Tag: ಡ್ರೋನ್ ಕ್ಯಾಮೆರಾ

  • ಕದಂಬ ನೌಕಾನೆಲೆ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ – ಗುಪ್ತಚರ ಇಲಾಖೆಯಿಂದ ತನಿಖೆ

    ಕದಂಬ ನೌಕಾನೆಲೆ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ – ಗುಪ್ತಚರ ಇಲಾಖೆಯಿಂದ ತನಿಖೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ (Kadamba Naval Base) ಭಾಗದಲ್ಲಿ ರಾತ್ರಿ ಅಪರಿಚಿತ ಡ್ರೋನ್ ಕ್ಯಾಮೆರಾ (Drone Camera) ಹಾರಿಸಲಾಗಿದೆ.

    ನೌಕಾನೆಲೆಯ ಸರಹದ್ದಿನ ಭಾಗದಲ್ಲಿ ನಿಷೇಧವಿದ್ದರೂ ಡ್ರೋನ್ ಹಾರಿಸಿರುವುದು ಹಲವು ಅನುಮಾನ ಮೂಡಿಸಿದೆ.

    ಇತ್ತೀಚೆಗೆ ಹನಿಟ್ರಾಪ್ (Honey Trap) ಮೂಲಕ ಕದಂಬ ನೌಕಾನೆಲೆಯ ಫೋಟೋ ಮತ್ತು ಮಾಹಿತಿಯನ್ನು ಹೊರ ದೇಶದ ಗುಪ್ತಚರ ಸಂಸ್ಥೆಗೆ ನೀಡಿರುವ ಆರೋಪದಡಿ ರಾಷ್ಟ್ರೀಯ ತನಿಖಾ ದಳ(NIA) ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇದರ ಬೆನ್ನಲ್ಲೇ ವಕ್ಕನಳ್ಳಿ ಭಾಗದಿಂದ ಐಎನ್ಎಸ್ ಪತಾಂಜಲಿ ಆಸ್ಪತ್ರೆ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಿದ್ದು ಬೈಕ್ ಅಥವಾ ಸನ್ ರೂಫ್ ಕಾರಿನ ಮೂಲಕ ತೆರಳುತ್ತಾ ಈ ಡ್ರೋನ್ ನಿಯಂತ್ರಣ ಮಾಡಿರುವ ಸಂಶಯ ವ್ಯಕ್ತವಾಗಿದೆ.

    Naval Base Karwar

    ಡ್ರೋನ್ ಹಾರಿಸಿದ ಕುರಿತು ಸ್ಥಳೀಯರೊಬ್ಬರ ಮೊಬೈಲಿನಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅದನ್ನು ನೌಕಾಪಡೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸುಮಾರು 2-3 ಕಿ.ಮೀ ದೂರದಿಂದ ಸೆರೆಯಾಗುವ ನೈಟ್ ವಿಶನ್ ಡ್ರೋನ್ ಬಳಕೆ ಮಾಡಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಪಾಕ್‌ ಸೇರಿ ಇತರ ವಿದೇಶಿ ಏಜೆಂಟರಿಗೆ ನೌಕಾದಳದ ರಹಸ್ಯ ಫೋಟೋ ಹಂಚಿಕೆ – NIAಯಿಂದ ಮೂವರು ವಶಕ್ಕೆ

    ಹೆಚ್ಚಿನದಾಗಿ 600 ಮೀ. ಅಥವಾ 1,200 ಮೀ. ದೂರದವರೆಗೆ ಹಾರಾಡುವ ಸಾಮರ್ಥ್ಯದ ಡ್ರೋನ್ ಸ್ಥಳೀಯವಾಗಿ ಬಳಕೆಯಾಗುವುದು ಸಾಮಾನ್ಯ. ಆದರೆ ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಿದ್ದು ನೌಕಾದಳ ಅಧಿಕಾರಿಗಳು, ಸ್ಥಳೀಯ ಪೊಲಿಸರು ಹಾಗೂ ಗುಪ್ತಚರ ಸಂಸ್ಥೆ ತನಿಖೆಗಿಳಿದಿದೆ.

    ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ನೌಕಾದಳದ ಅಧಿಕಾರಿಗಳು ಅರಣ್ಯ ಇಲಾಖೆ, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ನಾವು ಡ್ರೋನ್‌ ಬಳಸಿಲ್ಲ ಎಂದು ಹೇಳಿವೆ. ಹೀಗಾಗಿ ಈಗ ನೈಟ್ ವಿಷನ್ ಡ್ರೋನ್ ಬಳಸಿದವರು ಯಾರು ಎನ್ನುವ ಬಗ್ಗೆ ತನಿಖೆ ಆರಂಭಿಸಲಾಗಿದೆ.

    ನೌಕಾದಳದ 3ನೇ ಹಂತದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಈಗ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

  • ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್ ಚಿತ್ರೀಕರಣ ನಿಷೇಧ – ಏಕೆ ಗೊತ್ತಾ?

    ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಕ್ಯಾಮೆರಾ, ಡ್ರೋನ್ ಚಿತ್ರೀಕರಣ ನಿಷೇಧ – ಏಕೆ ಗೊತ್ತಾ?

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ (Gopalswami Hills And Temple) ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕ್ಯಾಮೆರಾ ಚಿತ್ರೀಕರಣ ಮತ್ತು ಡೋನ್ (Drone) ಮೂಲಕ ಚಿತ್ರೀಕರಣ ನಡೆಸುವುದಕ್ಕೆ ನಿಷೇಧ ಹೇರಿ ತಹಶೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.

    ಬಂಡೀಪುರದ ಜಿ.ಎಸ್.ಬೆಟ್ಟ ವಲಯದ ಅರಣ್ಯಾಧಿಕಾರಿಗಳು ತಹಶೀಲ್ದಾರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಅವರು ಕ್ಯಾಮೆರಾ (Camera) ಹಾಗೂ ಡ್ರೋನ್‌ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡುವುದಕ್ಕೆ ನಿಷೇಧ ಹೇರಿದ್ದಾರೆ. ಇದನ್ನೂ ಓದಿ: ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ಐಸಿಎಂಆರ್ ಒಪ್ಪಿಗೆ ಸೂಚಿಸಿದೆ: ದಿನೇಶ್ ಗುಂಡೂರಾವ್

    Gopalswami Hills.jpg 2

    ಇತ್ತೀಚೆಗೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು, ಪ್ರವಾಸಿಗರು, ಭೇಟಿ ನೀಡುತ್ತಿದ್ದಾರೆ. ಸಂಜೆ ವೇಳೆಗೆ ದೇವಾಲಯದ ಹತ್ತಿರ ಬರುವ ಕಾಡಾನೆಯ ಬಳಿ ಪ್ರವಾಸಿಗರು ತೆರಳಿ ಛಾಯಾಚಿತ್ರ ತೆಗೆಯುವುದು, ಸೆಲ್ಫಿ ತೆಗೆದು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದು ಮಾಡುತ್ತಿದ್ದಾರೆ. ಇದರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್

    ಅಲ್ಲದೇ ಆನೆಗಳಿಂದ ಸಾರ್ವಜನಿಕರಿಗೆ ಮತ್ತು ಸಾರ್ವಜನಿಕರಿಂದ ಆನೆಗಳಿಗೂ ತೊಂದರೆಯಾಗಬಹುದು. ಹಾಗಾಗಿ ವಲಯ ಅರಣ್ಯಾಧಿಕಾರಿಗಳ ಮನವಿ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಮುತ್ತ ಕ್ಯಾಮೆರಾ ಮತ್ತು ಡ್ರೋನ್‌ ಕ್ಯಾಮೆರಾಗಳ ಮೂಲಕ ಚಿತ್ರೀಕರಣ ಮಾಡುವುದನ್ನ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಹುಳುಕುಗಳು ಶ್ವೇತಪತ್ರದಲ್ಲಿ ಬಯಲು; ಯುಪಿಎ ಅವಧಿ ಕಿಕ್‌ಬ್ಯಾಕ್, ಹಗರಣಗಳ ಕಾಲ: ಅಶ್ವಥ್ ನಾರಾಯಣ್

  • ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಪತ್ತೆ ಮಾಡಲು ಡ್ರೋನ್ ಮೊರೆಹೋದ ಪೊಲೀಸರು

    ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಪತ್ತೆ ಮಾಡಲು ಡ್ರೋನ್ ಮೊರೆಹೋದ ಪೊಲೀಸರು

    ಬೀದರ್: ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ 3 ದಿನಗಳಾದರೂ ಇನ್ನೂ ಪತ್ತೆಯಾಗದ ಕಾರಣ ಬೀದರ್ ಪೊಲೀಸರು (Bidar Police) ಡ್ರೋನ್ (Drone) ಮೊರೆ ಹೋಗಿದ್ದಾರೆ.

    3 ದಿನಗಳ ಹಿಂದೆ ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ಸೇತುವೆ ದಾಟುವಾಗ 25 ವರ್ಷದ ಮಲ್ಲಪ್ಪ ಶರಣಪ್ಪ ಕರೆನವರ್ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ ಗ್ರಾಮದಲ್ಲಿ ಘಟನೆ ವರದಿಯಾಗಿದೆ.

    bidar

    ಇದೀಗ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ಸೂಚನೆಯಂತೆ ಯುವಕನ ಮೃತದೇಹವನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ – ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ!

    ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ 3 ದಿನಗಳಿಂದ ಶೋಧ ಕಾರ್ಯ ಮಾಡಿದರೂ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಗುರುವಾರ ಬೀದರ್ ಪೊಲೀಸ್ ಇಲಾಖೆ ಡ್ರೋನ್ ಮೊರೆ ಹೋಗಿದೆ. ಇದನ್ನೂ ಓದಿ: ಮಂಡ್ಯದ ವಿಸಿ ನಾಲೆಗೆ ಕಾರು ಪಲ್ಟಿ – ಚಾಲಕ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    – ಫೆಬ್ರವರಿ 18, 19ರಂದು ನಿಷೇಧಾಜ್ಞೆ ಜಾರಿ
    – ಅಹಿತಕರ ಘಟನೆ ತಡೆಗೆ ಸಿಟಿಟಿವಿ, ಡ್ರೋನ್ ಕಣ್ಗಾವಲು

    ಕಲಬುರಗಿ: ಇಲ್ಲಿನ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿ (Dargah) ಸ್ಥಾಪನೆಯಾಗಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರದಲ್ಲಿ ಹಿಂದೂಗಳಿಗೆ ಮತ್ತೊಂದು ಗೆಲುವು ಸಿಕ್ಕಿದೆ.

    ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ವಕ್ಫ್ ಟ್ರಿಬುನಲ್ (Karnataka Wakf Tribunal) ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಗಾ ಸಮಿತಿಗೆ ಸೋಲಾಗಿದೆ. ಇದನ್ನೂ ಓದಿ: ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು – ಗುಂಡಿನ ದಾಳಿ

    Highcourt

    ಶಿವರಾತ್ರಿ (MahaShivaratri) ದಿನದಂದೇ ದರ್ಗಾದಲ್ಲಿ ಉರುಸ್ ಕೂಡ ನಡೆಯಬೇಕಿತ್ತು. ಈ ಹಿನ್ನೆಲೆ ಬೆಳಗ್ಗೆ ಮುಸ್ಲಿಮರು, ಮಧ್ಯಾಹ್ನ 2 ಗಂಟೆ ನಂತರ ಹಿಂದೂಗಳು ಪೂಜೆ ನೆರವೇರಿಸುವಂತೆ ಕಳೆದ 4 ದಿನಗಳ ಹಿಂದೆ ಕಲಬುರಗಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶಿಸಿತ್ತು. ಆದರೆ ದರ್ಗಾ ಸಮಿತಿ ಇದನ್ನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನೂ ಓದಿ: ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಸಾವು

    KALABURAGI DARGA 3

    ನ್ಯಾಯಮೂರ್ತಿ ಜೆ.ಎಮ್ ಖಾಜಿ ನೇತೃತ್ವದ ಏಕಸದಸ್ಯ ಪೀಠವು ಟ್ರಿಬುನಲ್ ಕೋರ್ಟ್ ಆದೇಶ ಪಾಲಿಸುವಂತೆ ಆಳಂದ ಲಾಡ್ಲೇ ಮಶಾಕ್ ದರ್ಗಾ ಸಮಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿವಾದಿತ ದರ್ಗಾ ಆವರಣದಲ್ಲಿ ಮುಸ್ಲಿಮರು ಶನಿವಾರ (ಫೆ.18) ಬೆಳಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಉರುಸ್ ಆಚರಿಸಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಿಂದೂಗಳು ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.

    ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ನೇತೃತ್ವದಲ್ಲಿ ಶ್ರೀರಾಮಸೇನೆ (Sri Ram Sena) ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಬಸವರಾಜ್ ಮತ್ತಿಮೂಡ್, ರಾಜಕುಮಾರ ಪಾಟೀಲ್ ತೆಲ್ಕೂರ್, ಸುಭಾಷ್ ಗುತ್ತೆದಾರ್ ಸೇರಿ ಪೂಜೆ ಸಲ್ಲಿಸಲಿದ್ದಾರೆ.

    KALABURAGI DARGA 5

    ನಿಷೇಧಾಜ್ಷೆ ಜಾರಿ: ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ ವರೆಗೆ ಆಳಂದ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಒಬ್ಬರು ಎಸ್ಪಿ, 9 ಡಿವೈಎಸ್ಪಿ, 73 ಪಿಎಸ್‌ಐ, 26 ಸಿಪಿಐ, 90 ಎಎಸ್‌ಐ, 11 ಕೆಎಸ್‌ಆರ್‌ಪಿ ತುಕಡಿ, 4 ಕ್ವಿಕ್ ರೆಸ್ಪಾನ್ಸ್ ಟೀಂ, 5 ಡಿಎಆರ್ ತುಕಡಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಲ್ಲದೇ ದರ್ಗಾ ಸುತ್ತ ಅತ್ಯಾಧುನಿಕ ಸಿಸಿ ಕ್ಯಾಮೆರಾ, 10 ಡ್ರೋನ್ ಕ್ಯಾಮೆರಾಗಳ ಮೂಲಕ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಂದಾನಗರಿಯಲ್ಲಿ ಮೂರು ಚಿರತೆ ಪ್ರತ್ಯಕ್ಷ – ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಹರಸಾಹಸ, ಡ್ರೋನ್ ಕ್ಯಾಮೆರಾ ಬಳಕೆ

    ಕುಂದಾನಗರಿಯಲ್ಲಿ ಮೂರು ಚಿರತೆ ಪ್ರತ್ಯಕ್ಷ – ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಹರಸಾಹಸ, ಡ್ರೋನ್ ಕ್ಯಾಮೆರಾ ಬಳಕೆ

    ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಒಂದಲ್ಲ, ಎರಡಲ್ಲ ಮೂರು ಚಿರತೆಗಳು ಪ್ರತ್ಯಕ್ಷವಾಗಿದ್ದು ಜಿಲ್ಲೆಯ ಮೂರು ದಿಕ್ಕುಗಳಲ್ಲಿ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ.

    BLG CHEETHA 1

    ಚಿರತೆ ಪ್ರತ್ಯಕ್ಷವಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿನ 52 ಶಾಲೆಗಳಿಗೆ ಜಿಲ್ಲಾಡಳಿತ ಇಂದು ರಜೆ ಘೋಷಣೆ ಮಾಡಿತ್ತು. ಇತ್ತ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಬಳಸಿ ಸೆರೆಗೆ ಮುಂದಾಗಿದ್ದರೂ ಪ್ರಯೋಜನವಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿ ಯಡೂರವಾಡಿ, ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಕಬ್ಬಿನ ಗದ್ದೆ ಹಾಗೂ ಬೆಳಗಾವಿ ಜಾಧವ್ ಮಗರ, ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದನ್ನೂ ಓದಿ: 2023ಕ್ಕೆ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಮಾರಾಟ ಬಂದ್

    BLG CHEETHA 1 1

    ಕಳೆದ ಹಲವು ದಿನಗಳಿಂದ ಚಿರತೆ ನಗರದಲ್ಲಿ ಇದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಸೆರೆ ಹಿಡಿಯುವುದೇ ಒಂದು ದೊಡ್ಡ ಸವಾಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯದಲ್ಲಿ 16 ಟ್ರ್ಯಾಪ್ ಕ್ಯಾಮೆರಾ, ಎಂಟು ಬೋನುಗಳನ್ನು ಇರಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆದರೂ ಚಿರತೆ ಸೆರೆ ಸಿಕ್ಕಿಲ್ಲ. ಚಿರತೆ ಸೆರೆ ಸಿಗದ ಹಿನ್ನೆಲೆ ಬೆಳಗಾವಿ ನಗರದ ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ 22 ಸರ್ಕಾರಿ, ಖಾಸಗಿ ಶಾಲೆಗಳು ಹಾಗೂ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಸುತ್ತಮುತ್ತಲಿನ 30 ಶಾಲೆಗೆ ರಜೆ ನೀಡಲಾಗಿದೆ. ಸದ್ಯ ಚಿರತೆ ಸೆರೆಹಿಡಿಯಲು 8ನೇ ದಿನವೂ ಕಾರ್ಯಾಚರಣೆ ಮುಂದುವರಿದಿದ್ದು ಇಂದು ಚಿರತೆ ಪತ್ತೆಗಾಗಿ ಮೂರು ಡ್ರೋನ್ ಕ್ಯಾಮೆರಾ ಮತ್ತು ಮೂವ್ಮೆಂಟ್ ಕ್ಯಾಮೆರಾಗಳನ್ನು ಸಹ ಗಾಲ್ಫ್ ಮೈದಾನದಲ್ಲಿ ಫಿಕ್ಸ್ ಮಾಡಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ರಾಕೇಶ್ ಮೇಲೆ ನನಗೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡ ಸೋನು ಗೌಡ

    ಗೋಕಾಕ್ ಹಾಗೂ ಬೆಳಗಾವಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಗದಗ, ದಾಂಡೇಲಿ, ಭೀಮಗಡ ಅರಣ್ಯ ವಲಯದಿಂದ ತಜ್ಞ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿದ್ದರೂ ಚಿರತೆ ಪತ್ತೆಯಾಗದೇ ಇರುವುದು ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • 30 ವರ್ಷಗಳ ಬಳಿಕ ತುಂಬಿದ ಕೆರೆ – ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    30 ವರ್ಷಗಳ ಬಳಿಕ ತುಂಬಿದ ಕೆರೆ – ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಈ ಬಾರಿ ಭಾರೀ ಮಳೆಯಾಗಿದ್ದು ಜಿಲ್ಲೆಯ ಬಹುತೇಕ ಕೆರೆ ಕುಂಟೆಗಳು ಮೈದುಂಬಿಕೊಂಡಿವೆ. ಈ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

    chikkaballapur

    ಜಿಲ್ಲೆಯ ಜಲಾಶಯ ಜಲಪಾತಗಳು ನಳ ನಳಿಸುತ್ತಿವೆ. ನದಿಗಳಂತೂ ಉಕ್ಕಿ ಭೋರ್ಗೆರೆದು ಹರಿಯುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಕೆರೆ ಸಹ 30 ವರ್ಷಗಳ ನಂತರ ಕೋಡಿ ಹರಿದಿದ್ದು ಜನರಿಗೆ ಸಂತಸ ತಂದಿದೆ. 426 ಎಕರೆ ವಿಶಾಲವಾದ ವಿಸ್ತೀರ್ಣ ಹೊಂದಿರುವ ಈ ಕೆರೆ ತಾಲೂಕಿನಲ್ಲಿ ದೊಡ್ಡದಾದ ಕೆರೆಗಳಲ್ಲಿ ಒಂದಾಗಿದೆ. ಗ್ರಾಮದ ರೈತರ ಜಮೀನುಗಳಿಗೆ ಬೆಳ್ಳೂಟಿ, ಚೌಡಸಂದ್ರ, ಮೇಲೂರು, ಭಕ್ತರಹಳ್ಳಿ, ಕಾಕಚೊಕ್ಕಂಡಹಳ್ಳಿ ಕೆರೆಗಳು ನೀರಾವರಿ ಪ್ರಮುಖ ಮೂಲಗಳಾಗಿದೆ. ಇದನ್ನೂ ಓದಿ: ನಾಯಿ ಮೂತ್ರ ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    chikkaballapur rain 2

    ಈ ಬಾರಿ ನದಿಗಳು ತುಂಬಿರುವುದರಿಂದ ರೈತರಿಗೆ 3-4 ವರ್ಷ ನೀರಿನ ಸಮಸ್ಯೆ ನೀಗಿದಂತಾಗಿದೆ. ಕೆರೆ ಕೋಡಿ ಹರಿದಿರುವುದರಿಂದ ಬೆಳ್ಳೂಟಿ ಚೌಡಸಂದ್ರ ಗ್ರಾಮದ ಕೆರೆ ಏರಿ ರಸ್ತೆ ಸಂಚಾರ ಬಂದ್ ಆಗಿದೆ. ಇನ್ನೂ ಈ ಕೆರೆಯ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡಲು ಆಕರ್ಷಕವಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಉಕ್ಕಿ ಹರಿಯುತ್ತಿದೆ ಪಾಲಾರ್‌ ನದಿ – 19 ಗೇಟ್ ಓಪನ್

    chikkaballapur rain 3

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಗ್ರಾಮ ಪಂಚಾಯತಿ ಸದಸ್ಯ ಸಂತೋಷ್, ಕೆರೆಯನ್ನು ನರೇಗಾ ಯೋಜನೆ ಯಡಿ ಹೊಳೆತ್ತಲಾಗಿತ್ತು. ಕೆರೆಗೆ ಸಂಪರ್ಕಿಸುವ ಕಾಲುವೆಗಳನ್ನು ಮರು ನಿರ್ಮಾಣ ಮಾಡಲಾಗಿತ್ತು. ಪರಿಣಾಮ ಚಿಕ್ಕಬಳ್ಳಾಪುರದ ಕಂದವಾರ, ಅಮಾನಿಗೋಪಾಲಕೃಷ್ಣ ಕೆರೆ, ಜಾತವಾರ, ಕೇಶವಾರ ಕೆರೆಗಳು ತುಂಬಿ ಬೆಳ್ಳೂಟಿ ಕರೆ ಸಹ ಕೋಡಿ ಹರಿದಿದೆ. ಜನರಿಗೆ ಬಹಳಷ್ಟು ಖುಷಿ ತಂದಿದೆ ಅಂತ ಸಂತಸ ಹಂಚಿಕೊಂಡಿದ್ದಾರೆ.

  • ಲಾಕ್‍ಡೌನ್ ನಿಯಮ ಪಾಲನೆಗೆ ಡ್ರೋಣ್ ಕ್ಯಾಮೆರಾ ಕಣ್ಗಾವಲು- ಎಸ್‍ಪಿ ರಾಧಿಕಾ

    ಲಾಕ್‍ಡೌನ್ ನಿಯಮ ಪಾಲನೆಗೆ ಡ್ರೋಣ್ ಕ್ಯಾಮೆರಾ ಕಣ್ಗಾವಲು- ಎಸ್‍ಪಿ ರಾಧಿಕಾ

    ಚಿತ್ರದುರ್ಗ: ಕೊರೊನಾ ಎರಡನೇ ಹಿನ್ನೆಲೆ ಜಿಲ್ಲೆಯಾದ್ಯಂತ 12 ದಿನ ಕಠಿಣ ಲಾಕ್‍ಡೌನ್ ಜಾರಿಗೊಳಿಸಿದರೂ ಜನ ಮಾತ್ರ ಡೋಂಟ್‍ಕೇರ್ ಎನ್ನುತಿದ್ದಾರೆ. ಅನಗತ್ಯವಾಗಿ ಓಡಾಡುತ್ತ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿಸುತಿದ್ದಾರೆ. ಹೀಗಾಗಿ ಎಚ್ಚೆತ್ತಿರುವ ಚಿತ್ರದುರ್ಗ ಪೊಲೀಸ್ ಎಸ್‍ಪಿ ರಾಧಿಕಾ ಡ್ರೋಣ್ ಕ್ಯಾಮೆರಾ ಮೂಲಕ ಲಾಕ್‍ಡೌನ್ ಉಲ್ಲಂಘನೆಯ ದೃಶ್ಯಗಳನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದಾರೆ.

    ctd drone lockdown 8 medium

    ಲಾಕ್‍ಡೌನ್ ವೇಳೆ ಅನಾವಶ್ಯಕವಾಗಿ ರಸ್ತೆಗಿಳಿದು, ಕೊರೊನಾ ಹರಡಲು ಕಾರಣರಾಗುವವರ ಚಲನವಲನವನ್ನು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿದು, ದಂಡ ವಿಧಿಸಿ, ಕೇಸ್ ಧಾಖಲಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಡ್ರೋಣ್ ಕ್ಯಾಮೆರಾ ಸುಮಾರು 5 ಕಿ.ಮೀ. ವರೆಗೆ ನಡೆಯುವ ಎಲ್ಲ ಚಲನವಲನಗಳನ್ನು ಸೆರೆ ಹಿಡಿಯಲಿದ್ದು, ಉತ್ತಮ ಗುಣಮಟ್ಟದ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ಇದರಿಂದಾಗಿ ಲಾಕ್‍ಡೌನ್ ಉಲ್ಲಂಘನೆಗೆ ಬ್ರೇಕ್ ಹಾಕಲು ಇದೊಂದು ಉತ್ತಮ ತಂತ್ರಜ್ಞಾನವಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ, ಲಾಕ್‍ಡೌನ್ ಅವಶ್ಯವಿಲ್ಲ: ಸೋಮಣ್ಣ

    ctd drone lockdown 2 medium

    ಅನವಶ್ಯಕವಾಗಿ ಓಡಾಡುವವರು, ಜೂಜುಕೋರರು ಹಾಗೂ ಲಾಕ್‍ಡೌನ್ ಉಲ್ಲಂಘಿಸುವವರಿಗೆ ಬ್ರೇಕ್ ಹಾಕಲು ಈ ಡ್ರೋಣ್ ಮೂಲಕ ವೀಡಿಯೋ ರೆಕಾರ್ಡ್ ಮಾಡಿ ಮತ್ತೊಮ್ಮೆ ತಪ್ಪಿ ಮಾಡದಂತೆ ಮೊದಲು ಎಚ್ಚರಿಕೆ ನೀಡಲಾಗುವುದು. ಒಮ್ಮೆ ಎಚ್ಚರಿಸಿದ ಬಳಿಕವೂ ಮತ್ತೆ ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ctd drone lockdown 4 medium

  • ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಚಾಮರಾಜನಗರ: ಜಿಲ್ಲೆಯಲ್ಲಿ ಪ್ರವಾಹ ಭೀತಿಯಲ್ಲಿರುವ ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ.

    ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ದಾಸನಪುರ, ಹಳೇಹಂಪಾಪುರ, ಹರಳೆ, ಹಳೇ ಅಣಗಳ್ಳಿ, ಹೊಸ ಅಣಗಳ್ಳಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

    CNG 6

    ಈಗಾಗಲೇ ಜಮೀನುಗಳಿಗೆ ನೀರು ನುಗ್ಗಿ ಅಲ್ಲಲ್ಲಿ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ತುರ್ತು ಸಹಾಯವಾಣಿ ತೆರೆಯಲಾಗಿದೆ.

    CNG 1 2

    ತೊಂದರೆ ಎದುರಾದಲ್ಲಿ ಸಾರ್ವಜನಿಕರು ಉಚಿತ ಕರೆ 100ಕ್ಕೆ ಫೋನ್ ಮಾಡಬಹುದು. ದೂರವಾಣಿ 08226-222398, ವಾಟ್ಸಪ್ ನಂಬರ್ 9480804600 ಈ ನಂಬರ್‌ಗಳಿಗೆ ಫೋನ್ ಮಾಡಿ. ಇಲ್ಲವಾದರೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮಾಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರ ಥಾಮಸ್ ತಿಳಿಸಿದ್ದಾರೆ.

  • ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೇರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸೆಳೆಯುತ್ತಿದೆ.

    ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗಭದ್ರಾ ನದಿಯ ದೃಶ್ಯಗಳು ಛಾಯಾಗ್ರಾಹಕ ಚರಣ್ ಬೊಲೆಂಪಲ್ಲಿ ಅವರು ತಮ್ಮ ಡ್ರೋನ್ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಿಡಿದಿದ್ದಾರೆ. ಗಂಗಾವತಿಯ ಚಿಕ್ಕ ಜಂತಕಲ್ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯು ನೀರಿನಲ್ಲಿ ಮುಳುಗಿರುವ ದೃಶ್ಯ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಕಳೆದ ವರ್ಷವಷ್ಟೇ ಉದ್ಘಾಟನೆ ಆದ ತಾಲೂಕಿನ ಬುಕ್ಕಸಾಗರ-ಕಡೆಬಾಗಿಲು ಬಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯ ದೃಶ್ಯ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ.

    kpl drone

    ಜಿಲ್ಲೆಯ ಜನರು ಇದು ನಮ್ಮ ಸೇತುವೆನಾ ಎಂದುಕೊಳ್ಳುವಂತೆ ಮಾಡಿದೆ. ಇನ್ನೂ ಇತ್ತೀಚೆಗಷ್ಟೆ ರಾಜ್ಯಾದ್ಯಂತ ಸುದ್ದಿ ಮಾಡಿದ ವಿರುಪಾಪುರ ಗಡ್ಡಿ ಬಳಿಯ ದೃಶ್ಯವಂತೂ ಒಂದು ಕ್ಷಣ ಮೈಮರೆಯುವಂತೆ ಮಾಡುತ್ತದೆ. ಶ್ರೀ ಕೃಷ್ಣ ದೇವರಾಯ ಕಾಲದ ಸೇತುವೆಯ ಒಳಗಿಂದ ನೀರು ಧುಮ್ಮಿಕ್ಕಿ ಹರಿಯತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಕಂಡ ಜನರು ಛಾಯಾಗ್ರಾಹಕ ಕಾರ್ಯಕ್ಕೆ ಹೊಗುಳಿಕೆಯ ಸುರಿಮಳೆಗೈದಿದ್ದಾರೆ.

    ತುಂಗಭದ್ರಾ ನದಿ ಹುಕ್ಕಿ ಹರಿಯುವ ವೇಳೆ ಡ್ರೋನ್ ಕ್ಯಾಮೆರಾದ ಮೂಲಕ ಅದ್ಭುತವಾದ ದೃಶ್ಯಗಳನ್ನು ಸೆರೆಹಿಡಿದು ಜನರಿಗೆ ಹೆಲಿಕಾಪ್ಟರ್ ಮೇಲೆ ಕುಳಿತು ನೊಡಿದಂತೆ ಮಾಡಿದ ಚರಣ್ ಬೊಲೆಂಪಲ್ಲಿ ಅವರಿಗೆ ಜನರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

    ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

    ಚಿಕ್ಕಮಗಳೂರು: ಒಂದೇ ಬೆಟ್ಟ-ಗುಡ್ಡ ಆದರೆ ನೋಡೋ ಶೈಲಿ ಮಾತ್ರ ಹತ್ತಾರು. ಒಂದೇ ದಾರಿ, ಕೊಡೋ ಅನುಭವ ಭಿನ್ನ-ವಿಭಿನ್ನ. ಒಂದೇ ಪ್ರಕೃತಿ ಆದ್ರೆ, ಗೋಚರವಾಗೋ ರೀತಿ ನೂರಾರು. ಹೀಗೆ ಡ್ರೋನ್ ಕಣ್ಣಲ್ಲಿ ಸುಂದರ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿದವರು ಎಷ್ಟು ಚಂದ ಪ್ರಕೃತಿಯ ಅಂದ ಎನ್ನುತ್ತಿದ್ದಾರೆ.

    ಹೌದು. ಭಾವನೆಗೆ ಬಿಟ್ಟಂತೆ ಲಕ್ಷಾಂತರ ಕಲ್ಪನೆಗಳು ಇವೆ. ಹೀಗೆ ನೋಡುಗನ ಕಲ್ಪನೆಗಳಿಗೆಲ್ಲಾ ಜೀವ ತುಂಬಿ, ಹಸಿರನ್ನೆ ಮೈದುಂಬಿಸಿಕೊಂಡು ತುಂಬು ಮುತ್ತೈದೆಯಂತೆ ಹಚ್ಚ-ಹಸಿರಿನಿಂದ ಕಂಗೊಳಿಸೋ ಕಾಫಿನಾಡಿನ ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯಾದದ್ದು ಮತ್ತೊಂದಿದ್ಯಾ ಅಂದರೆ, ಇದೆ ಅನ್ನೋರು ಯಾರೂ ಸಿಗಲ್ಲ. ಅದರಲ್ಲೂ, ಮಳೆಗಾಲದಲ್ಲಿ ಮಲೆನಾಡು ನವವಧುವಿನಂತೆ ನೈಸರ್ಗಿಕ ಸೊಬಗನ್ನೆ ಮುಡಿಯ ಮಲ್ಲಿಗೆಯನ್ನಾಗಿಸಿಕೊಂಡಂತೆ ಭಾಸವಾಗುತ್ತೆ.

    ckm mullaiahna giri 1

    ಹೀಗೆ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿನಾಡಿನ ಮುಳ್ಯಯನಗಿರಿ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿಲ್ಲ, ಬದಲಾಗಿ ತನ್ನ ಸೌಂದರ್ಯದಿಂದಲೇ ಅವರನ್ನು ತನ್ನತ್ತ ಬರುವಂತೆ ಆಗ್ರಹಿಸುತ್ತಿದೆ. ಸಮುದ್ರಮಟ್ಟದಿಂದ 6 ಸಾವಿರ ಅಡಿಗೂ ಹೆಚ್ಚು ಎತ್ತರದಲ್ಲಿರೋ ಈ ಪರ್ವತದ ಸವಿಯನ್ನ ಸವಿಯಲು ಗಿರಿಗೆ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಸಮೃದ್ಧ ಮಳೆಯಿಂದ ಗಿರಿಶಿಖರಗಳಲ್ಲಿ ಹಸಿರು ಹಾಸಿದೆ. ಗಿಡ ಮರಗಳು ಚಿಗುರೊಡೆದು ಹಸಿರಿನಿಂದ ನಳನಳಿಸುತ್ತಿದ್ದರೆ, ಹಕ್ಕಿ-ಪಕ್ಷಿಗಳ ನಿನಾದ ಕೇಳೋರೆ ಪುಣ್ಯವಂತರು.

    ckm mullaiahna giri 2

    ಅಂತಹಾ, ಅದ್ಭುತ, ಅನನ್ಯ ಪ್ರಕೃತಿಯ ಸೌಂದರ್ಯವನ್ನು ಹೇಳೋಕೆ ಪದ ಸಾಲದು. ಬರೆಯೋಕೆ ಪುಟ ಸಾಲದಂತ ಮುಳ್ಳಯ್ಯನಗಿರಿಯ ದೃಶ್ಯ ವೈಭವದ ಕಾವ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕೃತಿಯ ನೈಜ ಚಿತ್ರಣಕ್ಕೆ ಸರಿಸಾಟಿ ಇಲ್ಲದಂತಾಗಿದೆ. ಈ ವೀಡಿಯೋ ನೋಡಿದವರು ನಿಜಕ್ಕೂ ನಿಸರ್ಗದ ಸುಂದರ ನೋಟಕ್ಕೆ ಮನ ಸೋತಿದ್ದಾರೆ.