Tag: ಚಂದನವನ

  • ನವೀನ್ ವ್ಯಕ್ತಿತ್ವ ಪ್ರಶಂಸಿಸಿದ ಚಂದನವನದ ಮೋಹಕತಾರೆ

    ನವೀನ್ ವ್ಯಕ್ತಿತ್ವ ಪ್ರಶಂಸಿಸಿದ ಚಂದನವನದ ಮೋಹಕತಾರೆ

    ಮೋಹಕತಾರೆ ರಮ್ಯಾ ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಶೇಖರಪ್ಪ ವ್ಯಕ್ತಿತ್ವದ ಬಗ್ಗೆ ಪ್ರಶಂಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

    Ukraine Russia naveen

    ನಿನ್ನೆ ನವೀನ್ ಶೇಖರಪ್ಪ ಉಕ್ರೇನ್-ರಷ್ಯಾ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಚಂದನವನ ಸೇರಿದಂತೆ ಅನೇಕ ಗಣ್ಯರು ನವೀನ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇನ್‍ಸ್ಟಾಗ್ರಾಮ್ ನಲ್ಲಿ ರಮ್ಯಾ ಅವರು ನವೀನ್ ತನ್ನ ಸ್ನೇಹಿತನ ಜೊತೆ ಚಾಟ್ ಮಾಡಿದ್ದ ಫೋಟೋ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಗೆ, ಕರ್ನಾಟಕದ ಹಾವೇರಿಯ 21 ವರ್ಷ ವಯಸ್ಸಿನ ನವೀನ್ ಶೇಖರಪ್ಪ 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ. ನಿನ್ನೆ ಉಕ್ರೇನ್‍ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಅವನು ಮತ್ತು ಅವನ ಸ್ನೇಹಿತರು ದಿನಗಟ್ಟಲೆ ಊಟ ಮತ್ತು ನೀರಿಲ್ಲದೆ ಬಂಕರ್‌ಗಳಲ್ಲಿ ಇದ್ದರು. ನವೀನ್ ಮತ್ತು ಆತನ ಸ್ನೇಹಿತ(ಚಾಟ್‍ನಲ್ಲಿ) ಎಲ್ಲರಿಗೂ ಆಹಾರವನ್ನು ತರಲು ಸ್ವಯಂಪ್ರೇರಿತರಾಗಿ ಹೊರ ಹೋಗಲು ನಿರ್ಧರಿಸಿದ್ದಾರೆ. ಆಹಾರವನ್ನು ತರಬೇಕು ಎಂದು ಹೊರಟಾಗ ನವೀನ್ ಸ್ನೇಹಿತ ಜಾಕೆಟ್ ಧರಿಸಿರಲಿಲ್ಲ. ಉಕ್ರೇನ್ ನಲ್ಲಿ ಹೆಚ್ಚು ಚಳಿಯಾಗಿದ್ದರಿಂದ ನವೀನ್ ತನ್ನ ಸ್ನೇಹಿತನನ್ನು ಬಂಕರ್‍ಗೆ ಹಿಂತಿರುಗಲು ಹೇಳಿದರು. ಅವರು ತನ್ನ ಸ್ನೇಹಿತರಿಗೆ ಆಹಾರವನ್ನು ತರಲು ಕಿರಾಣಿ ಅಂಗಡಿಗೆ ಒಬ್ಬನೇ ಹೋದನು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

    ನಮ್ಮೆಲ್ಲರಿಗಿಂತ ಹೆಚ್ಚು ಮಾನವೀಯತೆ ನವೀನ್ ಅವರಲ್ಲಿ ಇತ್ತು. ಅವರು ಬೇರೆಯವರ ಬಗ್ಗೆ ಕಾಳಜಿ ವಹಿಸಿದ್ದರಿಂದ ಅವರೊಬ್ಬರೇ ಹೊರಬಂದರು. ಅವರಿಗೆ ಸಹಾನುಭೂತಿ ಇತ್ತು. ಅವರು ಧೈರ್ಯಶಾಲಿಯಾಗಿದ್ದರು. ಯುದ್ಧದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಆಡಳಿತವು ವೇಗವಾಗಿ ಪ್ರತಿಕ್ರಿಯಿಸದ ಕಾರಣ ಈ ಸಾವು ಸಂಭವಿಸಿದೆ. ಪ್ರಜ್ಞೆಯಿಲ್ಲದ ಯುದ್ಧದಿಂದ ಉಂಟಾದ ಸಾವಿಗೆ ಟ್ರೋಲ್‍ಗಳು ಈ ಹುಡುಗನನ್ನು ದೂಷಿಸುತ್ತಿದೆ. ಅನೇಕ ಜನರ ಜೀವಗಳನ್ನು ಉಳಿಸಿದ ಹುಡುಗನ ಬಗ್ಗೆ ಅವರು ತುಂಬಾ ದ್ವೇಷವನ್ನು ಹೊಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    RAMYA

    ಹುಡುಗ ಮೃತಪಟ್ಟ ಕಾರಣ ನಾನು ಈ ಪೋಸ್ಟ್ ಮಾಡುತ್ತಿದ್ದೇನೆ. ಇದರಿಂದ ಅವನ ಸ್ನೇಹಿತರು ಮತ್ತು ಕುಟುಂಬಕ್ಕೆ ಹೆಚ್ಚು ಕಷ್ಟಕೊಡಬೇಡಿ. ಅವರನ್ನು ಶಾಂತಿಯಿಂದ ಇರಲು ಬಿಡಿ. ನವೀನ್ ಸ್ನೇಹಿತರು ಮತ್ತು ಕುಟುಂಬದವರು ನಿಮ್ಮ ಸಹಾನುಭೂತಿ ಮತ್ತು ಪ್ರೀತಿಗೆ ಅರ್ಹರು ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬೆಳಗಾವಿ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ: ಜಿಲ್ಲಾಧಿಕಾರಿ

    ನವೀನ್ ನಮ್ಮನ್ನು ಕ್ಷಮಿಸಿ. ನಾವು ನಿಮ್ಮನ್ನು ಉಳಿಸಿಕೊಳ್ಳಲು ವಿಫಲಗೊಂಡಿದ್ದೇವೆ. ನಿಮ್ಮಿಂದ ನಾವು ತುಂಬಾ ಕಲಿಯ ಬೇಕು. ಜಗತ್ತಿಗೆ ನಿಮ್ಮಂತಹ ವ್ಯಕ್ತಿಗಳು ಹೆಚ್ಚು ಅಗತ್ಯವಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಂಡಿದ್ದಾರೆ. ನವೀನ್ ಮತ್ತು ಅವರ ಒಳ್ಳೆಯತನವನ್ನು ಹೇಗೆ ಪ್ರಶಂಸಿಸಬೇಕೆಂದು ನಿಮಗೆ ಸಾಧ್ಯವಾಗದಿದ್ದರೆ ಮತ್ತು ತಿಳಿದಿಲ್ಲದಿದ್ದರೆ ದಯವಿಟ್ಟು ಕಾಮೆಂಟ್ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

  • ಚೇತನ್ ಅಹಿಂಸಾ ಬಿಡುಗಡೆ – ಖುಷ್ ಆದ ಅಭಿಮಾನಿಗಳು

    ಚೇತನ್ ಅಹಿಂಸಾ ಬಿಡುಗಡೆ – ಖುಷ್ ಆದ ಅಭಿಮಾನಿಗಳು

    ಚಂದನವನದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಇಂದು ಜೈಲಿನಿಂದ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಖತ್ ಖುಷ್ ಆಗಿ ಸಂಭ್ರಮಾಚರಿಸಿದ್ದಾರೆ.

    chetan 13 5

    ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ ಆರೋಪದಲ್ಲಿ ಚೇತನ್ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಶುಕ್ರವಾರವೇ ಇವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ಆದೇಶ ಪ್ರತಿ ಲಭ್ಯವಾಗುವುದು ತಡವಾದ ಹಿನ್ನೆಲೆಯಲ್ಲಿ ಅವರು ಇಂದು ಸಂಜೆ ಬಿಡುಗಡೆಯಾಗಿದ್ದಾರೆ.

    parappana agrahara

    ಚೇತನ್ ಅವರು ಒಂದು ವಾರದ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಬಳಿಕ ಅವರು ಇಂದು ಬಿಡುಗಡೆಯಾಗಿದ್ದಾರೆ. ಚೇತನ್ ಅವರ ಬಿಡುಗಡೆಗಾಗಿ ವಕೀಲರಾದ ಬಾಲನ್, ಹರಿರಾಮ್ ಎ., ಕಾಶಿನಾಥ್ ಜೆ.ಡಿ., ರಮೇಶ್, ಪ್ರಸನ್ನ, ಸುನೀಲ್ ಕುಮಾರ್ ಗುನ್ನಾಪುರ ಮತ್ತು ಅವರ ತಂಡ ಸತತವಾಗಿ ಪ್ರಯತ್ನಿಸಿತ್ತು. ಇದನ್ನೂ ಓದಿ:  ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    chetan 13 3

    ಚೇತನ್ ಅವರ ಬಿಡುಗಡೆ ಹಿನ್ನೆಲೆ ಅವರ ಅಭಿಮಾನಿಗಳು, ಚಳುವಳಿ ಸ್ನೇಹಿತರು ಬಹಳ ಅದ್ದೂರಿಯಾಗಿ ಅವರನ್ನು ಸ್ವಾಗತಿಸಿಗೊಂಡಿದ್ದಾರೆ. ಪತ್ನಿ ಮೇಘಾ.ಎಸ್ ಚೇತನ್ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

  • ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    ಶೂಟಿಂಗ್ ನಿಂದ ಬಿಡುವು ತಗೆದುಕೊಂಡಿರುವ ಹರಿಪ್ರಿಯಾ, ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ. ಶಿವರಾತ್ರಿ ದಿನ ಸಾಮಾನ್ಯವಾಗಿ ಹರಿಪ್ರಿಯಾ ಸದ್ಗುರು ಆಶ್ರಮದಲ್ಲಿ ಕಾಲ ಕಳೆಯುತ್ತಿದ್ದರು. ಈ ಬಾರಿ ಅವರು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಂತರ ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಆಚಾರ್ ಅವರಿಂದ ಪ್ರಸಾದ ಸ್ವೀಕರಿಸಿದರು.

    haripriya 2

    ಶ್ರೀಕೃಷ್ಣನ ದರ್ಶನ ಪಡೆದ ನಂತರ ಹರಿಪ್ರಿಯಾ ಅಲ್ಲಿರುವ ಆನೆಯೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದಿದ್ದಾರೆ. ಆನೆಯೊಂದಿಗೆ ತೀರಾ ಆತ್ಮಿಯವಾಗಿರುವ ಫೋಟೋಗಳನ್ನು ಅವರು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಧರಿಸಿರುವ ಗೌನ್ ಬೆಲೆಯಷ್ಟು ಗೊತ್ತಾ? ಲಕಲಕ ಹೊಳಿತಿದ್ದಾಳೆ ರವಿಮಾಮನ ಬೆಡಗಿ

    haripriya

    ಚಂದನವನ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಹರಿಪ್ರಿಯಾ ತಮ್ಮ ನಟನೆಯಿಂದ ಸೈ ಎನಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಸಿನಿಮಾದ ನಂತರ ಹರಿಪ್ರಿಯಾ ಮತ್ತೆ ಯಾವ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಈ ಸಮಯವನ್ನು ಅವರು ಪ್ರವಾಸ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲು ಮೀಸಲಿಟ್ಟಿದ್ದಾರೆ.

    haripriya 3

    ‘ವ್ಯಾಪಾರಿ’ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಹರಿಪ್ರಿಯಾ, ನಂತರದ ದಿನಗಳಲ್ಲಿ ಕಲಾತ್ಮಕ ಚಿತ್ರಗಳತ್ತ ವಾಲಿದರು. ಅವರ ನಟನೆಯ ‘ಸೂಜಿದಾರ’, ‘ಅಮೃತಮತಿ’ ಚಿತ್ರಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ಅದರಲ್ಲೂ ‘ಅಮೃತಮತಿ’ ಚಿತ್ರ ಅವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಈ ನಟಿ ಚಂದನವನದ ಬಹುತೇಕ ಸ್ಟಾರ್ ನಟರ ಜೊತೆಗೆಗೂ ನಟಿಸಿದ್ದು, ತಮ್ಮ ನೇರ ನುಡಿಯಿಂದ ಹೆಸರುವಾಸಿಯಾಗಿದ್ದಾರೆ. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!

  • ನಿಜ ಜೀವನದಲ್ಲಿಯೂ ಹೀರೋಯಿನ್ ಆದ ಶ್ವೇತಾ ಶ್ರೀವಾತ್ಸವ್!

    ನಿಜ ಜೀವನದಲ್ಲಿಯೂ ಹೀರೋಯಿನ್ ಆದ ಶ್ವೇತಾ ಶ್ರೀವಾತ್ಸವ್!

    ಚಂದನವನದ ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಸಿನಿಮಾ ಜೊತೆಗೆ ಸಮಾಜಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಫೋಟೋಗಳನ್ನು ನೋಡಿ ನೆಟ್ಟಿಗರು ನೀವು ನಿಜ ಜೀವದಲ್ಲಿಯೂ ಹೀರೋಯಿನ್ ಆಗಿದ್ದೀರಾ ಎಂದು ಪ್ರಶಂಸುತ್ತಿದ್ದಾರೆ.

    shwetha srivatsav 4

    ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ತಮ್ಮ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇನ್‍ಸ್ಟಾಗ್ರಾಮ್ ನಲ್ಲಿ ಶ್ವೇತಾ, ದಯೆ ಒಂದು ಆಯ್ಕೆಯಾಗಿದೆ. ದಯೆ ಯಾವಾಗಲೂ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಈ ವೇಳೆ ತನ್ನ ಹೊಸ ಯೋಜನೆ ಬಗ್ಗೆ ಹೇಳಿಕೊಂಡಿರುವ ಅವರು, ಹೊಸ ಯೋಜನೆ, ಹೊಸ ಸ್ನೇಹ, ಹೊಸ ಪ್ರಾರಂಭ ಎಂದು ಬರೆದು ತಿಳಿಸಿದ್ದಾರೆ. ಶ್ವೇತಾ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಕ್ಕಳಿಗೆ ಅನ್ನದಾಸೋಹ ಮಾಡಿಸುತ್ತಿರುವ ದೃಶ್ಯ ಫೋಟೋಗಳಲ್ಲಿ ನೋಡಬಹುದು. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಈ ಮೂಲಕ ಅಭಿಮಾನಿಗಳಿಗೆ ನಾನು ಹೊಸದೊಂದು ಯೋಜನೆಯನ್ನು ಮಾಡುತ್ತಿದ್ದೇನೆ. ಅದು ಸಮಾಜಕ್ಕೆ ಒಳ್ಳೆಯದಾಗುವ ಸೇವಾ ಕಾರ್ಯ ಎಂಬುದು ಫೋಟೋ ನೋಡಿದರೆ ಅರ್ಥವಾಗುತ್ತೆ. ಈ ಕುರಿತು ಸೂಕ್ಷ್ಮವಾಗಿ ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಅಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

    shwetha

    ಪೋಸ್ಟ್ ನೋಡಿದ ನೆಟ್ಟಿಗರು, ನೀವು ನಿಜ ಜೀವನದ ಹೀರೋಯಿನ್ ಮೇಡಮ್. ಆಲ್ ದಿ ಬೆಸ್ಟ್, ಗುಡ್ ಲಕ್ ಎಂದು ಕಮೆಂಟ್ ಮಾಡಿದ್ದಾರೆ.

  • ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ನಿಖಿಲ್ ಕುಮಾರಸ್ವಾಮಿ ನಂತರ ಮತ್ತೊಬ್ಬ ರಾಜಕಾರಣಿ ಪುತ್ರ ದುಷ್ಯಂತ್ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಣ್ಣದ ಲೋಕಕ್ಕೆ ತಂದೆಯ ರಾಜಕೀಯ ಕ್ಷೇತ್ರದ ಹೆಸರನ್ನು ಬಳಸಿಕೊಳ್ಳದೇ ತಮ್ಮದೇ ಮಾರ್ಗದಲ್ಲಿ ಸಾಗುವ ನಿಟ್ಟಿನಲ್ಲಿ ದುಷ್ಯಂತ್ ಕಳೆದ ಮೂರ್ನಾಲ್ಕು ವರ್ಷಗಳಿಂದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    Suni's big 'bazaars'

    ದುಷ್ಯಂತ್ ಅವರಿಗೆ ಚಂದನವನದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಸುನಿ ಅವರು ಈಗಾಗಲೇ ‘ಬಜಾರ್’ ಸಿನಿಮಾ ಮೂಲಕ ಧನ್ವಿರ್ ಅವರನ್ನು ಚಂದನವನಕ್ಕೆ ಪರಿಚಯ ಮಾಡಿಸಿದ್ದು, ಮತ್ತೊಬ್ಬ ಯುವ ನಟನನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಅಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

    ಸುನಿ ನಿದೇಶನದ ‘ಸಖತ್’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದು, ಈ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಕಾಮಿಡಿ ಸ್ಟಾರ್ ಶರಣ್ ನಟನೆಯ ‘ಅವತಾರ ಪುರುಷ’ ಸಿನಿಮಾ ಶೂಟಿಂಗ್ ಮುಗಿದಿದ್ದು, ರಿಲೀಸ್‍ಗೆ ರೆಡಿಯಾಗಿದೆ. ಈ ನಡುವೆ ಸುನಿ ಹೊಸ ಸಿನಿಮಾವನ್ನು ಮಾಡಲು ಸಜ್ಜಾಗಿದ್ದಾರೆ. ಇದಕ್ಕೆ ‘ಗತವೈಭವ’ ಎಂಬ ಪವರ್‌ಫುಲ್ ಟೈಟಲ್ ಸಹ ಕೊಟ್ಟಿದ್ದು, ಈ ಸಿನಿಮಾಗೆ ದುಷ್ಯಂತ್ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಬಣ್ಣದ ಲೋಕಕ್ಕೆ ಬರಲು ಫುಲ್ ರೆಡಿಯಾಗುತ್ತಿದ್ದಾರೆ.

    ಸಖತ್​ ಆಗಿದೆ 'ಸಖತ್' ಟೀಸರ್​; ಪ್ರೇಕ್ಷಕರ ತಲೆಗೆ ಕುತೂಹಲದ ಹುಳ ಬಿಟ್ಟ ಗಣೇಶ್​, ಸಿಂಪಲ್​ ಸುನಿ | Sakath movie teaser: Golden star Ganesh and Simple Suni promise super entertainment | TV9 Kannada

    ನಟನೆ ಕುರಿತು ಮಾತನಾಡಿದ ಅವರು, 2017ರಲ್ಲೇ ನಾನು ನಟನಾಗಬೇಕು ಎಂದು ನಿರ್ಧರಿಸಿ ಸಿನಿಮಾಗಾಗಿ ನನ್ನನ್ನು ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ‘ಟೆಂಟ್ ಸಿನಿಮಾ’ ಅಭಿನಯ ಶಾಲೆಯಲ್ಲಿ ಮೂರು ವರ್ಷದ ಕೋರ್ಸ್ ಮಾಡಿದ್ದೇನೆ. ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಸಿನಿಮಾ ವಿಷಯವಾಗಿ ಕಲಿತಿದ್ದೇನೆ. ಬೀದಿ ನಾಟಕ, ಕಿರುಚಿತ್ರ, ಮ್ಯೂಸಿಕ್ ವೀಡಿಯೋ ಹೀಗೆ ನಟನೆಗೆ ಒತ್ತು ಕೊಡುವಂತಹ ಹಲವು ಕೆಲಸಗಳನ್ನು ಮಾಡಿದ್ದೇನೆ ಎಂದು ವಿವರಿಸಿದರು.

    2019ರಲ್ಲಿ ರಂಗಕರ್ಮಿ ಕೃಷ್ಣ ಅವರ ಆ್ಯಕ್ಟಿಂಗ್ ವಕ್ರ್ಶಾಪ್‍ನಲ್ಲಿ ಪಾಲ್ಗೊಂಡಿದ್ದೆ. ಪುಷ್ಕರ್ ಆ್ಯಕ್ಟಿಂಗ್ ಇನ್‍ಸ್ಟಿಟ್ಯೂಟ್‍ನಲ್ಲಿ ನಟನೆಯನ್ನು ಕಲಿತಿದ್ದೇನೆ. ನೀನಾಸಂನ ಧನಂಜಯ ಅವರ ಬಳಿಯೂ ಒಂದಷ್ಟು ದಿನಗಳ ಕಾಲ ನಟನಾ ಪಟ್ಟುಗಳನ್ನು ತಿಳಿದುಕೊಂಡಿದ್ದೇನೆ. ಟಗರು ರಾಜು, ಭೂಷಣ್ ಕುಮಾರ್ ಹೀಗೆ ಹಲವರಿಮ್ ಡ್ಯಾನ್ಸ್ ಕಲಿತ್ತಿದ್ದೇನೆ. ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಒಬ್ಬ ನಾಯಕ ಏನೇನು ಕಲಿತಿರಬೇಕೋ ಅವೆಲ್ಲವನ್ನೂ ಕಲಿತು ನಂತರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!

    Simple Suni Upcoming Movies : 'ಅವತಾರ್ ಪುರುಷ' ಬಳಿಕ ಸಿಂಪಲ್ ಸುನಿ ಮುಂದಿನ ಸಿನಿಮಾಗಳು - Kannada Filmibeat

    ‘ಗತವೈಭವ’ ಸಿನಿಮಾ ಕುರಿತು ಮಾತನಾಡಿದ ಸುನಿ, ಈ ಸಿನಿಮಾದಲ್ಲಿ ಹೆಚ್ಚು ಪ್ರೇಮಕಥೆಯನ್ನು ಎಣೆಯಲಾಗಿದೆ. ಸೈಂಟಿಫಿಕ್ ಥ್ರಿಲ್ಲರ್ ರೀತಿಯಲ್ಲಿ ಸ್ಟೋರಿಯನ್ನು ಹೇಳಲಾಗಿದೆ. ದುಷ್ಯಂತ್ ಜೊತೆ ನಾನು ‘ರಾಬಿನ್ ಹುಡ್’ ಸಿನಿಮಾ ಮಾಡಬೇಕಿತ್ತು. ಆದರೆ ಆ ಸಿನಿಮಾವನ್ನು ಕೆಲವು ಕಾರಣಗಳಿಂದ ಮುಂದೆ ಹಾಕಿದ್ದೇವೆ. ‘ಗತವೈಭವ’ ಸ್ಟೋರಿ ‘ದುಷ್ಯಂತ್’ ಅವರಿಗೆ ಸೂಟ್ ಆಗುತ್ತೆ. ಈ ಸಿನಿಮಾಗಾಗಿ ಅವರು ತುಂಬಾ ಶ್ರಮವನ್ನು ಪಡುತ್ತಿದ್ದಾರೆ. ನನ್ನ ‘ಅವತಾರ ಪುರುಷ’ ಸಿನಿಮಾ ಬಿಡುಗಡೆಯಾದ ನಂತರ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದರು.

  • ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!

    ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!

    ಚಂದನವನದ ಕ್ಯೂಟ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಸೋದರಸಂಬಂಧಿ ಮದುವೆಯಲ್ಲಿ ಫುಲ್ ಮಿಂಚುತ್ತಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಮುಂಬೈನಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದ ರಾಧಿಕಾ ಇನ್‍ಸ್ಟಾಗ್ರಾಮ್ ನಲ್ಲಿ, ಬಹಳ ಸಮಯದ ನಂತರ ನನ್ನ ಅಮ್ಮನ ಸಹೋದರಿಯರು ಮತ್ತು ಚಿಕ್ಕಪ್ಪನನ್ನು ನನ್ನ ಸೋದರ ಸಂಬಂಧಿಯ ಮದುವೆಯಲ್ಲಿ ಭೇಟಿಯಾದೆ. ಇವರನ್ನು ಬಹಳ ಸಮಯದ ನಂತರ ಭೇಟಿಯಾಗಿದ್ದೇನೆ. ಅಲ್ಲದೆ ಹಲವು ವರ್ಷಗಳ ನಂತರ ನಾನು ಮದುವೆಗೆ ರೆಡಿಯಾದೆ ಎಂದು ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ವಿಮಾನದಲ್ಲೂ ಯಶ್-ರಾಧಿಕಾ ಪಂಡಿತ್ ಅವರ ಮಕ್ಕಳ ಆಟ

    ರಾಧಿಕಾ ಶೇರ್ ಮಾಡಿರುವ ಮೊದಲ ಫೋಟೋದಲ್ಲಿ ತನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅಮ್ಮನ ಜೊತೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಎರಡನೇ ಫೋಟೋದಲ್ಲಿ ರಾಧಿಕಾ ತಮ್ಮ ಅಪ್ಪ – ಅಮ್ಮ ಮತ್ತು ಮಕ್ಕಳೊಂದಿಗೆ ಕಾಣಿಸಿಕೊಂಡರೆ, ಮೂರನೇ ಫೋಟೋದಲ್ಲಿ ರಾಕಿಂಗ್ ಸ್ಟಾರ್ ಜೊತೆ ತಮ್ಮ ಮಕ್ಕಳೊಂದಿಗೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಎಲ್ಲ ಫೋಟೋದಲ್ಲಿಯೂ ರಾಧಿಕಾ ಮತ್ತು ಅವರ ಫ್ಯಾಮಿಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

    yash family

    ಫೋಟೋಗಳಲ್ಲಿ ಎಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಫುಲ್ ಮಿಂಚುತ್ತಿದ್ದಾರೆ. ರಾಧಿಕಾ ಸೋದರಸಂಬಂಧಿ ಮದುವೆಗೆಂದು ಯಶ್ ಫುಲ್ ಫ್ಯಾಮಿಲಿ ಮುಂಬೈನಲ್ಲಿ ಹಾಜರಾಗಿದ್ದು, ಎಲ್ಲರೂ ಸಖತ್ ಆಗಿ ರೆಡಿಯಾಗಿದ್ದಾರೆ. ಇದನ್ನೂ ಓದಿ: ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!

  • UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

    UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

    ಬೆಂಗಳೂರು: ದಕ್ಷಿಣ ಭಾರತದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ UAEನಿಂದ ಗೋಲ್ಡನ್ ವೀಸಾ ಸ್ವೀಕರಿಸಿದ್ದಾರೆ.

    pranitha.insta 90091345 228996384919647 2674306831195684773 n

    ಬಹುಭಾಷಾ ನಟಿಯಾಗಿರುವ ಪ್ರಣಿತಾ ಟ್ಟಿಟ್ಟರ್ ನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಗೋಲ್ಡನ್ ವೀಸಾ ಸ್ವೀಕರಿಸುತ್ತಿರುವುದು ಗೌರವದ ವಿಷಯವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಯುಎಇ ಗೋಲ್ಡನ್ ವೀಸಾದಿಂದ ಅರಬ್ ನಲ್ಲಿ ಬೇರೆ ರಾಷ್ಟ್ರದ ಪ್ರಜೆಗಳು ಜೀವನ ನಡೆಸುವ, ಕೆಲಸ ಮಾಡುವ ಮತ್ತು ಓದುವ ಅವಕಾಶಗಳು ಇರುತ್ತೆ. ಆ ಗೌರವವನ್ನು ಕನ್ನಡದ ನಟಿ ಪ್ರಣಿತಾ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಇದನ್ನೂ ಓದಿ: ವೈರಲ್ ಆಯ್ತು ಶಾರೂಖ್ ನ್ಯೂಲುಕ್ – ರಿಯಲ್ ಫೋಟೋ ರಿಲೀಸ್!

    pranitha.insta 60158262 371287656847964 3161496824089064324 n

    ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಪ್ರಣಿತಾ 2010 ರಂದು ‘ಪೊರ್ಕಿ’ ಕನ್ನಡ ಸಿನಿಮಾದ ಮೂಲಕ ಬಣ್ಣದ ಜಗತ್ತಿಗೆ ಪಾದರ್ಪಣೆ ಮಾಡಿದರು. ನಂತರ ಹಲವು ಕನ್ನಡ ಸ್ಟಾರ್ ನಟರ ಜೊತೆ ನಟಿಸಿದ ಈ ತಾರೆ ಟಾಲಿವುಡ್, ಕಾಲಿವುಡ್ ನಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಬಹುತೇಕ ಸ್ಟಾರ್ ನಟರ ಜೊತೆ ಇವರು ನಟಿಸಿದ್ದಾರೆ. ಪ್ರಸ್ತುತ ಸಮಾಜಸೇವೆ ಎಂದು ಈ ನಟಿ ಬ್ಯುಸಿಯಾಗಿದ್ದಾರೆ. ಕೊರೊನಾ ಸಮಯದಲ್ಲಿಯೂ ಪ್ರಣಿತಾ ಜನರಿಗೆ ಸಹಾಯ ಮಾಡಿದ್ದಾರೆ.

  • ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ಬೆಂಗಳೂರು: ಇಂದು ಪ್ರೇಮಿಗಳ ದಿನವಾದ್ದರಿಂದ ನಮ್ಮ ಚಂದವನದ ಲವ್ಲಿ ಕಪಲ್ ತಮ್ಮ ಜೋಡಿ ಜೊತೆ ಲವ್ಲಿಯಾಗಿ ಈ ವಿಶೇಷ ದಿನವನ್ನು ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೂ ವಿಶ್ ಮಾಡಿದ್ದಾರೆ.

    ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ:
    ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಇಂದು ಕ್ಯೂಟ್ ಆಗಿ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದು, ನಮ್ಮ ಚಿಕ್ಕ ಸೆಲೆಬ್ರೇಶನ್, ಥ್ಯಾಂಕ್ಸ್ ಕನ್ನ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಜ್ವಲ್ ರಾಗಿಣಿಗೆ ಕಿಸ್ ಕೊಡುತ್ತಿದ್ದು, ‘ಬ್ಲೂ ಥೀಮ್’ ನಲ್ಲಿ ತಮ್ಮ ವಿಶೇಷ ದಿನವನ್ನು ಸೆಲೆಬ್ರೆಟ್ ಮಾಡಿರುವುದು ಫೋಟೋದಲ್ಲಿ ನೋಡಬಹುದು. ಫೋಟೋದಲ್ಲಿ ಇಬ್ಬರು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಈ ಪೋಸ್ಟ್ ಗೆ ರಾಗಿಣಿ ‘ಲವ್ ಯೂ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಪ್ರಜ್ವಲ್ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ರಾಗಿಣಿ ಅವರು ಸಹ ಪ್ರೊಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಆಗಾಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ಡಾನ್ಸ್ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

    ಶುಭಾ ಪೂಂಜಾ ಮತ್ತು ಸುಮಂತ್:
    ಸ್ಯಾಂಡಲ್‍ವುಡ್ ನಟಿ, ಬಿಗ್‍ಬಾಸ್ ಖ್ಯಾತಿಯ ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಬಳಿಕ ಈ ಜೋಡಿಗೆ ಇಂದು ಮೊದಲ ವ್ಯಾಲೆಂಟೈನ್ಸ್ ಡೇ. ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಮುದ್ದು ಜೋಡಿಯ ಫೋಟೋ ಶೇರ್ ಮಾಡಿಕೊಂಡಿರುವ ಶುಭಾ, ನಮ್ಮಿಂದ ನಿಮಗೆ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್ ಮೂಲಕ ಶುಭಾ ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭಾಶಯವನ್ನು ತಿಳಿಸಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಶುಭಾ ಅವರಿಗೂ ಶುಭಾಶಯವನ್ನು ಕೋರಿದ್ದಾರೆ. ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2022ರ ಜನವರಿ ಮೊದಲ ವಾರದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಶ್ವೇತಾ ಮತ್ತು ಅಮಿತ್ ಶ್ರೀವಾತ್ಸವ್:
    ಚಂದನವನದ ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಮಗಳೊಂದಿಗೆ ಫೋಟೋ ವೀಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇಂದು ವ್ಯಾಲೆಂಟೈನ್ಸ್ ಡೇ ವಿಶೇಷತೆಗೆಂದು ತಮ್ಮ ಪತಿ ಅಮಿತ್ ಶ್ರೀವಾತ್ಸವ್ ಜೊತೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಮಿತ್ ಶ್ವೇತಾ ಅವರಿಗೆ ಕಿಸ್ ಕೊಡುತ್ತಿದ್ದು, ಪೂಲ್ ಬಳಿ ಕೂಲ್ ಆಗಿ ನಿಂತಿದ್ದಾರೆ. ಈ ಪೋಸ್ಟ್ ಗೆ ಶ್ವೇತಾ ಅವರು, ವ್ಯಾಲೆಂಟೈನ್ #ಎಂದೆಂದಿಗೂ #ಜೋಡಿಗೋಲುಗಳು ಎಂದು ಬರೆದು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

    ಕೃಷ್ಣ ಮತ್ತು ಮಿಲನಾ:
    ಚಂದನವನದ ಡಾರ್ಲಿಂಗ್ ಕೃಷ್ಣ ಮತ್ತು ಚಂದನವನದ ನಟಿ ಮಿಲನಾ ಕಳೆದ ವರ್ಷ ಮದುವೆಯಾಗಿದ್ದು, ಈ ವರ್ಷ ತಮ್ಮ ಹೊಸ ಸಿನಿಮಾ ‘ಲವ್ ಮಾಕ್‍ಟೇಲ್- 2’ ಸಿನಿಮಾ ಯಶಸ್ಸಿನೊಂದಿಗೆ ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿದ್ದಾರೆ. ಮಿಲನ ಇನ್‍ಸ್ಟಾಗ್ರಾಮ್ ನಲ್ಲಿ, ನನ್ನ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಇದುವರೆಗೆ ಮಾಡಿದ ಅತ್ಯುತ್ತಮ ನಿರ್ಧಾರ! ನನ್ನ ಇಡೀ ಪ್ರಪಂಚ! ಎಂದು ಬರೆದು ಪತಿ ಜೊತೆಗಿನ ಕ್ಯೂಟ್ ಫೋಟೋವನ್ನು ಶೇರ್ ಮಾಡಿದ್ದಾರೆ.

     

  • ಅಪ್ಪು ಜೊತೆಗೆ ಕೊನೆ ಕ್ಷಣದ ವೀಡಿಯೋ ಹಂಚಿಕೊಂಡ ನವರಸ ನಾಯಕ!

    ಅಪ್ಪು ಜೊತೆಗೆ ಕೊನೆ ಕ್ಷಣದ ವೀಡಿಯೋ ಹಂಚಿಕೊಂಡ ನವರಸ ನಾಯಕ!

    ಬೆಂಗಳೂರು: ಚಂದನವನದ ನವರಸ ನಾಯಕ ಜಗ್ಗೇಶ್ ದಿ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಗೆ ಕಾಲ ಕಳೆದ ಕೊನೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಚಂದನವನದ ಅಪ್ಪು ಅಗಲಿ 4 ತಿಂಗಳು ಆಗುತ್ತಿದ್ರೂ ಕನ್ನಡಿಗರ ಮನಸ್ಸಿನಲ್ಲಿ ಅವರು ಎಂದೂ ಅಮರರಾಗಿರುತ್ತಾರೆ. ಅಪ್ಪುಗೆ ಜಗ್ಗೇಶ್ ಬಹಳ ಆಪ್ತ. ಅಪ್ಪು ಅವರೊಂದಿಗೆ ಜಗ್ಗೇಶ್ ಮಧುರ ಕ್ಷಣಗಳನ್ನು ಕಳೆದಿದ್ದಾರೆ. ಅಪ್ಪು ಅವರನ್ನು ಕಳೆದುಕೊಂಡಗಿನಿಂದ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಜೊತೆಗೆ ಕಾಲ ಕಳೆದ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?

    ಅದೇ ರೀತಿ ಜಗ್ಗೇಶ್ ಇಂದು ಸಹ ಅಪ್ಪು ಜೊತೆ ಕಾಲ ಕಳೆದ ವಿಶೇಷ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಮಂತ್ರಾಲಯದಲ್ಲಿ 2021ರ ಏಪ್ರಿಲ್ 5ರ ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವೀಡಿಯೋ ಕಳಿಸಿದ ಮಂತ್ರಾಲಯ ಪ್ರೋ.ನರಸಿಂಹಾಚಾರ್ಯ ರವರಿಗೆ ಧನ್ಯವಾದ. ಪುನೀತ ಅಲ್ಲಿಯೇ ರಾಯರ ಜೊತೆ ಉಳಿದುಬಿಟ್ಟ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    jaggesh puneeth 1

    ಈ ವೀಡಿಯೋದಲ್ಲಿ ಶ್ರೀ ಅವರ ಮುಂದೆ ಜಗ್ಗೇಶ್ ಕುಳಿತುಕೊಂಡಿರುತ್ತಾರೆ. ಅಲ್ಲೇ ಇದ್ದ ಅಪ್ಪು ಮೊದಲು ಶ್ರೀ ಮುಂದೆ ನಿಂತುಕೊಂಡಿದ್ದು, ನಂತರ ಜಗ್ಗೇಶ್ ಅವರು ಹೇಳಿದಂತೆ ಅವರ ಮುಂದೆ ಕುಳಿತುಕೊಳ್ಳುತ್ತಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಅಪ್ಪು ‘ವಿ ಮಿಸ್ ಯು’ ಎಂದು ಬರೆದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ

    jaggesh puneeth rajkumar

    ಇನ್ನೊಬ್ಬ ಅಭಿಮಾನಿ, ಈ ನೆನಪುಗಳನ್ನು ಅಳಿಸಲು ನಿಮಗೆ ತುಂಬಾ ಕಷ್ಟವಾಗುತ್ತದೆ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸರ್. ದೇವರು ಅವರಿಗೆ ಒಂದು ಅವಕಾಶ ನೀಡಬೇಕಿತ್ತು. ಟೆಕ್ ಕೇರ್ ಜಗ್ಗೇಶ್ ಸರ್ ಎಂದು ಕಾಮೆಂಟ್ ಮಾಡಿದ್ದಾರೆ. ಜಗ್ಗೇಶ್ ಅವರು ಪ್ರಸ್ತುತ ‘ರಾಘವೇಂದ್ರಸ್ಟೋರ್ಸ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಪ್ಯಾಡಿಂಗ್ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ‘ನಿನ್ನಿಂದಲೇ’ ಹೀರೋಯಿನ್

    ಪ್ಯಾಡಿಂಗ್ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ‘ನಿನ್ನಿಂದಲೇ’ ಹೀರೋಯಿನ್

    ಮುಂಬೈ: ನನಗೆ ನನ್ನ ತೆಳ್ಳಗಿನ ದೇಹ ನೋಡಿ ತುಂಬಾ ನಾಚಿಕೆಯಾಗುತ್ತಿತ್ತು. ಅದಕ್ಕೆ ನಾನು ಹೆಚ್ಚು ಪ್ಯಾಡಿಂಗ್ ಧರಿಸುತ್ತೇನೆ ಎಂದು ದಕ್ಷಿಣ ಭಾರತ ನಟಿ ಎರಿಕಾ ಫೆರ್ನಾಂಡಿಸ್ ತಮ್ಮ ದೇಹದ ಮೇಲೆ ಬರುತ್ತಿದ್ದ ಕೆಟ್ಟ ಕಾಮೆಂಟ್ ಕುರಿತು ಮಾತನಾಡಿದರು.

    ಎರಿಕಾ 2014 ರಲ್ಲಿ ಬಿಡುಗಡೆಯಾದ ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು. ಆದರೆ ಎರಿಕಾ ತುಂಬಾ ತೆಳ್ಳಗಿದ್ದ ಕಾರಣ ಸಿನಿಮಾ ಆಫರ್‌ಗಳು ಅಷ್ಟು ಬರುತ್ತಿರಲಿಲ್ಲ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ತುಂಬಾ ತೆಳ್ಳಗೆ ಇರುವುದಕ್ಕೆ ನಾಚಿಕೆಯಾಗುತ್ತೆ. ಅದಕ್ಕೆ ನಾನು ಹೆಚ್ಚು ಪ್ಯಾಡಿಂಗ್ ಧರಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡರು. ಇದನ್ನೂ ಓದಿ: ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

    erica fernandes

    ನಾನು ತೆಳ್ಳಗಿರುವುದನ್ನು ನೋಡಿದ ಜನರು ಕೆಟ್ಟದಾಗಿ ಕಾಮೆಂಟ್ ಮಾಡಿರುವುದನ್ನು ನಾನು ನೋಡಿದ್ದೇನೆ. ಇನ್ನೂ ಕೆಲವರು ನೇರವಾಗಿ ನನ್ನ ದೇಹದ ಬಗ್ಗೆ ಹೇಳುವುದನ್ನು ಕೇಳಿಸಿಕೊಂಡಾಗ ನನಗೆ ತುಂಬಾ ನೋವಾಗುತ್ತಿತ್ತು ಎಂದು ಹೇಳಿದರು.

    erica fernandes 2

    ಈ ವಿಚಾರವಾಗಿ ದಕ್ಷಿಣ ಭಾರತದ ಹಲವು ನಟಿಯರು ನನಗೆ ಸಾಥ್ ನೀಡಿದ್ದಾರೆ. ನನ್ನನ್ನು ಉತ್ತೇಜಿಸಿದ್ದಾರೆ. ನನ್ನ ದೇಹದ ಬಗ್ಗೆ ಇರುವ ನೆಗೆಟಿವ್ ಅಂಶಗಳನ್ನು ತೆಗೆದು ಹಾಕಿ ಪಾಸಿಟಿವ್ ಆಗಿ ಇರಲು ತುಂಬಾ ಸಹಾಯ ಮಾಡಿದ್ದಾರೆ. ಈ ಹಿಂದೆ ನನ್ನ ದೇಹದ ಬಗ್ಗೆ ನನಗೆ ಕೆಟ್ಟ ಅನುಭಾವಗಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈಗ ನಾನು ಹೆಚ್ಚು ಪಾಸಿಟಿವ್ ಆಗಿದ್ದೇನೆ. ಅಲ್ಲದೆ ಇಂಡಸ್ಟ್ರಿ ಸಹ ಬದಲಾಗಿದೆ ಎಂಬುದಕ್ಕೆ ಖುಷಿಯಾಗಿದೆ. ವ್ಯಕ್ತಿಯ ಪ್ರತಿಭೆಯನ್ನು ಕೇವಲ ದೇಹದ ಮೇಲೆ ತೀರ್ಮಾನಿಸುತ್ತಿದ್ದ ಜನರ ಮನಸ್ಥಿತಿ ಸಹ ಬದಲಾಗಿರುವುದು ತುಂಬಾ ಖುಷಿಯಾಗಿದೆ ಎಂದು ವಿವರಿಸಿದರು. ಇದೇ ವೇಳೆ ಕಿರುತೆರೆಗೆ ಮತ್ತೆ ಹೋಗಲು ಇಷ್ಟವಿದೆಯೇ ಎಂದು ಕೇಳಿದಾಗ, ನಾನು ಎಂದಿಗೂ ಕೆಲಸದ ನಡುವೆ ವ್ಯತ್ಯಾಸವನ್ನು ಹೊಂದಿಲ್ಲ. ಕಿರುತೆರೆಗೆ ಹೋದರೆ ಮತ್ತೆ ಸಿನಿಮಾಗೆ ಬರಲಾಗುವುದಿಲ್ಲ ಎಂದು ನಾನು ಆತಂಕಗೊಂಡಿಲ್ಲ. ನನಗೆ ಎಲ್ಲವೂ ಕೆಲಸವಾಗಿದೆ ಎಂದರು. ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

    erica fernandes 1

    ಎರಿಕಾ ಕನ್ನಡದಲ್ಲಿ ಪುನೀತ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದು, ನಂತರ ಹಿಂದಿ ಕಿರುತೆರೆಗೆ ಹಾರಿದ್ದರು. ನಂತರ ಅವರಿಗೆ ‘ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ’ ಸಿನಿಮಾ ಬಾಲಿವುಡ್ ನಲ್ಲಿ ಹೆಸರು ತಂದುಕೊಟ್ಟಿದ್ದು, ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.