲ್ಲಿ ಕಟ್ಟಡ ಕುಸಿತ – ಸಾವಿನ ಸಂಖ್ಯೆ 6ಕ್ಕೆ ಏರಿಕೆ

2 days ago

ಧಾರವಾಡ: ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಕಳೆದ ದಿನ ಇಬ್ಬರು ಮೃತಪಟ್ಟಿದ್ದರು. ಆದರೆ ಈಗ ಈ ದುರಂತದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಸಲಿಮ್ ಮಕಾಂದರ್ ಮೃತ ದುರ್ದೈವಿ. ಇನ್ನು ಉಳಿದ ಮೂವರ ಗುರುತು ಪತ್ತೆಯಾಗಿಲ್ಲ....

ಧಾರವಾಡ ದುರಂತ – ಮೂವರನ್ನು ಕಾಪಾಡಿ ಸಾವನ್ನೇ ಗೆದ್ದು ಬಂದ ಕಾರ್ಮಿಕ

3 days ago

ಧಾರವಾಡ: ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಅವಘಡ ಸಂಭವಿಸುವ ವೇಳೆ ಮೂರನೇ ಮಹಡಿಯಲ್ಲಿದ್ದ ಕಾರ್ಮಿಕರೊಬ್ಬರು ತನ್ನ ಜೊತೆ ಇನ್ನೂ ಮೂವರ ಜೀವವನ್ನು ಕಾಪಾಡಿ, ಸಾವನ್ನೇ ಗೆದ್ದು ಬಂದಿದ್ದಾರೆ. ಮೂರನೇ ಅಂತಸ್ತಿನಲ್ಲಿ ಪೇಂಟಿಗ್...