Friday, 20th September 2019

Recent News

1 day ago

ದರೋಡೆಗೆ ಖಾರದ ಪುಡಿ ಸಿದ್ಧಗೊಳಿಸುತ್ತಿದ್ದಾಗ ಸಿಕ್ಕಿಬಿದ್ರು 6 ಜನ ಖದೀಮರು

– ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ಕೋಲಾರ: ಕುಖ್ಯಾತ 8 ಜನ ದರೋಡೆಕೋರರ ತಂಡದ ಆರು ಖದೀಮರನ್ನು ಕೋಲಾರದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ತಾಲೂಕಿನ ಕೂತಾಂಡಹಳ್ಳಿ ಗ್ರಾಮದ ಧನಂಜಯ್ (20), ವಕ್ಕಲೇರಿ ಗ್ರಾಮದ ದೀಕ್ಷಿತ್ (22), ಗುರುಪ್ರಸಾದ್ (21), ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭದ್ರಾಪುರ ಗ್ರಾಮದ ಚಂದ್ರಶೇಖರ್ (24), ಬೆಂಗಳೂರು ಮೂಲದ ಯತೀಶ್ ಹಾಗೂ ಬಸವರಾಜ್ ಬಂಧಿತ ಆರೋಪಿಗಳು. ಬಂಧಿತರು ರಾಜ್ಯದ ವಿವಿಧೆಡೆ ಬೈಕ್ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದರು. […]

2 days ago

ನಶೆಯಲ್ಲಿ ಚಿಕ್ಕಪ್ಪನನ್ನ ಕೊಲೆಗೈದ ಮಗ

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಸ್ವಂತ ಚಿಕ್ಕಪ್ಪನನ್ನೇ ಮಗ ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ನಡೆದಿದೆ. ಈ ಘಟನೆ ತಡರಾತ್ರಿ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು 50 ವರ್ಷದ ನಾರಾಯಣಸ್ವಾಮಿ ಎಂದು ಗುರುತಿಸಲಾಗಿದೆ. ಮೃತ ನಾರಾಯಣಸ್ವಾಮಿ ಅಣ್ಣನ ಮಗ ಮುನಿರಾಜು ಕೊಲೆಗೈದ ಆರೋಪಿ. ರಾತ್ರಿ ಕ್ಷುಲ್ಲಕ ಕಾರಣಕ್ಕೆ ನಾರಾಯಣಸ್ವಾಮಿ ಮತ್ತು ಮುನಿರಾಜು ಕುಟುಂಬದ ನಡುವೆ...

ಚಳುವಳಿ ಮಾಡಲ್ಲ, ರೈಲ್ವೇ ನಿಲ್ದಾಣದೊಳಗೆ ಬಿಡಿ: ವಾಟಾಳ್ ನಾಗರಾಜ್

7 days ago

ಕೋಲಾರ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಶುಕ್ರವಾರ ಕೋಲಾರದ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ನಿಲ್ದಾಣದೊಳಗೆ ಪೊಲೀಸರು ಪ್ರವೇಶ ನೀಡದಿದ್ದಾಗ ಯಾವುದೇ ಚಳುವಳಿ ಮಾಡಲ್ಲ. ರೈಲ್ವೇ ನಿಲ್ದಾಣದಲ್ಲಿನ ಮೂಲಭೂತ ಸಮಸ್ಯೆಗಳ ವೀಕ್ಷಣೆಗೆ ಬಂದಿದ್ದೇನೆ ಎಂದು ವಾಟಾಳ್ ನಾಗರಾಜ್ ಪೊಲೀಸರಿಗೆ ಸ್ಪಷ್ಟಪಡಿಸಿದರು. ಈ...

ತಲ್ವಾರ್ ಹಿಡಿದು ಗ್ರಾ.ಪಂ ಸದಸ್ಯನ ತಮ್ಮನಿಂದ ಬೆದರಿಕೆ

1 week ago

ಕೋಲಾರ: ಗುತ್ತಿಗೆ ವಿಚಾರದಲ್ಲಿ ಗಲಾಟೆಯಾದ ಕಾರಣಕ್ಕೆ ತಲ್ವಾರ್ ಹಿಡಿದು ಯುವಕನೊಬ್ಬ ಗ್ರಾಮದಲ್ಲಿ ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನ ತಮ್ಮ ತಲ್ವಾರ್...

ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

1 week ago

– ಲಾರಿ ಬಂದರೂ ಕ್ಯಾರೆ ಮಾಡಿಲ್ಲ ಕೋಲಾರ: ಟಿವಿಯಲ್ಲಿ ಬರುವ ಆಸೆಗೆ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಕೂತು ಕಂಠ ಪೂರ್ತಿ ಕುಡಿದು ಗಲಾಟೆ ಮಾಡಿದ ಘಟನೆ ಕೋಲಾರದ ಕೆಜಿಎಫ್ ನಗರದಲ್ಲಿ ನಡೆದಿದೆ. ಕೆಜಿಎಫ್ ನಗರದ ಪಾರಂಡಳ್ಳಿ ರಸ್ತೆಯಲ್ಲಿ ಕುಡುಕ ಅವಾಂತರ ಮಾಡಿದ್ದಾನೆ. ಸಾವನ್ನು...

ತಾವೇ ನಿರ್ಮಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆಗೆ ಹೋಗಿದ್ದ ಆರು ಮಕ್ಕಳು ನೀರುಪಾಲು

1 week ago

ಕೋಲಾರ: ತಾವೇ ನಿರ್ಮಿಸಿದ್ದ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗಿದ್ದ ಆರು ಮಕ್ಕಳು ನೀರುಪಾಲಾಗಿರುವ ಧಾರುಣ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ. ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ತೇಜಾ (6), ಧನುಷ್ (7), ವೈಷ್ಣವಿ (6), ರೋಹಿತ, ರಕ್ಷಿತಾ ಹಾಗೂ ವೀಣಾ...

ಆಂಧ್ರ ಬಸ್ಸಿಗೆ ಬೈಕ್ ಡಿಕ್ಕಿ – ತಂದೆ, ಮಗ ಸ್ಥಳದಲ್ಲೇ ಸಾವು

2 weeks ago

ಕೋಲಾರ: ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ತಂದೆ ಮಗ ಇಬ್ಬರು ಮೃತಪಟ್ಟಿರುವ ಘಟನೆ ಗಡಿ ಭಾಗದ ಆಂಧ್ರದ ಕುಪ್ಪಂ ಬಳಿ ನಡೆದಿದೆ. ಅಪಘಾತದಲ್ಲಿ ತಂದೆ ಮಗ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಂದೆ ಮಗ ಇಬ್ಬರು ಲಗ್ನ...

ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ್ದಕ್ಕೆ ಮಹಿಳೆ ಮೇಲೆ ಹಲ್ಲೆ

2 weeks ago

ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ತನ್ನ ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ ಮಹಿಳೆಯನ್ನು ಗ್ರಾಮದ ಮುಖಂಡನ ಕುಟುಂಬ ಮಾರಣಾಂತಿಕವಾಗಿ ಥಳಿಸಿರುವ ಆರೋಪ ಕೇಳಿ ಬಂದಿದೆ. ಕೋಲಾರ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಗ್ರಾಮದ ಈರಮ್ಮ ಎಂಬವರನ್ನು...