Recent News

1 month ago

ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ನಗ್ನಳಾಗಿ ಓಡಿದ ಬಾಲಕಿ

ಜೈಪುರ: ಮೂವರು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಬಾಲಕಿ ಅರ್ಧ ಕಿ.ಮೀವರೆಗೂ ನಗ್ನಳಾಗಿ ಓಡಿದ ಘಟನೆ ರಾಜಸ್ಥಾನದ ಬಿಲ್‍ವಾರಾದಲ್ಲಿ ನಡೆದಿದೆ. ಬಾಲಕಿ ತನ್ನ ಸಹೋದರ ಸಂಬಂಧಿ ಹಾಗೂ ಸಹೋದರಿ ಜೊತೆ ಜಾತ್ರೆಯಿಂದ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮೂವರು ಯುವಕರು ಅವರನ್ನು ಅಡ್ಡ ಹಾಕಿದ್ದಾರೆ. ಯುವಕರನ್ನು ನೋಡುತ್ತಿದ್ದಂತೆ ಬಾಲಕಿಯ ಜೊತೆಯಲ್ಲಿ ಇದ್ದವರು ಓಡಿ ಹೋಗಿದ್ದಾರೆ. ಆದರೆ ಯುವಕರು ಬಾಲಕಿಯನ್ನು ಅಪಹರಿಸಿ ಮರುಭೂಮಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ. ಬಾಲಕಿಯನ್ನು ಅಪಹರಿಸುತ್ತಿದ್ದಂತೆ ಆಕೆಯ ಸಹೋದರ ಹತ್ತಿರದಲ್ಲಿದ್ದ ಮಾರ್ಕೆಟ್‍ಗೆ ಓಡಿ […]

2 months ago

ಪ್ರವಾಹದ ನಡುವೆ ಜಾತ್ರೆ ನೆರವೇರಿಸಿದ ಗ್ರಾಮಸ್ಥರು

ಬಾಗಲಕೋಟೆ: ಪ್ರವಾಹದ ಮಧ್ಯೆಯೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ರಾಮಲಿಂಗೇಶ್ವರ ಜಾತ್ರೆ ನಡೆಯಿತು. ಈ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಜಾತ್ರೆ ನಡೆಯಲ್ಲ ಎಂದು ಎಲ್ಲರೂ ಎಂದುಕೊಂಡಿದ್ದರು. ಆದರೆ ಆ ಜನರಿಗೆ ದೇವರ ಮೇಲೆ ಇರುವ ಭಕ್ತಿಗೆ ಪ್ರವಾಹದ ನೀರು ಲೆಕ್ಕಕ್ಕೆ ಬರಲಿಲ್ಲ. ತಮ್ಮ ನೋವು ನುಂಗಿಕೊಂಡು...

ರಥಕ್ಕೆ ಹೂವಿನ ಹಾರ ಹಾಕೋ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಬಡಿದಾಟ!

6 months ago

ಕೊಪ್ಪಳ: ರಥಕ್ಕೆ ಹೂವಿನ ಹಾರ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ, ಆರು ಜನ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದೆ. ಚಳ್ಳಾರಿ ಗ್ರಾಮದಲ್ಲಿ ಇಂದು ದುರಗಮ್ಮ ಹಾಗೂ ದ್ಯಾಮಮ್ಮನ ಜಾತ್ರೆ ನಡೆದಿತ್ತು. ಜಾತ್ರೆಯ ನಿಮಿತ್ತ ಕುರುಬ...

ಜಾತ್ರೆಯಲ್ಲಿ ಮುಕ್ಕಾಲು ಕೆಜಿ ಬಂಗಾರದ ಸರ ಧರಿಸಿ ಗಮನ ಸೆಳೆದ ಗೋಲ್ಡನ್ ಸಹೋದರರು!

6 months ago

ಚಿಕ್ಕಬಳ್ಳಾಪುರ: ಬಂಗಾರ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಮಹಿಳೆಯರಿಗಂತೂ ಇನ್ನಿಲ್ಲದ ಇಷ್ಟ. ಆದರೆ ಸಹೋದರಿಬ್ಬರು ಮೈ ಮೇಲೆ ಧರಿಸಿದ ಮಣಗಟ್ಟದ ಬಂಗಾರ ಜನಾಕರ್ಷಣೆ ಪಡೆದ ಪ್ರಸಂಗ ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದಲ್ಲಿ ನಡೆಯಿತು. ಏಳು ವರ್ಷಗಳಿಗೆ ಒಮ್ಮೆ ನಡೆಯುವ ಬೀರೇಶ್ವರ,...

ಮನೆಯ ಸಜ್ಜ ಮುರಿದು ಬಿದ್ದು 30 ಜನರಿಗೆ ಗಾಯ

6 months ago

ತುಮಕೂರು: ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ವೀಕ್ಷಿಸಲು ಭಕ್ತರು ನಿಂತಿದ್ದ ಬಿಲ್ಡಿಂಗ್ ಸಜ್ಜ ಕಳಚಿ ಬಿದ್ದು 30 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. ದೇಶದ ಅತೀ ದೊಡ್ಡ ಅಗ್ನಿಕೊಂಡ ಎಂದು ಪ್ರಸಿದ್ಧಿಯಾಗಿರುವ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕೊಂಡ...

ನಿಖಿಲ್ ಎಲ್ಲಿದ್ದೀಯಪ್ಪ – ಜಾತ್ರೆಯಲ್ಲಿ ಯುವಕರಿಂದ ಘೋಷಣೆ

6 months ago

ಬೆಳಗಾವಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ಡೈಲಾಗ್ ಸಖತ್ತಾಗಿ ಟ್ರೋಲ್ ಆಗುತ್ತಿದ್ದು, ಸ್ವತಃ ಸಿಎಂ ಕುಮಾರಸ್ವಾಮಿ ಅವರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ಆದರೂ ಜಿಲ್ಲೆಯಲ್ಲಿ ನಡೆದ ಜಾತ್ರೆಯಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಯುವಕರು ಘೋಷಣೆ ಕೂಗಿದ್ದಾರೆ. ಜಿಲ್ಲೆಯ ರಾಮದುರ್ಗ...

ಅಗ್ನಿಕೊಂಡದಲ್ಲಿ ಎರಡು ಬಾರಿ ಬಿದ್ದ ಭಕ್ತ – ರಕ್ಷಣೆ ಮಾಡಲು ಹೋದ 7 ಮಂದಿಗೆ ಗಾಯ

7 months ago

ಬೆಂಗಳೂರು: ಪ್ರಖ್ಯಾತ ಕುದೂರಮ್ಮ ದೇವಿಯ ಜಾತ್ರ ಮಹೋತ್ಸವದಲ್ಲಿ ಭಕ್ತರು ಅಗ್ನಿಕೊಂಡ ಹಾದು ಹೋಗುವಾಗ, ಹರಕೆ ಹೊತ್ತಿದ್ದ ಭಕ್ತರು ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಕುದೂರಿನಲ್ಲಿ ನಡೆದಿದೆ. ಸ್ಥಳೀಯ ರಮೇಶ್ ಕಾಲು ಎಡವಿ ಬಿದ್ದು ಬೆಂಕಿಯಲ್ಲಿ ತೀವ್ರ ಗಾಯಗೊಂಡಿದ್ದಾರೆ....

ನರಸಿಂಹಸ್ವಾಮಿ ಜಾತ್ರೆಗೆ ವಿಘ್ನವಾದ ಅರ್ಚಕರ ಜಗಳ – ಇಬ್ಬರು ಅರ್ಚಕರ ಜಗಳದಿಂದ ಹೈರಾಣಾದ ಭಕ್ತರು!

7 months ago

ಚಿಕ್ಕಬಳ್ಳಾಪುರ: ಇತಿಹಾಸ ಪುಣ್ಯ ಪ್ರಸಿದ್ಧ ನರಸಿಂಹಸ್ವಾಮಿ ದೇವಸ್ಥಾನದ ಪೂಜೆ ವಿಚಾರದಲ್ಲಿ ಅಲ್ಲಿರುವ ಅರ್ಚಕರಿಬ್ಬರ ಜಗಳ ಮಾಡಿಕೊಂಡಿದ್ದು, ನಾನ್ಯಾಕೆ ಮಾಡಲಿ ಅಂತ ಒಬ್ಬರಿಗೊಬ್ಬರು ಮುನಿಸಿಕೊಂಡು ಜಾತ್ರೆ ಹಾಗೂ ರಥೋತ್ಸವ ಮಾಡದೆ ಉದ್ದಟತನ ಮಾಡಿದಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಬಾರ್ಲಹಳ್ಳಿ ಹಾಗೂ...