Thursday, 20th June 2019

Recent News

20 hours ago

ಹುಟ್ಟಿದ ಮಗು ನೋಡೋಕೆ ಕೊಡ್ಬೇಕು 2 ಸಾವಿರ ಲಂಚ- ದಾವಣಗೆರೆಯಲ್ಲಿದ್ದಾರೆ ಧನದಾಹಿ ಡಾಕ್ಟರ್ಸ್

ದಾವಣಗೆರೆ: ಸರ್ಕಾರಿ ಆಸ್ಪತ್ರೆಗಳು ಅಂದರೆ ಸಾಕು ಕೆಲ ವೈದ್ಯಾಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಅಕ್ಷಯ ಪಾತ್ರೆ ಇದ್ದಂತೆ. ಬಡ ರೋಗಿಗಳಿಗಾಗಿ ಸರ್ಕಾರದಿಂದ ಬರುವ ಅನುದಾನವನ್ನು ನುಂಗಿ ನೀರು ಕುಡಿದಿರುವುದಲ್ಲದೇ, ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಹಣವನ್ನು ಬಡ ರೋಗಿಗಳಿಂದ ಕಸಿಯುತ್ತಿದ್ದಾರೆ. ಹರಿಗೆಯಾದ ನಂತರ ಪೋಷಕರು ಮಗುವನ್ನು ನೋಡಲು ಇಲ್ಲಿ ಹಣ ಇಟ್ಟರೆ ಮಾತ್ರ ಮಗುವಿನ ಮುಖ ನೋಡಲು ಸಾಧ್ಯ. ಅಲ್ಲದೆ ತಾಲೂಕು ಆಸ್ಪತ್ರೆಯ ವಾರ್ಡ್ ಗಳಲ್ಲಿ ಸುವ್ಯವಸ್ಥಿತವಾದ ಆಸನಗಳ ದಿಂಬು ಹಾಗೂ ಮ್ಯಾಟ್ ಗಳ ಖರೀದಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ […]

2 days ago

ಬಿಜೆಪಿಯವರು ಪಾದಯಾತ್ರೆ ಮಾಡಲಿ ಏನಾದ್ರು ರೋಗವಿದ್ರೆ ಹೋಗುತ್ತೆ: ಶಾಮನೂರು ಟೀಕೆ

ದಾವಣಗೆರೆ: ಬಿಜೆಪಿ ಅವರು ಜಿಂದಾಲ್ ವಿರುದ್ಧ ಪಾದಯಾತ್ರೆ ಮಾಡಲಿ, ಅವರಿಗೆ ಯಾವುದಾದರೂ ರೋಗವಿದ್ದರೆ ದೂರವಾಗುತ್ತವೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಮಲ ನಾಯಕರನ್ನು ಟೀಕಿಸಿದ್ದಾರೆ. ಜಿಂದಾಲ್ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರು ಪಾದಯಾತ್ರೆ ಮಾಡಲಿ ಯಾರು ಬೇಡ ಅನ್ನುತ್ತಾರೆ. ಅವರಿಗೇನಾದರೂ ರೋಗವಿದ್ದರೆ ಪಾದಯಾತ್ರೆ ಮಾಡುವುದರಿಂದ ದೂರವಾಗುತ್ತೆ ಬಿಡಿ...

ಒಡೆದ ಮನೆಯಲ್ಲಿ ಸಮ್ಮಿಶ್ರ ಸರ್ಕಾರದ ಸಂಸಾರ – ಶ್ರೀರಾಮುಲು

2 weeks ago

ದಾವಣಗೆರೆ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತೆ, ಒಡೆದ ಮನೆಯಲ್ಲಿ ಮೈತ್ರಿ ಸರ್ಕಾರ ಸಂಸಾರ ನಡೆಸುತ್ತಿದೆ ಎಂದು ದಾವಣಗೆರೆಯಲ್ಲಿ ಬಿಜೆಪಿಯ ಮಾಜಿ ಸಚಿವ ಹಾಲಿ ಶಾಸಕ ಶ್ರೀರಾಮುಲು ವ್ಯಂಗ್ಯ ಮಾಡಿದ್ದಾರೆ. ಹರಿಹರದ ವಾಲ್ಮೀಕಿ ಮಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,...

ನಮ್ಮ ಸಮ್ಮಿಶ್ರ ಸರ್ಕಾರ ಆಕಾಶದಲ್ಲಿ ವಿಮಾನ ಹೋದಂತೆ: ಸತೀಶ್ ಜಾರಕಿಹೊಳಿ

2 weeks ago

ದಾವಣಗೆರೆ: ನಮ್ಮ ಸಮ್ಮಿಶ್ರ ಸರ್ಕಾರ ಆಕಾಶದಲ್ಲಿ ವಿಮಾನ ಹೋದಂತೆ. ಕೆಳಗೆ ನಿಂತು ನೋಡೋರಿಗೆ ಈಗ ಬೀಳುತ್ತೆ, ಆಗ ಬೀಳುತ್ತೆ ಅಂತ ಭಾಸವಾಗುತ್ತದೆ ಆದ್ರೆ ಬೀಳೋದಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿರುವ ಕೈ-ದಳದ ದೋಸ್ತಿ ಸರ್ಕಾರ...

ಅತ್ತೆ ಮನೆ ಧ್ವಂಸ ಮಾಡಿ ಬೆಂಕಿ ಹಚ್ಚಿದ ಕಿರಾತಕ ಅಳಿಯ

2 weeks ago

– 60 ಸಾವಿರ, 30 ಗ್ರಾಂ ಚಿನ್ನದೊಂದಿಗೆ ಪರಾರಿ ದಾವಣಗೆರೆ: ಅತ್ತೆಯ ಮನೆಯನ್ನು ಧ್ವಂಸ ಮಾಡಿ ಬಳಿಕ ಅಳಿಯನೇ ಬೆಂಕಿ ಹಚ್ಚಿದ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಮಾರುತಿ ಸರ್ಕಲ್ ಬಳಿ ನಡೆದಿದೆ. ಇಸ್ಮಾಯಿಲ್ ಅತ್ತೆ ಮನೆ ಧ್ವಂಸ ಮಾಡಿದ...

ದಾವಣಗೆರೆಯ ಚಿತ್ರಮಂದಿರದಲ್ಲಿ ಡಿ-ಬಾಸ್ ಅಭಿಮಾನಿಗಳಿಂದ ಸಂಭ್ರಮಾಚರಣೆ

2 weeks ago

ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ‘ಯಜಮಾನ’ ಚಿತ್ರ 100 ದಿನಗಳ ಪೂರೈಸಿದ್ದು, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಜಿಲ್ಲಾ ದರ್ಶನ್ ಅಭಿಮಾನಿ ಸಂಘ ಈ ಆಚರಣೆ ಮಾಡಿ ಡಿ-ಬಾಸ್ ಗೆ...

ಮಳೆ ಗಾಳಿಗೆ ಗೋಡೆ ಕುಸಿದು 9ರ ಬಾಲಕಿ ಸಾವು

2 weeks ago

ದಾವಣಗೆರೆ/ಬಳ್ಳಾರಿ: ತಡರಾತ್ರಿ ಮಳೆರಾಯನ ಆರ್ಭಟಕ್ಕೆ ಮನೆಯೊಂದರ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಂಡಿನಕೇರಿಯಲ್ಲಿ ನಡೆದಿದೆ. ಗುಂಡಿನಕೇರಿ ನಿವಾಸಿ ಸಹರಾ(9) ಸಾವನ್ನಪ್ಪಿರುವ ಬಾಲಕಿ. ತಡರಾತ್ರಿ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಈ...

ಕರ್ಕಶ ಶಬ್ದ – ಜೆಸಿಬಿಯಿಂದ ಸೈಲೆನ್ಸರ್ ಬಿಚ್ಚಿ ಪುಡಿ ಪುಡಿ

2 weeks ago

ದಾವಣಗೆರೆ: ಕರ್ಕಶವಾಗಿ ಶಬ್ದ ವಾಗುವ ಸೈಲೆನ್ಸರ್ ಅಳವಡಿಕೆ ಮಾಡಿದ ದ್ವಿಚಕ್ರ ವಾಹನಗಳ ಮೇಲೆ ದಾವಣಗೆರೆ ಪೊಲೀಸರು ಸಮರ ಸಾರಿದ್ದಾರೆ. ದಾವಣಗೆರೆ ನಗರದಲ್ಲಿ ಇಂದು ಆರ್‌ಟಿಓ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿಯಾಗಿ ಕಾರ್ಯಚರಣೆ ಮಾಡಿ 70ಕ್ಕೂ ಹೆಚ್ಚು ಬುಲೆಟ್ ಸೇರಿದಂತೆ ಹಲವು ಬೈಕ್...