Thursday, 21st November 2019

3 days ago

ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ನುಸ್ರತ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡಿದೆ. ಅಲ್ಲದೆ ಅವರಿಗೆ ಉಸಿರಾಡಲು ಕಷ್ಟವಾಗುತ್ತಿದ್ದರಿಂದ ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಯಿತು. ನುಸ್ರತ್ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕುಟುಂಬಸ್ಥರ ಪ್ರಕಾರ, ನುಸ್ರತ್ ಅವರನ್ನು ಭಾನುವಾರ ಬೆಳಗ್ಗೆ ಸುಮಾರು 9.30ಕ್ಕೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ಮೊದಲು ನುಸ್ರತ್ ಅಸ್ತಮಾದಿಂದ ಬಳಲುತ್ತಿದ್ದರು. […]

5 days ago

ಕೋಲ್ಕತ್ತಾ ಪಿಂಕ್ ಟೆಸ್ಟ್ ಟಿಕೆಟ್ ಸೋಲ್ಡೌಟ್- ಸಂತಸದಲ್ಲಿ ಗಂಗೂಲಿ

ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದ ಮೊದಲ 3 ದಿನಗಳ ಟಿಕೆಟ್ ಮಾರಾಟವಾಗಿದ್ದು, ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಂತಸ ವ್ಯಕ್ತಪಡಿಸಿದ್ದಾರೆ. ಆನ್‍ಲೈನ್‍ನಲ್ಲಿ ಪಂದ್ಯದ ಮಾರಾಟಕ್ಕಿಟ್ಟ ಟಿಕೆಟ್‍ಗಳು ಖಾಲಿಯಾಗಿದ್ದು, ಟೆಸ್ಟ್ ಪಂದ್ಯದ ಎಲ್ಲಾ ಟಿಕೆಟ್‍ಗಳು ಮಾರಾಟವಾಗಿರುವುದರಿಂದ ಗಂಗೂಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಕೋಟಾ ಟಿಕೆಟ್‍ಗಳು ಮಾತ್ರವೇ...

ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಎಂಪಿಗೆ ಬಂದಿದ್ದು ಎರಡು ಕಲ್ಲು

3 weeks ago

ಕೋಲ್ಕತ್ತಾ: ದೀಪಾವಳಿ ಹಬ್ಬದ ಪ್ರಯುಕ್ತ ಫೋನ್ ಆರ್ಡರ್ ಮಾಡಿದ ಸಂಸದರೊಬ್ಬರಿಗೆ ಆನ್‍ಲೈನ್ ಸಂಸ್ಥೆ ಎರಡು ಕಲ್ಲನ್ನು ಕಳುಹಿಸಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಕ್ಷೇತ್ರದ ಬಿಜೆಪಿ ಸಂಸದ ಖಾಗನ್ ಮುರ್ಮು ಅವರು ದೀಪಾವಳಿ ಹಬ್ಬಕ್ಕೆಂದು ಇ-ಕಾಮರ್ಸ್ ಎಂಬ ಆನ್‍ಲೈನ್ ಕಂಪನಿಯ ಮೂಲಕ ಸ್ಯಾಮ್ಸಂಗ್...

ಹೂಕುಂಡ ಸ್ಫೋಟ – 5 ವರ್ಷದ ಬಾಲಕ ದುರ್ಮರಣ

3 weeks ago

ಕೋಲ್ಕತ್ತಾ: ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಪಟಾಕಿ ಸಿಡಿಸುವುದು ಎಂದರೆ ಅಚ್ಚುಮೆಚ್ಚು. ಆದರೆ ಕೋಲ್ಕತ್ತಾದಲ್ಲಿ ಈ ಪಟಾಕಿಯೇ ಐದು ವರ್ಷದ ಮಗುವನ್ನು ಬಲಿಪಡೆದಿದೆ. ಕೋಲ್ಕಾತ್ತಾದ ನಗರದ ದಕ್ಷಿಣ ಭಾಗದಲ್ಲಿರುವ ಹರಿದೇವನಪುರ ಎಂಬ ಪ್ರದೇಶದಲ್ಲಿ ಮನೆಯವರ ಜೊತೆ ಪಟಾಕಿ ಸಿಡಿಸುತ್ತಿದ್ದ 5 ವರ್ಷದ ಅದಿದಾಸ್...

ದೀದಿ ರಾಜ್ಯದಲ್ಲಿ ಮತ್ತೆ ರಕ್ತದೋಕುಳಿ- ಬಿಜೆಪಿ ನಾಯಕನ ಕಗ್ಗೊಲೆ

3 weeks ago

ಕೋಲ್ಕತಾ: ಮಮತಾ ಬ್ಯಾನರ್ಜಿ ಸಿಎಂ ಆಗಿ ಅಧಿಕಾರ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೆ ರಾಜಕೀಯ ದ್ವೇಷದ ರಕ್ತದೋಕುಳಿ ಚೆಲ್ಲಿದೆ. ಹೂಗ್ಲಿ ಜಿಲ್ಲೆಯ ಆರಾಮ್‍ಬಾಗ್ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ನಾಯಕನನ್ನು ಕೊಲೆಗೈಯಲಾಗಿದ್ದು, ಇದರಲ್ಲಿ ಟಿಎಂಸಿ(ತೃಣಮೂಲ ಕಾಂಗ್ರೆಸ್) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಆರಾಮ್‍ಬಾಗ್...

ಉಸಿರಾಟದ ತಂತ್ರಗಾರಿಕೆ ಕಲಿಸ್ತೀನಿ ಎಂದು ರೇಪ್‍ಗೈದ ಖ್ಯಾತ ಕಲಾವಿದ

1 month ago

ಕೋಲ್ಕತ್ತಾ: ನಾಟಕದಲ್ಲಿ ಉಸಿರಾಟದ ತಂತ್ರಗಾರಿಕೆಯನ್ನು ಕಲಿಸುತ್ತೇನೆ ಎಂದು ಕಲಾವಿದೆಯನ್ನು ಅತ್ಯಾಚಾರಗೈದ ಪಶ್ಚಿಮ ಬಂಗಾಳದ ಖ್ಯಾತ ಚಲನಚಿತ್ರಕಾರ, ರಂಗಭೂಮಿ ಕಲಾವಿದ ಸುದೀಪ್ತೊ ಚಟರ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಚಟರ್ಜಿ ಹಲವು ಬಾರಿ ಸಂತ್ರಸ್ತೆಯನ್ನು ಅತ್ಯಾಚಾರ ನಡೆಸಿದ್ದಾನೆ. ಬಂಧನದ ಬಳಿಕ ಚಟರ್ಜಿ ತಪ್ಪೊಪ್ಪಿಕೊಂಡಿದ್ದಾನೆ...

ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಪಿಎಂ ಅನುಮೋದನೆ ಬೇಕು: ಸೌರವ್ ಗಂಗೂಲಿ

1 month ago

ಕೋಲ್ಕತ್ತಾ: ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶಗಳ ಪ್ರಧಾನ ಮಂತ್ರಿಗಳ ಅನುಮೋದನೆ ಬೇಕು ಎಂದು ಬಿಸಿಸಿಐ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಸೌರವ್ ಗಂಗೂಲಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸ್ಥಾನವನ್ನು...

ಬಿಜೆಪಿ ಸೇರುವ ಬಗ್ಗೆ ಮೌನ ಮುರಿದ ಗಂಗೂಲಿ

1 month ago

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ನಾನು ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎನ್ನುವ ವದಂತಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಗಂಗೂಲಿ ಭಾನುವಾರ ಮುಂಬೈನಲ್ಲಿ ನಡೆದ...