Tuesday, 20th August 2019

2 months ago

9 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ-ಅಳುತ್ತಿದ್ದಂತೆ ಬಾಯಿಗೆ ಬಟ್ಟೆ ಹಾಕಿ ಕೊಲೆಗೈದ

ಹೈದರಾಬಾದ್: ಕಾಮುಕನೊಬ್ಬ 9 ತಿಂಗಳ ಮಗುವಿನ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿರುವ ಅಮಾನವೀಯ ಘಟನೆ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ. 9 ತಿಂಗಳ ಮಗು ಪೋಷಕರೊಂದಿಗೆ ಮೇಲ್ಚಾವಣೆ ಮೇಲೆ ಮಲಗಿದ್ದಾಗ ಬೇರೆಡೆ ಕರೆದೊಯ್ದು ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಪಕ್ಕದ ಮನೆಯವನೇ ಈ ಕೃತ್ಯವೆಸಗಿದ್ದು, ಮಗು ಅಳಲು ಪ್ರಾರಂಭಿಸುತ್ತಿದ್ದಂತೆ ಬಾಯಿಗೆ ಬಟ್ಟೆ ಹಾಕಿ ಬಿಗಿಯಾಗಿ ಹಿಡಿದ್ದರಿಂದ ಕಂದಮ್ಮ ಸಾವನ್ನಪ್ಪಿರುವ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಗು ಕಳೆದು ಹೋಗಿದೆ ಎಂದು ಪೋಷಕರು […]

2 months ago

ಮೋದಿ ವಿರುದ್ಧ ಹೇಗೆ ಹೋರಾಡ್ಬೇಕು ಅನ್ನೋ ಅನುಮಾನ ಶುರುವಾಗಿದೆ: ಕಾಂಗ್ರೆಸ್ ನಾಯಕ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಗೆ ಹೋರಾಡಬೇಕು ಎಂಬ ಅನುಮಾನ ಶುರುವಾರಿದೆ ಎಂದು ತೆಲಂಗಾಣದ ಕಾಂಗ್ರೆಸ್ ನಾಯಕ ಕೊಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಹೇಳಿದ್ದಾರೆ. ಬಿಜೆಪಿಯು ಮುಂದಿನ ದಿನಗಳಲ್ಲಿ ತೆಲಂಗಾಣದ ವಿವಿಧ ಕಡೆಗಳಲ್ಲಿ ಗುರುತಿಸಿಕೊಳ್ಳಲಿದೆ. ದೇಶದ ಜನತೆ ನರೇಂದ್ರ ಮೋದಿ ಅವರನ್ನು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ಇದು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲು...

ತೆಲಂಗಾಣದಲ್ಲಿ ಕಾಂಗ್ರೆಸ್‍ಗೆ ಬಿಗ್ ಶಾಕ್ – ಟಿಆರ್‌ಎಸ್‌ ಸೇರಲಿದ್ದಾರೆ 12 ಜನ ‘ಕೈ’ ಶಾಸಕರು

3 months ago

ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್‍ನ 12 ಜನ ಶಾಸಕರು ಸಾಮೂಹಿಕವಾಗಿ ಟಿಆರ್‌ಎಸ್‌ ಸೇರಲು ಮುಂದಾಗಿದ್ದಾರೆ. ದಿಢೀರ್ ರಾಜಕೀಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ನಾಯಕರು ಶಾಕ್‍ಗೆ ಒಳಗಾಗಿದ್ದಾರೆ. ಈ ಸಂಬಂಧ ಕಾಂಗ್ರೆಸ್‍ನ 12 ಶಾಸಕರು ವಿಧಾನಸಭಾ ಸ್ಪೀಕರ್ ಪೊಚರಾಮ್ ಶ್ರೀನಿವಾಸ್ ರೆಡ್ಡಿ ಅವರನ್ನು ಭೇಟಿಯಾಗಿ, ತಮ್ಮನ್ನು...

ವೇದಿಕೆ ಮೇಲೆ ಹೊಡೆದಾಡಿಕೊಂಡ ‘ಕೈ’ ನಾಯಕರು: ವಿಡಿಯೋ ನೋಡಿ

3 months ago

ಹೈದರಾಬಾದ್: ಕಾಂಗ್ರೆಸ್ ನಾಯಕರಿಬ್ಬರು ವೇದಿಕೆಯ ಮೇಲೆ ಹೊಡೆದಾಡಿಕೊಂಡ ಪ್ರಸಂಗ ಇಂದು ತೆಲಂಗಾಣದ ರಾಜಧಾನಿ ಹೈದರಾಬಾದ್‍ನಲ್ಲಿ ನಡೆದಿದೆ. ರಾಜ್ಯ ಸರ್ಕಾರದ ವಿರುದ್ಧ ನಡೆಸಿದ್ದ ಪ್ರತಿಭಟನಾ ವೇದಿಕೆಯಲ್ಲಿ ಕಾಂಗ್ರೆಸ್‍ನ ಮುಖಂಡರಾದ ವಿ. ಹನುಮಂತ್ ರಾವ್ ಹಾಗೂ ನಾಗೇಶ್ ಮುಡಿರಾಜ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯವನ್ನು...

ಪಿಯುಸಿಯಲ್ಲಿ 99 ಅಂಕ ಪಡೆದ ವಿದ್ಯಾರ್ಥಿನಿಗೆ 0 ಅಂಕ ನೀಡಿದ್ದ ಶಿಕ್ಷಕಿ ಅಮಾನತು

4 months ago

ಹೈದರಾಬಾದ್: ತೆಲಂಗಾಣದ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಕಳೆದ 10 ದಿನಗಳಲ್ಲಿ 23 ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಮೌಲ್ಯಮಾಪನದಲ್ಲಿ ಶಿಕ್ಷಕಿ ಮಾಡಿದ ಎಡವಟ್ಟೊಂದು ಬೆಳಕಿಗೆ ಬಂದಿದೆ. ತೆಲುಗು ಭಾಷೆ ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ ಶೂನ್ಯ...

ನಿಜಾಮಾಬಾದ್ ಕ್ಷೇತ್ರದಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೊರೆ ಹೋದ ಆಯೋಗ

5 months ago

ಹೈದರಾಬಾದ್: ಇಡೀ ದೇಶವೇ ಇವಿಎಂ ಎಲೆಕ್ಷನ್‍ಗೆ ಸಜ್ಜಾಗುತ್ತಿದ್ದರೆ, ತೆಲಂಗಾಣದ ನಿಜಾಮಾಬಾದ್‍ನಲ್ಲಿ ಮಾತ್ರ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಸ್ಪರ್ಧಿಸುತ್ತಿರುವ ನಿಜಾಮಾಬಾದ್ ಲೋಕಸಭಾ...

ಮೋದಿ ಭಯೋತ್ಪಾದಕನಂತೆ ಕಾಣ್ತಾರೆ – ಜನ ಪ್ರಧಾನಿಯನ್ನ ಕಂಡ್ರೆ ಭಯಪಡ್ತಿದ್ದಾರೆ: ಕಾಂಗ್ರೆಸ್ ಸ್ಟಾರ್ ನಾಯಕಿ

5 months ago

ಹೈದರಾಬಾದ್: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ಟೀಕೆಗಳು ಹೆಚ್ಚಾಗುತ್ತಿದ್ದು, ಈ ಪಟ್ಟಿಗೆ ತೆಲಂಗಾಣದ ಕಾಂಗ್ರೆಸ್ ನಾಯಕಿ, ನಟಿ ವಿಜಯಶಾಂತಿ ಕೂಡ ಸೇರ್ಪಡೆಯಾಗಿದ್ದಾರೆ. ತೆಲಂಗಾಣದ ಶಾಂಶಬಾದ್ ನಗರದಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ...

ಮೋದಿ ಬೆಂಬಲಿಸುವ ನಾಯಕರಿಗೆ ಸಿಬಿಐ ಭಯವಿಲ್ಲ- ಚಂದ್ರಬಾಬು ನಾಯ್ಡು

7 months ago

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಬೆಂಬಲಿಸುವ ಪಕ್ಷದ ನಾಯಕರನ್ನು ರಕ್ಷಿಸುತ್ತಾರೆ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಆಂಧ್ರ ಪ್ರದೇಶದ ಅಮರಾವತಿಯಲ್ಲಿ ಮಾತನಾಡಿ ಅವರು, ಕೆ.ಚಂದ್ರಶೇಖರ್ ರಾವ್ ನಿವಾಸದ ಮೇಲೆ ದಾಳಿ ಮಾಡಲು ಸಿಬಿಐ ತಂಡವು ಹೈದ್ರಾಬಾದ್‍ಗೆ ಬಂದಿತ್ತು....