Tag: ಚನ್ನಪಟ್ಟಣ

  • ಬಿಜೆಪಿ, ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂದು ನೂರಾರು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ: ಡಿಕೆಶಿ

    ಬಿಜೆಪಿ, ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂದು ನೂರಾರು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ: ಡಿಕೆಶಿ

    ರಾಮನಗರ: ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಪಕ್ಷದಲ್ಲಿ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಆ ಪಕ್ಷದ ಮುಖಂಡರು, ಕಾರ್ಯಕರ್ತರು ಗುಂಪು ಗುಂಪಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

    ಚನ್ನಪಟ್ಟಣದ (Channapatna) ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ತನ್ನ ಸ್ಥಾನವನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಬಿಜೆಪಿ ನಾಯಕರೇ ಕುಮಾರಸ್ವಾಮಿ ಅವರಿಗೆ ಉತ್ತರ ನೀಡುತ್ತಾರೆ. ಅವರ ಪಕ್ಷ ಗಟ್ಟಿಯಾಗಿ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ಸಮಯ ಬಂದಾಗ ಉತ್ತರ ನೀಡುತ್ತೇನೆ. ಬಿಜೆಪಿಯಲ್ಲಿ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದೂ ಗೊತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಗುಂಪು ಗುಂಪಾಗಿ ಆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಎಲ್ಲೋ ಹಳ್ಳಿಗಳಲ್ಲಿ ಭಿನ್ನಾಭಿಪ್ರಾಯದಿಂದ ಒಂದಿಬ್ಬರು ಮಾತ್ರ ನಮ್ಮ ಪಕ್ಷ ಬಿಟ್ಟಿರಬಹುದು ಎಂದರು. ಇದನ್ನೂ ಓದಿ: IPL Retention | ಹೊಸ ಮುಖಗಳಿಗೆ ಪಂಜಾಬ್‌ ಕಿಂಗ್ಸ್‌ ಮಣೆ – ಸ್ಟಾರ್‌ ಆಟಗಾರರು ಹೊರಕ್ಕೆ

    DK Shivakumar Channapatna 1

    ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನರಿಗೆ ಒಳ್ಳೆಯದಾಗಲು ಸಾಧ್ಯ ಎಂದು ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಶ್ಚಿಮ ಘಟ್ಟವನ್ನು ಕಾಶ್ಮೀರವಾಗಿಸಿದ ಮಳೆಯ ಮಂಜು

    ಈ ಸರ್ಕಾರ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಕುಮಾರಸ್ವಾಮಿ ಮಾತಿಗೆ ಉತ್ತರ ನೀಡುವುದಿಲ್ಲ. ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ ಎಂದು ಟೀಕಿಸಿದರು. ಇದನ್ನೂ ಓದಿ: ತೊಗರಿ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

    ಚನ್ನಪಟ್ಟಣದಲ್ಲಿ ಭಾವನಾತ್ಮಕವಾಗಿ ಮತ ಸೆಳೆಯಲಾಗುತ್ತಿದೆ ಎಂಬ ವಿಚಾರದ ಕುರಿತು ಮಾತನಾಡಿ, ಭಾವನೆ ಮೇಲೆ ಮತ ಕೇಳುವುದಲ್ಲ. ಬದುಕಿನ ಮೇಲೆ ಮತ ಕೇಳಬೇಕು. ಅವರು ಭಾವನೆ ಮೇಲೆ ಮತ ಕೇಳಿದರೆ, ನಾವು ಬದುಕಿನ ಮೇಲೆ ಮತ ಕೇಳುತ್ತೇವೆ. ಜನರ ಬದುಕು, ಅವರ ಅಭಿವೃದ್ಧಿ ನಮಗೆ ಮುಖ್ಯ. ಕೆರೆಗೆ ನೀರು ತುಂಬಿಸುವುದು, ರಸ್ತೆ, ಮನೆಗಳು, ನಿವೇಶನ ನೀಡುವುದು ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: ಭಾರತದ ಭೂಮಿಯ ಮೇಲೆ ಒಂದಿಂಚೂ ಕಾಂಪ್ರಮೈಸ್ ಮಾಡಲ್ಲ: ಮೋದಿ ಭರವಸೆ

  • ಚನ್ನಪಟ್ಟಣ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತೆ: ಪೊನ್ನಣ್ಣ

    ಚನ್ನಪಟ್ಟಣ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತೆ: ಪೊನ್ನಣ್ಣ

    ಮಡಿಕೇರಿ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By Election) ಕುಟುಂಬ ರಾಜಕಾರಣಕ್ಕೆ ಈ ಚುನಾವಣೆ ಅಂತ್ಯ ಹಾಡಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ (AS Ponnanna) ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕುಟುಂಬ ರಾಜಕಾರಣ ಇದೆ ಅಲ್ಲ. ಸ್ವಾರ್ಥದ ಕಡೆಗೆ ಹೋದಾಗ ಅದು ಅಂತ್ಯವಾಗುತ್ತದೆ. ಇದರ ಅಂತ್ಯವನ್ನು ನಾವು ಚನ್ನಪಟ್ಟಣದಲ್ಲಿ ಕಾಣುತ್ತೇವೆ. ಯೋಗೇಶ್ವರ್ (CP Yogeshwar) ಅವರು ತಳಮಟ್ಟದಿಂದ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡು ಅಲ್ಲಿನ ಜನರ ಬಾಂಧವ್ಯ ಇಟ್ಟುಕೊಂಡಿರುವ ರಾಜಕಾರಣಿ. ಅವರು ಅವಕಾಶವಾದಿ ಅಲ್ಲ. ಅವರು ಅವಕಾಶಕ್ಕಾಗಿ ರಾಜಕಾರಣ ಮಾಡುತ್ತಿರುವ ವ್ಯಕ್ತಿಯೂ ಅಲ್ಲ. ಯಾರು ಅವಕಾಶದ ರಾಜಕಾರಣ ಮಾಡುತ್ತಿದ್ದಾರೆ ಅಂತ ಅಲ್ಲಿನ ಜನರು ಗಮನಿಸುತ್ತಿದ್ದಾರೆ. ಈಗಾಗಲೇ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ ಗ್ಲೈಡರ್ – ಪ್ರವಾಸಿಗ ದುರ್ಮರಣ

    ಎಲ್ಲೋ ಒಂದು ಕಡೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಪ್ರಯತ್ನಗಳು ನಡೆದು ಕೆಲವು ಸಂದರ್ಭದಲ್ಲಿ ಯಶಸ್ಸು ಆದರೂ ಕೂಡ ಈ ಚುನಾವಣೆಯಲ್ಲಿ ಇದು ಮುಗಿಯುತ್ತದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಮತ್ತಷ್ಟು ಬಲವಾಗಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ತನ್ನ ಕೆಲಸವನ್ನು ಮಾಡುತ್ತದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು ಖಚಿತ. ನಿಖಿಲ್ ಕುಮಾರಸ್ವಾಮಿ ಒಬ್ಬ ಅಭ್ಯರ್ಥಿ ಅಷ್ಟೇ. ಜೆಡಿಎಸ್‌ನ ರಾಜಕಾರಣವನ್ನು ಅಲ್ಲಿನ ಜನರು ಗುರುತಿಸಿ ಅವರನ್ನು ಸೋಲಿಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಮರು ಮತಾಂತರ ಬಿಟ್ಟು ಈಗ ಜಮೀನಾಂತರ ಮಾಡ್ತಿದ್ದಾರೆ: ಆರ್.ಅಶೋಕ್

  • ಈ ಬಾರಿ ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ವೋಟು: ಸಿಪಿವೈ

    ಈ ಬಾರಿ ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ವೋಟು: ಸಿಪಿವೈ

    – ಚನ್ನಪಟ್ಟಣ ಅಖಾಡದಲ್ಲಿ `ಕೈ’ ಅಭ್ಯರ್ಥಿ ಬಿರುಸಿನ ಪ್ರಚಾರ

    ರಾಮನಗರ: ಈ ಬಾರಿ ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ವೋಟು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar)ವ್ಯಂಗ್ಯವಾಡಿದ್ದಾರೆ.

    ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಚನ್ನಪಟ್ಟಣ (Channapatna) ಅಖಾಡದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

    ಪ್ರಚಾರ ವೇಳೆ ಮಾತನಾಡಿದ ಅವರು, ಈ ಬಾರಿ ಚನ್ನಪಟ್ಟಣ ಅಖಾಡದಲ್ಲಿ ಕುಮಾರಸ್ವಾಮಿಗೆ (HD Kumarswamy) ನೋಟು ಬಂದರೆ ನನಗೆ ವೋಟು ಬರಲಿದೆ. ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ ಈ ಉಪಚುನಾವಣೆ ಬಂದಿದೆ. ಅನಿತಾ ಕುಮಾರಸ್ವಾಮಿ ಅವರು ಎರಡು ಸಲ ನನ್ನ ಮೇಲೆ ಸ್ಪರ್ಧೆ ಮಾಡಿದ್ದರು. ರಾಜನಿಗೆ ವಯಸ್ಸಾದ ಮೇಲೆ ಮಗನಿಗೆ ಪಟ್ಟಾಭಿಷೇಕ ಮಾಡುವ ಹಾಗೇ ಇದೀಗ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂದರು.ಇದನ್ನೂ ಓದಿ: ಕಾಂಗ್ರೆಸ್‍ನ ಹಗರಣದ ದಿಕ್ಕು ತಪ್ಪಿಸಲು ವಕ್ಫ್ ಮುನ್ನೆಲೆಗೆ: ಹೆಚ್‍ಡಿಕೆ ಆರೋಪ

    ಕುಮಾರಸ್ವಾಮಿ ಶಾಸಕರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ? ಎಂದು ಜೆಡಿಎಸ್ ಮುಖಂಡರನ್ನು ಪ್ರಶ್ನೆ ಮಾಡುತ್ತೇನೆ. ಕೆರೆಗಳಲ್ಲಿ ಬೆಳೆದಿರುವ ಗಿಡಗಳನ್ನು ಕೂಡ ಅವರ ಕೈಯಲ್ಲಿ ತೆಗಿಸಲು ಸಾಧ್ಯವಾಗಲಿಲ್ಲ. ಇನ್ನೂ ನಾನು ತಂದಿದ್ದ ನೀರಾವರಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲೇ ಇಲ್ಲ. ಅವರ ಬಗ್ಗೆ ದೂರು ಹಾಕುತ್ತಿಲ್ಲ. ಅವರ ಕಾಲಾವಧಿಯಲ್ಲಿ ತಾಲೂಕು 8-10 ವರ್ಷ ಹಿಂದೆ ಬಿದ್ದಿದೆ. ಯಾವ ಮಾನದಂಡದ ಮೇಲೆ ಮಗನಿಗೆ ವೋಟ್ ಕೇಳೋಕೆ ಬರುತ್ತಿದ್ದಾರೆ ಎಂದು ಅವರೇ ಹೇಳಬೇಕು. ಅವರ ಮಗನಿಗೆ ವೋಟ್ ಕೇಳಲು ಜೆಡಿಎಸ್ ಮುಖಂಡರಿಗೆ ಯಾವ ನೈತಿಕತೆ ಇದೆ? ಎಂದು ಹೇಳಿದರು.

    ನಾನು ಈ ತಾಲೂಕಿನ ಮನೆ ಮಗ. ನೀರಾವರಿ ಯೋಜನೆ ಮುಖಾಂತರ ತಾಲೂಕಿನ ಅಭಿವೃದ್ಧಿ ಜಪ ಮಾಡಿದ್ದೇನೆ. ನಮ್ಮವರೇ ರಾಜ್ಯದ ಡಿಸಿಎಂ ಆಗಿದ್ದಾರೆ. ಅವರ ಅಭಿವೃದ್ಧಿಯಲ್ಲಿ ಪಾಲುದಾರನಾಗಬೇಕು ಎಂದು ಕಾಂಗ್ರೆಸ್ ಸೇರಿದ್ದೇನೆ. ನನಗೆ ಒಬ್ಬ ದೈತ್ಯ, ಪ್ರಾಮಾಣಿಕ ಸುರೇಶ್‌ನ ಸೋಲಿಸಿದ್ದೀನಿ ಎನ್ನುವ ನೋವಿದೆ. ನನಗೆ ಕುಮಾರಸ್ವಾಮಿಯವರು ಎನ್‌ಡಿಎ ಟಿಕೆಟ್ ಕೊಡ್ತೀನಿ ಹೋಗಿ ಕೆಲಸ ಮಾಡು ಎಂದು ಹೇಳಿದ್ದರು. ಆದರೆ ಅವರ ಮಗನನ್ನು ನಿಲ್ಲಿದಲು ನನಗೆ ಟಿಕೆಟ್ ಕೊಡದೇ ನಾಟಕವಾಡಿದರು. ಹಾಗಾಗಿ ನಾನು ನನ್ನ ಮೂಲ ಪಕ್ಷ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.

    ಮೂರು ದಿನಗಳಿಂದ ಸಿಪಿ ಯೋಗೇಶ್ವರ್ ಚುನಾವಣಾ ಪ್ರಚಾರ ಮಾಡುತ್ತಿದ್ದು, ಇಂದು ಚನ್ನಪಟ್ಟಣ ತಾಲೂಕಿನ ವಿರುಪಾಕ್ಷೀಪುರ, ಮಂಗಾಡಹಳ್ಳಿ, ಬಲ್ಲಾಪಟ್ಟಣ, ಕೋಡಂಬಳ್ಳಿ ಜಿ.ಪಂ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹುಣಸನಹಳ್ಳಿ, ಅಂಚಿಪುರ, ಬಾಚಹಳ್ಳಿ ಸೇರಿ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ಸಿಪಿವೈಗೆ ಮಾಜಿ ಸಂಸದ ಡಿಕೆ ಸುರೇಶ್, ಎಂಎಲ್ಸಿ ಪುಟ್ಟಣ್ಣ ಸೇರಿ ಸ್ಥಳೀಯ ಕಾಂಗ್ರೆಸ್ ನಾಯಕರ ಸಾಥ್ ನೀಡಿದ್ದಾರೆ. ಕೋಡಂಬಳ್ಳಿ ಜಿಪಂ ವ್ಯಾಪ್ತಿಯ ಮಂಗಾಡಹಳ್ಳಿ ಗ್ರಾಮದಿಂದ ಪ್ರಚಾರ ಆರಂಭಿಸಿದ ಸಿಪಿವೈಗೆ ಗ್ರಾಮಸ್ಥರು ಪಟಾಕಿ ಸಿಡಿಸಿ ಸ್ವಾಗತ ಕೋರಿದರು.ಇದನ್ನೂ ಓದಿ: ದೀಪಾವಳಿಯಂದು ‘ಪುಷ್ಪ 2’ ಅಪ್‌ಡೇಟ್- ಪುಷ್ಪರಾಜ್, ಶ್ರೀವಲ್ಲಿ ರೊಮ್ಯಾಂಟಿಕ್ ಪೋಸ್ಟರ್ ಔಟ್

  • ಚನ್ನಪಟ್ಟಣದಲ್ಲಿಯೂ ಕಾಂಗ್ರೆಸ್ ಗಿಫ್ಟ್ ಕೂಪನ್ ಕುತಂತ್ರ: ಹೆಚ್‌ಡಿಕೆ ಆರೋಪ

    ಚನ್ನಪಟ್ಟಣದಲ್ಲಿಯೂ ಕಾಂಗ್ರೆಸ್ ಗಿಫ್ಟ್ ಕೂಪನ್ ಕುತಂತ್ರ: ಹೆಚ್‌ಡಿಕೆ ಆರೋಪ

    ರಾಮನಗರ: ರಾಮನಗರ (Ramanagara) ಸೇರಿದಂತೆ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷ ಗಿಫ್ಟ್ ಕೂಪನ್‌ಗಳನ್ನು (Gift Coupon) ಹಂಚಿ ವ್ಯಾಪಕ ಅಕ್ರಮ ನಡೆಸಿತ್ತು. ಉಪ ಚುನಾವಣೆಯಲ್ಲಿಯೂ (By Election) ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.

    ಚನ್ನಪಟ್ಟಣದಲ್ಲಿ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ 3 ಸಾವಿರ, 5 ಸಾವಿರ ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್‌ಗಳನ್ನು ಬೆಂಗಳೂರಿನ ಲೂಲೂ ಮಾಲ್‌ಗೆ ಹೋಗಿ ಕೊಡಿ. ನಿಮಗೆ ಬೇಕಾದ ವಸ್ತುವನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿ ಕೂಪನ್ ಹಿಡಿದುಕೊಂಡು ಲೂಲೂ ಮಾಲ್‌ಗೆ ಹೋದರೆ ಅಲ್ಲಿ ಕೂಪನ್ ಇಲ್ಲ, ವಸ್ತುಗಳೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; ಯಾವ ಕ್ಷೇತ್ರದಲ್ಲಿ ಯಾರಿಗೆ ಪ್ರಶಸ್ತಿ – ಇಲ್ಲಿದೆ ಪಟ್ಟಿ

    ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂಥ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅಭಿವೃದ್ಧಿ ಮಾಡಿಲ್ಲ, ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ: ಡಿಕೆಶಿ

  • ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅಭಿವೃದ್ಧಿ ಮಾಡಿಲ್ಲ, ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ: ಡಿಕೆಶಿ

    ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅಭಿವೃದ್ಧಿ ಮಾಡಿಲ್ಲ, ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ: ಡಿಕೆಶಿ

    ಬೆಂಗಳೂರು: ಚನ್ನಪಟ್ಟಣಕ್ಕೆ (Channapatna) ಕುಮಾರಸ್ವಾಮಿ (HD Kumaraswamy) ಏನೂ ಕೆಲಸ ಮಾಡಿಲ್ಲ. ಹೀಗಾಗಿ ಈ ಬಾರಿ ಚನ್ನಪಟ್ಟಣದ ಜನ ಕಾಂಗ್ರೆಸ್ (Congress) ಕೈ ಹಿಡಿಯುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚನ್ನಪಟ್ಟಣ ಉಪಚುನಾವಣೆ (By Election) ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಚುನಾವಣೆ ಮಾಡುತ್ತಿಲ್ಲ. ನಾನು, ರಾಮಲಿಂಗಾ ರೆಡ್ಡಿ ಅವರು ಸ್ಥಾನ ತೆರವಾದಾಗಿನಿಂದ ಕೆಲಸ ಮಾಡುತ್ತಿದ್ದೇವೆ. ಪ್ರತಿ ಮನೆ ಬಾಗಿಲಿಗೆ ಸರ್ಕಾರ ಹೋಗಿ ಕಷ್ಟ-ಸುಖ ಕೇಳಿದ್ದೇವೆ. ಪ್ರತಿ ಜಿಲ್ಲಾ ಪಂಚಾಯ್ತಿ, ನಗರ ಪಂಚಾಯ್ತಿ ಯಾರಿಗೆ ಏನು ಅಂತ ಸಮಸ್ಯೆ ಎಂದು ಕೇಳಿದ್ದೇವೆ. 22 ಸಾವಿರ ಕುಟುಂಬಗಳು ನನಗೆ ಅರ್ಜಿ ಸಲ್ಲಿಕೆ ಮಾಡಿವೆ. ಮನೆ ಕೊಟ್ಟಿಲ್ಲ, ರಸ್ತೆ ಇಲ್ಲ. ಬಗರಹುಕಂ ಜಾಗ ಕೊಟ್ಟಿಲ್ಲ ಎಂದು ನೋವು ಹೇಳಿ ಕೊಂಡಿದ್ದಾರೆ. ಯಾವ ಶಾಸಕರೂ ಬರಲಿಲ್ಲ. ಕುಮಾರಣ್ಣ ಬರಲಿಲ್ಲ. ಕುಮಾರಣ್ಣ ಇಂತಹ ಕಾರ್ಯಕ್ರಮ ಮಾಡಿಲ್ಲ ಎಂದು ದುಃಖ ನೋವು ಹೇಳಿಕೊಂಡಿದ್ದಾರೆ. ನಾನು ಸಿಎಂ ಬಳಿ ಹೋಗಿ 500 ಕೋಟಿ ವಿಶೇಷ ಅನುದಾನ ತೆಗೆದುಕೊಂಡು ಹೋಗಿ ನೀರಾವರಿ, ರಸ್ತೆಗೆ ಎಲ್ಲಾ ಮಾಡಿದ್ದೇವೆ. 5 ಸಾವಿರ ಮನೆಗಳನ್ನು ಮಂಜೂರಾತಿ ಮಾಡಿದ್ದೇವೆ. ಸೈಟ್ ಕೊಡಲು ಪ್ರಯತ್ನ ಮಾಡುತ್ತಿದ್ದೇವೆ. ನಮಗೆ ಎಲೆಕ್ಷನ್ ಮುಖ್ಯ ಅಲ್ಲ. ಜನರ ಬದುಕು ಬದಲಾವಣೆ ಮಾಡೋದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಜಮೀರ್ ಅಹ್ಮದ್ ಎರಡನೇ ಟಿಪ್ಪು, ಔರಂಗಜೇಬ್ ಥರ ಮೆರೆಯುತ್ತಿದ್ದಾರೆ: ಮುತಾಲಿಕ್

    HD Kumaraswamy 1

    ಕುಮಾರಸ್ವಾಮಿ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ನಮಗೇನು ಬೇಜಾರು ಇಲ್ಲ. ಅವರ ಧರ್ಮಪತ್ನಿ ನಿಲ್ಲಿಸಿದ್ರು, ಅವರು ನಿಂತುಕೊಂಡ್ರು, ಈಗ ಮಗನನ್ನ ನಿಲ್ಲಿಸಿದ್ದಾರೆ. ಅದೆಲ್ಲ ನಿರೀಕ್ಷೆಯೇ. ಕಾರ್ಯಕರ್ತರನ್ನು ನಿಲ್ಲಿಸೋದಿಲ್ಲ ಎಂದು ನಮಗೂ ಗೊತ್ತಿತ್ತು.ನಮ್ ಡ್ಯೂಟಿ ನಾವು ಮಾಡ್ತಿದ್ದೇವೆ.ಚನ್ನಪಟ್ಟಣದ ಜನರ ಮೇಲೆ ನಮಗೆ ವಿಶ್ವಾಸ ಇದೆ. ನಮ್ಮ ಕೈ ಹಿಡಿಯುತ್ತಾರೆ. ನಮ್ಮ ಸರ್ಕಾರ ಬಲಿಷ್ಠವಾಗಿದೆ. ಸೇವೆ ಮಾಡುತ್ತೇವೆ. ಕುಮಾರಸ್ವಾಮಿ ಅಧಿಕಾರ ಇದ್ದಾಗ ಏನು ಮಾಡಲು ಆಗಿಲ್ಲ. ಇನ್ನು ಅಧಿಕಾರ ಇಲ್ಲದೇ ಇದ್ದಾಗ ಏನು ಮಾಡಲು ಸಾಧ್ಯ? ಅವರು ಏನೂ ಮಾಡಲು ಆಗಲ್ಲ ಎಂದು ಜನರಿಗೆ ಗೊತ್ತಿದೆ. ಇಲ್ಲಿ ಇರೋದು ರಾಜ್ಯ ಸರ್ಕಾರ. ಏನೇ ಆದರು ನಾವು ಮಾಡಬೇಕು. ಜನರ ಪಲ್ಲಕ್ಕಿ ಹೊರೋರು ನಾವೇ. ಜನರ ಕಷ್ಟಕ್ಕೆ ಆಗೋರು ನಾವೇ. ನಮ್ಮನ್ನ ಸ್ವೀಕಾರ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ಇದನ್ನೂ ಓದಿ: ತಾಲಿಬಾನ್‌ನಿಂದ ಮಹಿಳೆಯರ ಮೇಲೆ ಹೊಸ ನಿರ್ಬಂಧ – ಮಹಿಳೆಯರ ಧ್ವನಿ ಪರಸ್ಪರ ಕೇಳದಂತೆ ಆದೇಶ

    ಯದುವೀರ್ ಒಡೆಯರ್ ಅವರನ್ನು ಸ್ಟಾರ್ ಪ್ರಚಾರಕರಾಗಿ ಬಳಕೆ ಮಾಡಿಕೊಳ್ಳುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಾರ್ಟಿ ಅವರು ಯಾರನ್ನಾದ್ರು ಮಾಡಿಕೊಳ್ಳಲಿ. ನಾನು ಯಾಕೆ ಯದುವೀರ್ ಬರೋದು ಬೇಡ ಅಂತ ಹೇಳಲಿ. ಯದುವೀರ್ ಬರಲಿ ಯಾರಾದ್ರು ಬರಲಿ. ಅವರ ನಾಯಕರು, ಅವರ ಕುಟುಂಬದವರು ಬರಲಿ ತಪ್ಪೇನು ಇಲ್ಲ. ಅವರ ಕರ್ತವ್ಯ ಅವರು ಮಾಡಿಕೊಳ್ಳಲಿ. ನಮಗೆ ಜನ ಇದ್ದಾರೆ. ನಾವು ಶ್ರಮ ಪಡುತ್ತಿದ್ದೇವೆ. ನಮಗೆ ಫಲ ಸಿಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ: ಡಿಕೆಶಿ

    ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಜಾತಿ ಮೇಲೆ ರಾಜಕೀಯ ಮಾಡಲ್ಲ. ನಾವು ನೀತಿ ಮೇಲೆ ರಾಜಕೀಯ ಮಾಡೋರು. ಎಲ್ಲಾ ವರ್ಗದ ಜನರು ಅಲ್ಲಿ ಇದ್ದಾರೆ. ನಮಗೆ ಜಾತಿ ಇಲ್ಲ. ನೀತಿ ಮುಖ್ಯ. ಜಾತಿ ಮೇಲೆ ಯಾರು ಬೇಕಾದರೂ ರಾಜಕೀಯ ಮಾಡಿಕೊಳ್ಳಲಿ. ನಾವು ಮಾಡೋದಿಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ತೇರದಾಳದ 111 ಮಂದಿ ರೈತರಿಗೆ ವಕ್ಫ್‌ ನೋಟಿಸ್‌

  • ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

    ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

    ರಾಮನಗರ: ಚನ್ನಪಟ್ಟಣ (Channapatna) ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ (By Election) ದಿನಗಣನೆ ನಡೆಯುತ್ತಿರುವಾಗಲೇ ಬಿಜೆಪಿ  ಮತ್ತು ಜೆಡಿಎಸ್‌ಗೆ ಕಾಂಗ್ರೆಸ್ (Congress) ಬಿಗ್ ಶಾಕ್ ನೀಡಿದೆ.

    Channapatna BJP Members joins congress 1

    ಚನ್ನಪಟ್ಟಣ ನಗರಸಭೆಗೆ ಬಿಜೆಪಿಯಿಂದ ಗೆದ್ದಿದ್ದ 7 ಸದಸ್ಯರ ಪೈಕಿ 6 ಮಂದಿ ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಸಮ್ಮುಖದಲ್ಲಿ ಮಂಗಳವಾರ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಚನ್ನಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 6 ಮಂದಿ ನಗರಸಭೆ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ನಗರಸಭಾ ಸದಸ್ಯರಾದ ಚಂದ್ರು, ಮಂಗಳಮ್ಮ, ಮನೋಹರ್, ಕಮಲ, ಜಯಮಾಲ, ಕಸ್ತೂರಿ ಕಾಂಗ್ರೆಸ್ ಸೇರಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ; ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧ

    2021-22ರಲ್ಲಿ ಇವರು ನಗರಸಭೆಗೆ ಬಿಜೆಪಿಯಿಂದ ಆಯ್ಕೆ ಆಗಿದ್ದರು. ಒಟ್ಟು 31 ಸದಸ್ಯರ ಪೈಕಿ 07 ಮಂದಿ ಬಿಜೆಪಿಯಿಂದ ಗೆದ್ದಿದ್ದರು. 16 ಮಂದಿ ಜೆಡಿಎಸ್‌ನಿಂದ ಗೆದ್ದಿದ್ದರು. ಎರಡು ತಿಂಗಳ ಹಿಂದೆ 13 ಮಂದಿ ಜೆಡಿಎಸ್ ಸದಸ್ಯರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಇದನ್ನೂ ಓದಿ: ಕೋಲಾರ ಜಿಲ್ಲಾಡಳಿತದಿಂದಲೂ ವಕ್ಫ್‌ಗೆ ಸರ್ಕಾರಿ ಜಮೀನು ಮಂಜೂರು ಆರೋಪ

  • ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್

    ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್

    – ನಿಖಿಲ್ ಪರ ಯದುವೀರ್ ಮತಯಾಚನೆ

    ರಾಮನಗರ: ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ. ಯುವನಾಯಕ ನಿಖಿಲ್ (Nikhil Kumaraswamy) ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ. ಅದಕ್ಕೆ ಇಲ್ಲಿಂದ ಗೆಲ್ಲಿಸಿ ಶಕ್ತಿ ತುಂಬಬೇಕು ಎಂದು ಸಂಸದ ಯದುವೀರ್  (Yaduveer Wadiyar) ಹೇಳಿದ್ದಾರೆ.

    HD Kumaraswamy Yaduveer Wadiyar

    ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೂಡ್ಲೂರು ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ ಈ ಗ್ರಾಮಕ್ಕೆ ಬಂದಿದ್ದರು. ನನಗೂ ಕೂಡ ಇಂದು ಆ ಭಾಗ್ಯ ಸಿಕ್ಕಿದೆ. ಇಲ್ಲಿನ ರಾಮಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ಆಯಿತು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರು ಉತ್ತಮ ಆಡಳಿತ ನೋಡುತ್ತಿದ್ದೀರಿ. ಮತ್ತೊಂದೆಡೆ ರಾಜ್ಯದಲ್ಲಿ ಆರ್ಥಿಕತೆ ಅಧೋಗತಿಗೆ ಹೋಗುತ್ತಿರುವುದನ್ನು ಗಮನಿಸಿದ್ದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅನೇಕ ಹಗರಣಗಳ ಕುರಿತು ಹೋರಾಟ ಮಾಡಿ ಯುವ ನಾಯಕನಾಗಿ ನಿಖಿಲ್ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದು ಅವಕಾಶ ನೀಡಿ ಎಂದರು. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್‌ ಶಾಸಕರು ದೂರ ದೂರ

    HD Kumaraswamy Yaduveer Wadiyar Channaptna

    ಅರಸು ಸಮುದಾಯ ಧರ್ಮದ ರಕ್ಷಣೆಗೆ ಇರೋ ಸಮುದಾಯ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಧರ್ಮದ ರಕ್ಷಣೆ, ದೇಶದ ಪರಂಪರೆ ಉಳಿಸಲು ಎನ್‌ಡಿಎ ಹೋರಾಟ ಮಾಡುತ್ತಿದೆ. ಮೋದಿ ಹತ್ತು ವರ್ಷಗಳಲ್ಲಿ ವಿಕಸಿತ ಭಾರತ ಮಾಡಿ, ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಪ್ರಗತಿ ಕಾಣುತ್ತಿದೆ. ನಮ್ಮ ಭಾರತದ ಪರಂಪರೆ ಉಳಿಸಲು ಎನ್‌ಡಿಎ ಹೋರಾಡುತ್ತಿದೆ. ಹಾಗಾಗಿ ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ

  • ಎಷ್ಟಾದ್ರೂ ಹಣ ಸುರಿದು ಚುನಾವಣೆ ಮಾಡೋದು ಹೆಚ್‌ಡಿಕೆ ಬಳಿ ಇರೋ ಅಸ್ತ್ರ: ಸಿಪಿವೈ

    ಎಷ್ಟಾದ್ರೂ ಹಣ ಸುರಿದು ಚುನಾವಣೆ ಮಾಡೋದು ಹೆಚ್‌ಡಿಕೆ ಬಳಿ ಇರೋ ಅಸ್ತ್ರ: ಸಿಪಿವೈ

    – ಕಣ್ಣೀರು ಹಾಕಿ ನಾಟಕ ಮಾಡಲು ನನಗೆ ಬರಲ್ಲ ಎಂದ ಯೋಗೇಶ್ವರ್‌

    ರಾಮನಗರ: ಕಣ್ಣೀರು ಹಾಕಲು ನನಗೆ ಬರಲ್ಲ. ನಾನು ಕಣ್ಣಿರು ಹಾಕಲ್ಲ. ನನಗೆ ನಾಟಕ ಮಾಡಲು ಬರಲ್ಲ ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಪರೋಕ್ಷವಾಗಿ ಹೆಚ್‌ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.

    ಕೋಡಂಬಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಸಮನ್ವಯ ಸಭೆ ನಡೆಸಿ ಮಾತನಾಡಿದ ಅವರು, ಚನ್ನಪಟ್ಟಣ ತಾಲೂಕಿನಲ್ಲಿ ಇದು ನನ್ನ 10ನೇ ಚುನಾವಣೆ. ಈ ಉಪಚುನಾವಣೆ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿ (HD Kumaraswamy) ರಾಜಕೀಯ ಮಹತ್ವಾಕಾಂಕ್ಷೆಯಿಂದ ಬೈ ಎಲೆಕ್ಷನ್ ಬಂತು. ಎಂಎಲ್‌ಎ ಆಗಿ ಅವರು ಒಮ್ಮೆಯೂ ಕ್ಷೇತ್ರಕ್ಕೆ ಬಂದಿಲ್ಲ. ಮೊನ್ನೆ 150 ಕೆರೆ ತುಂಬಿಸಿದ್ದೇವೆ ಎನ್ನುತ್ತಿದ್ದರು. ಅವರಿಗೆ ಚನ್ನಪಟ್ಟಣದಲ್ಲಿ (Channapatna) ಎಷ್ಟು ಕೆರೆ ಇದೆ ಅಂತ ಗೊತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ತೇಜಸ್ವಿ ಸೂರ್ಯ ಈಗ ಐರನ್ ಮ್ಯಾನ್ – 70.3 ರೇಸ್‌ನಲ್ಲಿ ವಿಜೇತರಾದ ಪ್ರಥಮ ಜನಪ್ರತಿನಿಧಿ!

    channapatna cp yogeshwar congress meet

    ನಾನು, ಸುರೇಶ್ ಸೇರಿ ಒಂದು ಹೊಸ ಯೋಜನೆ ಬಗ್ಗೆ ಆಲೋಚನೆ ಮಾಡಿದ್ದೇವೆ. ಕೆಆರ್‌ಎಸ್‌ನಿಂದ ಮಾರ್ಕೋನಹಳ್ಳಿ ಡ್ಯಾಂಗೆ ನೀರು ತಂದು ಅದನ್ನು ಕಣ್ವ, ಇಗ್ಗಲೂರು ಡ್ಯಾಂಗೆ ತರಬಹುದು. ಕುಮಾರಸ್ವಾಮಿ ಎರಡು ಬಾರಿ ಗೆದ್ದರೂ ಒಂದು ಕೆರೆ ತುಂಬಿಸಲಿಲ್ಲ. ಶಿವಲಿಂಗೇಗೌಡರಿಗೆ ಅವರ ಎಲ್ಲಾ ಮರ್ಮಗಳು ಗೊತ್ತು. ಅವರ ಪ್ಲಾನ್‌ಗಳು ನಮ್ಮ ಬಹುತೇಕ ನಾಯಕರಿಗೆ ಗೊತ್ತು. ನನ್ನ ಮೇಲೆ ಅವರ ಮನೆಯವರು ಯಾಕೆ ಹೀಗೆ ಮುಗಿಬೀಳುತ್ತಿದ್ದಾರೋ ಗೊತ್ತಿಲ್ಲ. ನಾನೇನು ತಪ್ಪು ಮಾಡಿದ್ದೀನಿ? ನನ್ನ ಮೇಲೆ ಯಾಕೆ ಹೀಗೆ ಬೀಳ್ತಾರೆ? ಕುಮಾರಸ್ವಾಮಿ ಬಂದ್ರು, ಅವರ ಪತ್ನಿ ಬಂದ್ರು ಈಗ ಮಗ ಬಂದ್ರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ

    ಮೊನ್ನೆ 500 ಬಸ್ ಮಾಡಿ ಜನ ಸೇರಿಸಿ ನಾಮಪತ್ರ ಸಲ್ಲಿಕೆ ಮಾಡಿದರು. ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಎಷ್ಟಾದ್ರೂ ಹಣ ತಂದು ಚುನಾವಣೆ ಮಾಡೋಕೆ ನಿಂತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೇಳಿದೆ. ಈಗ ಚುನಾವಣಾ ಆಯೋಗ ಕೇಸ್ ಹಾಕಿ 96 ಬಸ್ ಸೀಜ್ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದ ಕೇರಳ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ; ಕಾರಣ ನಿಗೂಢ

    ಯಥೇಚ್ಛವಾಗಿ ಹಣ ಸುರಿದು ಚುನಾವಣೆ ಮಾಡೋದು ಕುಮಾರಸ್ವಾಮಿಗೆ ಇರುವ ಒಂದೇ ಅಸ್ತ್ರ. ನನ್ನ ಬಳಿ ಅಷ್ಟು ಹಣ ಇಲ್ಲ, ಎರಡು ಬಾರಿ ಸೋತಿದ್ದೇನೆ. ಜನರೇ ನನ್ನ ಪರವಾಗಿ ಚುನಾವಣೆ ಮಾಡುತ್ತಾರೆ. ನನ್ನ ಎಲ್ಲರೂ ಪಕ್ಷಾಂತರಿ ಎನ್ನುತ್ತಾರೆ. ಯಾಕೆ ಕಾಂಗ್ರೆಸ್ ಬಿಟ್ಟು ಹೋಗಿದ್ರಿ ಎಂದು ಕೇಳುತ್ತಾರೆ. ಅವತ್ತು ನೀರಾವರಿ ಯೋಜನೆಗಾಗಿ ಪಕ್ಷ ಬಿಟ್ಟು ಹೋಗಿದ್ದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಪಕ್ಷಾಂತರ ಮಾಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

    ಸರ್ಕಾರದಲ್ಲಿ ನಾನು ಶಾಸಕನಾಗಿ ಸೇರಿಕೊಂಡ ನಂತರ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದಾರೆ. ನಾನು ಡಿಕೆ ಸುರೇಶ್ ಸೇರಿಕೊಂಡು ನೀರಾವರಿ ಯೋಜನೆಗೆ ಹೆಚ್ಚು ಒತ್ತು ಕೊಡುತ್ತೇವೆ. ನಾನು ಎರಡು ಬಾರಿ ಸೋತು ಸುಣ್ಣ ಆಗಿದ್ದೇನೆ. ಹಾಗಾಗಿ ನೀವು ಈ ಬಾರಿ ನನಗೆ ಆಶೀರ್ವಾದ ಮಾಡಬೇಕು. ನನ್ನ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಜಾತಿಗಣತಿ ವರದಿ ಆಧಾರದ ಮೇಲೆ ಹಳ್ಳಿಕಾರ್ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ

  • ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ನಮಗೆ ಮುಖ್ಯ ಅಲ್ಲ: ಪರಮೇಶ್ವರ್

    ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ನಮಗೆ ಮುಖ್ಯ ಅಲ್ಲ: ಪರಮೇಶ್ವರ್

    ಬೆಂಗಳೂರು: ಚನ್ನಪಟ್ಟಣದಲ್ಲಿ (Channapatna ByElection) ನಿಖಿಲ್ (Nikhil Kumaraswamy) ಸ್ಪರ್ಧೆ ನಮಗೆ ಮುಖ್ಯ ಅಲ್ಲ ಎಂದು ಗೃಹ ಸಚಿವ ಡಾ.ಜಿ‌.ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ನಾವು ಗೆಲ್ಲೋದಷ್ಟೇ ನಮಗೆ ಮುಖ್ಯ. ಅದಕ್ಕೆ ಬೇಕಾದ ರಣ ನೀತಿಯನ್ನು ನಾವು ಮಾಡ್ತೀವಿ. ಅವರು ಯಾರನ್ನಾದರೂ ನಿಲ್ಲಿಸಿಕೊಳ್ಳಲಿ ಎಂದಿದ್ದಾರೆ. ಇದನ್ನೂ ಓದಿ: ಸ್ವಂತ ಕಾರಿಲ್ಲ, ಸಾಲ ಇಲ್ಲ – ಶಿಗ್ಗಾಂವಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಆಸ್ತಿ ಎಷ್ಟಿದೆ?

    ಇದೇ ಸಂದರ್ಭದಲ್ಲಿ ಶಿಗ್ಗಾವಿಯಲ್ಲಿ ಅಜ್ಜಂ ಫೀರ್ ಬಂಡಾಯ ಸ್ಪರ್ಧೆ ವಿಚಾರವಾಗಿ, ಪ್ರಯತ್ನ ಮಾಡಿ ಮನವೊಲಿಕೆ ಮಾಡ್ತೀವಿ. ನಮ್ಮವರೇ ಹೆಚ್ಚು ಬಂಡಾಯ ಎದ್ದರೆ ಕಷ್ಟ. ಮನವೊಲಿಕೆ ಮಾಡುವ ಕೆಲಸ ಪಕ್ಷ ಮಾಡುತ್ತದೆ. ಅಂತಿಮವಾಗಿ ಯಾರು ಗೆಲ್ತಾರೆ ಎಂಬ ಮಾಹಿತಿ ಆಧಾರದ ಮೇಲೆಯೇ ಟಿಕೆಟ್ ಕೊಟ್ಟಿರುತ್ತಾರೆ. ಈ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದಿದ್ದಾರೆ.

    ಶಾಸಕ ಸತೀಶ್ ಸೈಲ್ ಬಂಧನ ವಿಚಾರ 2009ರ ಕೇಸ್ ಇದಾಗಿದ್ದು, ಅನಧಿಕೃತ ಗಣಿಗಾರಿಕೆ ಎಂದು ಕೋರ್ಟ್ ಹೇಳಿದೆ. ಹಿಂದೆ ಸೀಜ್ ಮಾಡಲಾಗಿತ್ತು. ಗೊತ್ತಿಲ್ಲದಂತೆ ರಫ್ತು ಮಾಡಿದ್ದರು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹಿಂದೆಯೂ ಅರೆಸ್ಟ್ ಆಗಿದ್ದರು, ನಂತರ ಬೇಲ್ ಮೇಲೆ ಬಿಟ್ಟಿದ್ದರು. ಕಾನೂನಿನಲ್ಲಿ ಮುಂದೆ ಏನಾಗಲಿದೆ ಎಂದು ನೋಡೋಣ ಎಂದಿದ್ದಾರೆ.

    ಮುಡಾ ಕೇಸ್ ವಿಚಾರವಾಗಿ, ಸಿಎಂ ಮೇಲ್ಮನವಿ ಸಲ್ಲಿಸಿದ್ದಾರೆ. ಡಬ್ಬಲ್ ಬೆಂಚ್‌ಗೆ ಹೋಗೋದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಆಗುತ್ತೆ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ಸಂಡೂರು ಉಪ ಚುನಾವಣೆ| 2.5 ಕೆ.ಜಿ ಚಿನ್ನ, 25 ಕೆಜಿ ಬೆಳ್ಳಿ – ಬಂಗಾರು ಬಳಿ ಆಸ್ತಿ ಎಷ್ಟಿದೆ?

  • ಚನ್ನಪಟ್ಟಣ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    ಚನ್ನಪಟ್ಟಣ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

    – ಭರ್ಜರಿ ರೋಡ್ ಶೋ ಮೂಲಕ ಶಕ್ತಿಪ್ರದರ್ಶನ

    ರಾಮನಗರ: ಚನ್ನಪಟ್ಟಣ ಉಪಚುನಾವಣಾ (Channapatna By Election) ಕಣ ರಂಗೇರಿದ್ದು, ಎನ್‌ಡಿಎ (NDA) ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ದೋಸ್ತಿ ನಾಯಕರೊಂದಿಗೆ ಚನ್ನಪಟ್ಟಣದ ಶೇರ್ವಾ ಹೋಟೆಲ್ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೂ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಮಾಜಿ ಡಿಸಿಎಂ ಅಶ್ವಥ್ ನಾರಾಯಣಗೌಡ, ಸಂಸದ ಡಾ.ಮಂಜುನಾಥ್ ಸೇರಿ ಜೆಡಿಎಸ್‌ನ ಶಾಸಕರು, ಮಾಜಿ ಸಚಿವರು ಭಾಗಿಯಾಗಿದ್ದರು. ಅಲ್ಲದೇ ಬಿಜೆಪಿ ಹಾಗೂ ಜೆಡಿಎಸ್‌ನ ಸುಮಾರು 20 ಸಾವಿರ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಪೇಜಾವರ ಶ್ರೀ ಬಗ್ಗೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜ ಆಕ್ರೋಶ

    ರೋಡ್ ಶೋ ಬಳಿಕ ತಾಲೂಕು ಕಚೇರಿಗೆ ಆಗಮಿಸಿ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ನಿಖಿಲ್‌ಗೆ ಹೆಚ್‌ಡಿಕೆ, ಆರ್.ಅಶೋಕ್, ಸದಾನಂದಗೌಡ, ಬಿ.ವೈ.ರಾಘವೇಂದ್ರ ಸಾಥ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಈ ಬಾರಿ ಚಕ್ರವ್ಯೂಹ ಬೇಧಿಸುವ ಶಕ್ತಿ ಚನ್ನಪಟ್ಟಣದ ಜನ ನೀಡುತ್ತಾರೆ. ಹಣ ಬಲ, ತೋಳ್ಬಲ ಯಾವುದೂ ನಡೆಯಲ್ಲ. ಚನ್ನಪಟ್ಟಣ ಜನ ನಮ್ಮ ಅಭಿವೃದ್ಧಿ ಕೆಲಸಗಳಿಗೆ ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ