Friday, 20th September 2019

Recent News

3 days ago

ಭಾರತದಲ್ಲಿ ಆಪಲ್‍ನಿಂದ 700 ಕೋಟಿ ಹೂಡಿಕೆ

ನವದೆಹಲಿ: ಭಾರತದಲ್ಲಿ ಐಫೋನ್ ಮಾರುಕಟ್ಟೆಯನ್ನು ವಿಸ್ತರಿಸಲು ಆಪಲ್ 1 ಶತಕೋಟಿ ಡಾಲರ್(ಅಂದಾಜು 714 ಕೋಟಿ ರೂ.) ಹೂಡಿಕೆ ಮಾಡಲಿದೆ. ಚೀನಾಕ್ಕಿಂತ ಭಾರತದಲ್ಲಿ ಐಫೋನ್ ಗಳನ್ನು ಉತ್ಪಾದನೆ ಮಾಡಲು ಆಪಲ್ ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ತನ್ನ ಪಾಲುದಾರರ ಮೂಲಕ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ. ಅಮೆರಿಕ ಮತ್ತು ಚೀನಾದ ನಡುವೆ ಈಗ ವ್ಯಾಪಾರ ಸಮರ ಜೋರಾಗುತ್ತಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಆಪಲ್ ಬಂದಿದ್ದು, ಭಾರತದಲ್ಲಿ ತಯಾರಾದ ಫೋನ್‍ಗಳನ್ನು ಇತರೇ ರಾಷ್ಟ್ರಗಳಿಗೆ […]

1 week ago

ವಿಕ್ರಮ್ ಸಂಪರ್ಕಕ್ಕೆ ಇಸ್ರೋ ಜೊತೆ ನಾಸಾ ಪ್ರಯತ್ನ- ನಾಸಾ ಯಾಕೆ ಇಷ್ಟೊಂದು ಪ್ರಯತ್ನಿಸುತ್ತಿರುವುದು?

– 2.1 ಕಿ.ಮೀ ಅಲ್ಲ 400 ಮೀ. ಅಂತರದಲ್ಲಿ ಮಿಸ್ ಆದ ವಿಕ್ರಮ್ ಬೆಂಗಳೂರು: ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಪ್ರಯತ್ನಿಸುತ್ತಿದ್ದು, ಅಮೆರಿಕಾದ ನಾಸಾ ಸಹ ವಿಕ್ರಮ್ ಗೆ ಸಂದೇಶ ರವಾನಿಸಿದೆ. ಈ ಮೂಲಕ ವಿಕ್ರಮ್ ಸಂಪರ್ಕಕ್ಕೆ ನಾಸಾ ಸಹ ಮುಂದಾಗಿದೆ. ಈ ಮೊದಲು ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ 2.1 ಕಿ.ಮೀ....

ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗ – ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿ

1 month ago

ನ್ಯೂಯಾರ್ಕ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತದ ಸರ್ಕಾರ ಕೈಗೊಂಡ ನಿರ್ಧಾರದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ...

ಭಾರತದ ವಿರುದ್ಧ ಗುಡುಗಿದ ಟ್ರಂಪ್

1 month ago

ವಾಷಿಂಗ್ಟನ್: ಭಾರತ ಹಾಗೂ ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ. ಅವು ಅಭಿವೃದ್ಧಿ ಹೊಂದಿದ ದೇಶಗಳಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಮಂಗಳವಾರದ ಮಾತನಾಡಿದ ಟ್ರಂಪ್, ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ...

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆ ಹಾರಿಸಿದ ಕನ್ನಡದ ಪೋರ

1 month ago

ಬೆಂಗಳೂರು: ಸಿಲಿಕಾನ್ ಸಿಟಿಯ ಬಾಲಕನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆಯನ್ನು ಹಾರಿಸಿದ್ದಾನೆ. ಬಾಲಕನ ಸಾಧನೆ ತನ್ನ ವಯಸ್ಸನ್ನೇ ಮೀರಿಸಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾನೆ. ಬೆಂಗಳೂರಿನ ಬಾಗಲಗುಂಟೆಯ ನಿವಾಸಿಗಳಾದ ಶಿವಲಿಂಗ ಮತ್ತು ಮಂಜುಳ ದಂಪತಿಯ ಪುತ್ರ ನಿಶಾಂತ್ ಸಾಧನೆಗೈದ ಬಾಲಕ....

ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಗೆ ಭಾರೀ ಮುಖಭಂಗ

1 month ago

ನ್ಯೂಯಾರ್ಕ್: ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕೆಂದು ವಿಶ್ವಸಂಸ್ಥೆಯ ಮೊರೆ ಹೋಗಿದ್ದ  ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಮಾಡಿದ ವಿಚಾರ ಸಂಬಂಧ ಪಾಕಿಸ್ತಾನ  ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದು ವಿಶ್ವಸಂಸ್ಥೆಯ ನಿರ್ಧಾರವನ್ನು ಉಲ್ಲಂಘಿಸಿದೆ...

ನದಿಯಲ್ಲಿ ತೇಲುತ್ತಿದ್ದ ಕಟ್ಟಡ ನೋಡಿ ದಂಗಾದ ನೆಟ್ಟಿಗರು- ವಿಡಿಯೋ ವೈರಲ್

2 months ago

ಬೀಜಿಂಗ್: ನದಿಯಲ್ಲಿ ಕಟ್ಟಡವೊಂದು ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯವನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಮೊದಲು ವಿಡಿಯೋ ನೋಡಿದಾಗ ಜನರು ಪ್ರವಾಹಕ್ಕೆ ಕಟ್ಟಡ ತೇಲುತ್ತಿದೆಯೇನೊ ಎಂದು ಅಂದುಕೊಂಡಿದ್ದರು. ಬಳಿಕ ವಿಡಿಯೋದ ನಿಜ ಸಂಗತಿ ತಿಳಿದು ಅಚ್ಚರಿ ಪಟ್ಟಿದ್ದಾರೆ....

ಸದ್ಯದಲ್ಲೇ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

3 months ago

ನವದೆಹಲಿ: ವಿಶ್ವದಲ್ಲೇ ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನದಲ್ಲಿ ಸದ್ಯ ಚೀನಾ ಇದೆ. ಆದರೆ ಸದ್ಯದಲ್ಲೆ ಚೀನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಯುನ್ ವರದಿ ನೀಡಿದೆ. ಹೌದು. 2027ರ ಹೊತ್ತಿಗೆ ಭಾರತ ವಿಶ್ವದ ಅತಿ ಹೆಚ್ಚು...