Wednesday, 18th September 2019

Recent News

8 hours ago

ಮನಪರಿವರ್ತನಾ ಕೇಂದ್ರವಾದ ಚಿತ್ರದುರ್ಗ ಜೈಲು- ಅಧೀಕ್ಷಕ ಲೋಕೇಶ್ ಪಬ್ಲಿಕ್ ಹೀರೋ

-ದಕ್ಷಿಣ ಭಾರತದಲ್ಲಿಯೇ ಬೆಸ್ಟ್ ಜೈಲು ಚಿತ್ರದುರ್ಗ: ಸಾಮಾನ್ಯವಾಗಿ ಜೈಲು ಅಂದರೆ ಕೈದಿಗಳ ಪಾಲಿನ ಸೆರೆಮನೆ. ಹೀಗಾಗಿ ತಪ್ಪು ಮಾಡಿ ಜೈಲು ಸೇರಿದವರಿಗೆ ಅಲ್ಲಿ ನರಕಯಾತನೆ ತಪ್ಪಿದ್ದಲ್ಲ ಅನ್ನೋ ಮಾತುಗಳಿವೆ. ಆದರೆ ಕೋಟೆನಾಡು ಚಿತ್ರದುರ್ಗದ ಕಾರಾಗೃಹ ಮಾತ್ರ ಕೈದಿಗಳ ಮನಪರಿವರ್ತನಾ ಕೇಂದ್ರವೆನಿಸಿ, ಅವರ ಪಾಲಿಗೆ ನೆಮ್ಮದಿಯ ಸ್ವರ್ಗವೆನಿಸಿದೆ. ಇದಕ್ಕೆ ಕಾರಣ ಜೈಲಿನ ಅಧೀಕ್ಷಕ ಲೋಕೇಶ್. ಹೌದು. ಚಿತ್ರದುರ್ಗ ಜಿಲ್ಲಾ ಕಾರಗೃಹದ ಅಧೀಕ್ಷಕ ಲೋಕೇಶ್, ಸಿಬ್ಬಂದಿ ಹಾಗೂ ಕೈದಿಗಳ ಪರಿಶ್ರಮದಿಂದ ಈ ಜೈಲು ದಕ್ಷಿಣ ಭಾರತದಲ್ಲೇ ಬೆಸ್ಟ್ ಎನಿಸಿದೆ. ಕೋಟೆನಾಡಿನ […]

6 days ago

ಜೈಲಿನಲ್ಲೂ ಹಗಲು ದರೋಡೆ – ಕೈದಿಗಳನ್ನು ನೋಡಲು ಲಂಚ

ಚಾಮರಾಜನಗರ: ಜಿಲ್ಲೆಯಲ್ಲಿರುವ ಜೈಲಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇಲ್ಲಿನ ಉಪಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳನ್ನು ನೋಡಲು ಹಣ ಕೊಡಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚಕೊಟ್ಟರೆ ಮಾತ್ರ ಕೈದಿಗಳನ್ನು ನೋಡಲು ಅವಕಾಶ ನೀಡಲಾಗುತ್ತೆ. ಇಲ್ಲಿನ ಜೈಲಧಿಕಾರಿಗಳು ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುತ್ತಾರೆ. ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುವ ದೃಶ್ಯಗಳು ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿವೆ. ಈ ಉಪಕಾರಾಗೃಹದಲ್ಲಿ...

ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

2 weeks ago

– ಮಟನ್ ಸಾರು ಸವಿದ ಕೈದಿಗಳು ಪಾಟ್ನಾ: ಕೊಲೆ ಅಪರಾಧಿಯೊಬ್ಬ ಬಿಹಾರದ ಜೈಲಿನೊಳಗೆ ಕೇಕ್ ಕಟ್ ಮಾಡಿ ಭರ್ಜರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಂಟು ತಿವಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಪರಾಧಿಯಾಗಿದ್ದು, ಈತ...

ಸಂಪುಟ ವಿಸ್ತರಣೆ ವಿಳಂಬ – ಜೈಲು ಹಕ್ಕಿಗಳಿಗೆ ಇಲ್ಲ ಬಿಡುಗಡೆ ಭಾಗ್ಯ

1 month ago

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದೆ ಇರುವ ಬಿಸಿ ಕಾರಾಗೃಹದಲ್ಲಿನ ಜೈಲು ಹಕ್ಕಿಗಳಿಗೂ ಕೂಡ ತಟ್ಟಿದೆ. ಸನ್ನಡತೆ ಆಧಾರದ ಮೇಲೆ ಆಗಸ್ಟ್ 15ರಂದು ಜೈಲುವಾಸದಿಂದ ಹೊರಬರಬೇಕಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಸುಮಾರು 72ಕ್ಕೂ ಹೆಚ್ಚು...

ಮ್ಯಾಗಜಿನ್ ಫೋಟೋ ನೋಡಿ ‘ಅವಳಲ್ಲ ಅವನ’ ಮೇಲೆ ಕೈದಿಗಾಯ್ತು ಲವ್

2 months ago

ಗಾಂಧಿನಗರ: ಕೈದಿಯೋರ್ವನಿಗೆ ತೃತೀಯ ಲಿಂಗಿ ಮೇಲೆ ಲವ್ ಆಗಿದ್ದು, ತನ್ನೊಂದಿಗೆ ಬರುವಂತೆ ಆಕೆಗೆ ಜೈಲಿನಿಂದಲೇ ಕಿರುಕುಳ ನೀಡುತ್ತಿರುವ ಘಟನೆ ವಡೋದರದ ನವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೂರತ್ ಲಾಜಪೋರ್ ಜೈಲಿನಿಂದಲೇ ತೃತೀಯ ಲಿಂಗಿಗೆ ಕೈದಿ ಕಿರುಕುಳ ನೀಡಿದ್ದಾನೆ. ಆರೋಪಿ ಶಾಕಿರ್...

ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

2 months ago

ನವದೆಹಲಿ: ಮಾಜಿ ಗವರ್ನರ್ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಕೊಲೆಗೈದು ಜೈಲುಪಾಲಾಗಿರುವ ಪತ್ನಿ ಅಪೂರ್ವ ಶುಕ್ಲಾ ಜೈಲಿನಲ್ಲಿ ಕಾರ್ಡ್ ಮೂಲಕ ಭವಿಷ್ಯ ಹೇಳುವ ಕಲೆಯನ್ನು ಕಲಿಯುತ್ತಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಸ್ತಿಗಾಗಿ ಪತಿಯನ್ನೇ ಕೊಲೆ ಮಾಡಿದ್ದ ಅಪೂರ್ವ ಸದ್ಯ ತಿಹಾರ್...

ಸ್ನೇಹಿತನನ್ನೆ ಕೊಲೆಗೈದಿದ್ದ ವಿಚಾರಣಾಧೀನ ಕೈದಿ ಸಾವು

3 months ago

ರಾಯಚೂರು: ಸ್ನೇಹಿತನನ್ನೇ ಕೊಲೆಗೈದ ಆರೋಪ ಹೊತ್ತಿದ್ದ ವಿಚಾರಣಾಧೀನ ಕೈದಿಯೊಬ್ಬ ಹೃದಯಾಘಾತದಿಂದ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕೊಲೆ ಪ್ರಕರಣದ ಆರೋಪಿ ಶಫಿವುದ್ದೀನ್( 30) ಮೃತ ಕೈದಿ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೆ ಕೊಲೆ ಮಾಡಿದ ಆರೋಪದಲ್ಲಿ ಶಫಿವುದ್ದೀನ್ ಜೈಲು ಪಾಲಾಗಿದ್ದನು. ಭಾನುವಾರ ಬೆಳಗ್ಗೆ ಎಸಿಡಿಟಿ...