Wednesday, 15th August 2018

Recent News

3 days ago

ಯದ್ವಾ ತದ್ವಾ ಕಾರು ಚಲಾಯಿಸಿದ ಸ್ಟಾರ್ ನಟನ ಪುತ್ರ – ನಾಲ್ವರಿಗೆ ಗಂಭೀರ ಗಾಯ

ಚೆನ್ನೈ: ಕಾಲಿವುಡ್ ಸ್ಟಾರ್ ನಟ ವಿಕ್ರಮ್ ಪುತ್ರ ಧ್ರುವ ವಿಕ್ರಮ್ ಯದ್ವಾ ತದ್ವಾ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಚೆನ್ನೈ ನಗರದಲ್ಲಿ ನಡೆದಿದೆ. ಧ್ರುವ ವಿಕ್ರಮ್ ಚಾಲನೆ ಮಾಡುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಆಟೋದಲ್ಲಿದ್ದ ವ್ಯಕ್ತಿ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ರೋಯಾಪಟ್ಟ ಆಸ್ಪತೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು […]

ಮುಜರಾಯಿ ಇಲಾಖೆಯಲ್ಲಿನ ನಿಯಮ ಬದಲಾವಣೆಗೆ ಸ್ಫೂರ್ತಿಯಾಗಿದ್ದ ಕರುಣಾನಿಧಿ!

7 days ago

ಬೆಂಗಳೂರು: ಕರ್ನಾಟಕದ ಮುಜರಾಯಿ ಇಲಾಖೆಯಲ್ಲಿನ ನಿಯಮ ಬದಲಾವಣೆಗೆ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಸ್ಫೂರ್ತಿಯಾಗಿದ್ದಾರೆ. ಹೌದು. ಸಿದ್ದರಾಮಯ್ಯನವರು ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇಗುಲದಲ್ಲಿ ಎಲ್ಲಾ ಜಾತಿಯವರು ಅರ್ಚಕರಾಗಲು ಅವಕಾಶ ಕಲ್ಪಿಸಿ, ಆಗಮ ಶಾಲೆಯನ್ನು ತೆರೆಯಲು ಆದೇಶ ನೀಡಿದ್ದರ ಹಿಂದೆ ಕರುಣಾನಿಧಿಯವರ...

3 ಟನ್ ಹೂವಿನ ಅಲಂಕಾರ: ಕರುಣಾನಿಧಿಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ

7 days ago

ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ವಿಧಿವಶರಾದ ಹಿನ್ನೆಲೆ ತಮಿಳುನಾಡು ಸಂಪೂರ್ಣ ಬಂದ್ ಆಗಿದ್ದು ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಮೂರು ಟನ್ ಹೂವನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಆನೇಕಲ್ ಗಡಿಭಾಗವಾದ ಹೊಸೂರಿನಲ್ಲಿ ಇರುವಂತಹ ಹೂವಿನ ಮಾರುಕಟ್ಟೆಯ ವ್ಯಾಪಾರಿಗಳು ಮೂರು ಟನ್...

ತಮಿಳುನಾಡಿಗೆ ಹೋಗೋ ಎಲ್ಲ ವಾಹನಗಳ ಸಂಚಾರ ಬಂದ್!

7 days ago

ಚಾಮರಾಜನಗರ/ಆನೇಕಲ್: ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಿಂದ ತಮಿಳುನಾಡಿಗೆ ಹೋಗುವ ಎಲ್ಲಾ ವಾಹನಗಳನ್ನು ಪೊಲೀಸರು ಸೋಮವಾರಪೇಟೆ ಹಾಗೂ ಅತ್ತಿಬೆಲೆಯ  ಬಳಿ ತಡೆಹಿಡಿದಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮವಾಗಿ ರಾಜ್ಯದಿಂದ ತಮಿಳುನಾಡಿಗೆ ಹೋಗುತ್ತಿದ್ದ ವಾಹನಗಳನ್ನು ತಡೆಹಿಡಿದಿದ್ದಾರೆ. ಅಲ್ಲದೇ...

ಕ್ರಿಕೆಟ್ ಅಭಿಮಾನಿ ಕರುಣಾನಿಧಿ: ಮೊಮ್ಮಕ್ಕಳ ಜೊತೆ ಆಡುತ್ತಿರುವ ವಿಡಿಯೋ ನೋಡಿ

7 days ago

ಬೆಂಗಳೂರು: ಚಿತ್ರ ಸಾಹಿತಿ, ಪತ್ರಕರ್ತ, ರಾಜಕಾರಣಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕ್ರಿಕೆಟ್ ಅಭಿಮಾನಿಯಾಗಿದ್ದರು. ಇನ್ನು ವಿಶೇಷ ಏನೆಂದರೆ ಭಾರತ ತಂಡದ ಮಹತ್ವದ ಪಂದ್ಯ ಇದ್ದಾಗ ಸಭೆಗಳನ್ನು ರದ್ದು ಮಾಡಿ ಕ್ರಿಕೆಟ್ ವೀಕ್ಷಿಸುತ್ತಿದ್ದರು. 2011 ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ...

ಕನ್ನಡದ ಕಲಾವಿದೆಗೆ ಯಾಕೆ ತೊಂದರೆ ನೀಡ್ತೀರಿ: ಲೀಲಾವತಿ ಪರ ಬರೆದಿದ್ದ ಕರುಣಾನಿಧಿ

1 week ago

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಅವರು ಒಳ್ಳೆಯ ಸಾಹಿತಿ. ಮಾತ್ರವಲ್ಲದೆ ಸಕಲಕಲಾವಲ್ಲಭರಾಗಿದ್ದರು. ಎಲ್ಲಾ ಕಲೆಯಲ್ಲಿಯೂ ಅವರಿದ್ದರು. ಸಾಧ್ಯವಾಗಲ್ಲ ಅನ್ನೋ ವಿಷಯಗಳೇ ಅವರಿಗೆ ಇರಲಿಲ್ಲ ಅಂತ ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ...

ಎಷ್ಟೇ ವಿರೋಧಿಗಳಾಗಿದ್ರೂ ಜಯಲಲಿತಾ, ಕರುಣಾನಿಧಿ ಒಂದು ಮಾತಿಗೆ ಬದ್ಧರಾಗಿದ್ರು

1 week ago

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಮತ್ತು ದಿ.ಕರುಣಾನಿಧಿ ರಾಜಕೀಯ ಬದ್ಧ ವೈರಿಗಳೇ ಎಂದೇ ಭಾರತದ ರಾಜಕಾರಣದಲ್ಲಿ ಗುರುತಿಸಿಕೊಂಡ ನಾಯಕರು. ಆದರೂ ಇಬ್ಬರಲ್ಲಿಯೂ ಒಂದು ಸಾಮ್ಯತೆ ಮಾತ್ರ ತಮಿಳುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ನಮ್ಮ ರಾಜಕೀಯ ಧ್ಯೇಯ, ಉದ್ದೇಶ ಏನೇ ಆಗಿರಲಿ...