Wednesday, 23rd October 2019

Recent News

1 year ago

ಜಮೀನು ವಿವಾದ- ಎರಡು ಗುಂಪುಗಳ ಮಧ್ಯೆ ಮಾರಾಮಾರಿ

ತುಮಕೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮೂಡಲಪಾಳ್ಯ ಗ್ರಾಮದಲ್ಲಿ ನಡೆದಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಮೂಡಲಪಾಳ್ಯ ಗ್ರಾಮದ ಚಿತ್ತಯ್ಯ ಎಂಬವರ ಮೇಲೆ ಅದೇ ಗ್ರಾಮದವರಾದ ಮಾಲಿಂಗಯ್ಯ, ದೇವಯ್ಯ, ಶಿವಣ್ಣ ಹಾಗೂ ಯರ್ರಣ್ಣ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮನೆಯ ಮೇಲ್ಛಾವಣಿಯನ್ನು ಸಹ ಧ್ವಂಸ ಮಾಡಿದ್ದಾರೆ. ದಾಳಿ ವೇಳೆ ನಾಲ್ಕು ಮೇಕೆಗಳನ್ನು ಕೊಂದಿದ್ದಾರೆ ಎಂದು ಚಿತ್ತಯ್ಯ ಕುಟುಂಬದವರು ಆರೋಪಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಚಿತ್ತಯ್ಯ, […]

1 year ago

ಪಕ್ಷಿಗಳಿಂದ 17 ಎಕರೆ ಜಮೀನಿಗೆ ಬೆಂಕಿ – ನಂದಿಸಲು ಹೆಲಿಕಾಪ್ಟರ್ ಬರಬೇಕಾಯ್ತು!

ಬರ್ಲಿನ್: ಪಕ್ಷಿಗಳಿಂದಾಗಿ 17 ಎಕರೆ ಜಾಗಕ್ಕೆ ಬೆಂಕಿ ಹತ್ತಿ ನಂತರ ಹೆಲಿಕಾಪ್ಟರ್ ಬಳಸಿ ಅಗ್ನಿಯನ್ನು ನಂದಿಸಿದ ಘಟನೆ ಜರ್ಮನಿಯಲ್ಲಿ ನಡೆದಿದೆ. ಜರ್ಮನಿಯ ರೋಸ್ಟಾಕ್ ನ ಡಿಯಾರಕೌ ಎಂಬಲ್ಲಿ ಬೆಂಕಿ ಅವಘಡ ಸಂಬಂಧಿಸಿದೆ. ಸ್ಥಳೀಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಕಿ ಹತ್ತಿದ್ದು ಹೇಗೆ?: ಎರಡು ಪಕ್ಷಿಗಳು...

ರೈಲ್ವೇ ಇಲಾಖೆಯಿಂದ ರೈತನ ಹೊಲಕ್ಕೆ ಆಪತ್ತು -ಕೈಗೆ ಬಂದ ಫಸಲು ನಾಶ ಮಾಡಿ ಅಧಿಕಾರಿಗಳ ದರ್ಪ

1 year ago

ಮೈಸೂರು: ಅತಿವೃಷ್ಟಿ ಮತ್ತು ಅನಾವೃಷ್ಟಿ ನಡುವೆ ರೈತ ಕಂಗಾಲಾಗಿದ್ದಾನೆ. ಇದರ ನಡುವೆಯೂ ಹೇಗೋ ಸಾಹಸದಿಂದ ಬೆಳೆ ಬೆಳೆದಿರುವ ರೈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಆಪತ್ತು ತಂದಿದ್ದಾರೆ. ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಎಂ.ಸಿ. ತಳಲು ಗ್ರಾಮದ ನೀಲಮ್ಮ ಮಗ ಪರಮೇಶ್ ತನ್ನ...

ಕೆಎಚ್ ಮುನಿಯಪ್ಪ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಸಹೋದರರಿಂದ ಆತ್ಮಹತ್ಯೆಗೆ ಯತ್ನ

1 year ago

ಬೆಂಗಳೂರು: ತಮ್ಮ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಗಳಿಬ್ಬರು ಕೋಲಾರ ಕಾಂಗ್ರೆಸ್ ಸಂಸದ ಕೆ ಹೆಚ್ ಮುನಿಯಪ್ಪ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಯಲಹಂಕದ ನಿವಾಸಿಗಳಾದ ರಾಜು ಮತ್ತು ಮುನಿರಾಜು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಸಂಜಯನಗರದಲ್ಲಿರುವ ಸಂಸದರ ಮನೆ ಎದುರು...

ಜಮೀನು ವಿವಾದ: ಗಂಡಸರೂ, ಹೆಂಗಸರನ್ನದೇ ಹೊಡೆದಾಡಿಕೊಂಡ ಎರಡು ಕುಟುಂಬಗಳು

1 year ago

ಚಿಕ್ಕಮಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಗಂಡಸ್ರು-ಹೆಂಗಸ್ರು ಅನ್ನದೆ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟತಾವರೆಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ವೆ ನಂಬರ್ 163ನಲ್ಲಿಯ 3 ಎಕರೆ 21 ಗುಂಟೆ ಜಮೀನು ಈ ಗಲಾಟೆಗೆ ಕಾರಣವಾಗಿದೆ. ಈ ಜಾಗ...

ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ- ಹೊಗೆ ಆವರಿಸಿದ್ರಿಂದ ಬಸ್, ಓಮ್ನಿ ಡಿಕ್ಕಿ

1 year ago

ಯಾದಗಿರಿ: ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಭತ್ತದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸುತ್ತಲೂ ಹೊಗೆ ಆವರಿಸಿದರಿಂದ ಬಸ್ ಮತ್ತು ಓಮನಿ ನಡುವೆ ಡಿಕ್ಕಿ ಸಂಭವಿಸಿದೆ. ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಡಗೇರಾ ಕ್ರಾಸ್ ಬಳಿ ಘಟನೆ ನಡೆದಿದೆ. ಓಮ್ನಿ ವಾಹನವು...

ಎಲೆಕ್ಷನ್ ಹೊತ್ತಲ್ಲೇ ಯಡಿಯೂರಪ್ಪ, ಕುಮಾರಸ್ವಾಮಿಗೆ ಬಿಗ್ ಶಾಕ್

2 years ago

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ತಮ್ಮ ಪಕ್ಷದ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಎದುರಾಗಿದೆ. ಗಂಗೇನಹಳ್ಳಿ ಜಮೀನು ಡಿನೋಟಿಫಿಕೇಶನ್ ಪ್ರಕರಣಕ್ಕೆ ಮರುಜೀವ ಬಂದಿದ್ದು, ಈ ಮೂಲಕ...

ಜಮೀನಿನ ಬಳಿ ಚೀಲದಲ್ಲಿ ನವಜಾತ ಗಂಡುಶಿಶು ಪತ್ತೆ!

2 years ago

ಹಾವೇರಿ: ನವಜಾತ ಶಿಶುವನ್ನು ಚೀಲದಲ್ಲಿ ಹಾಕಿ, ಜಮೀನಿನ ಬಳಿ ಎಸೆದು ಹೋದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬೆಟಗೇರಿ ಗ್ರಾಮದ ಬಳಿ ನಡೆದಿದೆ. ಗ್ರಾಮದ ಮಹಿಳೆಯರು ಬಹಿರ್ದೆಸೆಗೆ ಹೋಗಿದ್ದ ಮಹಿಳೆಯೋರ್ವರು ಚೀಲವನ್ನ ಗಮನಿಸಿದಾದ ಚೀಲದಲ್ಲಿ ಮಗು ಇರೋದು ಬೆಳಕಿಗೆ ಬಂದಿದೆ....