Friday, 17th August 2018

Recent News

2 months ago

ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನನ್ನು ಕರಿ ಇರುವೆಗಳು ಕಚ್ಚಿ-ಕಚ್ಚಿ ತಿಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಂತರಹಳ್ಳಿ ಗ್ರಾಮದ ತಿಮ್ಮರಾಜು ಇರುವೆಗಳ ದಾಳಿಗೆ ಒಳಗಾದ ವ್ಯಕ್ತಿ. ಅದೃಷ್ಟವಶಾತ್ ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಬದುಕುಳಿದಿದ್ದಾನೆ. ತಿಮ್ಮರಾಜು ಕುಡಿದ ಅಮಲಿನಲ್ಲಿ ಅಂತರಹಳ್ಳಿ ಗ್ರಾಮದ ದೇವಾಲಯವೊಂದರ ಮುಂದೆ ನಿದ್ದೆಗೆ ಜಾರಿದ್ದನು. ಈ ವೇಳೆ ತಿಮ್ಮರಾಜು ಮೈ ಮೇಲೆ ಮುತ್ತಿಕೊಂಡು ಕರಿ ಇರುವೆಗಳು, ಕಾಲು, ಕೈ, ಹೊಟ್ಟೆ, ಮೂಗು ಬಾಯಿ, ತಲೆ […]

11 months ago

ಅಂಧರ ಬಾಳಿನ ಆಶಾಕಿರಣ- 7 ವರ್ಷಗಳಲ್ಲಿ 814 ಮಂದಿಯಿಂದ ನೇತ್ರದಾನ ಮಾಡಿಸಿರೋ ಗುರುದೇವ್

ಚಿಕ್ಕಬಳ್ಳಾಪುರ: ಎಲ್ಲಾ ದಾನಗಳಿಗಿಂತ ನೇತ್ರದಾದ ದೊಡ್ಡದು ಅಂತಾರೆ. ಹಾಗೇ ದೊಡ್ಡಬಳ್ಳಾಪುರದಲ್ಲಿ ಒಬ್ಬರು ನೇತ್ರದಾನದ ಅರಿವು ಮೂಡಿಸಿ ಈವರೆಗೂ 800ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ ಮಾಡಿಸಿ ಅಂಧರ ಬಾಳಿನ ಬೆಳಕಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತು ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿರುವ ಗುರುದೇವ ಎಂ.ಬಿ. ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ದೊಡ್ಡಬಳ್ಳಾಪುರ ನಗರದಲ್ಲೇ ಬರೋಬ್ಬರಿ...

ಕಣ್ಣಿಲ್ಲದಿದ್ರೂ ಕೃಷಿಯಲ್ಲಿ ಸಾಧಕ: ಕೆಲಸದಾಳುಗಳಿಗೆ ಇವರೇ ಮಾರ್ಗದರ್ಶಕ

1 year ago

ಚಿಕ್ಕಬಳ್ಳಾಪುರ: ಕೆಲವರಿಗೆ ಎಲ್ಲಾ ಅಂಗಗಳೂ ಚೆನ್ನಾಗಿದ್ರೂ ದುಡಿದು ತಿನ್ನೋಕೆ ಸೋಮಾರಿತನ. ಆದರೆ ನಮ್ಮ ಈ ಪಬ್ಲಿಕ್ ಹೀರೋಗೆ ಎರಡೂ ಕಣ್ಣುಗಳಿಲ್ಲ. ಆದ್ರೂ ಕೃಷಿ ಮಾಡ್ತಿದ್ದಾರೆ. ಮಾದರಿ ರೈತನಾಗಿ ನಾಲ್ಕೈದು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ತಮ್ಮ ಅಂಧತ್ವವನ್ನೇ ಮೆಟ್ಟಿನಿಂತಿದ್ದಾರೆ. ಯಲ್ಲಪ್ಪ ನಮ್ಮ ಪಬ್ಲಿಕ್...

ಸಿಲಿಂಡರ್ ಸ್ಫೋಟ- ಮೂರು ಮನೆಗಳ ಮೇಲ್ಚಾವಣಿ ಕುಸಿತ

1 year ago

ಚಿಕ್ಕಬಳ್ಳಾಪುರ: ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಮನೆಗಳ ಮೇಲ್ಚಾವಣಿ ಕುಸಿದಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದಲ್ಲಿ ನಡೆದಿದೆ. ನಾಗರತ್ನಮ್ಮ ಎಂಬವರ ಮನೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಗಳಲ್ಲಿದ್ದ...

ಕಾಲಿಟ್ಟ ಮನೆಯಲ್ಲೇ ಕಳ್ಳಿಯಾದ ಸೊಸೆ- 1.8 ಕೆಜಿಯಷ್ಟು ಚಿನ್ನ ಕದ್ದವಳು ಜೈಲುಪಾಲು

1 year ago

ದೊಡ್ಡಬಳ್ಳಾಪುರ: ಯಾರೋ ಅಪರಿಚಿತ ಮಹಿಳೆ ತನ್ನನ್ನ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದಳು ಅಂತ ಕಥೆ ಕಟ್ಟಿದ್ದ ಐನಾತಿ ಸೊಸೆ ಇದೀಗ ಜೈಲು ಸೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ. ಫೆಬ್ರವರಿ 19...