Tuesday, 21st May 2019

Recent News

16 mins ago

ಕಾಲಿಗೆ ಗಾಯವಾಗಿ ಕಾಡಾನೆ ನರಳಾಟ – ಅರಣ್ಯ ಇಲಾಖೆ ವಿರುದ್ಧ ವನ್ಯಜೀವಿ ಪ್ರಿಯರ ಆಕ್ರೋಶ

ಹಾಸನ: ಕಾಲಿಗೆ ಗಾಯವಾಗಿರುವ ಕಾಡಾನೆ ನರಳಾಟ ನೋಡಿ ಸೂಕ್ತ ಚಿಕಿತ್ಸೆ ನೀಡದ ಅರಣ್ಯ ಇಲಾಖೆ ವಿರುದ್ಧ ವನ್ಯಜೀವಿ ಪ್ರಿಯರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಒಂಟಿ ಸಲಗದ ಹಿಂಬದಿಯ ಎಡಗಾಲಿಗೆ ಗಾಯವಾಗಿ ನರಳುತ್ತಿದೆ. ಆಲೂರು-ಸಕಲೇಶಪುರ ಭಾಗದ ಜನರು ಈ ಕಾಡಾನೆಗೆ ‘ಭೀಮ’ ಎಂದು ನಾಮಕರಣ ಮಾಡಿದ್ದರು. ಈ ಆನೆ ಗ್ರಾಮದೊಳಗೆ ಬಂದರೂ ಯಾರಿಗೂ ಯಾವುದೇ ತೊಂದರೆ ಮಾಡದೇ ಓಡಾಡಿಕೊಂಡಿತ್ತು. ಗ್ರಾಮದಲ್ಲಿ ಓಡಾಡಿಕೊಂಡಿದ್ದ ಭೀಮನಿಗೆ ಶೀಘ್ರ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಸದ್ಯ ಭೀಮ […]

8 hours ago

ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ

ಚಾಮರಾಜನಗರ: ಅರಣ್ಯದಲ್ಲಿ ಮತ್ತೊಂದು ಚಿರತೆಯೊಂದಿಗಿನ ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯೊಂದು ಚಾಮರಾಜನಗರ ಸಮೀಪದ ಹೊನ್ನಳ್ಳಿ ಬಳಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತ್ತು. ಕಳೆದ ನಾಲ್ಕೈದು ದಿನಗಳಿಂದ ಹೊನ್ನಳ್ಳಿ ಹೊರಭಾಗದ ಜಮೀನುಗಳಲ್ಲಿ ಅಡ್ಡಾಡುತ್ತಿದ್ದ ಈ ಚಿರತೆ ಸೋಮವಾರ ತೋಟವೊಂದರ ಮನೆಯ ಬಾಗಿಲಿನ ಬಳಿ ಮಲಗಿತ್ತು. ಬೆಳಗ್ಗೆ ಬಾಗಿಲು ತೆರೆದ ಮನೆಯವರು ಚಿರತೆ ನೋಡಿ ಗಾಬರಿಗೊಂಡು ತಕ್ಷಣ ಅರಣ್ಯ ಇಲಾಖೆಗೆ...

ಬರ್ತ್ ಡೇ ಪಾರ್ಟಿ ಮುಗ್ಸಿ ಬರುವಾಗ ಸ್ವಿಫ್ಟ್ ಕಾರ್ ಅಪಘಾತ – ಇಬ್ಬರ ದುರ್ಮರಣ

2 weeks ago

ಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಅಪೋಲೋ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ನಗರ ಹೊರವಲಯದ ಎಸ್‍ಜೆಸಿಐಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ...

ಡಿವೈಡರ್‌ಗೆ ಕಾರು ಡಿಕ್ಕಿ- ದಂಪತಿ ದುರ್ಮರಣ

2 weeks ago

ದಾವಣಗೆರೆ: ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ದಾವಣಗೆರೆ ಹೊರವಲಯದ ಹೊಸಕುಂದವಾಡ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ. ಬೆಂಗಳೂರು ಮೂಲದ ಶಿವಪ್ರಕಾಶ್ (43) ಮತ್ತು ಉಮಾ (40) ಮೃತ ದಂಪತಿ. ಬೆಂಗಳೂರಿನಿಂದ ಹರಿಹರ ತಾಲೂಕಿನ...

ರಾಮನಗರದಲ್ಲಿ ಮತ್ತೊಂದು ದುರಂತ – ಅಗ್ನಿಕೊಂಡ ಹಾಯುತ್ತಾ ಕಾಲೆಡವಿ ಬಿದ್ದ ಅರ್ಚಕ!

3 weeks ago

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ ಸಂಭವಿಸಿದ್ದು, ಅಗ್ನಿಕೊಂಡದಲ್ಲಿ ಬಿದ್ದ ಅರ್ಚಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಕನಕಪುರ ತಾಲೂಕಿನ ಕೆರಳಾಳುಸಂದ್ರ ಗ್ರಾಮದಲ್ಲಿ ನಡೆದಿದೆ. ಕೆರಳಾಳುಸಂದ್ರ ಗ್ರಾಮದ ಮಾರಮ್ಮ ದೇವಿಯ ಅರ್ಚಕ ಮುನಿಮಾರೇಗೌಡ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಕೆರಳಾಳುಸಂದ್ರದಲ್ಲಿ ಕಬ್ಬಾಳಮ್ಮ...

ಸಿನಿಮಾ ಸ್ಟೈಲ್‍ನಲ್ಲಿ ಗಜರಾಜನಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ!

3 weeks ago

ಕೋಲಾರ: ರಾಕಿಂಗ್ ಸ್ಟಾರ್ ಯಶ್ ಗಜಕೇಸರಿ ಸಿನಿಮಾದಲ್ಲಿ ಆನೆಗೆ ಮುತ್ತುಕೊಟ್ಟ ಹಾಗೆ ಕಾಡಾನೆಯೊಂದಕ್ಕೆ ಯುವಕನೊಬ್ಬ ಮುತ್ತಿಡಲು ಹೋಗಿ ಆಸ್ಪತ್ರೆ ಪಾಲಾದ ಘಟನೆ ಜಿಲ್ಲೆಯ ಮಾಲೂರಿನ ಅರಳೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ನುಗ್ಗಿದ್ದ ಕಾಡಾನೆ ಹಿಂಡನ್ನು ಹಿಂಬಾಲಿಸಿ ಸಿನಿಮಾ ಸ್ಟೈಲ್ ಆನೆಗೆ ಮುತ್ತು...

ಮಗಳ ಕನಸನ್ನ ಪೂರ್ಣಗೊಳಿಸಲು ಹೊರಟ ತಂದೆ ಅಪಘಾತದಲ್ಲಿ ಸಾವು

3 weeks ago

ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಅನಂತಪುರದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗಳ ಕನಸನ್ನು ಪೂರ್ಣ ಮಾಡಲು ಹೊರಟ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಮಂಜುನಾಥ್...

ಬಿರುಗಾಳಿ ಸಹಿತ ಮಳೆ – ಹಲವೆಡೆ ಹಾರಿ ಹೋಯ್ತು ಸಂಪೂರ್ಣ ಮೇಲ್ಛಾವಣಿ

4 weeks ago

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅವಘಡಗಳು ಸಂಭವಿಸಿವೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಭಾರೀ ಗಾಳಿ ಮಳೆಗೆ ಸುಜಯ್ ಎಂಬವರ ಮನೆ ಮೇಲ್ಛಾವಣಿ ಸಂಪೂರ್ಣ ಹಾರಿಹೋಗಿದೆ. ಅಷ್ಟೇ ಅಲ್ಲದೇ ಮೇಲ್ಛಾವಣಿಯ ಸೀಟುಗಳು ಮಹಿಳೆ ಮೇಲೆ...