Tuesday, 23rd July 2019

Recent News

1 month ago

ನೀರಿನ ಕೊರತೆಯಿಂದ ಶಾಲೆಗಳಿಗೆ ಬೀಗ ಹಾಕಿಲ್ಲ: ತಮಿಳುನಾಡಿನ ಸಿಎಂ

ಚೆನ್ನೈ: ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಶಾಲೆ ಹಾಗೂ ಅತಿಥಿ ಗೃಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಎಂದು ಹೇಳಲಾಗಿತ್ತು. ಆದರೆ ಸಿಎಂ ಎಡಪ್ಪಾಡಿ ಕೆ.ಪಳಿನಿಸ್ವಾಮಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀರಿನ ಕೊರತೆಯಿಂದ ಶಾಲೆ ಹಾಗೂ ಅತಿಥಿ ಗೃಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಎನ್ನುವ ವರದಿ ಸುಳ್ಳು. ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. #Chennai: Tamil Nadu CM Edappadi K.Palanisamy holds high-level meeting with state […]

1 month ago

ಓರ್ವ ವಿದ್ಯಾರ್ಥಿಗಾಗಿ ಪುನರಾರಂಭವಾಯ್ತು 76 ವರ್ಷದ ಹಳೆಯ ಶಾಲೆ

ಕೊಯಂಬತ್ತೂರು: ಹತ್ತಾರು ವಿದ್ಯಾರ್ಥಿಗಳಿದ್ದರು ಅದೆಷ್ಟೋ ಶಾಲೆಗಳನ್ನು ಸರ್ಕಾರ ಮುಚ್ಚಿವೆ. ಆದರೆ ತಮಿಳುನಾಡಿದ ವಾಲ್‍ಪರೈನಲ್ಲಿರುವ ಚಿನ್ನಕಲ್ಲರ್ ನ 76 ವರ್ಷದ ಹಳೆದ ಶಾಲೆವೊಂದನ್ನು ಕೇವಲ ಒಂದೇ ಒಂದು ವಿದ್ಯಾರ್ಥಿಗಾಗಿ ಪುನರಾರಂಭಿಸಲಾಗಿದೆ. ಹೌದು. ಹತ್ತಾರು ಮಕ್ಕಳಿದ್ದರು ಮುಚ್ಚುವ ಈಗಿನ ಕಾಲದ ಶಾಲೆಗಳ ಮಧ್ಯೆ ಕೇವಲ ಒಂದು ವಿದ್ಯಾರ್ಥಿ ಶಾಲೆಯೊಂದು ಪುನರಾರಂಭವಾಗುವುದು ಎಲ್ಲೆಡೆ ಭಾರಿ ಸುದ್ದಿಯಾಗಿದೆ. 2017-18ರ ಶೈಕ್ಷಣಿಕ ವರ್ಷದಲ್ಲಿ...

ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಿ – ಕರ್ನಾಟಕಕ್ಕೆ ಸಿಡಬ್ಲ್ಯೂಸಿ ಆದೇಶ

2 months ago

ನವದೆಹಲಿ: ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಆದೇಶ ನೀಡಿದೆ. ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಕಾವೇರಿ ಕೊಳ್ಳದ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು...

ಮೇಕೆದಾಟು ಬಳಿಕ ತಮಿಳುನಾಡಿನಿಂದ ಮತ್ತೊಂದು ಕಿರಿಕ್

3 months ago

ಬೆಂಗಳೂರು: ಮೇಕೆದಾಟು ಬಳಿಕ ಕೆ.ಸಿ ವ್ಯಾಲಿ ಯೋಜನೆಗೂ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಕೆ.ಸಿ ವ್ಯಾಲಿ ಜೊತೆಗೆ ಕೋಲಾರದ ಮಾಲೂರು ಬಳಿ ನಿರ್ಮಿಸುತ್ತಿರುವ ಮಾರ್ಕೇಂಡೇಯ ಜಲಾಶಯಕ್ಕೂ ಅಡ್ಡಗಾಲು ಹಾಕುತ್ತಿದೆ. ಎರಡು ಯೋಜನೆಗೆ ಅವಕಾಶ ನೀಡದಂತೆ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಇದನ್ನೂ ಓದಿ:...

ಭೀಕರ ಕಾರು ಅಪಘಾತ – 2 ಮಕ್ಕಳು ಸೇರಿ, 7 ಮಂದಿ ಸಾವು

3 months ago

ವೇಲೂರು: ತಮಿಳುನಾಡಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವೇಲೂರು ಬಳಿಯ ಅಂಬುರು ಬಳಿ ನಡೆದಿದೆ. ಕರ್ನಾಟಕ ನೋಂದಣಿ ಸಂಖ್ಯೆ ಹೊಂದಿರುವ ಸ್ವಿಫ್ಟ್ ಡಿಸೈರ್ ಕಾರು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಆಗಿದೆ. ಪರಿಣಾಮ ಕಾರಿನಲ್ಲಿದ್ದ...

ವಿವಾಹವಾದ ಒಂದು ಗಂಟೆಯಲ್ಲೇ ಬೇರೆಯಾದ ನವ ದಂಪತಿ

3 months ago

ಚೆನ್ನೈ: ತಮ್ಮ ಪ್ರೀತಿಗೆ ಪೋಷಕರು ಒಪ್ಪಿಗೆ ನೀಡದ ಪರಿಣಾಮ ದೇವಾಲಯದಲ್ಲಿ ಮದುವೆಯಾಗಿದ್ದ ಜೋಡಿ ಒಂದೇ ಗಂಟೆ ಅವಧಿಯಲ್ಲಿ ಬೇರ್ಪಟ್ಟಿರುವ ಘಟನೆ ತಮಿಳುನಾಡಿನ ವೆಲ್ಲೂರು ಪ್ರದೇಶದಲ್ಲಿ ನಡೆದಿದೆ. ಚೆನ್ನೈ ಮೂಲದ ಬಾಲಾಜಿ (32) ಮುನಿಸಿಪಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ...

ಕಾರ್-ಲಾರಿ ನಡುವೆ ಭೀಕರ ರಸ್ತೆ ಅಪಘಾತ – ಐವರ ದುರ್ಮರಣ

3 months ago

ಬೆಂಗಳೂರು/ತಮಿಳುನಾಡು: ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಐವರು ಮೃತ ಪಟ್ಟಿರುವಂತಹ ದಾರುಣ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಅಲನಕುಲಂ ಬಳಿ ನಡೆದಿದೆ. ಮೃತರನ್ನು ತಿರುನಲ್ವೇಲಿ ಜಿಲ್ಲೆಯ ಕೆಟಿಸಿ ನಗರ ಮೂಲದ ಮುರುಗನ್, ನಿರಂಜನ್, ರಾಜಶೇಖರ್,...

ಶನಿ ದೇವರ ಮೊರೆ ಹೋದ ಟ್ರಬಲ್ ಶೂಟರ್ ಡಿಕೆಶಿ!

3 months ago

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶನಿಕಾಟದಿಂದ ಮುಕ್ತಿ ಪಡೆಯಲು ಶನೇಶ್ವರನ ಮೊರೆ ಹೋಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಡಿ.ಕೆ.ಶಿವಕುಮಾರ್ ಶುಕ್ರವಾರ ಸಂಜೆಯೇ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ತಿರುನಲ್ಲೂರಿನ ಶನೀಶ್ವರ ದರ್ಶನಕ್ಕೆ ತೆರಳಿದ್ದು, ಶನೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು...