Tag: ಗೆಳೆಯ

  • ವಿದ್ಯಾಭ್ಯಾಸಕ್ಕೆ ಸಹಾಯ ಮಾಡೋದಾಗಿ ನಂಬಿಸಿ ರೇಪ್‍ಗೈದ

    ವಿದ್ಯಾಭ್ಯಾಸಕ್ಕೆ ಸಹಾಯ ಮಾಡೋದಾಗಿ ನಂಬಿಸಿ ರೇಪ್‍ಗೈದ

    – ಗರ್ಭಿಣಿಯಾದಾಗ ಗರ್ಭಪಾತಕ್ಕೆ ಒತ್ತಾಯ
    – ಮದ್ವೆಯಾಗೋದಾಗಿ ಹೇಳಿ ಮೋಸ

    ರಾಂಚಿ: ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಕಡಿಮೆಯಾದಂತೆ ಕಾಣುತ್ತಿಲ್ಲ. ದಿನ ಬೆಳಗಾದರೆ ಇಂತಹ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಇದೀಗ ಇಂತದ್ದೇ ಘಟನೆಯೊಂದು ಜಾರ್ಖಂಡ್ ನ ಲೊಹರ್ದಾಗ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸೆನ್ಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಅಜಿತ್ ಒರಾನ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಸೆನ್ಹಾ ಪ್ರದೇಶದಲ್ಲಿರುವ ಕಾಲೆಜೊಂದರಲ್ಲಿ ಓದುತ್ತಿದ್ದಳು. ಅಜಿತ್ ಶಿವರಾಜ್ ಪುರ ನಿವಾಸಿಯಾಗಿದ್ದಾನೆ.

    Police I

    ಸಂತ್ರಸ್ತೆ ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು. ಈ ವೇಳೆ ಆರೋಪಿ ಫ್ರೆಂಡ್ ಆಗಿ ಪರಿಚಯವಾಗಿದ್ದಾನೆ. ನಂತರ ನಿನಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾನೆ. ಹೀಗಾಗಿ ಇವರಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತಾ ಬಂತು. ಅಲ್ಲದೆ ಇಬ್ಬರು ದೈಹಿಕ ಸಂಪರ್ಕವನ್ನೂ ಹೊಂದಿದ್ದರು. ಈ ವೇಳೆ ಆರೋಪಿ ಮದುವೆಯಾಗುವುದಾಗಿ ಸಂತ್ರಸ್ತೆ ಬಳಿ ತಿಳಿಸಿದ್ದಾನೆ.

    ಆದರೆ ಯುವತಿ ಗರ್ಭಿಣಿಯಾಗುತ್ತಿದ್ದಂತೆಯೇ ಆರೋಪಿ ಆಕೆಗೆ ಗೊತ್ತಿಲ್ಲದಂತೆ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದಾನೆ. ಹೀಗೆ ಸ್ವಲ್ಪ ಸಮಯದ ಬಳಿಕ ಯುವತಿ ಮತ್ತೆ ಗರ್ಭಿಣಿಯಾಗಿದ್ದಾಳೆ. ಈ ವೇಳೆ ಅಜಿತ್ ಮತ್ತೆ ಗರ್ಭಪಾತ ಮಾಡಿಸುವಂತೆ ಒತ್ತಾಯ ಮಾಡಿದ್ದಾನೆ. ಅಲ್ಲದೆ ತಾನು ನಿನ್ನ ಮದುವೆಯಾಗಲ್ಲ ಎಂದು ಹೇಳಿದ್ದಾನೆ.

    rape

    ಇದರಿಂದ ನೊಂದ ಯುವತಿ ಕೂಡ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನು ಪೊಲೀಸರ ಬಳಿ ವಿವರಿಸಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಆರೋಪಿ ನಾಪತ್ತೆ:
    ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸಂತ್ರಸ್ತೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದರೆ ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ ಶೀಘ್ರವೇ ಆತನನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    police 1 e1585506284178

  • ಬೋರ್ ಆಗ್ತಿದೆಂದು ಸೂಟ್‍ಕೇಸ್‍ನಲ್ಲಿ ಗೆಳೆಯನನ್ನ ತುಂಬ್ಕೊಂಡು ಬಂದ

    ಬೋರ್ ಆಗ್ತಿದೆಂದು ಸೂಟ್‍ಕೇಸ್‍ನಲ್ಲಿ ಗೆಳೆಯನನ್ನ ತುಂಬ್ಕೊಂಡು ಬಂದ

    – ಲಾಕ್‍ಡೌನ್ ನಡುವೆ ವಿದ್ಯಾರ್ಥಿಯ ಖತರ್ನಾಕ್  ಪ್ಲಾನ್

    ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಇರುವವರು ಬಿಟ್ಟು ಹೊರಗಿನಿಂದ ಬರುವವರಿಗೆ ಪ್ರವೇಶಕ್ಕೆ ಕೆಲವು ಕಡೆ ನಿರ್ಬಂಧ ವಿಧಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಯೊಬ್ಬ ಸೂಟ್‍ಕೇಸ್‍ನೊಳಗೆ ಗೆಳೆಯನನ್ನ ಸಾಗಿಸುವಾಗ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ನಡೆದಿದೆ. ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಿದ್ದನು. ಲಾಕ್‍ಡೌನ್ ಪರಿಣಾಮ ವಿದ್ಯಾರ್ಥಿ ಬೋರ್ ಆಗುತ್ತಿದೆ ಎಂದು ತನ್ನ ಗೆಳೆಯನನ್ನು ಕರೆದುಕೊಂಡು ಬರುವುದಾಗಿ ಸಮುಚ್ಚಯದ ಅಸೋಸಿಯೇಷನ್ ಬಳಿ ಹೇಳಿದ್ದನು. ಆದರೆ ಅಸೋಸಿಯೇಷನ್ ಮಾತ್ರ ನಿಯಮದಂತೆ ನಿರಾಕರಣೆ ಮಾಡಿತ್ತು.

    MNG 2

    ಯುವಕ ಹೇಗಾದರೂ ಮಾಡಿ ಗೆಳೆಯನನ್ನು ಕರೆದುಕೊಂಡು ಬರಬೇಕು ಅಂತ ಇಂದು ಹೊಸ ಉಪಾಯ ಮಾಡಿದ್ದಾರೆ. ಅದರಂತೆಯೇ ಗೆಳೆಯನನ್ನು ಸೂಟ್ ಕೇಸ್‍ನಲ್ಲಿ ತುಂಬಿಸಿ ಕರೆ ತರುವ ಪ್ರಯತ್ನ ಮಾಡಿದ್ದಾನೆ. ಆದರೆ ಕರೆ ತರುವಾಗ ಸೂಟ್‍ಕೇಸ್‍ನಲ್ಲಿ ಸಂಚಲನ ಕಂಡು ಬಂದಾಗ ಸಮುಚ್ಚಯದವರು ಸೂಟ್‍ಕೇಸ್ ತೆರೆಯುವಂತೆ ಹೇಳಿದ್ದಾರೆ. ಆಗ ವಿದ್ಯಾರ್ಥಿ ಗಾಬರಿಯಾಗಿದ್ದಾನೆ.

    ಕೊನೆಗೆ ಸಮುಚ್ಚಯದವರ ಒತ್ತಾಯದ ಮೇರೆಗೆ ಸೂಟ್‍ಕೇಸ್ ತೆರೆದಿದ್ದಾನೆ. ಅದರೊಳಗೆ ಗೆಳೆಯ ಇರುವ ಸತ್ಯಾಂಶ ಬಹಿರಂಗವಾಗಿದೆ. ಕೂಡಲೇ ಕದ್ರಿ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಕದ್ರಿ ಪೊಲೀಸರು ಬಂದು ಇಬ್ಬರನ್ನೂ ಸೂಟ್‍ಕೇಸ್ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.

  • ತಮ್ಮ ಮೊದಲ ಕಾರನ್ನು ಮರಳಿ ಪಡೆದು ಭಾವುಕರಾದ ಬಿಗ್‍ಬಿ

    ತಮ್ಮ ಮೊದಲ ಕಾರನ್ನು ಮರಳಿ ಪಡೆದು ಭಾವುಕರಾದ ಬಿಗ್‍ಬಿ

    ಮುಂಬೈ: ಮೊದಲು ಸಿಕ್ಕ ಕೆಲಸ, ಸಂಬಳ, ಕಾರು ಹೀಗೆ ಜೀವನದ ಸಾಕಷ್ಟು ಮೊದಲುಗಳ ನೆನಪು ಸದಾ ಹಸನಾಗಿರುತ್ತದೆ, ಅದನ್ನು ಮರೆಯಲು ಸಾಧ್ಯವಿಲ್ಲ. ಸದ್ಯ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ತಮ್ಮ ಮೊದಲ ಕಾರಿನ ನೆನಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.

    amitabh bachchan

    ಅಭಿಮಾನಿಗಳಿಗೆ ಅಮಿತಾಬ್ ಅವರು ತಾವು ಮೊದಲು ಖರೀದಿಸಿದ ಫ್ಯಾಮಿಲಿ ಕಾರ್ ಅನ್ನು ಪರಿಚಯಿಸಿದ್ದಾರೆ. ಸೋಮವಾರ ಬಿಗ್ ಬಿ ಹಳದಿ ಬಣ್ಣದ ಫೋರ್ಡ್ ಪ್ರಿಫೆಕ್ಟ್ ಕಾರಿನ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಕೆಲವು ಕ್ಷಣಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತೆ. ನನಗೂ ಈಗ ಹಾಗೆ ಆಗಿದೆ. ಏನೊ ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದ್ರೆ ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡು ಕಾರಿನ ಜೊತೆ ತಾವು ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

    https://www.facebook.com/AmitabhBachchan/photos/rpp.449082841792177/3192251197475314

    1950ರಲ್ಲಿ ಅಲಹಾಬಾದ್‍ನಲ್ಲಿದ್ದ ಸಮಯದಲ್ಲಿ ಹಳದಿ ಬಣ್ಣದ ಫೋರ್ಡ್ ಪ್ರಿಫೆಕ್ಟ್ ಕಾರನ್ನು ಅಮಿತಾಬ್ ಖರೀದಿಸಿದ್ದರು. ಆದರೆ ಬಾಲಿವುಡ್‍ನಲ್ಲಿ ಅಮಿತಾಬ್ ಹೆಸರು ಮಾಡುತ್ತಿದ್ದಂತೆ ಈ ಕಾರನ್ನು ಮಾರಾಟ ಮಾಡಿದ್ದರು. ಆದರೆ ಅಮಿತಾಬ್ ಅವರಿಗೆ ಈ ಕಾರು ಅಚ್ಚುಮೆಚ್ಚಾಗಿತ್ತು. ಹೀಗಾಗಿ ಉತ್ತರ ಪ್ರದೇಶದ ನಂಬರ್ ಇರುವ ಕಾರಿಗಾಗಿ ಬಿಗ್‍ಬಿ ಗೆಳೆಯ ಅನಂತ್ ಅವರು ಸಾಕಷ್ಟು ಹುಡುಕುತ್ತಿದ್ದರು. ಕೊನೆಗೂ ಗೆಳೆಯನ ಪ್ರೀತಿಯ ಕಾರನ್ನು ತಂದು, ಅದನ್ನು ಮಾಡಿಫೈ ಮಾಡಿ ಅನಂತ್ ಬಿಗ್‍ಬಿ ಅವರಿಗೆ ಗಿಫ್ಟ್ ನೀಡಿದ್ದಾರೆ. ಗೆಳೆಯನ ವಿಶೇಷ ಉಡುಗೊರೆಗೆ ಫಿದಾ ಆಗಿ ಅಮಿತಾಬ್ ಭಾವುಕರಾಗಿದ್ದಾರೆ.

    amitabh car21

    ತಮ್ಮ ಪ್ರೀತಿಯ ಕಾರಿನ ಬಗ್ಗೆ, ಗೆಳೆಯನ ಬಗ್ಗೆ ಸಂತಸದಿಂದ ಬಿಗ್‍ಬಿ ಹಂಚಿಕೊಂಡಿದ್ದಾರೆ. ನನಗೆ ಈ ಗಿಫ್ಟ್ ನೀಡಿದ್ದಕ್ಕೆ ಧನ್ಯವಾದ ಅನಂತ್. ನೀನು ಕೊಟ್ಟ ಸರ್ಪ್ರೈಸ್ ನೋಡಿ ಕಣ್ತುಂಬಿ ಬಂತು ಎಂದು ಬರೆದು, ತಮ್ಮ ಹಾಗೂ ಅನಂತ್ ಸ್ನೇಹದ ಬಗ್ಗೆ ಬಿಗ್‍ಬಿ ಹೇಳಿಕೊಂಡಿದ್ದಾರೆ. ಸದ್ಯ ಅಮಿತಾಬ್ ಬಳಿ ಸಾಕಷ್ಟು ದುಬಾರಿ ಕಾರುಗಳಿವೆ. ಆದರೆ ಮೊದಲು ಪಡೆದ ಕಾರಿನ ಮೇಲೆ ಅವರಿಗೆ ವಿಶೇಷ ಪ್ರೀತಿಯಿತ್ತು.

    amitabh car31

  • ಹಳೆ ಗೆಳೆಯನನ್ನು ಮರೆಯಲು 2ನೇ ಲವ್- ಮೋಸ ಹೋಗಿ ವಿಷ ಸೇವಿಸಿದ ಯುವತಿ

    ಹಳೆ ಗೆಳೆಯನನ್ನು ಮರೆಯಲು 2ನೇ ಲವ್- ಮೋಸ ಹೋಗಿ ವಿಷ ಸೇವಿಸಿದ ಯುವತಿ

    – ಯುವತಿಯ ಜೊತೆಗಿನ ಏಕಾಂತದ ದೃಶ್ಯ ಚಿತ್ರೀಕರಿಸಿದ್ದ ಆರೋಪಿಗಳು
    – ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್

    ಶಿವಮೊಗ್ಗ: ಪ್ರೀತಿ ಹೆಸರಲ್ಲಿ ಮೋಸ ಹೋದ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗೊಂದಿಚಟ್ನಹಳ್ಳಿಯಲ್ಲಿ ನಡೆದಿದೆ.

    ಗೊಂದಿಚಟ್ನಹಳ್ಳಿಯ ಸುಪ್ರಿಯಾ (19) ಆತ್ಮಹತ್ಯೆ ಶರಣಾದ ಯುವತಿ. ಪ್ರೀತಿಸಿದ ತಪ್ಪಿಗೆ ಪ್ರೀತಿ ಮಾಡಿದ ಇಬ್ಬರು ಯುವಕರಿಂದ ಸಾಕಷ್ಟು ನೊಂದಿದ್ದ ಯುವತಿ ಎರಡು ದಿನಗಳ ಹಿಂದೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಓರ್ವ ಆರೋಪಿಯ ಬಂಧನದ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    Sagar copy
    ಆರೋಪಿ ಸಾಗರ್

    ಮೃತ ಸುಪ್ರಿಯಾ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು. ಈಗಾಗಿಯೇ ಈ ಯುವತಿಯ ಜೊತೆ ಪ್ರೀತಿಯ ನಾಟಕವಾಡಿದ್ದ ಯುವಕರಿಗೆ ಪ್ರೀತಿಗಿಂತ ಈಕೆಯೇ ಆಸ್ತಿ ಮೇಲೆಯೇ ಕಣ್ಣು ಬಿದ್ದಿತ್ತು. ಈ ಮೊದಲು ಮೃತ ಯುವತಿ ಸುಪ್ರಿಯಾ ಅದೇ ಗ್ರಾಮದ ತನ್ನದೇ ಜಾತಿಯವನಾದ ಸಾಗರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಊರು ತುಂಬೆಲ್ಲಾ ಒಟ್ಟಿಗೆ ಸುತ್ತುತ್ತಿದ್ದರು. ಈ ವಿಷಯ ಸುಪ್ರಿಯಾ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೂ ತಿಳಿದಿತ್ತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಒಂದೇ ಜಾತಿಯವರು ಬೇರೆ ಇಂದಲ್ಲಾ ನಾಳೆ ಮದುವೆ ಆಗುತ್ತಾರೆ ಅಂತಾ ಸುಮ್ಮನಾಗಿದ್ದರು.

    ಆದರೆ ಈ ಕಿರಾತಕ ಯುವಕ ತನ್ನ ಮೇಲೆ ಸಾಗರದಷ್ಟೇ ಪ್ರೀತಿ ಇಟ್ಟುಕೊಂಡಿದ್ದ ಯುವತಿಗೆ ಮೋಸ ಮಾಡಿದ್ದ. ಸಾಗರ್‍ಗೆ ಪ್ರೀತಿಗಿಂತ ಆಕೆಯ ಬಳಿಯಿದ್ದ ಹಣವೇ ಪ್ರಿಯವಾಗಿತ್ತು. ಹೀಗಾಗಿ ಸುಪ್ರಿಯಾ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಅದನ್ನು ತೋರಿಸಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಅಲ್ಲದೇ ಗೆಳತಿಯ ಬಳಿಯಿದ್ದ ಹಣ ಹಾಗೂ ಚಿನ್ನದ ಸರವನ್ನು ಕಿತ್ತುಕೊಂಡಿದ್ದ. ಇದಾದ ಮೂರು ನಾಲ್ಕು ತಿಂಗಳಿನಲ್ಲಿಯೇ ರಸ್ತೆ ಅಪಘಾತವಾಗಿ ಸಾಗರ್ ಕಾಲು ಕಳೆದುಕೊಂಡ. ಹೀಗಾಗಿ ಇಬ್ಬರ ಪ್ರೀತಿಯೂ ಕೊನೆಯಾಯ್ತು.

    SMG Love Death A copy

    ಹಳೆಯ ಪ್ರೀತಿ ಮಾಸುತ್ತಿದ್ದ ಮುನ್ನವೇ ಸುಪ್ರಿಯಾಗೆ ಚಿತ್ರದುರ್ಗ ಮೂಲದ ಯುವಕನೋರ್ವನ ಪರಿಚಯವಾಗಿತ್ತು. ಈ ಯುವಕ ಅನ್ಯ ಕೋಮಿಗೆ ಸೇರಿದ್ದರೂ ತಾನು ವೀರಶೈವ ಲಿಂಗಾಯಿತ ಜಾತಿಗೆ ಸೇರಿದವನು ತನ್ನ ಹೆಸರು ಸುಬ್ಬು ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆತನ ಮೂಲ, ಅಸಲಿ ಹೆಸರು ಸುಭಾನ್ ಅಂತ.

    ಆರಂಭದಲ್ಲಿ ಇಬ್ಬರೂ ಚಾಟಿಂಗ್‍ನಲ್ಲಿ ಮಾತ್ರ ಸಂಭಾಷಣೆ ನಡೆಸುತ್ತಿದ್ದರು. ಆದರೆ ನಂತರ ಸುಪ್ರಿಯಾಳ ಮನೆಗೆ ಬರಲಾರಂಭಿಸಿದ್ದ. ಆಕೆಯ ತಂದೆ ತಾಯಿಯ ಬಳಿ ನಿಮ್ಮ ಮಗಳನ್ನು ಮದುವೆಯಾಗುತ್ತೇನೆ ಎಂದು ಸಹ ನಂಬಿಸಿದ್ದ.

    SMG Love Death B copy

    ಈ ನಡುವೆ ಸುಪ್ರಿಯಾ ಪ್ರಿಯಕರ ಸುಭಾನ್ ಬಳಿ ತನ್ನ ತಂದೆ ಜಮೀನು ಮಾರಾಟ ಮಾಡಿದ್ದಾರೆ. ಅದರಿಂದ ಸಾಕಷ್ಟು ಹಣ ಬಂದಿದೆ ಎಂದು ತಿಳಿಸಿದ್ದಳು. ಈ ಹಣದ ಮೇಲೆ ಕಣ್ಣು ಹಾಕಿದ್ದ ಸುಭಾನ್ ಪ್ರಿಯಾಳೊಂದಿಗೆ ಕಳೆದ ಖಾಸಗಿ ಕ್ಷಣದ ವಿಡಿಯೋ ತೋರಿಸಿ 45 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಇದರಿಂದ ಆತಂಕಗೊಂಡ ಸುಪ್ರಿಯಾ ಪೋಷಕರು ಸುಭಾನ್ ಬ್ಯಾಂಕ್ ಖಾತೆಗೆ 1.25 ಲಕ್ಷ ರೂ. ಹಣವನ್ನು ಹಾಕಿದ್ದರು. ಇಷ್ಟಕ್ಕೆ ಸುಮ್ಮನಾಗದ ಕಿರಾತಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಆರೋಪಿಯ ಕಾಟ ಯಾವಾಗ ಹೆಚ್ಚಾಗತೊಡಗಿತೋ ಬೇರೆ ದಾರಿ ಕಾಣದೇ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಶಿವಮೊಗ್ಗ ಗ್ರಾಮಾಂತರ ಠಾಣಾ ಪೊಲೀಸರು ಇದನ್ನು ಆರಂಭದಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಯುವತಿಯ ಮರಣೋತ್ತರ ಶವ ಪರೀಕ್ಷೆ ನಡೆಯುತ್ತಿದ್ದ ವೇಳೆ ಸುಭಾನ್ ಕಾಣಿಸಿಕೊಂಡಿದ್ದ. ಸುಭಾನ್‍ನನ್ನು ಈ ಮೊದಲೇ ನೋಡಿದ್ದ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    Police Jeep 1

    ಆ ನಂತರದಲ್ಲಿ ಪೊಲೀಸರು ಅಸ್ವಾಭಾವಿಕ ಸಾವು ಎಂಬ ಮೊಕದ್ದಮೆ ಬದಲಾಯಿಸಿ ಪೋಷಕರು ನೀಡಿದ ದೂರನ್ನಾಧರಿಸಿ ಹೊಸ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಯುವತಿ ಜೊತೆ ಖಾಸಗಿ ಕ್ಷಣದ ವಿಡಿಯೋ ಇದ್ದ ಮೊಬೈಲ್‍ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಹಣಕ್ಕೆ ಪೀಡಿಸಿದ್ದ ಸಾಕ್ಷ್ಯಾಧಾರ ಸಹ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುಭಾನ್‍ನನ್ನು ಮೊದಲನೇ ಆರೋಪಿ ಹಾಗೂ ಸಾಗರ್‌ನನ್ನು ಎರಡನೇ ಆರೋಪಿಯನ್ನಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸ್ನೇಹಿತನಿಗೆ ಸರ್ಪ್ರೈಸ್ ನೀಡಿದ ಡಿ ಬಾಸ್

    ಸ್ನೇಹಿತನಿಗೆ ಸರ್ಪ್ರೈಸ್ ನೀಡಿದ ಡಿ ಬಾಸ್

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಬಾಲ್ಯ ಗೆಳೆಯನಿಗೆ ಸರ್ಪ್ರೈಸ್ ನೀಡಿದ್ದಾರೆ.

    ಬಾಲ್ಯ ಗೆಳೆಯ ಶ್ರೀಧರ್ ಮೈಸೂರು ಮಹಾ ನಗರ ಪಾಲಿಕೆ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು, ಗೆಳೆಯ ಶ್ರೀಧರ್ ಗಾಗಿ ಮೈಸೂರಿಗೆ ಆಗಮಿಸಿ ಅಭಿನಂದನೆ ಸಲ್ಲಿಸಿದ್ದರು. ಇಷ್ಟು ಮಾತ್ರವಲ್ಲದೇ ತಾವೇ ಹೋಟೆಲ್ ನಲ್ಲಿ ಔತಣಕೂಟ ಏರ್ಪಡಿಸಿ, ಭರ್ಜರಿ ಪಾರ್ಟಿ ನೀಡಿದ್ದಾರೆ. ತಮ್ಮ ಎಲ್ಲ ಗೆಳೆಯರೊಂದಿಗೆ ಸೇರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

    7831eecf ace4 411d 8465 dc506d27702e

    ಗೆಳೆಯನ ಜೊತೆಗಿರುವ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಮೊದಲ ಬಾರಿಗೆ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಆಂಜನೇಯನ ವೇಷದಲ್ಲಿರುವ ಮೋಷನ್ ಪೋಸ್ಟರ್ ಲುಕ್ ರಿಲೀಸ್ ಆಗಿತ್ತು.

  • ಬಿಡುಗಡೆಯಾಯ್ತು ಶ್ರೀ ಭರತಬಾಹುಬಲಿ – ಗೆಳೆಯನ ಯಶಸ್ಸಿಗೆ ಹಾರೈಸಿದ ಯಶ್

    ಬಿಡುಗಡೆಯಾಯ್ತು ಶ್ರೀ ಭರತಬಾಹುಬಲಿ – ಗೆಳೆಯನ ಯಶಸ್ಸಿಗೆ ಹಾರೈಸಿದ ಯಶ್

    ಬೆಂಗಳೂರು: ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಶ್ರೀ ಭರತಬಾಹುಬಲಿ ಚಿತ್ರ ಇಂದು ಬಿಡುಗಡೆಯಾಗಿದ್ದು, ಗೆಳೆಯನ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಶುಭಹಾರೈಸಿದ್ದಾರೆ.

    ‘ಶ್ರೀ ಭರತಬಾಹುಬಲಿ’ ಚಿತ್ರದಲ್ಲಿ ನಾಯಕನಾಗಿರುವ ಗೆಳೆಯನಿಗೆ ಯಶ್ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಂಜು ಅವರ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡು ಯಶ್ ಗೆಳೆಯನ ಹೊಸ ಹೆಜ್ಜೆಗೆ ಸಾಥ್ ಕೊಟ್ಟಿದ್ದಾರೆ.

    Sri Bharatha Baahubali C

    ಈ ಹಿಂದೆ ಕೂಡ ರಾಕಿಂಗ್ ಸ್ಟಾರ್ ಯಶ್ ಗೆಳೆಯನ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು. ಟ್ರೈಲರ್ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡಿದ್ದು, ಇಂದು ಶ್ರೀ ಭರತ ಬಾಹುಬಲಿ ಚಿತ್ರ ತೆರೆಕಂಡಿದೆ. ಟಿ. ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    https://www.facebook.com/TheOfficialYash/posts/2813680548859338

    ಪೋಸ್ಟ್ ನಲ್ಲಿ ಏನಿದೆ?
    ಬರಹಗಾರನಾಗಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿ, ನಿರ್ದೇಶಕನಾಗಿ ಜನಮನಗೆದ್ದ ಗೆಳೆಯ ಮಂಜುಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಶ್ರೀ ಭರತಬಾಹುಬಲಿ ಅವತಾರದಲ್ಲಿ ನಿಮ್ಮುಂದೆ ಬಂದಿದ್ದಾರೆ. ಚಿಕ್ಕನೂ ಜೊತೆಗಿದ್ದಾನೆ ಇಬ್ಬರಿಗೂ ಒಳ್ಳೆಯದಾಗಲಿ. ಶ್ರೀ ಭರತಬಾಹುಬಲಿ ಯಶಸ್ವಿಯಾಗಲಿ ಎಂದು ಬರೆದು ಫೋಟೋ ಹಾಕಿ ಯಶ್ ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಗೆ ಯಶ್ ಅಭಿಮಾನಿಗಳು ಕಮೆಂಟ್ ಮಾಡಿ ಮಂಜು ಹಾಗೂ ಅವರ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

    Sri Bharatha Baahubali

    ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನ್ನುತ್ತಿದ್ದಾರೆ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ನಟನಾಗಿಯೂ ಛಾಪು ತೋರಿಸಲು ಸಿದ್ದರಾಗಿದ್ದಾರೆ ಮಂಜು ಮಾಂಡವ್ಯ. ನಟನೆ ಜೊತೆಗೆ ಸ್ವತಃ ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

    ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀ ಭರತ ಬಾಹುಬಲಿ ಟೈಟಲ್ಲೇ ವಿಭಿನ್ನವಾಗಿದ್ದು ರೊಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಚಿತ್ರದಲ್ಲಿದ್ದು, ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.

  • ಅಪ್ರಾಪ್ತೆಯ ಜೊತೆ ಗೆಳೆಯ ಸೆಕ್ಸ್- ತಂದೆಯಿಂದ ವಿಡಿಯೋ ರೆಕಾರ್ಡ್

    ಅಪ್ರಾಪ್ತೆಯ ಜೊತೆ ಗೆಳೆಯ ಸೆಕ್ಸ್- ತಂದೆಯಿಂದ ವಿಡಿಯೋ ರೆಕಾರ್ಡ್

    – ಬ್ಲ್ಯಾಕ್ ಮೇಲ್ ಮಾಡಿ ಮಗ್ಳ ಮೇಲೆಯೇ ರೇಪ್

    ಮುಂಬೈ: ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗಳು ಗೆಳೆಯನೊಂದಿಗೆ ಸೆಕ್ಸ್ ಮಾಡಿದ್ದ ವಿಡಿಯೋವನ್ನು ಇಟ್ಟುಕೊಂಡು, ಬ್ಲ್ಯಾಕ್ ಮೇಲ್ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

    40 ವರ್ಷದ ವ್ಯಕ್ತಿ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ನಗರ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಸಂತ್ರಸ್ತೆಯ 17 ವರ್ಷದ ಗೆಳೆಯನ ಮೇಲೂ ಅತ್ಯಾಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆರೋಪಿ ತಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯವು ಆತನ  ಅರ್ಜಿಯನ್ನು ತಿರಸ್ಕರಿಸಿದೆ. ನಂತರ ಆರೋಪಿ ತಂದೆ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಗೆಳೆಯನ ನಿರೀಕ್ಷಿತ ಜಾಮೀನು ಅರ್ಜಿಯ ಮನವಿಯನ್ನು ನ್ಯಾಯಾಲಯವು ಅನುಮತಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

    Phone 1

    ಕಳೆದ ನವೆಂಬರ್ ನಲ್ಲಿ ಸಂತ್ರಸ್ತೆಯ ತಾಯಿ ತನ್ನ ಫೋನಿನಲ್ಲಿ ನಗ್ನ ವಿಡಿಯೊಗಳನ್ನು ನೋಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಆರೋಪಿ ತಂದೆ ಮಗಳ ಫೋನ್‍ನಲ್ಲಿ ಸೆಕ್ಸ್ ವಿಡಿಯೊಗಳನ್ನು ತನ್ನ ಫೋನಿಗೆ ಕಳುಹಿಸಿಕೊಂಡಿದ್ದನ್ನು ಪತ್ನಿ ನೋಡಿದ್ದಾರೆ. ಆದರೆ ಆರೋಪಿ ಆ ವಿಡಿಯೋವನ್ನು ಡಿಲೀಟ್ ಮಾಡಿರಲಿಲ್ಲ. ನಂತರ ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಕೊನೆಗೆ ಸಂತ್ರಸ್ತೆ ತಾಯಿ ಪೊಲೀಸ್ ಠಾಣೆಗೆ ಹೋಗಿ ಈ ಕುರಿತು ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ಸಂಪೂರ್ಣವಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ನನ್ನ ಕಾಲೇಜು ಗೆಳೆಯ ಪೋಷಕರು ಮನೆಯಲ್ಲಿದ್ದಾಗಲೇ ಕಾಲೇಜಿನಲ್ಲಿ ಕೊಟ್ಟಿದ್ದ ಪ್ರಾಜೆಕ್ಟ್ ವಿಚಾರವಾಗಿ ಸಹಾಯ ಪಡೆಯಲು ಬಂದಿದ್ದನು. ಈ ವೇಳೆ ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ನಾನು ರೂಮಿಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ನನ್ನ ಗೆಳೆಯ ರೂಮಿಗೆ ಬಂದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

    Police Jeep 1

    ಈ ಘಟನೆಯ ಬಗ್ಗೆ ತಾನು ಯಾರಿಗೂ ಹೇಳಿರಲಿಲ್ಲ. ಆದರೆ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತಂದೆ ಗೆಳೆಯನೊಂದಿಗಿದ್ದ ವಿಡಿಯೋವನ್ನು ತೋರಿಸಿದರು. ನಂತರ ಪದೇ ಪದೇ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು. ಅಷ್ಟೆ ಅಲ್ಲದೇ ಇದರಿಂದ ನಿನ್ನ ತಾಯಿಗೆ ಡಿವೋರ್ಸ್ ಕೊಡುತ್ತೇನೆ ಎಂದು ಬೆದರಿಸುತ್ತಿದ್ದರು ಎಂದು ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ತಂದೆಗಾಗಿ ಬಲೆ ಬೀಸಿದ್ದಾರೆ.

  • ಸಂಬಂಧ ಮುಂದುವರಿಸುಂತೆ ಬೇಡಿಕೆ – ಪತಿಯ ಮುಂದೆಯೇ ಮಾಜಿ ಗೆಳೆಯನ ಕೊಲೆ

    ಸಂಬಂಧ ಮುಂದುವರಿಸುಂತೆ ಬೇಡಿಕೆ – ಪತಿಯ ಮುಂದೆಯೇ ಮಾಜಿ ಗೆಳೆಯನ ಕೊಲೆ

    -ಕೊಲೆ ಮಾಡಿ ಪೊಲೀಸರಿಗೆ ಶರಣಾದ ಮಹಿಳೆ

    ಚೆನ್ನೈ: ಸಂಬಂಧವನ್ನು ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದಕ್ಕೆ ಮಹಿಳೆಯೊಬ್ಬಳು ಪತಿಯ ಮುಂದೆಯೇ ತನ್ನ ಮಾಜಿ ಗೆಳೆಯನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಎಂ.ರವಿ (38) ಕೊಲೆಯಾದ ವ್ಯಕ್ತಿ. ಈತ ಸಿನಿಮಾ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ದೇವಿ ತನ್ನ ಸಹೋದರಿಯ ಮನೆಯಲ್ಲಿ ಸುತ್ತಿಗೆಯಿಂದ ರವಿ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ನಂತರ ಆಕೆ ಪೊಲೀಸರಿಗೆ ಶರಣಾಗಿದ್ದಾಳೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

    Love 2

    ಏನಿದು ಪ್ರಕರಣ?
    ಆರೋಪಿ ದೇವಿ ಕಿರುತೆರೆ ನಟಿ ಎಂದು ಹೇಳಾಗುತ್ತಿದೆ. ಇತ್ತ ಮೃತ ರವಿ ಮಧುರೈ ನಿವಾಸಿಯಾಗಿದ್ದು, ದೇವಿಯನ್ನ ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಸಂಬಂಧ ಬೆಳೆಸಿದ್ದನು. ಆದರೆ ಎರಡು ವರ್ಷಗಳ ಹಿಂದೆ ದೇವಿಯ ಪತಿಗೆ ರವಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ತಿಳಿದಿತ್ತು. ಹೀಗಾಗಿ ಮತ್ತೆ ಇಂತಹ ತಪ್ಪು ಮಾಡಬಾರದು ಎಂದು ಎಚ್ಚರಿಸಿದ್ದನು. ಅದರಂತೆಯೇ ದೇವಿ ರವಿಯಿಂದ ದೂರವಿದ್ದಳು.

    ಇತ್ತೀಚೆಗೆ ಮೃತ ರವಿ ಕೊಲಥೂರ್ ಪ್ರದೇಶದಲ್ಲಿ ದೇವಿ ಇರುವ ಬಗ್ಗೆ ತಿಳಿದುಕೊಂಡಿದ್ದಾನೆ. ಆರೋಪಿ ದೇವಿ ಸಣ್ಣ ವ್ಯಾಪಾರ ಮಾಡಿಕೊಂಡು ಕೊಲಥೂರ್ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಅದೇ ಪ್ರದೇಶದಲ್ಲಿ ದೇವಿಯ ಸಹೋದರಿ ಕೂಡ ವಾಸಿಸುತ್ತಿದ್ದಳು. ಎರಡು ದಿನಗಳ ಹಿಂದೆ ರವಿ, ದೇವಿಯ ಸಹೋದರಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಸಹೋದರಿಯ ಜೊತೆ ದೇವಿ ಮತ್ತು ನನ್ನ ಸಂಬಂಧ ಮುಂದುವರಿಸಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಆತನ ಒತ್ತಾಯದ ನಂತರ, ಸಹೋದರಿ ಲಕ್ಷ್ಮಿ ಮಧ್ಯರಾತ್ರಿಯಲ್ಲಿಯೇ ದೇವಿಯನ್ನು ಮನೆಗೆ ಕರೆದಿದ್ದಾಳೆ. ಆಕೆ ಪತಿಯ ಜೊತೆಯೇ ಲಕ್ಷ್ಮಿ ಮನೆಗೆ ಬಂದಿದ್ದಾಳೆ.

    Police Jeep 1

    ದೇವಿ ಮತ್ತು ಅವಳ ಪತಿ ಮನೆಗೆ ಹೋಗುತ್ತಿದ್ದಂತೆ ಮತ್ತೆ ರವಿ ತಮ್ಮ ಸಂಬಂಧವನ್ನು ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಇದೇ ವಿಚಾರದ ಬಗ್ಗೆ ಜಗಳ ನಡೆದಿದೆ. ಆಗ ಕೋಪದಲ್ಲಿ ದೇವಿ ಸುತ್ತಿಗೆಯಿಂದ ರವಿ ತಲೆಗೆ ಹೊಡೆದಿದ್ದಾಳೆ. ಪರಿಣಾಮ ತೀವ್ರವಾಗಿ ರಕ್ತಸ್ರಾವವಾದ ನಂತರ ಕುಸಿದು ಸ್ಥಳದಲ್ಲೇ ರವಿ ಮೃತಪಟ್ಟಿದ್ದಾನೆ. ನಂತರ ಆರೋಪಿ ದೇವಿ ರಾಜಮಂಗಲಂ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದುದಾಗಿ ತಪ್ಪೊಪ್ಪಿಕೊಡಿದ್ದಾಳೆ.

    ಸದ್ಯಕ್ಕೆ ಈ ಕೊಲೆಗೆ ಸಂಬಂಧಿಸಿದಂತೆ ದೇವಿ, ಆಕೆಯ ಪತಿ, ಸಹೋದರಿ ಲಕ್ಷ್ಮಿ ಮತ್ತು ಲಕ್ಷ್ಮಿ ಪತಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ನಂತರ ನಾಲ್ವರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

  • ಚಡ್ಡಿ ದೋಸ್ತ್ ಪ್ರಾಣ ತೆಗೆದ ಸ್ನೇಹಿತ

    ಚಡ್ಡಿ ದೋಸ್ತ್ ಪ್ರಾಣ ತೆಗೆದ ಸ್ನೇಹಿತ

    ಬೆಂಗಳೂರು: ಚಡ್ಡಿ ದೋಸ್ತಿಗಳಿಬ್ಬರ ಬಡಿದಾಟ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.

    ಕೊಲೆಯಾದವನನ್ನು ಸದಾನಂದ ಎಂದು ಗುರುತಿಸಲಾಗಿದೆ. ಈತನನ್ನು ಬಾಲ್ಯ ಸ್ನೇಹಿತ ಯೋಗಿಶ್ ಅಲಿಯಾಸ್ ಹಂದಿ ಯೋಗಿ ಕೊಲೆ ಮಾಡಿದ್ದಾನೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ.

    ನಿನ್ನೆ ರಾತ್ರಿ ಬಾಲಾಜಿ ಬಾರ್ ಬಳಿ ಸದಾನಂದನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಇಬ್ಬರೂ ಇತರ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ರಂತೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಶಾಸಕ ಗೋಪಾಲಯ್ಯ ಪರ ಸದಾನಂದ ಗುರ್ತಿಸಿಕೊಂಡು ಪ್ರಚಾರ ಮಾಡಿದ್ದನು. ಈ ಬಗ್ಗೆ ಸದಾನಂದ ಹಾಗೂ ಯೋಗಿಶ್ ಕಿತ್ತಾಡಿಕೊಂಡಿದ್ದರು ಎನ್ನಲಾಗಿದೆ.

    ಇದೇ ವಿಚಾರವಾಗಿ ಕ್ಯಾತೆ ತೆಗೆದು ಕೊಲೆ ಮಾಡಲಾಗಿದೆ. ಇದಲ್ಲದೇ ಹಣಕಾಸಿನ ವಿಚಾರವಾಗಿಯೂ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

    ಸದ್ಯ ಯೋಗಿಯನ್ನ ವಶಕ್ಕೆ ಪಡೆದಿರುವ ಬಸವೇಶ್ವರ ನಗರ ಪೊಲೀಸರು ಕೊಲೆ ಹಿಂದಿನ ಕಾರಣ ಹುಡುಕಾಡುತ್ತಿದ್ದಾರೆ.

  • ಮೃತಪಟ್ಟ ಗೆಳೆಯನ ಚಿನ್ನ, ಮೊಬೈಲ್ ಕದ್ದು ಸಿಕ್ಕಿಬಿದ್ದ

    ಮೃತಪಟ್ಟ ಗೆಳೆಯನ ಚಿನ್ನ, ಮೊಬೈಲ್ ಕದ್ದು ಸಿಕ್ಕಿಬಿದ್ದ

    ಬೆಂಗಳೂರು: ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 42 ವರ್ಷದ ವ್ಯಕ್ತಿಯೊಬ್ಬನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ರಾಮು ಎಂದು ಗುರುತಿಸಲಾಗಿದೆ. ಈತ ಮಾಗಡಿರೋಡ್ ನಿವಾಸಿಯಾಗಿದ್ದಾನೆ. ಆನಂದ್ ಅವರಿಗೆ ರಾಮು ಗೆಳೆಯ ಹಾಗೂ ದೂರದ ಸಂಬಂಧಿಕ ಕೂಡ ಆಗಿದ್ದನು.

    ಫೈನಾನ್ಶಿಯರ್ ಆಗಿರುವ 56 ವರ್ಷದ ಆನಂದ್ ನವೆಂಬರ್ 6ರಂದು ಕೆಂಪೇಗೌಡ ನಗರದ ಜಿಂಕೆ ಪಾರ್ಕ್ ಬಳಿಯ ಸ್ಮಶಾನದ ಸಮೀಪ ಮೃತಪಟ್ಟಿದ್ದರು. ಈ ಸಂಬಂಧ ಅನುಮಾನಾಸ್ಪದ ಸಾವು ಎಂದು ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿತ್ತು.

    mobile

    ಇತ್ತ ತನ್ನ ತಂದೆ ಮೃತಪಟ್ಟ ಬಳಿಕ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ಇತರ ಮೌಲ್ಯಾಧಾರಿತ ವಸ್ತುಗಳು ನಾಪತ್ತೆಯಾಗಿವೆ ಎಂದು ಆನಂದ್ ಮಗ ದೂರು ನೀಡಿದ್ದಾನೆ. ದೂರು ಸ್ವೀಕರಿಸಿ ತನಿಖೆ ನಡೆಸಿದಾಗ ಚಿನ್ನದ ಸರ, 72 ಗ್ರಾಂನ ಚಿನ್ನದ ಉಂಗುರ, ಮೊಬೈಲ್ ಫೋನ್ ಹಾಗೂ 5 ಲಕ್ಷದ ಬ್ಯಾಂಕ್ ಚೆಕ್ ಕೂಡ ಕಳವು ಆಗಿರೋದು ಬೆಳಕಿಗೆ ಬಂದಿತ್ತು ಎಂದು ಪೊಲಿಸ್ ಅಧಿಕಾರಿ ತಿಳಿಸಿದ್ದಾರೆ.

    ನಾನು ಮತ್ತು ಆನಂದ್ ಸ್ಮಶಾನದ ಬಳಿ ಮಾತನಾಡುತ್ತಾ ಕುಳಿತಿದ್ದೆವು. ಈ ವೇಳೆ ಅಚಾನಕ್ ಆಗಿ ಆನಂದ್ ಬಿದ್ದು ಮೃತಪಟ್ಟರು ಎಂದು ರಾಮು ತಿಳಿಸಿದ್ದಾನೆ. ಪ್ರಕರಣ ಸಂಬಂಧ ರಾಮುವನ್ನು ಬಂಧಿಸಲಾಗಿದೆ. ಹಾಗೂ ಆತ ಕಳವುಗೈದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Police Jeep