Friday, 22nd November 2019

Recent News

4 hours ago

20 ವರ್ಷವಾದ್ರೂ ಪರಿಹಾರ ನೀಡದ್ದಕ್ಕೆ ರಸ್ತೆಗೆ ಬೇಲಿ ಹಾಕಿದ ರೈತರು

ಶಿವಮೊಗ್ಗ: ಜಮೀನಿನ ಮಧ್ಯೆ ರಸ್ತೆಗೆಂದು ಬಿಟ್ಟಿದ್ದ ಭೂಮಿಗೆ ಸರ್ಕಾರ ಪರಿಹಾರ ನೀಡಿಲ್ಲ ಎಂದು ಜಮೀನಿನ ಮಾಲೀಕರು ರಸ್ತೆಗೆ ಬೇಲಿ ಹಾಕಿರುವ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಗೆಜ್ಜೇನಹಳ್ಳಿ ಗ್ರಾಮದ ರೈತರಾದ ಮಹದೇವ, ಜಯನಾಯ್ಕ ಅವರು ತಮ್ಮ ಜಮೀನು ಸೇರಿದಂತೆ ಗ್ರಾಮದ ಇತರೆ ರೈತರ ಜಮೀನಿಗೆ ತೆರಳಲು ಅನುಕೂಲ ಆಗಲೆಂದು ಕಳೆದ 20 ವರ್ಷಗಳ ಹಿಂದೆ ರಸ್ತೆಗೆ ಭೂಮಿ ಬಿಟ್ಟು ಕೊಟ್ಟಿದ್ದರು. ಆದರೆ ರಸ್ತೆಗೆಂದು ಬಿಟ್ಟಿದ್ದ ಭೂಮಿಗೆ ಸರ್ಕಾರದಿಂದ ಇದುವರೆಗೂ ಯಾವುದೇ ಪರಿಹಾರ ದೊರೆತಿರಲಿಲ್ಲ. ಆದರೆ […]

3 days ago

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ರೈತನ ಮೊಗದಲ್ಲಿ ಮಂದಹಾಸ

ಧಾರವಾಡ: ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಧಾರವಾಡದಲ್ಲಿ ರೈತರೊಬ್ಬರ ಮೇಲೆ ಬ್ಯಾಂಕ್‍ನಲ್ಲಿ ಸಾಲ ಪಡೆಯದಿದ್ದರೂ ಪಹಣಿ ಪತ್ರದಲ್ಲಿ 24 ಲಕ್ಷ ರೂಪಾಯಿ ಸಾಲದ ಭೋಜಾ ಏರಿಸಲಾಗಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಈ ಎಡವಟ್ಟನ್ನು ತಹಶೀಲ್ದಾರ್ ಅವರು ಸರಿಪಡಿಸಿ ರೈತರಿಗೆ ಸಹಾಯ ಮಾಡಿದ್ದಾರೆ. ಜಿಲ್ಲೆಯ ನರೇಂದ್ರ ಗ್ರಾಮದ ನಿವಾಸಿ ರೈತ ನಾಗಪ್ಪ ಅವರು, ಸಾಲ...

ವಿದ್ಯುತ್ ತಂತಿ ತುಂಡಾಗಿ ಬಿದ್ದರೂ ತಲೆಕೆಡಿಸಿಕೊಳ್ಳದ ಹೆಸ್ಕಾಂ- ಶಾಕ್ ಹೊಡೆದು ಇಬ್ಬರು ಸಾವು

4 weeks ago

ಬಾಗಲಕೋಟೆ: ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಟೆ ಗ್ರಾಮದ ಜಮೀನಿನಲ್ಲಿ ನಡೆದಿದೆ. ಗೋಟೆ ಗ್ರಾಮದ ಸಂತೋಷ್ ಪಾಟೀಲ್(30) ಹಾಗೂ ಬಾಳಾಸಾಹೇಬ್ ಕಟಾವೆ(20) ಮೃತ ದುರ್ದೈವಿಗಳು. ಜಮೀನಿನಲ್ಲಿ ತೊಗರಿ...

6 ತಿಂಗ್ಳ ಹಿಂದೆ ಕೊರೆಸಲಾಗಿದ್ದ ಬೋರ್‌ವೆಲ್‌ನಲ್ಲಿ ಏಕಾಏಕಿ ಚಿಮ್ಮಿದ ನೀರು

1 month ago

ವಿಜಯಪುರ: ಈ ಹಿಂದೆ ಕೊರೆಸಲಾಗಿದ್ದ ಬೋರ್‌ವೆಲ್‌ ನಿಂದ ಇದ್ದಕ್ಕಿದ್ದಂತೆ ನೀರು ಉಕ್ಕಿ ಹರಿಯುತ್ತಿರುವ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಗಂಗನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಗನಹಳ್ಳಿಯಲ್ಲಿ ಗ್ರಾಮದ ಮಾಳಿಂಗರಾಯ ದೊಡಮನಿ ಎಂಬವರ ಜಮೀನಿನಲ್ಲಿರುವ ಬೋರ್‌ವೆಲ್‌ನಿಂದ ನೀರು ಚಿಮ್ಮುತ್ತಿದೆ. ದೊಡಮನಿ ಅವರು ತಮ್ಮ...

ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

2 months ago

ಬೀದರ್: ಬರಡು ಭೂಮಿಯಲ್ಲಿ ಮಿಶ್ರ ಬಂಪರ್ ಹಣ್ಣು ಗಿಡಗಳನ್ನು ಬೆಳೆದು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಇತರ ರೈತರಿಗೆ ಶಿಕ್ಷಕ ಕಮ್ ರೈತ ಮಾದರಿಯಾಗಿದ್ದಾರೆ. ನಾಲ್ಕು ಎಕರೆ ಭೂಮಿಯಲ್ಲಿ ಹತ್ತಾರು ವಿವಿಧ ಹಣ್ಣುಗಳನ್ನು ಬೆಳೆದು ಪ್ರತಿ ವರ್ಷ 5 ರಿಂದ 6 ಲಕ್ಷ...

ಚಿತ್ರದುರ್ಗದಲ್ಲಿ ಡಿಆರ್‌ಡಿಒ ಡ್ರೋನ್ ಪತನ

2 months ago

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಬಳಿಯ ಜಮೀನೊಂದರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಪರೀಕ್ಷಾರ್ಥ ಹಾರಿಸಿದ್ದ  ರುಸ್ತುಂ-2 ಹೆಸರಿನ ಡ್ರೋನ್ ಪತನಗೊಂಡಿದೆ. ರುಸ್ತುಂ -2 ಮಾನವರಹಿತ ವೈಮಾನಿಕ ವಾಹನ (ಯುಎವಿ) ಆಗಿದ್ದು  ಜಿಲ್ಲೆಯ ಕುದಾಪುರ ಬಳಿ ಡಿಆರ್‌ಡಿಒ...

ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಸಾವು?

2 months ago

ಮೈಸೂರು: ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ. ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಚೆನ್ನಬಸಪ್ಪ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ...

ಜಮೀನಿಗಾಗಿ ದೊಡ್ಡಮ್ಮ, ಸಹೋದರಿಯನ್ನು ಕೊಂದ ಯುವಕ

3 months ago

ರಾಮನಗರ: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ದೊಡ್ಡಮ್ಮ ಹಾಗೂ ಆಕೆಯ ಮಗಳನ್ನು ಯುವಕನೊಬ್ಬ ಕೊಲೆ ಮಾಡಿದ ಘಟನೆ ಕನಕಪುರ ತಾಲೂಕಿನ ಸೊಂಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೊಂಟೇನಹಳ್ಳಿ ಗ್ರಾಮದ ಮಂಗಮ್ಮ ಹಾಗೂ ಆಕೆಯ ಮಗಳು ನಾಗರತ್ನ ಕೊಲೆಯಾದ ದುರ್ದೈವಿಗಳು. ಕೊಲೆಯಾದ ಮಂಗಮ್ಮಳ ಸೋದರಿಯ ಮಗ...