Tuesday, 22nd October 2019

3 months ago

ಟಿಕ್‍ಟಾಕ್ ಖ್ಯಾತಿಯ ಬಾಲ ನಟಿ ದುರ್ಮರಣ

ತಿರುವನಂತಪುರಂ: ಮಲಯಾಳಂನ ಬಾಲ ನಟಿ, ಟಿಕ್‍ಟಾಕ್ ವಿಡಿಯೋಗಳ ಮೂಲಕ ಖ್ಯಾತಿ ಪಡೆದಿದ್ದ ಆರುಣಿ ಎಸ್. ಕುರುಪ್(9) ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾಳೆ. ಮೃತ ಆರುಣಿ ಅಪರಿಚಿತ ಕಾಯಿಲೆಯಿಂದ ಬಳಲುತ್ತಿದ್ದಳು. ಆ ಕಾಯಿಲೆ ಆಕೆಯ ಮೆದುಳಿನ ಮೇಲೆ ಪರಿಣಾಮ ಬೀರಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಆರುಣಿಗೆ ಜ್ವರ ಮತ್ತು ತಲೆನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆರುಣಿಯನ್ನು ತಿರುವನಂತಪುರದ ಎಸ್.ಐ.ಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರುಣಿಯ […]

1 year ago

ತಿರುವನಂತಪುರಂ ಕ್ಷೇತ್ರದಿಂದ ಮೋಹನ್‍ಲಾಲ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

ತಿರುವಂತನಪುರಂ: ಇತ್ತೀಚೆಗೆ ಸಿನಿಮಾರಂಗದ ನಾಯಕರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಆಂಧ್ರ, ತಮಿಳುನಾಡು ಆಗಿ ಈಗ ಕೇರಳದ ಸರದಿಯಾಗಿದ್ದು, ರಾಜಕೀಯ ರಂಗಕ್ಕೆ ಧುಮುಕಲು ಖ್ಯಾತ ನಟ ಮೋಹನ್ ಲಾಲ್ ಸಜ್ಜಾಗಿದ್ದಾರೆ. ಶೀಘ್ರವೇ ಮಲಯಾಳಂ ನಟ ಮೋಹನ್‍ಲಾಲ್ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಮೋಹನ್ ಲಾಲ್...