Friday, 23rd August 2019

Recent News

2 weeks ago

ನಜೀರ್ ಅಹ್ಮದ್ ನಿವಾಸದಲ್ಲಿ ‘ಕೈ’ ನಾಯಕರಿಗೆ ಭರ್ಜರಿ ಬಕ್ರೀದ್ ಬಾಡೂಟ

ಬೆಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಿ ಜನರು ತುತ್ತು ಅನ್ನಕ್ಕಾಗಿ ಪರಡಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟ ಕೇಳ ಬೇಕಾದ ನಾಯಕರು ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಇಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ  ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಹ್ವಾನವನ್ನು ನೀಡಿದ್ದು, ಹಬ್ಬದ ಸಂಭ್ರಮದಲ್ಲಿ ಭಾಗಹಿಸಿದ್ದ ನಾಯಕರು ಬಾಡೂಟ ಸವಿದಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಇದ್ದರೂ ಕೂಡ ಜನರ […]

4 weeks ago

ತೀವ್ರಗೊಂಡ ಮನ್ಸೂರ್ ವಿಚಾರಣೆ – ಜಮೀರ್, ಬೇಗ್‍ಗೆ ಎಸ್‍ಐಟಿ ನೋಟಿಸ್ ಜಾರಿ

ಬೆಂಗಳೂರು: ಬಹುಕೋಟಿ ವಂಚಕ ಮನ್ಸೂರ್ ಖಾನ್ ವಿಚಾರಣೆ ಇಡಿ ತೀವ್ರಗೊಳಿಸಿದ್ದರೆ ಇತ್ತ ವಿಶೇಷ ತನಿಖಾ ತಂಡ(ಎಸ್‍ಐ) ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ರೋಷನ್ ಬೇಗ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಈ ತಿಂಗಳ 29ರಂದು ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ. ದಿನೇ ದಿನೇ ಐಎಂಎ ಪ್ರಕರಣ...

ಐಎಂಎ ದೋಖಾಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್-ಮನ್ಸೂರ್ ಖಾನ್ ಜೊತೆಗೆ ಸಚಿವ ಜಮೀರ್ ಗೂ ನಂಟು?

2 months ago

-ಐಎಂಎ ವಿರುದ್ಧ 8 ಸಾವಿರ ದೂರು -ಮತ್ತೊಂದು ಆಡಿಯೋ ರಿಲೀಸ್ -ಬೀದಿಗೆ ಬಂದ 1,800 ಉದ್ಯೋಗಿಗಳು ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಲಕ್ಷಾಂತರ ಮಂದಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಮಾಲೀಕನ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೋಖಾ ಪ್ರಕರಣವನ್ನು ಎಸ್‍ಐಟಿಗೆ...

ಅಧಿಕಾರ ಮಜಾ ಮಾಡೋವಾಗ ಕಾಂಗ್ರೆಸ್ ಚೆನ್ನಾಗಿತ್ತು, ಬೇಗ್ ಎಲ್ಲಿ ಬೇಕಾದ್ರೂ ಹೋಗ್ಬಹುದು: ಜಮೀರ್ ಅಹ್ಮದ್

3 months ago

ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ತಮ್ಮ ಕಾಂಗ್ರೆಸ್ ನಾಯಕರ ವಿರುದ್ಧವೇ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್ ಅವರನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಇದೀಗ ಜಮೀರ್ ಅಹ್ಮದ್, ಅಧಿಕಾರ...

ರೇವಣ್ಣನ ಜ್ಯೋತಿಷ್ಯ, ಯಾವ ನಿಂಬೆ ಹಣ್ಣು ನಡೆಯಲ್ಲ : ರೇಣುಕಾಚಾರ್ಯ ಸವಾಲು

3 months ago

ಹುಬ್ಬಳ್ಳಿ: ರೇವಣ್ಣನ ಜ್ಯೋತಿಷ್ಯ, ಯಾವ ನಿಂಬೆ ಹಣ್ಣು ನಡೆಯುವುದಿಲ್ಲ. ಯಡಿಯೂರಪ್ಪನವರು ಸಿಎಂ ಆಗೇ ಆಗುತ್ತಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಎಸ್‍ವೈ ಸಿಎಂ ಆಗುವುದಿಲ್ಲ ಎನ್ನುವ ರೇವಣ್ಣ ಹೇಳಿಕೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಸ್‍ವೈ ಸಿಎಂ ಆಗಿಯೇ...

ಶೋಭಕ್ಕನಿಗೆ ತಲೆಕೆಟ್ಟಿದ್ದು, ಕರೆದ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು: ಜಮೀರ್

3 months ago

ಹುಬ್ಬಳ್ಳಿ: ಮೊದಲು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು. ಅವರ ತಲೆ ಕೆಟ್ಟಿದೆ ಎಂದು ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ. ಜಮೀರ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕೆಂಬ ಎಂದು ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ,...

ಕುಮಾರಸ್ವಾಮಿ ಮಾಡಿದ್ದು ತಪ್ಪು ನಿರ್ಧಾರ: ಸಿಎಂ ವಿರುದ್ಧ ಜಮೀರ್ ಅಹ್ಮದ್ ಆರೋಪ

3 months ago

ಹುಬ್ಬಳ್ಳಿ: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿಎಂ ಕುಮಾರಸ್ವಾಮಿ ಅವರು ಮಾಡಿದ ತಪ್ಪು ನಿರ್ಧಾರವೇ ಕಾರಣ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2008ರ ಮೊದಲು ರಾಜ್ಯದಲ್ಲಿ ಬಿಜೆಪಿ ಹೆಚ್ಚು...

ಬಂಡಾಯ ಶಮನ ಮಾಡಿ ‘ಟ್ರಬಲ್ ಶೂಟರ್’ ಆಗಿ ಹೊರ ಹೊಮ್ಮಿದ ಜಮೀರ್ ಅಹ್ಮದ್

4 months ago

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ 6 ಮಂದಿ ಪಕ್ಷದ ಮುಖಂಡರನ್ನು ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಯಶಸ್ವಿಯಾಗಿದ್ದಾರೆ. ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಕೆ ಮಾಡಿದ್ದ ಅಷ್ಟು...