Tuesday, 17th September 2019

Recent News

1 hour ago

ತಾಯಿ ಜೊತೆ ಭೋಜನ ಸೇವಿಸಿ ಹುಟ್ಟುಹಬ್ಬ ಆಚರಿಸಿದ ಮೋದಿ

ಗಾಂಧಿನಗರ: ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದು, ಅವರ ತಾಯಿ ಹೀರಾಬೆನ್ ಅವರ ಮನೆಗೆ ಭೇಟಿ ನೀಡಿ, ಅವರೊಂದಿಗೆ ಭೋಜನ ಸೇವಿಸಿದ್ದಾರೆ. ಇಂದು ಬೆಳಗ್ಗೆ ಸರ್ದಾರ್ ಸರೋವರ ಅಣೆಕಟ್ಟು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿದ್ದರು. ನಂತರ ಗುಜರಾತ್‍ನ ಗಾಂಧಿನಗರದಲ್ಲಿರುವ ತಾಯಿ ಹೀರಾಬೆನ್ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಮಧ್ಯಾಹ್ನದ ಊಟವನ್ನು ಮಾಡುವ ಮೂಲಕ ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. Gujarat: Prime Minister Narendra Modi meets his mother Heeraben […]

6 hours ago

ನಮೋ ಹುಟ್ಟುಹಬ್ಬಕ್ಕೆ ಹನುಮನಿಗೆ 1.25 ಕೆಜಿ ತೂಕದ ಚಿನ್ನದ ಕಿರೀಟ ನೀಡಿದ ಅಭಿಮಾನಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ವಾರಣಾಸಿಯ ಸಂಕಟ ಮೋಚನ ದೇಗುಲದ ಹನುಮನಿಗೆ ಬರೋಬ್ಬರಿ 1.25 ಕೆಜಿ ತೂಕದ ಚಿನ್ನದ ಕಿರೀಟ ಕೊಟ್ಟು ಮೋದಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ. ವಾರಣಾಸಿ ನಿವಾಸಿ ಅರವಿಂದ್ ಸಿಂಗ್ ಅವರು ಮೋದಿ ಅವರ ಕಟ್ಟಾ ಅಭಿಮಾನಿ. ಆದ್ದರಿಂದ ಮೋದಿ ಅವರು ವಾರಣಾಸಿಯಿಂದ ಲೋಕಸಭಾ...

ತಲೆ ಕೆಟ್ಟ ಬಿಎಸ್‍ವೈಗೆ ಅರಳು ಮರಳಾಗಿದೆ, ಸಂಚಾರಿ ನಿಯಮ ಬದಲಾಗಬಾರದು – ಎಸ್.ಆರ್ ಶ್ರೀನಿವಾಸ್

2 days ago

ತುಮಕೂರು: ತಲೆ ಕೆಟ್ಟ ಯಡಿಯೂರಪ್ಪಗೆ ಅರಳು ಮರಳಾಗಿದೆ. ಅಲ್ಲೆಲ್ಲೋ ಗುಜರಾತ್‍ನಲ್ಲಿ ಟ್ರಾಫಿಕ್ ಹಳೆ ರೂಲ್ಸ್ ಫಾಲೋ ಮಾಡಿದ್ದಾರೆ ಎಂದು ಇಲ್ಲೂ ಮಾಡೋಕೆ ಹೊರಟಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

7 days ago

ಗಾಂಧಿನಗರ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಕಡಿತಗೊಳಿಸಿದೆ. ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು,...

ಮೋದಿ ಟೀ ಸ್ಟಾಲ್‍ನ್ನು ಪ್ರವಾಸಿ ತಾಣ ಮಾಡಲು ಸರ್ಕಾರ ನಿರ್ಧಾರ

2 weeks ago

ಗಾಂಧಿನಗರ: ಪ್ರಧಾನಿ ಮೋದಿ ಅವರ ಮೊದಲು ಚಹಾ ವ್ಯಾಪಾರಿ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರು ಟೀ ಮಾಡಿದ ಅಂಗಡಿಯನ್ನು ಸರ್ಕಾರ ಪ್ರವಾಸಿ ತಾಣ ಮಾಡಲು ನಿರ್ಧಾರ ಮಾಡಿದೆ. ಚಹಾ ಮಾರಿಕೊಂಡು, ದೇಶಕ್ಕೆ ಎರಡು ಬಾರಿ ಪ್ರಧಾನಿ ಅದ...

ಹುಲ್ಲು ತಿಂದ ಸಿಂಹ – ಸಸ್ಯಾಹಾರಿ ಲಯನ್ ಎಂದ ಜನರು

3 weeks ago

ಗಾಂಧಿನಗರ: ಗುಜರಾತಿನ ಗಿರ್ ಕಾಡಿನಲ್ಲಿ ಸಿಂಹವೊಂದು ಹುಲ್ಲು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಅಪ್ಪಟ ಮಾಂಸಹಾರಿಯಾಗಿರುವ ಸಿಂಹ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದನ್ನು ನಾವು ನೋಡಿದ್ದೇವೆ. ಆದರೆ ಈ ಸಿಂಹ ಕಾಡಿನಲ್ಲಿ ಇರುವ ಗರಿಕೆ ಹುಲ್ಲು ಮತ್ತು...

ನೀರು ನಿರ್ವಹಣೆ – 5ಕ್ಕೆ ಜಾರಿದ ಕರ್ನಾಟಕ, ಗುಜರಾತ್‍ಗೆ ಮೊದಲ ಸ್ಥಾನ

3 weeks ago

ನವದೆಹಲಿ: 2017-18ನೇ ಸಾಲಿನ ಸಂಯೋಜಿತ ನೀರು ನಿರ್ವಹಣೆ ಸೂಚ್ಯಂಕ(ಸಿಡಬ್ಲ್ಯೂಎಂಐ 2.0) ವರದಿ ಬಿಡುಗಡೆಯಾಗಿದ್ದು, ಗುಜರಾತ್ ಪ್ರಥಮ ಸ್ಥಾನ ಪಡೆದರೆ, ಕರ್ನಾಟಕ 5ನೇ ಸ್ಥಾನ ಪಡೆದಿದೆ. ವರದಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್...

ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು

4 weeks ago

ಗಾಂಧಿನಗರ: ಚಿನ್ನದ ಆಭರಣವನ್ನು ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಕುರಿತು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ...