Tag: ಚನ್ನಪಟ್ಟಣ

  • ನಿಮ್ಮನ್ನ ನಂಬಿ ಕೊನೆಯದಾಗಿ ಚುನಾವಣೆಗೆ ನಿಂತಿದ್ದೇನೆ, ಕೈ ಬಿಡಬೇಡಿ: ನಿಖಿಲ್

    ನಿಮ್ಮನ್ನ ನಂಬಿ ಕೊನೆಯದಾಗಿ ಚುನಾವಣೆಗೆ ನಿಂತಿದ್ದೇನೆ, ಕೈ ಬಿಡಬೇಡಿ: ನಿಖಿಲ್

    ರಾಮನಗರ: ನಾನು ಎರಡು ಬಾರಿ ಪೆಟ್ಟು ತಿಂದಿದ್ದೇನೆ. ಈ ಬಾರಿ ನಿಮ್ಮನ್ನ ನಂಬಿ ಕೊನೆಯದಾಗಿ ಚುನಾವಣೆಗೆ ನಿಂತಿದ್ದೇನೆ. ನನ್ನ ಕೈ ಬಿಡಬೇಡಿ ಎಂದು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಚನ್ನಪಟ್ಟಣ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ಚಕ್ಕೆರೆ ಗ್ರಾಮದಲ್ಲಿ ಮತಪ್ರಚಾರ ಮಾಡಿ ಮಾತನಾಡಿದ ಅವರು, ಚಕ್ಕೆರೆ ಗ್ರಾಮದಲ್ಲಿ ಜೆಡಿಎಸ್‌ನಲ್ಲಿ (JDS) ಗುರುತಿಸಿಕೊಂಡವರು ಕಾಂಗ್ರೆಸ್‌ಗೆ (Congress) ಹೋಗಿದ್ದಾರೆ. ಆದರೆ ಚಕ್ಕೆರೆಯಲ್ಲಿ ಅನೇಕ ಜನರು ಜೆಡಿಎಸ್ ಪಕ್ಷ ಕಟ್ಟಿದ್ದಾರೆ. ನಿಖಿಲ್ ಚುನಾವಣೆಗೆ ನಿಲ್ಲಬೇಕು ಎಂದು ಕ್ಷೇತ್ರದ ಜನರು ಮನವಿ ಮಾಡಿದ್ದರು. ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತ ಬೆಳವಣಿಗೆ. ಸಿಎಂ, ಡಿಸಿಎಂ, ಎಲ್ಲಾ ಸಚಿವರು ಒಬ್ಬ ನಿಖಿಲ್ ಸೋಲಿಸೋಕೆ ಬಂದಿದ್ದಾರೆ. ನನ್ನ ಎರಡು ಸೋಲು ಜನರು ಸೋಲಿಸಿದಲ್ಲ. ಜನರು ತಮ್ಮ ಮನಸಿನಲ್ಲಿ ನನಗೆ ಜಾಗ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಅಬಕಾರಿ ಪೊಲೀಸರ ಭರ್ಜರಿ ಬೇಟೆ – 40,000ಕ್ಕೂ ಅಧಿಕ ಕಲಬೆರಕೆ ಮದ್ಯ ಜಪ್ತಿ

    ನಾನು ಶಾಸಕ ಆಗಬೇಕು ಅಂತ ಚುನಾವಣೆಗೆ ನಿಂತಿಲ್ಲ. ನನಗೆ ನನ್ನ ಜವಾಬ್ದಾರಿ ಅರಿವಿದೆ. ಯುವಕನ ಜೊತೆ ನಿಲ್ಲಬೇಕು ಅಂತ ನೀವೆಲ್ಲ ಬಂದಿದ್ದೀರಾ. ನಿಖಿಲ್ ನಿಮ್ಮ ಹೃದಯ ಗೆಲ್ಲೋಕೆ ಬಂದಿದ್ದಾನೆ. ಬೇರೆ ಆಸೆಯಿಲ್ಲ. ಕುತಂತ್ರದಿಂದ ಎರಡು ಚುನಾವಣೆ ಸೋತೆ. ಬಳಿಕ ನಾನು ಚುನಾವಣೆಗೆ ಸ್ಪರ್ಧೆ ಮಾಡೋದು ಬೇಡ ಅಂತ ನಿರ್ಧಾರ ಮಾಡಿದ್ದೆ. ವಿರೋಧ ಪಕ್ಷಗಳು ನಿತ್ಯ ಟೀಕೆ ಮಾಡುತ್ತಿದ್ದಾರೆ. 2019 ಲೋಕಸಭೆ ಚುನಾವಣೆಯಲ್ಲಿ ಶಾಸಕರು, ಕಾರ್ಯಕರ್ತರ ಒತ್ತಾಯಕ್ಕೆ ಸ್ಪರ್ಧೆ ಮಾಡಿದ್ದೆ. ಜನ ಎಂದೂ ನನ್ನ ಕೈ ಬಿಡಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. 5 ವರ್ಷ ಕುಮಾರಸ್ವಾಮಿ ಸಿಎಂ ಅಂತ ಕಾಂಗ್ರೆಸ್ ಅವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡೋ ಭರವಸೆ ಕೊಟ್ಟಿದ್ದರು. ಅದರಂತೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದರು. 14 ತಿಂಗಳಲ್ಲಿ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ 11 ಸಾವಿರ ರೈತರ ಸಾಲಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿ ಯಾವುದೇ ಜಾತಿ, ಧರ್ಮ ನೋಡಿ ಸಾಲಮನ್ನಾ ಮಾಡಿಲ್ಲ. ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ಶಾಲೆಗೆ 25 ಎಕರೆ ದಾನ ಮಾಡಲು ಮಹಾರಾಜರ ವಂಶಸ್ಥರಾ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ಕೆಂಡ

    ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ರಾಮನಗರ-ಮಂಡ್ಯ ಮಧ್ಯೆ ಒಂದು ಕೈಗಾರಿಕಾ ಸ್ಥಾಪನೆಗೆ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ. ಕುಮಾರಸ್ವಾಮಿ ಮಾತು ಕೊಟ್ಟಿದ್ದನ್ನ ಉಳಿಸಿಕೊಂಡಿದ್ದಾರೆ. ಈ ಭಾಗಕ್ಕೆ ಕೈಗಾರಿಕೆ ತರಲು ನಾವು ಕೆಲಸ ಮಾಡುತ್ತೇವೆ. ದೇವೇಗೌಡರ ಬಗ್ಗೆ ಕಾಂಗ್ರೆಸ್ ಅವರು ಏನೇನೋ ಮಾತನಾಡುತ್ತಾರೆ. 1988ರಲ್ಲಿ ನಾನು ಹುಟ್ಟಿದೆ. ಆದರೆ ರಾಮನಗರ ಮತ್ತು ದೇವೇಗೌಡರ ಸಂಬಂಧ 1973ರಿಂದ ಪ್ರಾರಂಭವಾಗಿದೆ. ದೇವೇಗೌಡರ ಕಾಲಿನ ಮಂಡಿಗೆ 92 ವರ್ಷ ವಯಸ್ಸು ಆಗಿದೆ. ದೇಹಕ್ಕೆ ವಯಸ್ಸು ಆಗಿಲ್ಲ. ಹೋರಾಟದ ಕಿಚ್ಚು ಇನ್ನು ಅವರಿಗೆ ಇದೆ. ನಾನು ಹುಟ್ಟೋ 15 ವರ್ಷಕ್ಕಿಂತ ಮುಂಚೆ ನಿಮ್ಮ ಜೊತೆ ದೇವೇಗೌಡರು ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಮೇಲೂರು ಕೆರೆಯಲ್ಲಿ ತಾಯಿ-ಮಗನ ಶವ ಪತ್ತೆ; ಆತ್ಮಹತ್ಯೆ ಶಂಕೆ

    ಯೋಗೇಶ್ವರ್ ನಾನು ಆಧುನಿಕ ಭಗೀರಥ ಅಂತ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ಕೆರೆಗಳು ತುಂಬಲು ಕಾರಣ ಅಂದಿನ ಸಿಎಂ ಸದಾನಂದಗೌಡ. ಯೋಗೇಶ್ವರ್ ಅವರನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡಿದ್ದರು. ನಾವು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದೆವು. ಬರುತ್ತೇನೆ ಎಂದು ಬರಲಿಲ್ಲ. ಬಿಜೆಪಿಯಿಂದಲೇ ನಿಂತುಕೊಳ್ಳಿ ಅಂದರೂ ಕಾಂಗ್ರೆಸ್‌ಗೆ ಹೋದರು. ಯೋಗೇಶ್ವರ್ 6 ವರ್ಷಕ್ಕಿಂತ ಹೆಚ್ಚು ಒಂದು ಪಕ್ಷದಲ್ಲಿ ಇರಲ್ಲ. ತಾಲೂಕು ಪರ ಇವರು ಕೆಲಸ ಮಾಡುತ್ತಾರಾ? ಇದಕ್ಕೆ ಮೊದಲು ಉತ್ತರ ಕೊಡಲಿ. ನಾವು 107ಕೆರೆ ತುಂಬಿಸಿದ್ದೇವೆ, ನಾವು ಪ್ರಚಾರ ಪಡೆದಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ನಾವು ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಟ್ರಂಪ್‌ಗೆ `ಎಕ್ಸ್‌’ನಲ್ಲಿ ಪಾಕ್ ಪ್ರಧಾನಿ ಅಭಿನಂದನೆ – ಬ್ಯಾನ್ ಮಾಡಿದ್ದ ಸೋಶಿಯಲ್‌ ಮೀಡಿಯಾ ವೇದಿಕೆ ಬಳಸಿದ್ದಕ್ಕೆ ಜನರ ಆಕ್ಷೇಪ

    4 ತಿಂಗಳ ಹಿಂದೆ ಡಿಕೆಶಿಗೆ ಚನ್ನಪಟ್ಟಣ ಇರೋದು ಗೊತ್ತಾಯಿತು. ಈಗ 500 ಕೋಟಿ ಕೊಡುತ್ತೇವೆ, ಮನೆ ಕೊಡುತ್ತೇವೆ ಎನ್ನುತ್ತಾರೆ. ನೀವು ಯಾಕೆ ಒಂದೂವರೆ ವರ್ಷಗಳಲ್ಲಿ ಅಭಿವೃದ್ಧಿ ಕೆಲಸ ಈ ಭಾಗಕ್ಕೆ ಕೊಡಲಿಲ್ಲ? ನಿಮ್ಮನ್ನು ನಂಬಿಕೊಂಡು ಬಂದಿದ್ದೇನೆ. ಇದು ಪ್ರಾದೇಶಿಕ ಪಕ್ಷದ ಅಸ್ಥಿತ್ವದ ಪ್ರಶ್ನೆ. ನನ್ನನ್ನು ಒಂದು ಬಾರಿ ಪರೀಕ್ಷೆ ಮಾಡಿ. ದೇವೇಗೌಡ, ಕುಮಾರಸ್ವಾಮಿ ನಿಮಗೆ ಯಾವತ್ತು ಅನ್ಯಾಯ ಮಾಡಿಲ್ಲ. ನನಗೆ ಒಂದು ಅವಕಾಶ ಕೊಡಿ. ಮೂರೂವರೆ ವರ್ಷ ಇದೆ. ಒಂದು ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ: ಶ್ರೀರಾಮುಲು

  • ಡಿಕೆಶಿ ರೀತಿ ನಾನು ಲೂಟಿ ಮಾಡಿದ್ರೆ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡ್ತಿದ್ದೆ – ಹೆಚ್‌ಡಿಕೆ

    ಡಿಕೆಶಿ ರೀತಿ ನಾನು ಲೂಟಿ ಮಾಡಿದ್ರೆ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡ್ತಿದ್ದೆ – ಹೆಚ್‌ಡಿಕೆ

    ರಾಮನಗರ: ಡಿಕೆ ಶಿವಕುಮಾರ್ (DK Shivakumar) ರೀತಿ ನಾನು ಲೂಟಿ ಮಾಡಿದ್ದರೆ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡುತ್ತಿದ್ದೆ ಎಂದು ಡಿಸಿಎಂ ಡಿಕೆಶಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ಕೊಟ್ಟಿದ್ದಾರೆ.

    ಚನ್ನಪಟ್ಟಣದ (Channapatna) ಸಿದ್ದಾಪುರ ಗ್ರಾಮದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನ ತಾಲೂಕಿನಲ್ಲಿ ಶಾಲೆಗಳಿಗೆ 25 ಎಕರೆ ಭೂಮಿ ನೀಡಿದ್ದೇನೆ ಕುಮಾರಸ್ವಾಮಿ ಎಷ್ಟು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದ ಡಿಕೆಶಿಗೆ ಪ್ರತಿಕ್ರಿಯಿಸಿ, ನಾನು ನಿಮ್ಮ ರೀತಿ ಲೂಟಿ ಮಾಡಿಲ್ಲವಲ್ಲ. ಸರ್ಕಾರಿ ಶಾಲಾ ಕಟ್ಟಡದಲ್ಲಿ ಶಿಕ್ಷಕರಿಗೆ ಹಂಚಿಕೆಯಾದ ಆದ ರೂಮ್‌ನ್ನು ಶಿಕ್ಷಕರಿಗೆ ಕೊಡದೇ ಆಟ ಆಡಿಸಿದ್ದೀರಿ. ನಿಮ್ಮ ಚೇಲಾಗಳು ಅಲ್ಲಿ ಸೇರಿಕೊಂಡು ಯಾವ ರೀತಿ ಗೂಂಡಾಗಿರಿ ಮಾಡಿದ್ದರು ಎಂದು ಗೊತ್ತಿದೆ. ನಿಮ್ಮ ಹಾಗೆ ಲೂಟಿ ಮಾಡಿದ್ದರೆ ಕೇವಲ ಒಂದು ತಾಲೂಕಿಗೆ ಮಾತ್ರವಲ್ಲ, ರಾಜ್ಯದ ಪ್ರತಿ ತಾಲೂಕಿಗೆ 10 ಎಕರೆ ಜಾಗ ಕೊಡುತ್ತಿದ್ದೆ. ನೀವು ನನ್ನನ್ನು ಏನು ಪ್ರಶ್ನಿಸುತ್ತೀರಾ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: Waqf Amendment Bill | ವಿಪಕ್ಷ ನಾಯಕರಿಂದ ಜೆಪಿಸಿ ರಾಜ್ಯ ಪ್ರವಾಸ ಬಹಿಷ್ಕಾರ

    ಇವರೆಲ್ಲಾ ಯಾರಿಗೂ ಜಾಗ ಕೊಟ್ಟಿಲ್ಲ. ಬೇರೆ ಜಾಗವನ್ನು ಇವರು ಲೂಟಿ ಮಾಡುವುದೇ ಇವರ ಸರ್ಕಾರವಾಗಿದೆ. ಇವರು ಇಡೀ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಕಾರ್ಖಾನೆ ಹಾಕಲು ಬಂದವರಿಗೆ ನಮಗೆ ಪಾಲು ಎಷ್ಟು ಕೊಡುತ್ತೀರಿ ಎಂದು ಕೇಳುತ್ತಾರೆ. ಇಲ್ಲಿ ಕಾರ್ಖಾನೆಗಳ ನಿರ್ಮಾಣ ಮಾಡಲು ಯಾರು ಬರುತ್ತಾರೆ. ಬಂದವರು ಇಲ್ಲಿಂದ ಮಹರಾಷ್ಟçಕ್ಕೆ ಹೋಗಿದ್ದಾರೆ ಎಂದರು.

    ನನ್ನ ವಿರುದ್ದ ಪ್ರಚಾರ ಮಾಡಲು 15 ದಿನ ಮಂತ್ರಿಗಳು, 40 ಶಾಸಕರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಸಿಎಂ-ಡಿಸಿಎಂ ಸಹ ಇಲ್ಲಿಯೇ ಬಿಡಾರ ಹೂಡಿ ಅವರದ್ದೇ ತಂತ್ರಗಳನ್ನ ರೂಪಿಸುತ್ತಿದ್ದಾರೆ. ಅಭಿವೃದ್ದಿ ಬಗ್ಗೆ ದಿನಾಲು ಚರ್ಚೆ ಮಾಡುತ್ತಿದ್ದಾರೆ. ದೇವೇಗೌಡರು ನೀರಾವರಿ ಯೋಜನೆಗೆ ಹೋರಾಟ ಮಾಡಿದ್ದಾರೆ. ಇನ್ನೂ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸಮನ್ವಯತೆ ಸಾಧಿಸಿಲ್ಲ. ಕೇಂದ್ರದೊಂದಿಗೆ ಕಾಲು ಕರೆದು ಜಗಳ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ಕೇಂದ್ರ ಸರ್ಕಾರದೊಂದಿಗೆ ನಡೆದುಕೊಳ್ಳುವುದು ಗೊತ್ತಿಲ್ಲ ಕಿಡಿಕಾರಿದರು.

    ಮೇಕೆದಾಟು ನಿರ್ಮಾಣ ಕುರಿತು ಹೆಚ್‌ಡಿಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕೇಂದ್ರದಲ್ಲಿ ಮೂರನೇ ಬಾರಿ ಮೋದಿಯವರು ಪ್ರಧಾನಿಯಾಗಿ ನಾಲ್ಕು ತಿಂಗಳು ಕಳೆದಿದೆ. ನಮಗೂ ಜವಾಬ್ದಾರಿ ಇದೆ. ದೇವೇಗೌಡರ (HD Devegowda) ಹೋರಾಟ ನಿರಂತರವಾಗಿದೆ. ಅವರ ಜೀವನ ಕಳೆದಿರುವುದು ರಾಜ್ಯದ ನೀರಾವರಿ ಯೋಜನೆಗಳಿಗೆ ಅಷ್ಟೇ ಅಲ್ಲ. ಪ್ರಧಾನಿಯಾಗಿ ನರ್ಮದಾ ನದಿ ನೀರು ಹಂಚಿಕೆಗಾಗಿ, ಅಲ್ಲಿಂದ ಬಾಂಗ್ಲಾದೇಶ, ಪಶ್ಚಿಮ ಬಂಗಾಳದ ನದಿ ನೀರು ಹಂಚಿಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅದರಿಂದ ರಾಜ್ಯದ ಹಲವಾರು ನೀರಾವರಿ ಸಮಸ್ಯೆಗಳಿಗೆ ಈ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆ ಸೌಹಾರ್ದಯುತ ಸಂಬಂಧ ಇಲ್ಲ. ಪ್ರತಿನಿತ್ಯ ಕೇಂದ್ರ ಸರ್ಕಾರ ಜೊತೆ ಕಾಲು ಕೆರೆದು ಜಗಳ ಮಾಡುತ್ತಾರೆ. ಅವರ ನಡುವಳಿಕೆಗಳನ್ನ ನೋಡುತ್ತಿದ್ದಿರಲ್ಲ. ಇವರು ಎಲ್ಲಿಂದ ರಾಜ್ಯ ಅಭಿವೃದ್ಧಿ ಮಾಡುತ್ತಾರೆ. ಅಂತಿಮವಾಗಿ ಬಿಜೆಪಿ, ಜೆಡಿಎಸ್ ನಾಯಕರೇ ಇದಕ್ಕೆ ಪರಿಹಾರ ತರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ:ಹ್ಯಾಪಿ ಬರ್ತ್‌ಡೇ ಗೊಲ್ಲು: ಸಹೋದರನಿಗೆ ರಾಧಿಕಾ ಪಂಡಿತ್ ಲವ್ಲಿ ವಿಶ್

  • ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯ ನಿಶ್ಚಿತ: ಎಂಡಿ ಲಕ್ಷ್ಮೀನಾರಾಯಣ

    ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯ ನಿಶ್ಚಿತ: ಎಂಡಿ ಲಕ್ಷ್ಮೀನಾರಾಯಣ

    ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ (By Election) ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ನೇಕಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಂಡಿ ಲಕ್ಷ್ಮೀನಾರಾಯಣ (MD Lakshminarayana) ತಿಳಿಸಿದರು.

    ತುರುವೇಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನವೆಂಬರ್ 13 ರಂದು ನಡೆಯುವ ಉಪಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತು ಹಾಗೂ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದರು. ಇದನ್ನೂ ಓದಿ: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

    ಸರ್ಕಾರದ ಜನವಿರೋಧಿ, ಅಭಿವೃದ್ಧಿ ವಿರೋಧಿ ನೀತಿಗೆ ಜನತೆ ಈ ಮೂರು ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದು, ಕಾಂಗ್ರೆಸ್ ಸರ್ಕಾರ ಮುಖಭಂಗ ಅನುಭವಿಸಲಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ಥಳ ಮಹಜರ್‌ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಬಂಧನ

  • ಯಾವ ಕ್ಷೇತ್ರವೂ ರಾಜಕಾರಣಿಗಳ ಭದ್ರಕೋಟೆ ಅಲ್ಲ, ಜನರ ಭದ್ರಕೋಟೆ: ಮಹದೇವಪ್ಪ

    ಯಾವ ಕ್ಷೇತ್ರವೂ ರಾಜಕಾರಣಿಗಳ ಭದ್ರಕೋಟೆ ಅಲ್ಲ, ಜನರ ಭದ್ರಕೋಟೆ: ಮಹದೇವಪ್ಪ

    ಬೆಂಗಳೂರು: ಚನ್ನಪಟ್ಟಣ (Channapatna) ಸೇರಿ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ (Congress) ಗೆಲ್ಲಲಿದೆ ಎಂದು ಸಚಿವ ಮಹದೇವಪ್ಪ (HC Mahadevappa) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಚುನಾವಣೆಗಳು ಪ್ರತಿಷ್ಠೆಯೇ. ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲಬೇಕು ಎಂದು ಕೆಲಸ ಮಾಡುತ್ತೇವೆ. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನರ ಒಲವು ಕಾಂಗ್ರೆಸ್ ಪರವಾಗಿ ಇದೆ. ಉಪಚುನಾವಣೆ ಮುಂದಿನ ರಾಜಕೀಯಕ್ಕೆ ದಿಕ್ಸೂಚಿ ಆಗೋಕೆ ಹೇಗೆ ಸಾಧ್ಯ? ಉಪ ಚುನಾವಣೆ ದಿಕ್ಸೂಚಿ ಆಗಲ್ಲ. ವಿಪಕ್ಷಗಳು ಸರ್ಕಾರದ ಮೇಲೆ ಮಾಡೋದು ಆರೋಪ ಅಷ್ಟೇ. ಅವು ಸತ್ಯ ಅಲ್ಲ. 3 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದಂಗಡಿಗಳಿಂದ ತಿಂಗಳಿಗೆ 15 ಕೋಟಿ ಲಂಚ – ಅಬಕಾರಿ ಇಲಾಖೆ ವಿರುದ್ಧ ಗಂಭೀರ ಆರೋಪ

    ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣದಲ್ಲಿ ವಾತಾವರಣ ಚೆನ್ನಾಗಿದೆ. ಯೋಗೇಶ್ವರ್ 3 ಬಾರಿ ಎಂಎಲ್‌ಎ ಆಗಿದ್ದರು. ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಆರೋಗ್ಯ ಸಚಿವ ಆಗಿದ್ದಾಗ ಕಣ್ವಾ ಜಲಾಶಯದಿಂದ ನೂರು ಕೆರೆ ತುಂಬಿಸಿ ಜಾತ್ರೆ ರೀತಿ ಕಾರ್ಯಕ್ರಮ ಮಾಡಿದ್ದರು. ಅದಕ್ಕೆ ನಾನು ಹೋಗಿದ್ದೆ. 2013-18 ಸರ್ಕಾರ ಇದ್ದಾಗ ಚನ್ನಪಟ್ಟಣಕ್ಕೆ ನೂರಾರು ಕೋಟಿ ಮಂಜೂರು ಮಾಡಿದ್ದೆವು. ಅಲ್ಲೆಲ್ಲಾ ಕೆರೆ ಒಣಗಿ ಹೋಗಿತ್ತು. ಅದು ಹಸಿರಾಗಿ ಬದಲಾವಣೆ ಆಗೋಕೆ ಸಿದ್ದರಾಮಯ್ಯ ಕಾಲದಲ್ಲಿ ಕಣ್ವಾ ಜಲಾಶಯದ ಮೂಲಕ ಕೆರೆ ತುಂಬಿಸೋ ಯೋಜನೆ ಮಾಡಿದ್ದರು. ಯೋಗೇಶ್ವರ್ ಉತ್ತಮವಾಗಿ ಕೆಲಸ ಮಾಡಿದ್ದರು. ಹೀಗಾಗಿ ಜನರಿಗೆ ಯೋಗೇಶ್ವರ್ ಪರ ಒಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: Canada| ಹಿಂದೂಗಳ ಮೇಲೆ ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಹಲ್ಲೆ ಖಂಡಿಸಿ ಪ್ರತಿಭಟನೆ

    ಚನ್ನಪಟ್ಟಣ ಜೆಡಿಎಸ್‌ನ ಭದ್ರಕೋಟೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ಕ್ಷೇತ್ರವೂ ಯಾರ ಭದ್ರಕೋಟೆಯಲ್ಲ. ನನ್ನ ಕ್ಷೇತ್ರವೂ ಸೇರಿ ಯಾವುದೂ ಯಾರಿಗೂ ಭದ್ರಕೋಟೆ ಅಲ್ಲ. ಜನ ಆಯಾ ಸಂದರ್ಭದಲ್ಲಿ ಆಯಾ ಸಮಯದಲ್ಲಿ ಆಯಾ ವಿಷಯದ ಮೇಲೆ ತೀರ್ಮಾನ ಮಾಡುತ್ತಾರೆ. ಅದು ಜನರ ಭದ್ರಕೋಟೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಮುಡಾ ಕೇಸ್ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರೋ ಷಡ್ಯಂತ್ರ: ಮಹದೇವಪ್ಪ

    ಮೊಮ್ಮಗ ಪರ ದೇವೇಗೌಡ ಪ್ರಚಾರದ ಬಗ್ಗೆ ಮಾತನಾಡಿ, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನನಗೆ ದೇವೇಗೌಡರ ಆರೋಗ್ಯ ಮುಖ್ಯ. ಅವರ ಆರೋಗ್ಯ ಚೆನ್ನಾಗಿ ಇರಲಿ. ಅವರು ಪ್ರಚಾರ ಮಾಡೋ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು

  • ಚನ್ನಪಟ್ಟಣ ಫಲಿತಾಂಶದ ನಂತರ ಜೆಡಿಎಸ್, ಬಿಜೆಪಿ ಜೊತೆ ಮರ್ಜ್ ಆಗಬಹುದು: ಡಿಕೆಶಿ

    ಚನ್ನಪಟ್ಟಣ ಫಲಿತಾಂಶದ ನಂತರ ಜೆಡಿಎಸ್, ಬಿಜೆಪಿ ಜೊತೆ ಮರ್ಜ್ ಆಗಬಹುದು: ಡಿಕೆಶಿ

    ಬೆಂಗಳೂರು: ಚನ್ನಪಟ್ಟಣ ಫಲಿತಾಂಶದ (Channapatna) ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಬಹುದು. ಜೆಡಿಎಸ್ ಬಿಜೆಪಿ ಜೊತೆ ಮರ್ಜ್ ಆಗಬಹುದು. ನನ್ನ ಪ್ರಕಾರ ಅದೇ ಬದಲಾವಣೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಮ್ಮ ಸರ್ಕಾರ ಪತನ ಅನ್ನೋದು ಭ್ರಮೆ. ಸಾಮ್ರಾಜ್ಯ ಮುಳುಗಿರುವುದು ನನಗೂ ಗೊತ್ತು. ಉದಯಿಸಿದ ಸೂರ್ಯ ಕೆಳಗೆ ಬರಲೇಬೇಕು. ಶ್ರೇಯಸ್ಸಾಗಬೇಕಾದರೆ ಧರ್ಮರಾಯನ ಧರ್ಮತ್ವ ಇರಬೇಕು. ವಿಧುರನ ನೀತಿ, ಕೃಷ್ಣನ ತಂತ್ರ ಇರಬೇಕು. ಕರ್ಣನ ದಾನತ್ವ ಇರಬೇಕು, ಭೀಮನ ಬಲ ಇರಬೇಕು. ಇದು ಯಾವುದು ಕುಮಾರಸ್ವಾಮಿಗೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: Bengaluru| ಹಸುಗೂಸನ್ನು ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಎಸೆದು ಕೊಲೆ

    ಒಂದು ದೇವಸ್ಥಾನ ಕಟ್ಟಿಲ್ಲ, ಒಂದು ಸೈಟ್ ಕೊಟ್ಟಿಲ್ಲ, ಬಡವರಿಗೆ ಒಂದು ಮನೆ ಕೊಟ್ಟಿಲ್ಲ. ಜನ ಯಾಕೆ ವೋಟ್ ಹಾಕುತ್ತಾರೆ? ಕುಮಾರಸ್ವಾಮಿ ಕಣ್ಣೀರು ಒರೆಸಿದ ಅಂತ ಯಾವ ರೈತ ಹೇಳುತ್ತಾನೆ ತೋರಿಸಿ. ನೀನು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದೆ ದಯವಿಟ್ಟು ತೋರಿಸಪ್ಪ ಎಂದು ಹರಿಹಾಯ್ದರು. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿಗೆ ಪ್ರಧಾನಿ ಮೋದಿ ಖಂಡನೆ

  • ಚುನಾವಣೆಗಾಗಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ: ಮಹದೇವಪ್ಪ

    ಚುನಾವಣೆಗಾಗಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ: ಮಹದೇವಪ್ಪ

    ಬೆಂಗಳೂರು: ಚುನಾವಣೆ (Election) ಸಮಯದಲ್ಲಿ ಪದೇ ಪದೇ ಕಣ್ಣೀರು (Tears) ಹಾಕೋದು ಸರಿಯಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಮತ್ತು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಸಚಿವ ಮಹದೇವಪ್ಪ (Mahadevappa) ತಿರುಗೇಟು ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಎಲ್ಲಾ ಮತಗಳ ಮೇಲೆ ಕಣ್ಣು ಇಟ್ಟಿರುತ್ತಾರೆ.ಆದರೆ ಜನ ಎಲ್ಲವನ್ನೂ ತೀರ್ಮಾನ ಮಾಡ್ತಾರೆ. ಏನು ಕೆಲಸ ಮಾಡುತ್ತಾರೆ ಏನು ಅಭಿವೃದ್ಧಿ ಮಾಡುತ್ತಾರೆ ಎಂದು ಜನ ನೋಡಿ ಮತ ಹಾಕುತ್ತಾರೆ. ಚನ್ನಪಟ್ಟಣ ಕಾಂಗ್ರೆಸ್ ಪರ ಇದೆ. ಈಗ ವಾತಾವರಣ ಶುರುವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭುಗಿಲೆದ್ದ ವಕ್ಫ್‌ ಆಸ್ತಿ ವಿವಾದ – ರಾಜ್ಯಾದ್ಯಂತ ಕೇಸರಿ ಪಡೆಯ ಪ್ರತಿಭಟನೆ ಜೋರು

    HDK Nikhil

    ಕುಮಾರಸ್ವಾಮಿ ಮತ್ತು ನಿಖಿಲ್ ಕಣ್ಣೀರು ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಣ್ಣೀರು ಹಾಕಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಭಾರ ಕಡಿಮೆ ಆಗುತ್ತೆ. ಮನಸು ಹಗರು ಆಗುತ್ತೆ. ಡಿಕೆ ಸುರೇಶ್ ಸೋತಿದ್ದಕ್ಕೆ ಅವರು ಅತ್ತರು. ಅಭಿವೃದ್ಧಿ ಮಾಡಿ ಸೋತ್ರು ಎಂದು ಅತ್ತರು. ಆದರೆ ಚುನಾವಣೆ ಬಂದಾಗ ಅಳೋದು ಸರಿಯಲ್ಲ. ಅವರೆಲ್ಲ ಲೀಡರ್‌ಗಳು. ಹೀಗೆ ಅಳೋದು ಸರಿಯಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಮೀರ್ ಇಸ್ಲಾಂ ಧರ್ಮ, ವಕ್ಫ್ ಬೋರ್ಡ್‌ಗೆ ನ್ಯಾಯ ಒದಗಿಸೋ ಪ್ರಯತ್ನದಲ್ಲಿದ್ದಾರೆ: ಮಾದಾರ ಚನ್ನಯ್ಯ ಶ್ರೀ

    ದೇವೇಗೌಡರು ಅಂಬ್ಯುಲೆನ್ಸ್ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಆರೋಗ್ಯ ಚೆನ್ನಾಗಿ ಇರಲಿ. ಕಣ್ಣೀರು, ರಾಜಕೀಯ, ಕ್ಷೇತ್ರದ ಅಭಿವೃದ್ಧಿಗೆ ಎಲ್ಲಿ ಸಂಬಂಧ ಇದೆ. ಜನರು ಕ್ಷೇತ್ರದ ಅಭಿವೃದ್ಧಿಯನ್ನು ಚುನಾವಣೆಯಲ್ಲಿ ನೋಡುತ್ತಾರೆ. ಕಣ್ಣೀರಿಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್‌ – ಕನಿಷ್ಠ 20 ಮಂದಿ ದಾರುಣ ಸಾವು

  • ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ: ಡಿಕೆಶಿ

    ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ: ಡಿಕೆಶಿ

    ಬೆಂಗಳೂರು: ಚನ್ನಪಟ್ಟಣದಲ್ಲಿ (Channapatna) ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ. ನಾವು ಮಾಡಿದ ಕೆಲಸಕ್ಕೆ ಪಟ್ಟಿ ಹಾಕಿ ಚನ್ನಪಟ್ಟಣದ ಜನ ಮಾರ್ಕ್ಸ್ ಕೊಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಚನ್ನಪಟ್ಟಣ ಪ್ರಚಾರದ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣದಲ್ಲಿ ಯಾವ ರಣನೂ ಇಲ್ಲ, ರಂಗವೂ ಇಲ್ಲ. ಮತದಾರನ ಹೃದಯ ಗೆಲ್ಲಬೇಕು. ನಾವು ಮಾಡಿರುವ ಕೆಲಸಕ್ಕೆ, ಮಾಡುತ್ತಿರುವ ಕೆಲಸಕ್ಕೆ ಜನ ಗುರುತಿಸಿ ಎಂದು ಕೇಳಲು ಹೋಗುತ್ತಿದ್ದೇವೆ. ರಣರಂಗ ಆಡಿದವರೆಲ್ಲ ಮುಗಿದು ಹೋಗಿದ್ದಾರೆ. ಈಗ ಏನಿದ್ದರೂ ಜನರ ಲಾಭ ಮಾತ್ರ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ರು. ಇದನ್ನೂ ಓದಿ: ವಿಶ್ವಗುರು ಬಸವಣ್ಣರನ್ನೇ ಕತ್ತಲೆಗೆ ದೂಡಿದ ಬಿಬಿಎಂಪಿ – ನಿರ್ವಹಣೆ ಇಲ್ಲದೇ ಉದುರುತ್ತಿದೆ ಪುತ್ಥಳಿ ಬಣ್ಣ!

    HD Kumaraswamy 1

    ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಯಕ ಆದವನು ಮತದಾರರಿಗೆ ಏನು ಕೊಡುತ್ತಾನೆ, ಯಾವ ರೀತಿ ಸಹಾಯ ಮಾಡುತ್ತಾನೆ ಅವರ ಬದುಕನ್ನು ಯಾವ ರೀತಿ ಬದಲಾವಣೆ ಮಾಡುತ್ತಾನೆ ಅದು ಬಹಳ ಮುಖ್ಯ. ಯಾರು ಏನೇನು ಮಾಡಿದ್ದಾರೆ ಅನ್ನೋ ಪಟ್ಟಿ ಈ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುತ್ತದೆ. ಜನ ತೀರ್ಮಾನ ಮಾಡುತ್ತಾರೆ. ಡಿಕೆ ಸುರೇಶ್, ಡಿಕೆ ಶಿವಕುಮಾರ್, ಕುಮಾರಸ್ವಾಮಿ, ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನರು ಪಟ್ಟಿ ಹಾಕುತ್ತಾರೆ. ಅದು ಬಿಟ್ಟರೆ ಯಾವ ರಣನೂ ಇಲ್ಲ, ರಂಗನೂ ಇಲ್ಲ ಏನು ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್‌ ಜಾಮ್!

    ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿ ನಾಯಕರಿಂದ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರು ಸಾಥ್ ಕೊಟ್ಟಿರೋದು ಒಳ್ಳೆಯದು ಅಲ್ಲವಾ. ಬಿಜೆಪಿ ಪಾದಯಾತ್ರೆಗಂತೂ ಜೆಡಿಎಸ್ ಅವರು ಸಾಥ್ ಕೊಟ್ಟಿರಲಿಲ್ಲ. ಆದರೂ ಜೆಡಿಎಸ್‌ಗೆ ಬಿಜೆಪಿ ಅವರು ಸಾಥ್ ಕೊಡುತ್ತಿದ್ದಾರೆ, ಕೊಡಲಿ ಎಂದು ಬಿಜೆಪಿ ನಾಯಕರಿಗೆ ತಿವಿದರು. ಇದನ್ನೂ ಓದಿ: ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ

  • ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಅಶೋಕ್

    ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಅಶೋಕ್

    ರಾಮನಗರ: ಈಗ ನಡೆಯುತ್ತಿರುವ ಉಪಚುನಾವಣೆ ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ ಎಂದು ಪ್ರತಿಪಕ್ಷ ‌ನಾಯಕ ಆರ್.ಅಶೋಕ್‌ (R.Ashok) ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. ಈ ವೇಳೆ ಚನ್ನಪಟ್ಟಣದಲ್ಲಿ ವ್ಯಕ್ತಿ ಹೆಸರಲ್ಲಿ ಚುನಾವಣೆ ನಡೆಯುತ್ತಿಲ್ಲ. ಇದು ಎನ್‌ಡಿಎ ಹಾಗೂ ಕಾಂಗ್ರೆಸ್ (Congress) ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನರ ಅನುಕಂಪವಿದೆ. ಅವರು ಈ ಹಿಂದೆ ಸೋತಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಜನರು ಗುರುತಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಲೂಟಿ ಮಾಡುತ್ತಲೇ ಇದೆ. ಅಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ದೂರಿದ್ದಾರೆ.

    ಗ್ಯಾರಂಟಿಗಳಿಂದಾಗಿ ಮಣ್ಣು ಎತ್ತಿ ಹಾಕಲು ‌ಕೂಡ ಹಣವಿಲ್ಲ ಎಂದು ಕಾಂಗ್ರೆಸ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 16 ತಿಂಗಳಿಂದ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ವಕ್ಫ್ ಬೋರ್ಡ್ (Waqf Controversy) ಮುಸ್ಲಿಮರ ಬೋರ್ಡ್ ಆಗಿ ಬದಲಾಗಿದೆ. ದೇವಸ್ಥಾನ, ಸ್ಮಶಾನ, ಶಾಲೆ, ರೈತರ ಭೂಮಿ ಎಂದು‌ ನೋಡದೆ ಎಲ್ಲ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜಮೀನು ಬರೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

    ನಾನು ಕೋಲಾರ, ಶ್ರೀರಂಗಪಟ್ಟಣಕ್ಕೂ ಹೋಗಿ ಪ್ರತಿಭಟನೆ ಮಾಡುತ್ತೇನೆ. ಶಾಲೆ, ದೇವಸ್ಥಾನಗಳ ಜಮೀನಿನ ಪಹಣಿಯಲ್ಲಿ ಸರ್ಕಾರದ ಜಾಗವೆಂದು ನಮೂದಿಸುವವರೆಗೆ ಹಾಗೂ ರೈತರ ಜಾಗವನ್ನು ರೈತರಿಗೆ ನೀಡುವವರೆಗೆ ಪ್ರತಿಭಟಿಸುತ್ತೇವೆ. ಮುಸ್ಲಿಮರು ನಮಗೆ ಮತ ಹಾಕಬೇಕೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಈ ತಂತ್ರ ಮಾಡಿದೆ. ದೇಶ ಉಳಿಸಿ, ರೈತರನ್ನು ಉಳಿಸಿ ಎಂದು ಬಿಜೆಪಿ (BJP) ಹೋರಾಟ ಮಾಡುತ್ತಿದೆ. ಚನ್ನಪಟ್ಟಣದ ಜನರು ಎನ್‌ಡಿಎ ಬೆಂಬಲಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

  • ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ

    ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ

    – ನ.6ಕ್ಕೆ `ಕೈ’ ಅಭ್ಯರ್ಥಿ ಪರ ಸಿಎಂ, ಡಿಸಿಎಂ ಮತಯಾಚನೆ
    – ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಹೆಚ್‌ಡಿಕೆ ತಂತ್ರ

    ಹಾವೇರಿ: ದೀಪಾವಳಿ ಬಳಿಕ ಹಾವೇರಿ, ಚನ್ನಪಟ್ಟಣದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಲಿದೆ. ಹಾವೇರಿಯ‌ (Haveri) ಶಿಗ್ಗಾಂವಿಯಲ್ಲಿ (Shiggaon) ಬಿಜೆಪಿ ಆಭ್ಯರ್ಥಿ ಪರ ವಿಜಯೇಂದ್ರ, ಯಡಿಯೂರಪ್ಪ ಪ್ರಚಾರಕ್ಕೆ ಪ್ಲ್ಯಾನ್ ನಡೆಸಿದ್ದಾರೆ. ಅತ್ತ ಕಾಂಗ್ರೆಸ್ ಅಭ್ಯರ್ಥಿ ಯಾಸಿನ್ ಪರ ಸಿಎಂ, ಡಿಸಿಎಂ ಪ್ರಚಾರ ನಡೆಸಲಿದ್ದಾರೆ.

    ದೀಪಾವಳಿ ಬಳಿಕ ಶಿಗ್ಗಾಂವಿ ಉಪಚುನಾವಣೆಯಲ್ಲಿ (By Election) ಪ್ರಚಾರ ಭರಾಟೆ ಜೋರಾಗಲಿದೆ. ದೊಡ್ಡ ದೊಡ್ಡ ರಾಜಕೀಯ ಘಟಾನುಘಟಿಗಳು ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ನವೆಂಬರ್ 5 ರಂದು ಭರತ್ ಬೊಮ್ಮಾಯಿ (Bharath Bommai) ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ. ಇನ್ನು ನವೆಂಬರ್ 11 ರಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಬಿಎಸ್‌ವೈ ನೇತೃತ್ವದಲ್ಲಿ ಬೃಹತ್ ಸಮಾವೇಶ, ರೋಡ್ ಶೋಗೆ ಸಿದ್ಧತೆ ನಡೆಸಲಾಗಿದೆ. ಇತ್ತ ನವೆಂಬರ್ 6ರಂದು ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ (Yasir Khan Patan) ಪರ ಸಿಎಂ ಸಿದ್ದರಾಮಯ್ಯ, ಡಿಕೆಶಿ ಎರಡನೇ ಸುತ್ತಿನ ಅದ್ಧೂರಿ ಪ್ರಚಾರ ನಡೆಸಲಿದ್ದಾರೆ. ಅಲ್ಲದೇ ಶಿಗ್ಗಾಂವಿಯಲ್ಲೇ ಕಾಂಗ್ರೆಸ್ ಸಚಿವರು, ಶಾಸಕರ ದಂಡು ಮೊಕ್ಕಾಂ ಹೂಡಲಿದ್ದಾರೆ. ಇದನ್ನೂ ಓದಿ: ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?

    ಅತ್ತ ರಾಮನಗರದಲ್ಲೂ (Ramanagara) ಉಪಚುನಾವಣೆ ಪ್ರಚಾರ ಭರಾಟೆ ಜೋರಾಗಿದೆ. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕುಮಾರಸ್ವಾಮಿ ತಂತ್ರ ರೂಪಿಸಿದ್ದಾರೆ. ಹೇಗಾದರೂ ದಲಿತ ಹಾಗೂ ಹಿಂದಳಿದ ವರ್ಗಗಳ ಮತ ಕ್ರೂಡೀಕರಣಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ವೇಳೆ ಎಸ್ಸಿ-ಎಸ್ಟಿ ಸಮುದಾಯ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಬೆಂಬಲ ನೀಡುವಂತೆ ಕರೆ ಕೊಡಲಾಗಿದ್ದು, ಯೋಗೇಶ್ವರ್ ಪದೇಪದೇ ಪಕ್ಷ ಬದಲಿಸುವ ವ್ಯಕ್ತಿ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ಯೋಗೇಶ್ವರ್ ನಂಬಬೇಡಿ. ಈ ಬಾರಿ ನಿಖಿಲ್ ಕುಮಾರಸ್ವಾಮಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಳಿ ಪೂಜೆ ವೇಳೆ ಅಗ್ನಿ ಅವಘಡ – ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಬಲಿ

    ಇನ್ನು ನಿಖಿಲ್ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೂ ಮಾಜಿ ಶಾಸಕ ಅನ್ನದಾನಿ ಟಾಂಗ್ ಕೊಟ್ಟಿದ್ದಾರೆ. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಕೂಡ ಕುಟುಂಬ ರಾಜಕಾರಣದಿಂದ ಬಂದವರು. ಉತ್ತರ ಪ್ರದೇಶದಲ್ಲಿ ಹುಟ್ಟಿದ್ದರೂ ಕೇರಳದ ವಯನಾಡಿನಲ್ಲಿ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಅಭಿವೃದ್ಧಿ ಮಾಡಿರೋ ನಾಯಕರ ಮಗ ಇಲ್ಲಿ ಸ್ಪರ್ಧೆ ಮಾಡೋದು ತಪ್ಪಾ ಎಂದು ಪ್ರಶ್ನೆ ಮಾಡಿ ಕಾಂಗ್ರೆಸ್ ವಿರುದ್ಧ ಮಳವಳ್ಳಿ ಮಾಜಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಯಚೂರು| ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ – ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮ

    ಒಟ್ಟಾರೆ ಶಿಗ್ಗಾಂವಿಯಲ್ಲಿ ಘಟಾನುಘಟಿಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡೋದು ಒಂದೆಡೆ ಆದರೆ ಚನ್ನಪಟ್ಟಣದಲ್ಲಿ ನಿಖಿಲ್ ಗೆಲ್ಲಿಸಲು ಜೆಡಿಎಸ್ ಸಭೆ ಮೇಲೆ ಸಭೆ ನಡೆಸುತ್ತಿದೆ. ಗೆಲುವು ಯಾರಿಗೆ ಎಂಬುದು ಚುನಾವಣಾ ಫಲಿತಾಂಶದ ದಿನ ತಿಳಿಯಬೇಕಿದೆ. ಇದನ್ನೂ ಓದಿ: ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ

  • 17 ಕೆರೆ ತುಂಬಿಸಿದವ್ರನ್ನ ಭಗೀರಥ ಅನ್ನೋದಾದ್ರೆ 107 ಕೆರೆ ತುಂಬಿಸಿದ ನನ್ನನ್ನು ಏನಂತೀರಿ? – ಹೆಚ್‌ಡಿಕೆ

    17 ಕೆರೆ ತುಂಬಿಸಿದವ್ರನ್ನ ಭಗೀರಥ ಅನ್ನೋದಾದ್ರೆ 107 ಕೆರೆ ತುಂಬಿಸಿದ ನನ್ನನ್ನು ಏನಂತೀರಿ? – ಹೆಚ್‌ಡಿಕೆ

    – ನಾವು ಭಗೀರಥರು ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದೇವೆಯೇ?

    ರಾಮನಗರ: ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾದರೆ, 107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಪ್ರಶ್ನಿಸಿದ್ದಾರೆ.

    ಚನ್ನಪಟ್ಟಣದಲ್ಲಿ (Channapatna) ಕಾಂಗ್ರೆಸ್‌ನಿಂದ (Congress) ಜೆಡಿಎಸ್ ಸೇರಿದ ಮುಖಂಡರನ್ನು ಬರಮಾಡಿಕೊಂಡ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಮುಖ್ಯಮಂತ್ರಿಯಾಗಿ ಹಾಗೂ ಐದು ವರ್ಷ ಚನ್ನಪಟ್ಟಣ ಶಾಸಕನಾಗಿ ನಾನು 107 ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಅವರದೇ ಸರ್ಕಾರ ಇದೆ, ಕಡತಗಳನ್ನು ತೆಗೆದು ನೋಡಲಿ. ನಾನು 17 ಕೆರೆಗಳಿಗೆ ನೀರು ತುಂಬಿಸಿದೆ ಎಂದು ಹೇಳುತ್ತಾರೆ. 107 ಕೆರೆಗಳಿಗೆ ನೀರು ತುಬಿಸಿದ್ದನ್ನು ಇವರು ಯಾಕೆ ಮರೆಮಾಚುತ್ತಾರೆ? ನಿಜ ಹೇಳುವುದಕ್ಕೆ ಏನಾಗಿದೆ ಅವರಿಗೆ? ಕಡತ ಇಲ್ಲವೇ? ಆದೇಶಗಳು ಇಲ್ಲವೇ? ತೆರೆದು ನೋಡಲಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.

    ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸದಿದ್ದರೆ ಇವರು 17 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ ಆಗುತ್ತಿತ್ತಾ? ಇವತ್ತು ಚನ್ನಪಟ್ಟಣ, ರಾಮನಗರ ತಾಲ್ಲೂಕಿನ ಜನರಿಗೆ ಆ ಜಲಾಶಯ ಜೀವನಾಧಾರವಾಗಿದೆ. ಅದನ್ನೇಕೆ ಇವರು ಹೇಳುವುದಿಲ್ಲ? ಹಾಗಾದರೆ ಒಂದು ಬೃಹತ್ ಜಲಾಶಯವನ್ನೇ ಕಟ್ಟಿಸಿದ ದೇವೇಗೌಡರನ್ನು ಏನೆಂದು ಕರೆಯಬೇಕು? 107 ಕೆರೆಗಳಿಗೆ ನೀರು ತುಂಬಿಸಿದ ನನ್ನನ್ನು ಏನೆಂದು ಕರೆಯಬೇಕು? ನಾವು ಭಗೀರಥರು ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದೇವೆಯೇ ಎಂದು ಸಿ.ಪಿ ಯೋಗೇಶ್ವರ್‌ಗೆ ತಿರುಗೇಟು ನೀಡಿದ್ದಾರೆ.

    ಚನ್ನಪಟ್ಟಣ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಂಸದ ಸುರೇಶ್ ಸವಾಲಿನ ವಿಚಾರಕ್ಕೆ, ಚನ್ನಪಟ್ಟಣಕ್ಕೆ ಸುರೇಶ್ ಕೊಡುಗೆ ಏನು? ದಿನವೂ ರಾತ್ರಿ ಮತ್ತಿಕೆರೆ ಹತ್ತಿರ ಲೋಡುಗಟ್ಟಲೇ ಕಲ್ಲು ಬರುತ್ತೇ, ಹೊರದೇಶಕ್ಕೆ ಕಳಿಸುವುದಕ್ಕೆ ಅದೇ ಅವರ ಕೊಡುಗೆ. ಅಂತಹವರ ಜೊತೆ ನಾನು ಬಹಿರಂಗ ಚರ್ಚೆಗೆ ಬರಬೇಕಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕರ ವಿಚಾರಕ್ಕೆ, ಅವರಿಗೆ ಕಣ್ಣೀರೇ ಬರುವುದಿಲ್ಲವೇ? ಕಣ್ಣೀರು ಬರದಿದ್ದರೆ ಅವರು ಮನುಷ್ಯರೇ ಅಲ್ಲ. ಮನುಷ್ಯತ್ವ ಇರುವವರಿಗೆ ಮಾತ್ರ ಕಣ್ಣೀರು ಬರುತ್ತದೆ ಎಂದಿದ್ದಾರೆ.