Tuesday, 10th December 2019

1 week ago

ಬಿಜೆಪಿ ಕಾರ್ಯಕರ್ತರಿಗೆ ಗನ್ ತೋರಿಸಿದ ಕೈ ಅಭ್ಯರ್ಥಿ: ವಿಡಿಯೋ

ರಾಂಚಿ: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಗಲಾಟೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯೋರ್ವ ಸಾರ್ವಜನಿಕರ ಮುಂದೆಯೇ ಗನ್ ತೋರಿಸಿರುವ ಘಟನೆ ಜಾರ್ಖಂಡ್ ನ ಪಾಲಮು ಜಿಲ್ಲೆಯಲ್ಲಿ ನಡೆದಿದೆ. ಇಂದು ಜಾರ್ಖಂಡ್‍ನ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಈ ವೇಳೆ ಬಿಜೆಪಿ ಅಭ್ಯರ್ಥಿ ಅಲೋಕ್ ಚೌರಾಸಿಯಾ ಅವರು ಕೋಸಿಯಾರ ಗ್ರಾಮದ ಬೂತ್ ಒಳಗೆ ಹೋಗುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ತ್ರಿಪಾಠಿಯನ್ನು ತಡೆದಿದ್ದಾರೆ. ಈ ವಿಚಾರಕ್ಕೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ ತ್ರಿಪಾಠಿ ಗನ್ ತೋರಿಸಿದ್ದಾರೆ. […]

3 weeks ago

ಮೆಕ್ಕೆಜೋಳ ತೆನೆ ಲೋಡ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಬಡಿದಾಟ – ನಾಲ್ವರು ಗಂಭೀರ

ದಾವಣಗೆರೆ: ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ರಾಡು ಹಾಗೂ ದೊಣ್ಣೆ ಹಿಡಿದು ಹೊಡೆದಾಡಿದಂತಹ ಘಟನೆ ಜಗಳೂರು ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ನಡೆದಿದೆ. ಗಲಾಟೆಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹೊಡೆದಾಡಿದ ಸನ್ನಿವೇಶವನ್ನು ಗ್ರಾಮಸ್ಥರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಕಾಶ್, ನಾಗರಾಜ್, ಜಯಮ್ಮ, ಶಂಕರಮ್ಮ ಎಂಬವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು, ತೀವ್ರ ಗಾಯಗೊಂಡಿದ್ದ ನಾಗರಾಜ್ ದಾವಣಗೆರೆ...

ನಾಯಿಗೆ ಬೈದ ವೃದ್ಧನನ್ನು ಹಿಗ್ಗಾಮುಗ್ಗಾ ಥಳಿಸಿದ ಮಾಲೀಕ

1 month ago

ಬೆಂಗಳೂರು: ತನ್ನ ಮನೆಯ ನಾಯಿಗೆ ವೃದ್ಧ ಅವಾಚ್ಯ ಪದ ಬಳಸಿ ಬೈದನೆಂದು ಮಾಲೀಕ ಸಿಟ್ಟಿಗೆದ್ದು ಆತನ ಮೇಲೆ ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರಿನ ಲಗ್ಗೆರೆಯ ಚೌಡೇಶ್ವರಿನಗರದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನನ್ನ...

ವಕೀಲರು, ಪೊಲೀಸರ ಮಧ್ಯೆ ಮಾರಾಮಾರಿ – ಕಾರುಗಳಿಗೆ ಬೆಂಕಿ, ಕೋರ್ಟ್ ಆವರಣದಲ್ಲಿ ಹೈಡ್ರಾಮಾ

1 month ago

ನವದೆಹಲಿ: ತೀಸ್ ಹಜಾರಿ ನ್ಯಾಯಾಲಯ ಆವರಣದಲ್ಲಿ ಇಂದು ಸಂಜೆ ಹೈಡ್ರಾಮಾ ನಡೆದಿದ್ದು ವಕೀಲರು, ಪೊಲೀಸರ ಮಧ್ಯೆ ಮಾರಾಮಾರಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯಲ್ಲಿ ಹಲವು ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು, ಒರ್ವ ವಕೀಲರಿಗೆ ಗಂಭೀರ ಗಾಯವಾಗಿದೆ. ಪೊಲೀಸರ ವರ್ತನೆ ಖಂಡಿಸಿ ನೂರಾರು...

ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಗಲಾಟೆ – ಎರಡು ಗುಂಪುಗಳ ಮಧ್ಯೆ ಮಾರಾಮಾರಿ

2 months ago

ವಿಜಯಪುರ: ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಗಲಾಟೆ ನಡೆದ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಆಶ್ರಮ ರಸ್ತೆ ಬಳಿಯ ಪಾರಕ ನಗರದಲ್ಲಿ ಕೈಯಲ್ಲಿ ದೊಣ್ಣೆ, ತಲವಾರ್ ಹಿಡಿದು ಯುವಕರ ಪುಂಡಾಟ ಮೆರೆದಿದ್ದಾರೆ. ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು,...

ಮುಂದುವರಿದ ಹುಚ್ಚಾಟ- ಮಂಡ್ಯದಲ್ಲೂ ದಾಂಧಲೆ ಮಾಡಿದ್ದಕ್ಕೆ ಹುಚ್ಚ ವೆಂಕಟ್‍ಗೆ ಗೂಸ

3 months ago

ಮಂಡ್ಯ: ಕೊಡಗು ಆಯ್ತು, ಮೈಸೂರು ಆಯ್ತು, ಈಗ ಮಂಡ್ಯ ಸರದಿ ಎನ್ನುವಂತೆ ಹುಚ್ಚ ವೆಂಕಟ್ ಹುಚ್ಚಾಟ ಮುಂದುವರಿದಿದೆ. ಮಂಡ್ಯದಲ್ಲಿ ಕಂಠಪೂರ್ತಿ ಕುಡಿದು ಹುಚ್ಚ ವೆಂಕಟ್ ದಾಂಧಲೆ ಮಾಡಿದ್ದಾನೆ. ಕೊಡಗಿನಲ್ಲಿ ಗಲಾಟೆ ಮಾಡಿದ ರೀತಿಯಲ್ಲೇ ಕಾರಿಗೆ ಕಲ್ಲು ಒಡೆದು ಹುಚ್ಚ ವೆಂಕಟ್ ದಾಂಧಲೆ...

ಕಾಲುವೆ ನೀರಿನ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

4 months ago

ರಾಯಚೂರು: ಕಾಲುವೆ ನೀರಿನ ವಿಚಾರದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಯಚೂರಿನ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ. ಗಲಾಟೆಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶಿವರುದ್ರಪ್ಪ (65) ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಈ ಗಲಾಟೆಯಲ್ಲಿ...

ದೇವರ ಉತ್ಸವದ ವೇಳೆ ಸ್ಥಳೀಯರು, ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ

4 months ago

ಬೆಂಗಳೂರು: ಕನ್ನಡ ಹಾಡುಗಳನ್ನು ಬಳಸಿಲ್ಲ ಎಂಬ ಕಾರಣಕ್ಕೆ ಸ್ಥಳೀಯರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಜೆಜೆ ನಗರ ಬಳಿಯ ಮಾರ್ಕಂಡೇಶ್ವರ ನಗರದಲ್ಲಿ ಗಂಗಮ್ಮ ದೇವಿ ಉತ್ಸವ ವೇಳೆ ಮನರಂಜನೆಗಾಗಿ ಆರ್ಕೆಸ್ಟ್ರಾ ಆಯೋಜನೆ...