Wednesday, 16th January 2019

7 days ago

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗೆ ಪಣ ತೊಟ್ಟಿದ್ದಾರೆ ಸಿಇಒ ರವೀಂದ್ರ

ಚಿತ್ರದುರ್ಗ: ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ರಾಜ್ಯ ಸರ್ಕಾರ ಕನಸು ಕಂಡಿದೆ. ಎಲ್ಲಾ ಕಡೆ ಇದು ಪರಿಣಾಮಕಾರಿಯಾಗಿ ಜಾರಿಗೆ ಬರ್ತಿಲ್ಲ. ಆದರೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಒ ರವೀಂದ್ರ ಅವರು ಈ ಅಭಿಯಾನದಲ್ಲಿ ಯಶಸ್ವಿಯಾಗಿಸಿ ಇಂದು ಪಬ್ಲಿಕ್ ಹೀರೋ ಆಗಿದ್ದಾರೆ. ಹೌದು, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಓ ರವೀಂದ್ರ ಅವರು ತಮಟೆ ಬಾರಿಸಿಕೊಂಡು ಮೆರವಣಿಗೆ ಹೊರಟು ಮಹಿಳೆಯರಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಿ, ಸರ್ಕಾರ ಕಂಡ ಬಯಲು ಬಹಿರ್ದೆಸೆ ಮುಕ್ತ ರಾಜ್ಯದ ಕನಸನ್ನು ನನಸಾಗುವ ಹಾದಿಯಲ್ಲಿ ಸಾಗುತ್ತಿದ್ದಾರೆ. […]

2 months ago

ಪಟಾಕಿಯಿಂದ ಪ್ರಾಣಿಗಳ ರಕ್ಷಣೆಗೆ ವಿಭಿನ್ನ ಅಭಿಯಾನ ಶುರು ಮಾಡಿದ ಬೆಂಗ್ಳೂರಿನ ಯುವತಿ

ಬೆಂಗಳೂರು: ಬೆಳಕಿನ ಚಿತ್ತಾರ ದೀಪಾವಳಿಗೆ ಅದೆಷ್ಟೇ ಜಾಗೃತಿ ಮೂಡಿಸಿದ್ರೂ ಪಟಾಕಿಗಳ ಅಬ್ಬರ ಹೆಚ್ಚಾಗಿರುತ್ತದೆ. ಪಟಾಕಿ ಹಚ್ಚುವವರಿಗೆ ಸಡಗರ. ಆದರೆ ಸ್ಫೋಟಕ ಶಬ್ಧಕ್ಕೆ ಪ್ರಾಣಿಗಳು ಬೆದರುತ್ತೆ. ನಮಗಿಂತ ಹತ್ತು ಪಟ್ಟು ಹೆಚ್ಚು ಶಬ್ಧ ಅವುಗಳ ಕಿವಿಗೆ ಅಪ್ಪಳಿಸೋದ್ರಿಂದ ಪಟಾಕಿ ಶಬ್ಧ ಅವುಗಳಿಗೆ ಹಾನಿಯಾಗುತ್ತೆ. ಇದಕ್ಕಾಗಿ ಬೆಂಗಳೂರು ಯುವತಿಯೊಬ್ಬರು ಪ್ರಾಣಿಗಳ ರಕ್ಷಣೆಗೆ ವಿಭಿನ್ನ ಅಭಿಯಾನ ಶುರು ಮಾಡಿದ್ದಾರೆ. ಬೆಂಗಳೂರಿನ...

ಮಾದಕ ವ್ಯಸನ ವಿರುದ್ಧ ಜಾಗೃತಿ ಮೂಡಿಸಲು 12 ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಈಶಪ್ರಿಯತೀರ್ಥ ಸ್ವಾಮೀಜಿ

5 months ago

ಉಡುಪಿ: ಯುವ ಜನಾಂಗ ಮಾದಕ ವ್ಯಸನದಿಂದ ದೂರವಾಗಬೇಕು ಎಂಬ ಉದ್ದೇಶದಿಂದ ಉಡುಪಿಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವೃತಾಚರಣೆಯ ನಡುವೆ 12 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಉಡುಪಿಯಿಂದ ಮಣಿಪಾಲ- ಮಣಿಪಾಲದಿಂದ ಉಡುಪಿಯವರೆಗೆ ಪಾದಯಾತ್ರೆ ನಡೆಸುವ ಮೂಲಕ ಯುವಜನರಲ್ಲಿ `ಸೇ...

ರಸ್ತೆಗೆ ಇಳಿದು ಸವಾರರಿಗೆ ದಂಡ ಹಾಕಿದ್ರು ನ್ಯಾಯಾಧೀಶೆ!

5 months ago

ದಾವಣಗೆರೆ: ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುವ ಸವಾರರನ್ನು ಪೊಲೀಸರು ಹಿಡಿದು ಜಾಗೃತಿ ಮೂಡಿಸಿ ದಂಡ ಹಾಕುವುದು ಸರ್ವೆ ಸಾಮಾನ್ಯ. ಆದರೆ ಹರಪ್ಪನಹಳ್ಳಿ ತಾಲೂಕಿನಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಲು ನ್ಯಾಯಾಧೀಶೆಯೊಬ್ಬರು ರಸ್ತೆಗಿಳಿದು ಹೆಲ್ಮೆಟ್ ರಹಿತ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಕಳೆದ 15...

ತನ್ನ ಬ್ಯೂಟಿ, ಆರೋಗ್ಯದ ರಹಸ್ಯ ಬಿಚ್ಚಿಟ್ಟ ಅನುಷ್ಕಾ ಶರ್ಮಾ!

6 months ago

ಮುಂಬೈ: ಮೂರು ವರ್ಷಗಳಿಂದ ನಾನು ಸಸ್ಯಹಾರಿ ಆಗಿದ್ದೇನೆ. ಇದು ನನ್ನ ಜೀವನದಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ. ಅನುಷ್ಕಾ ಪೇಟಾ(ಪೀಪಲ್ ಫಾರ್ ದಿ ಎತಿಕಲ್ ಟ್ರೀಟ್‍ಮೆಂಟ್ ಆಫ್ ಆನಿಮಲ್ಸ್) ಜಾಗೃತಿ ಮೂಡಿಸುತ್ತಿದ್ದಾರೆ. ಈ ಜಾಹೀರಾತಿನಲ್ಲಿ...

ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಚಾರಿ ಪೊಲೀಸರು!

6 months ago

ಬೆಂಗಳೂರು: ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ಬೆಳ್ಳಂಬೆಳ್ಳಗ್ಗೆ ವಿದ್ಯಾರ್ಥಿಗಳು ಹಾಗೂ ಮ್ಯಾಜಿಕ್ ಮ್ಯಾನ್‍ಗಳ ಜೊತೆ ರಸ್ತೆಗಿಳಿದ್ರು. ದಿನವಿಡೀ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದವರನ್ನು ಅಡ್ಡಗಟ್ಟಿ ಕ್ರಮಗೈಗೊಳ್ಳುತ್ತಿದ್ದ ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ವಿಭಿನ್ನವಾಗಿ ವಾಹನ ಸವಾರರ ಮನಗೆಲ್ಲುವ...

ಹೆಲ್ಮೆಟ್ ಧರಿಸುವಂತೆ ಸಂಚಾರ ಪಾಠ ಬೋಧಿಸಿದ ವಿಘ್ನ ನಿವಾರಕ ಗಣೇಶ!

6 months ago

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆಗಿಳಿದ ವಿಘ್ನ ನಿವಾರಕ ಗಣೇಶ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಸಂಚಾರ ಪಾಠ ಬೋಧಿಸಿದ್ದಾನೆ. ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿರ್ವಾಹಣೆ ದಿನಾಚರಣೆ ಅಂಗವಾಗಿ ಮೈಸೂರಿನ ಸಂಚಾರಿ ಪೊಲೀಸರು ಆಯೋಜಿಸಿದ್ದ ವಿಭಿನ್ನ ಹೆಲ್ಮೆಟ್ ಜಾಗೃತಿ ಕುರಿತು...

ಹೆಣ್ಣು ಮಕ್ಕಳಿಗಾಗಿ ಮಿಡಿಯಿತು ದರ್ಶನ್ ಮನ- ಮಾಡಿದ್ದಾರೆ ಮಹತ್ವದ ಕೆಲಸ!

6 months ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಬಗ್ಗೆ ಕಾಳಜಿ ಮೂಡಿಸೋಕೆ ಮುಂದಾಗಿದ್ದು, ಇದೀಗ `ಹೆಣ್ಣು ಭ್ರೂಣ ಹತ್ಯೆ ಮಹಾಪಾಪ’ ಬಗ್ಗೆ ಜಾಗೃತಿ ಮೂಡಿಸೋಕೆ ತಯಾರಾಗಿದ್ದಾರೆ. ಹೆಣ್ಣು ಶಿಶು ಹತ್ಯೆಯನ್ನು ಖಂಡಿಸಿ ತಯಾರಾಗಿರುವ ಕಿರುಚಿತ್ರವೊಂದಕ್ಕೆ...